ನವ ರಾಷ್ಟ್ರೀಯ ಶಿಕ್ಷಣ ನೀತಿ: ದೇಶದ ಭವಿತವ್ಯದ ಉನ್ನತಿ 


Team Udayavani, Aug 27, 2021, 6:20 AM IST

ನವ ರಾಷ್ಟ್ರೀಯ ಶಿಕ್ಷಣ ನೀತಿ: ದೇಶದ ಭವಿತವ್ಯದ ಉನ್ನತಿ 

ವಿಶ್ವ ಗುರು ಭಾರತ ತನ್ನ ಧಾರ್ಮಿಕ, ತಾರ್ಕಿಕ ಹಾಗೂ ಗಣಿತದ ಉತ್ಕೃಷ್ಟ ತೆ ಯಿಂದಾಗಿ ತಕ್ಷಶಿಲಾ-ನಲಂದಾದಂತಹ ವಿಶ್ವ ವಿದ್ಯಾನಿಲಯಗಳ ಮುಖಾಂತರ ಶಿಕ್ಷಣ ಪ್ರಸರಿಸಿ ವಿಶ್ವ ಗುರುವಾಗಿ ಮೆರೆದಿತ್ತು. ಅನಂತರದಲ್ಲಿ ಕ್ರಿಶ್ಚಿಯನ್‌ ಮಿಶನರಿ ಹಾಗೂ ಇಸ್ಲಾಮಿಕ್‌ ದಾಳಿಯಿಂದ (ಮಧ್ಯ ಯುಗದಲ್ಲಿ) ಅವುಗಳ ಧರ್ಮಗಳ ಪ್ರಭಾವಗಳಿಗೆ ಒಳಗಾಗಿ ಕೆಲವು ಮಾರ್ಪಾಡುಗಳನ್ನು ಅಳವಡಿಸಿಕೊಂಡಿತ್ತು. ಬ್ರಿಟಿಷ್‌ ಹಾಗೂ ಇತರ ಯುರೋಪಿಯನ್ನರ ದಾಳಿಯಿಂದ ಸಾಮಾಜ್ರ್ಯಶಾಹಿ ಪ್ರಭಾವಕ್ಕೆ ಒಳಗಾಗಿ 19ನೇ ಶತಮಾನದಲ್ಲಿ ತನ್ನ ಶಿಕ್ಷಣ ನೀತಿಯನ್ನು ಬದಲಿಸಿಕೊಂಡಿತ್ತು. ಮೆಕಾಲೆಯವರ ಆಧುನಿಕ ಶಿಕ್ಷಣ ಅಥವಾ ಆಂಗ್ಲ ಶಿಕ್ಷಣ ವ್ಯವಸ್ಥೆಯಿಂದಾಗಿ ತನ್ನತನವನ್ನು ಕಳೆದುಕೊಂಡಿತು.

