ರಾಜ್ಯಮಟ್ಟದಲ್ಲಿ ಯಕ್ಷಗಾನ ಸಮ್ಮೇಳನ: ಡಾ| ಹೆಗಡೆ
Team Udayavani, Feb 18, 2022, 6:50 AM IST
ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಗೋಪಾಲಕೃಷ್ಣ ಲಕ್ಷ್ಮೀನಾರಾಯಣ ಹೆಗಡೆ (ಡಾ| ಜಿ.ಎಲ್. ಹೆಗಡೆ) ಅವರನ್ನು ಸರಕಾರ ನೇಮಕ ಮಾಡಿದೆ. ಅಧಿಕಾರಾವಧಿ ಒಂದು ವರ್ಷವಷ್ಟೇ ಬಾಕಿ ಉಳಿದಿದೆಯಾದರೂ ಈ ಅವಧಿಯಲ್ಲಿ ಯಕ್ಷಗಾನ ಕಲೆ ಮತ್ತು ಕಲಾವಿದರ ಏಳಿಗೆಗೆ ಶ್ರಮಿಸುವ ಮಹತ್ವಾಕಾಂಕ್ಷೆ ಹೆಗಡೆ ಅವರದ್ದಾಗಿದೆ. ಉದಯವಾಣಿಗೆ ನೀಡಿದ ಸಂದರ್ಶನದಲ್ಲಿ ಅವರು ಅಕಾಡೆಮಿಯ ಮೂಲಕ ಕಲೆಯ ಬೆಳವಣಿಗೆ, ಕಲಾವಿದರ ಶ್ರೇಯೋಭಿವೃದ್ಧಿಗೆ ಕೈಗೊಳ್ಳಲುದ್ದೇಶಿಸಿರುವ ಯೋಜನೆಗಳು ಮತ್ತು ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.
ಅಕಾಡೆಮಿ ಅಧ್ಯಕ್ಷ ಸ್ಥಾನ ನಿರೀಕ್ಷಿತವೇ?
ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಸ್ಥಾನ ಅನಿರೀಕ್ಷಿತವಾಗಿ ಲಭಿಸಿದೆ. ಆದರೆ ಈಗ ದೊಡ್ಡ ಜವಾಬ್ದಾರಿ ನನ್ನ ಹೆಗಲ ಮೇಲೇರಿದ್ದು, ಅದನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸ ಇದೆ.
ಕೇವಲ ಒಂದು ವರ್ಷದ ಅಧಿಕಾರಾವಧಿಯಲ್ಲಿ ಬದಲಾವಣೆ ಮಾಡಲು ಸಾಧ್ಯವೇ?
ಇಚ್ಛಾಶಕ್ತಿ ಪೂರಕವಾಗಿದ್ದರೆ ಅವಧಿ ಮುಖ್ಯವಲ್ಲ. ಪ್ರಸ್ತುತ ಇರುವ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು ಹಾಗೂ ಕಲಾವಿದರಿಗೆ ಅನುಕೂಲವಾಗುವಂತಹ ಸೌಲಭ್ಯಗಳನ್ನು ಜಾರಿಗೆ ತರಲು ಗಮನ ಹರಿಸುತ್ತೇನೆ.
ಅಕಾಡೆಮಿ ವತಿಯಿಂದ ಹೊಸ ಯೋಜನೆಯನ್ನು ಆರಂಭಿಸಬೇಕು ಎನ್ನುವ ಆಕಾಂಕ್ಷೆ ಇದೆಯೇ?
ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ರಾಜ್ಯ, ವಿಶ್ವ ಮಟ್ಟದ ಸಾಹಿತ್ಯ ಸಮ್ಮೇಳಗಳು ನಡೆಯುತ್ತವೆ. ಆದರೆ ಈ ಸಮ್ಮೇಳನಗಳಲ್ಲಿ ಯಕ್ಷಗಾನಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿಲ್ಲ. ಹೀಗಾಗಿ ರಾಜ್ಯ ಸರಕಾರದ ವತಿಯಿಂದ ರಾಜ್ಯಮಟ್ಟದಲ್ಲಿ ಯಕ್ಷಗಾನ ಸಮ್ಮೇಳನ ನಡೆಯಬೇಕು. ಈ ಸಮ್ಮೇಳನದಲ್ಲಿ ಯಕ್ಷಗಾನ ಸಾಹಿತ್ಯ, ಯಕ್ಷ ಸಾಹಿತಿಗಳು, ಪ್ರಸಂಗಕರ್ತರು, ಪ್ರಸಂಗಗಳು, ವೇಷಭೂಷಣ, ವೇಷಧಾರಿಗಳ ಬಗ್ಗೆ ವಿಸ್ತೃತ ಚರ್ಚೆಗಳು ನಡೆಯಬೇಕು. ಇದರ ಜತೆಯಲ್ಲಿ ಮೂಡಲಪಾಯ, ಗಟ್ಟಡಕೋರೆ ಮುಂತಾದ ಕಲೆಗಳ ಬಗ್ಗೆಯೂ ಚರ್ಚೆ ನಡೆಯಬೇಕು. ಇದರಿಂದ ಯಕ್ಷಗಾನ ಕಲೆಯ ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ.