ಸರ್‌ ಥಾಮಸ್‌ ಮುನ್ರೊರವರ ಮಿನಿಟ್ಸ್‌ ಆಫ್ ನೇಟಿವ್‌ ಎಜುಕೇಶನ್‌ (1822-1826) ಪ್ರಕಾರ, ಭಾರತದಲ್ಲಿ 18-19ನೇ ಶತಮಾನದಲ್ಲಿಯೇ ವಿದ್ಯಾಭ್ಯಾಸಕ್ಕೆ ಸಾಕಷ್ಟು ಪ್ರೋತ್ಸಾಹವಿದ್ದು, ಗುರುಕುಲ, ಮದ್ರಸಾ, ಮಕ್‌ತಾಬ್‌ಗ ಳೆಲ್ಲವೂ ಭಾರತೀಯ ಪರಂಪರೆಯನ್ನು ಕಾಪಾಡುವ ಕೆಲಸ ಮಾಡುತ್ತಿದ್ದವು. ಆದರೆ ಮೆಕಾಲೆಯವರ ಆಧುನಿಕ ಅಥವಾ ಆಂಗ್ಲ ಶಿಕ್ಷಣ ವ್ಯವಸ್ಥೆ ಈ ಎಲ್ಲ ಭಾರತೀಯತೆಗೆ ಅಡಚಣೆಯಾಗಿ ಭಾರತದ ಸಮಾಜದಲ್ಲಿ ಸ್ಥಳೀಯರು ಹಾಗೂ ಸ್ಥಳೀಯ ಭಾಷಿಕರು ಹಾಗೂ ಆಂಗ್ಲ ಭಾಷಿಕ ಮಾಧ್ಯಮದಲ್ಲಿ ಶಿಕ್ಷಣ ಪಡೆದವರ ನಡುವೆ ಮೇಲು-ಕೀಳೆಂಬ ಭಾವನೆಗಳನ್ನು ಹುಟ್ಟಿಸಿದವು. ಶಿಕ್ಷಣ ಜ್ಞಾನ ಪ್ರಸರಣೆ, ಸ್ವಯಂ ದುಡಿಮೆ, ಸ್ವಹಿರಿಮೆ ಯಂತಹ ಸೆಲ್ಫ್ಗೆ ಸೇರಿದ ಗೌರವಗಳನ್ನು ಬದಿಗೊತ್ತಿ ಸರಕಾರಿ ಸೇವೆಗೆ ದುಂಬಾಲು ಬೀಳುವಂತೆ ಮಾಡಿತು. ಹೀಗಾಗಿ 1835ರ ಇಂಗ್ಲಿಷ್‌ ಶಿಕ್ಷಣ ಕಾಯ್ದೆ ಸೇರಿದಂತೆ, ವುಡ್ಸ್‌  ಡಿಸ್ಪಾÂಚ್‌ ವಿಲಿಯಂ ಹನ್‌ಟರ್ನ್ಸ್ ರಿಪೋ ರ್ಟ್‌ಗಳೂ ಸಂಪೂ ರ್ಣವಾಗಿ ಭಾರತೀಯ ಶಿಕ್ಷಣವನ್ನು ಚಿಂತನೆ, ಆಲೋ ಚನೆ-ಆಲೋಚನಾ ಕ್ರಮ, ಅನುಭವಿ ಕಲಿಕೆ, ಸಾಂಪ್ರದಾಯಿಕ ಕಲಿಕೆ, ಸ್ವಯಂ ಉದ್ಯೋಗ, ಸ್ವಪ್ರತಿಷ್ಠೆಯ ಕಲಿಕೆಯಿಂದ ದೂರ ಮಾಡಿ, ಜ್ಞಾನಾರ್ಜನೆಯನ್ನೇ ರೋಟ್‌ ಲರ್ನಿಂಗ್‌ ಸಿಸ್ಟಂ ಹಂತಕ್ಕೆ ತಂದೊಡ್ಡಿತು.

ಕೊಠಾರಿ ಕಮಿಶನ್‌ ಸೇರಿದಂತೆ ಕಳೆದ 35 ವರ್ಷಗಳಲ್ಲಿ ಈ ಆಂಗ್ಲ ಶಿಕ್ಷಣ ವ್ಯವಸ್ಥೆ ಭಾರತದಲ್ಲಿ ಶಿಕ್ಷಿತ ವರ್ಕ್‌ಫೋರ್ಸ್‌ (workforce) ಅನ್ನು ಬೆಳೆಯುವಂತೆ ಮಾಡಿ ಭಾರತೀಯ ಸ್ವಂತಿಕೆಯನ್ನು ಬರಿದಾಗಿಸಿತು. ಈ ಹಿನ್ನಲೆಯಲ್ಲಿ 1931ರ ದುಂಡು ಮೇಜಿನ ಪರಿಷತ್‌ನಲ್ಲಿ ಗಾಂಧೀಜಿ ತಮ್ಮ ಭಾಷಣದಲ್ಲಿ ಹೇಳಿದ ವಿಚಾರ ನಿಜಕ್ಕೂ ಇಂದಿಗೂ ಸಮಂಜಸವಾಗಿದೆ. ಅವರು “ದಿ ಬ್ಯೂಟಿಫ‌ುಲ್‌ ಟ್ರೀ ಆಫ್ ಎಜುಕೇಶನ್‌ ವಾಸ್‌ ಕಟ್‌ ಬೈ ಯು ಬ್ರಿಟಿಷ್‌ ದೇರ್‌ ಫೋರ್‌ ಟುಡೆ ಇಂಡಿಯಾ ಈಸ್‌ ಫಾರ್‌ ಮೋರ್‌ ಇಲ್ಲಿಟರೇಟ್‌ ದ್ಯಾನ್‌ ಇಟ್‌ ವಾಸ್‌ 100 ಇಯರ್ ಎಗೋ’ ಎಂಬುದನ್ನೂ ನಾವೆಲ್ಲರೂ ಗಮನಿಸಲೇಬೇಕು.

ನವ ಶಿಕ್ಷಣ ನೀತಿ ಇಂತಹ ಭಾರತೀಯತೆಯ ಕಳೆದು ಹೋದ ಸ್ವರೂಪವನ್ನು ಪುನರ್‌ ಸ್ಥಾಪಿಸಲು ಪ್ರಯತ್ನಿಸುವ ಒಂದು ಸಾಧನವಾಗಿದ್ದು, ಇದು ಶಿಕ್ಷಣ ಪದ್ಧತಿಯಲ್ಲಿ ಪರಿಪೂರ್ಣ ಬದಲಾವಣೆಯನ್ನು ತರುವುದಾಗಿದೆ.

ಶಾಲಾ ಶಿಕ್ಷಣ ಸೇರಿದಂತೆ 10+2 ರಚನೆಯಿದ್ದ ಶಿಕ್ಷಣ ವ್ಯವಸ್ಥೆಯನ್ನು 5 ವರ್ಷಗಳ ಫೌಂಡೇಶನ್‌ ಶಿಕ್ಷಣ, 3 ವರ್ಷಗಳ ಪೂರ್ವಸಿದ್ಧತಾ ಶಿಕ್ಷಣ, 3 ವರ್ಷಗಳ ಮಾಧ್ಯಮಿಕ ಹಾಗೂ 4 ವರ್ಷಗಳ ಸೆಕೆಂಡರಿ ಶಿಕ್ಷಣ ವ್ಯವಸ್ಥೆಯನ್ನು ತರಲಿದ್ದು, ವಿದ್ಯಾರ್ಥಿಗಳು ಈ ಸ್ಟ್ರೀಮ್‌ಗಳ ನಡುವೆ ತಮ್ಮ ಆಯ್ಕೆಗಳನ್ನು ಮಾಡಿಕೊಳ್ಳಲು ಹಾಗೂ ಪ್ರಾವೀಣ್ಯತೆಯನ್ನು ಎರಡು ವರ್ಷಗಳಷ್ಟು ಪಡೆಯಲು ಇದರಲ್ಲಿ ವ್ಯವಸ್ಥೆ ಇದೆ. ಮೂಲ ಸಾಮರ್ಥ್ಯದಲ್ಲಿ ಮಾತ್ರ ಬೋರ್ಡ್‌ ಪರೀಕ್ಷೆ ಇರಿಸಿ ಅವುಗಳನ್ನು ಮಾಡ್ನೂಲರ್‌ ಮಾಧ್ಯಮದಲ್ಲಿ ನೀಡಿ (ವಸ್ತುನಿಷ್ಠ ಹಾಗೂ ವ್ಯಕ್ತಿನಿಷ್ಠ) ಒಂದು ವರ್ಷದಲ್ಲಿ ಎರಡು ಬಾರಿ ಈ ಪರೀಕ್ಷೆಯನ್ನು ನಡೆಸುವ ವ್ಯವಸ್ಥೆ ಮಾಡಲಾಗಿದೆ. 8ನೇ ತರಗತಿಯವರೆಗೆ ತ್ರಿಭಾಷಾ ಸೂತ್ರ ಬಳಸಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಲಾಗಿದೆ. ಒಂದು ವರ್ಷದಲ್ಲಿ ಹತ್ತು ದಿನಗಳಷ್ಟು ಬ್ಯಾಗ್‌ ಇಲ್ಲದ ದಿನಗಳನ್ನು ನೀಡುವುದರೊಂದಿಗೆ, ಅನೌಪಚಾರಿಕ ಇಂಟರ್ನ್ ಶಿಪ್‌ನ ಔದ್ಯೋಗಿಕ ಆಯ್ಕೆಗೆ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವುದು ಇದರ ಉದ್ದೇಶವಾಗಿದೆ.

ಅದರಂತೆ ಉನ್ನತ ಶಿಕ್ಷಣದಲ್ಲಿ ಕಾಲೇಜುಗಳಿಗೆ ವಾರ್ಷಿಕವಾಗಿ 2 ಟೆಸ್ಟ್‌ಗಳನ್ನು ಮಾಡುವ ಮುಖಾಂತರ ಪ್ರವೇ ಶಾತಿಯನ್ನು ಕಾಮನ್‌ ಕಾಲೇಜ್‌ ಎಂಟ್ರನ್ಸ್‌ ಮುಖಾಂತರ ಮಾಡಲಾಗುವುದು. 4 ವರ್ಷಗಳ ಡಿಗ್ರಿ ಕೋರ್ಸ್‌ಗಳನ್ನು ಪ್ರಾರಂಭಿಸಿ ಕಾಲೇಜ್‌ ಡ್ರಾಪ್‌ ಔಟ್ಸ್‌ಗಳನ್ನು ಕ್ರೆಡಿಟ್‌ ಪಡೆದ ಆಧಾರದ ಮೇಲೆ ಪಾರ್ಶ್ವ (ಲ್ಯಾಟೆರಲ್‌) ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಸಾಧ್ಯವಾ ಗ ದಿದ್ದಾಗ ತಮ್ಮ ಓದನ್ನು ನಿಲ್ಲಿಸಿ ಮುಂದೆ ಸಾಧ್ಯವಾದಾಗ ಪುನಃ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಬಹುದಾಗಿದೆ.

ಮುಂದಿನ 15 ವರ್ಷಗಳಲ್ಲಿ ಕಾಲೇಜುಗಳಿಗೆ ಹಂತಹಂತ ವಾಗಿ ಸ್ವಾಯತ್ತೆಯನ್ನು ನೀಡುವ ಯೋಜನೆ ಇದ್ದು, ಸಂಲಗ್ನತೆಯನ್ನು ತೊಡೆದು ಹಾಕುವ ಚಿಂತನೆ ಇದೆ. ಇದೇ ರೀತಿ ಡೀಮ್ಡ್ ವಿಶ್ವವಿದ್ಯಾಲಯಗಳನ್ನು ಸಹ ಸ್ವತಂತ್ರವಾಗಿ ಸುವ ಚಿಂತನೆ ಇದೆ. ಮನಸೋ ಇಚ್ಛೆ ಶುಲ್ಕ ಹಾಕುವುದಕ್ಕೂ ಕಡಿವಾಣ ಹಾಕುವ ಯೋಚನೆ ಇದ್ದು, ಜಾಗತಿಕ ಮಟ್ಟದ ವಿಶ್ವ ವಿದ್ಯಾನಿಲಯಗಳನ್ನು ಇತರ ದೇಶಗಳಿಂದ ಮುಕ್ತವಾಗಿ ಬರ ಮಾಡಿಕೊಳ್ಳಲು ಹಾಗೂ ನಮ್ಮಲ್ಲಿನ ವಿಶ್ವವಿದ್ಯಾನಿಲಯ ಗಳು ಜಾಗತಿಕ ಮಟ್ಟದಲ್ಲಿ ಬೆಳೆಯಲೂ ಇಲ್ಲಿ ಅವಕಾಶವಿದೆ.

ಮುಖ್ಯವಾಗಿ ಈ ಶಿಕ್ಷಣ ನೀತಿಯು, ಕುತೂಹಲ ಬೆಳೆಸಿ ಕೊಳ್ಳಲು ತಾರ್ಕಿಕ ಆಲೋಚನೆ ಹಾಗೂ ಸಮಸ್ಯೆಗೆ ಪರಿಹಾರ ಹುಡುಕುವ ದಾರಿಯನ್ನು ತಿಳಿಸಿ-ಕಲಿಸುತ್ತಾ, ಕಲೆ, ಕರಕುಶಲ ವಸ್ತುಗಳು, ಸಂಗೀತ, ನಿಸರ್ಗದೊಂದಿಗೆ ಸಂಬಂಧ ಏರ್ಪಡಿ ಸುವ, ಚಿಂತನೆ, ಟೀಮ್‌ ವರ್ಕ್‌, ಸಹಯೋಗ, ಆಟ ಹಾಗೂ ಆವಿಷ್ಕಾರದ ಮುಖಾಂತರ ಪ್ರಾಯೋಗಿಕ ಕಲಿಕೆ, ನೈತಿಕತೆ, ಸ್ವಅಸ್ಮಿತೆ, ಶಿಷ್ಟಾಚಾರ, ನಡತೆ, ಭಾವನಾತ್ಮಕ ಬೆಳವಣಿಗೆ  ಎಲ್ಲದಕ್ಕೂ ಸಹಾಯಕಾರಿಯಾ ಗಿದ್ದು, ವಿಜ್ಞಾನ, ಸಮಾಜಶಾಸ್ತ್ರದ ನಡುವಿನ ವ್ಯತ್ಯಾಸಗಳನ್ನು ಮರೆಮಾಚುವ ದೂರದೃಷ್ಟಿ ಹೊಂದಿದೆ. ಅಂತೆಯೇ ಸಾಂಸ್ಥಿ ಕ ವಾಗಿಯೂ ಇದು ಖೀಎಇ, ಅಐಇಖಉಗಳ ಬದಲಾವಣೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳ ಚಲನಶೀಲತೆಗೆ ಸಹಾಯಕಾರಿ ಯಾಗಿದೆ. ರಾಷ್ಟ್ರೀಯ ಸಂಶೋಧನ ಫೌಂಡೇಶನ್‌, ಸ್ನಾತಕೋತ್ತರದಲ್ಲಿ ಸಾಂಸ್ಥಿಕ ನಮ್ಯತೆಗಳನ್ನು ಸೇರಿದಂತೆ ವಿದ್ಯಾರ್ಥಿ ಜೀವನದ ಪರಿಪೂರ್ಣತೆಗೆ ಇದು ಸಹಾಯಕಾರಿ ಯಾಗಿ, ಔಪಚಾರಿಕ ಹಾಗೂ ಅನೌಪಚಾರಿಕ ಶಿಕ್ಷಣಕ್ಕೂ ಸಹಾಯಕಾರಿಯಾಗಿದೆ. ಇಲ್ಲಿ ಕೌಶಲಾಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ$Â ನೀಡಿರುವುದೂ ಗಮನಾರ್ಹ.

ತಾಂತ್ರಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಸೃಜನಶೀಲತೆಗೆ ಹೆಚ್ಚಿನ ಒತ್ತನ್ನು ನೀಡಿರುವ ಈ ಶಿಕ್ಷಣ ನೀತಿಯು ವಿದ್ಯಾ ಸಂಸ್ಥೆಗಳು ತಮ್ಮಲ್ಲಿ ತಾಂತ್ರಿಕವಾದ ಮಾರ್ಪಾಡುಗಳನ್ನು ಮಾಡಿಕೊಳ್ಳಲು ನಿರ್ದೇಶಿಸಿದೆ. ಶಿಕ್ಷಕರು ಹಾಗೂ ಪ್ರಾಂಶುಪಾಲ ರಿಗೆ ತಮ್ಮ ವೃತ್ತಿಪರ ಅಭಿವೃದ್ಧಿಗಾಗಿ 50 ಗಂಟೆಗಳ ಕಾಲ, ಕಾರ್ಯಾಗಾರದ ಮುಖಾಂತರ ಅವರ ಕಲಿಕೆ ಮುಂದು ವರಿಸಲು ಇದು ನಿರ್ದೇಶಿಸಿದೆ. ಇ-ಕಲಿಕೆ ಪ್ಲಾಟ್‌ಫಾರ್ಮ್ಗಳ ಮುಖಾಂತರ DIKSHA, SWAYAM, SWAYAMPRABHA ಗಳು ಬೋಧನೆ ಮತ್ತು ಕಲಿಕೆಗೆ ಇ-ವಿಷಯ ಅನ್ನು ಕೊಡುವ ಯೋಚನೆ ಇದೆ. ಮಿಶ್ರಿತ ಕಲಿಕೆಗೆ ಇದರಲ್ಲಿ ಹೆಚ್ಚಿನ ಒತ್ತಾಸೆ ನೀಡಲಾಗಿದೆ. ಶಿಕ್ಷಕರು ಈ ಮೂಲಕ ತಾಂತ್ರಿಕ ಜ್ಞಾನವನ್ನು ಪಡೆದುಕೊಳ್ಳಲೇಬೇಕಾದ ಸಂದರ್ಭ ನಮ್ಮೆಲ್ಲರ ಮುಂದಿದೆ. ಈ ರೀತಿಯ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತದಲ್ಲಿ ಮೊಟ್ಟಮೊದಲ ಪ್ರಯತ್ನವಾಗಿದ್ದು, ಜಾಗತಿಕವಾಗಿ ನಮ್ಮ ರಾಷ್ಟ್ರವು ಇತರ ಮುಂದುವರಿದ ರಾಷ್ಟ್ರ ಗಳಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆ ಯಲು, ಸ್ಪರ್ಧಿಸಲು ಹಾಗೂ ಜಾಗತಿಕವಾಗಿ ನಮ್ಮ ದೇಶದ ವಿದ್ಯಾರ್ಥಿಗಳು ಪ್ರಗತಿ ಸಾಧಿಸಲು ಅನುಕೂಲಕರವಾಗಿದೆ.

ಭಾರತದ ಪ್ರಧಾನಿ ಮೋದಿ ನೇತೃತ್ವದ ಸರಕಾರದ ಈ ಚಿಂತನೆಯು ಸುಮಾರು 50 ತಿಂಗಳುಗಳ ಸಮಾ ಲೋಚನೆ ಅನಂತರ ಹೊರಬಂದಿದ್ದು, 2030ರ ಹೊತ್ತಿಗೆ ಶೇ. 100ರಷ್ಟು ಒಟ್ಟು ದಾಖಲಾತಿ (Gross Enrollment) ಮಾಡಿಕೊಳ್ಳುವ ಆಕಾಂಕ್ಷೆ ಹೊಂದಿದೆ. ಲಿಂಗ ಸೇರ್ಪಡೆ ನಿಧಿಗಳು, ವಿಶೇಷ ಶಿಕ್ಷಣ ವಲಯಗಳೂ ಸೇರಿದಂತೆ ಈ ನೀತಿಯು ಶಿಕ್ಷಣದ ಗುಣಮಟ್ಟ ಹಾಗೂ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಅಭಿವೃದ್ಧಿ, ಕಾರ್ಯಕ್ಷಮತೆ ಹಾಗೂ ಹೊಣೆಗಾರಿಕೆ ಮಂತ್ರಗಳನ್ನು ತನ್ನಲ್ಲಿ ರೂಢಿಸಿ ಕೊಂಡಿರುವ ಈ ನೀತಿಯು, ಭಾರತದ ರಾಷ್ಟ್ರಪ್ರೇಮಿಗಳಲ್ಲಿ ಹೆಚ್ಚಿನ ದೇಶಭಕ್ತಿಯ ಮನೋ ಭಾವವನ್ನು ಹುಟ್ಟಿಸುವುದರಲ್ಲಿ ಆಶ್ಚರ್ಯವಿಲ್ಲ. ಬಹುಶಃ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ನೀತಿಯು ರಾಷ್ಟ್ರದ ಜಿಡಿಪಿಯ ಶೇ.6 ರಷ್ಟನ್ನು ಶಿಕ್ಷಣಕ್ಕಾಗಿ ಮೀಸಲಿಡುವುದಾಗಿ ಹೇಳಿರುವುದು ಸ್ವಾಗತಾರ್ಹ.

ಹಾಗೇ ಇಡೀ ನವ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತದಲ್ಲಿ ಬೇರೂರಿದ್ದ ಮೆಕಾಲೆಯವರ ಶಿಕ್ಷಣ ನೀತಿಯನ್ನು ಬುಡ ಮೇಲು ಮಾಡುವ ಪ್ರಯತ್ನದಲ್ಲಿದ್ದು, ತನ್ನ ಸ್ವಂತಿಕೆಯನ್ನು ಹಾಗೂ ಅಸ್ಮಿತೆಯನ್ನು ಗಮನಕ್ಕೆ ತಂದುಕೊಂಡಿದೆ. ಭಾರತೀಯ ಶಿಕ್ಷಣ ಮಂಡಳಿಯು ಈ ಪ್ರಯತ್ನವನ್ನು ಸಫ‌ಲಗೊಳಿಸಲು ಸರ್ವಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ.

 

 ಡಾ| ಬಸವರಾಜೇಶ್ವರಿ ಆರ್‌. ಪಾಟೀಲ್‌, ಸಹಾಯಕ ಪ್ರಾಧ್ಯಾಪಕರು ಕಲಘಟಗಿ,

ಡಾ| ಹರೀಶ್‌ ರಾಮಸ್ವಾಮಿ

ಕುಲಪತಿಗಳು, ರಾಯಚೂರು ವಿವಿ

ಟಾಪ್ ನ್ಯೂಸ್

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

madhu-bangara

Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.