ಯಕ್ಷಗಾನ ಅಕಾಡೆಮಿಗೆ ವಾರ್ಷಿಕ ಅನುದಾನವಿರುವುದು 60 ಲಕ್ಷ ರೂ., ಇದರಿಂದ ನಿಮ್ಮೆಲ್ಲ ಯೋಜನೆಗಳು, ಚಿಂತನೆಗಳನ್ನು ಸಾಕಾರಗೊಳಿಸಲು ಸಾಧ್ಯವೇ?
ಈ ಅನುದಾನ ಖಂಡಿತ ಸಾಕಾಗದು. ಈ ಅನುದಾನದಲ್ಲಿಯೇ ಕಚೇರಿ ನಿರ್ವಹಣೆ, ಸಿಬಂದಿಗೆ ಸಂಬಳ, ಅಕಾಡೆಮಿಯ ಕಾರ್ಯಕ್ರಮಗಳನ್ನು ನಡೆಸಬೇಕಿದೆ. ಹೀಗಾಗಿ ಈ ಬಾರಿ ಬಜೆಟ್‌ನಲ್ಲಿ ವಿಶೇಷ ಅನುದಾನವನ್ನು ಅಕಾಡೆಮಿಗೆ ನೀಡಬೇಕು ಎಂದು ಮನವಿ ಸಲ್ಲಿಸಲಾಗಿದೆ.
ಸರಕಾರದಿಂದ ಯಕ್ಷಗಾನ ಅಕಾಡೆಮಿಗೆ ಸಹಕಾರ ಸಿಗುತ್ತಿದೆಯೇ?
ಸರಕಾರದಿಂದ ಪೂರ್ಣ ಸಹಕಾರ ಲಭಿಸುತ್ತಿದೆ. ಅದರಲ್ಲೂ ಈ ಬಾರಿ ಕರಾವಳಿಯವರಾದ ಸುನಿಲ್ ಕುಮಾರ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿರುವುದರಿಂದ ಸಾಕಷ್ಟು ಅನುಕೂಲವಾಗಲಿದೆ. ಕಲೆಯ ಬಗ್ಗೆ ವಿಶೇಷ ಗೌರವವಿರುವ ಕೋಟ ಶ್ರೀನಿವಾಸ ಪೂಜಾರಿ, ಶಿವರಾಮ ಹೆಬ್ಟಾರ್, ಅಂಗಾರ ಅವರು ಸರಕಾರದಲ್ಲಿ ಸಚಿವರಾಗಿರುವುದು, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಸಹಕಾರ ಇರುವುದರಿಂದ ಅಕಾಡೆಮಿಯ ಮೂಲಕ ಹೆಚ್ಚಿನ ಕೆಲಸಕಾರ್ಯಗಳನ್ನು ಮಾಡುವ ಇರಾದೆ ಇದೆ.
ಹಿಂದಿನ ಅಧ್ಯಕ್ಷರ ಅವಧಿಯ ಯಾವೆಲ್ಲ ಕಾರ್ಯಕ್ರಮಗಳನ್ನು ಮುಂದುವರಿಸುತ್ತೀರಿ?
ಅಕಾಡೆಮಿಯ ಹಿಂದಿನ ಅಧ್ಯಕ್ಷರು ಅವಧಿಯಲ್ಲಿ ಕೈಗೆತ್ತಿಕೊಂಡ ಎಲ್ಲ ಉತ್ತಮ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆ. ಅದರಲ್ಲೂ ಮುಖ್ಯವಾಗಿ ಯಕ್ಷಗಾನ ವಿಶ್ವಕೋಶವನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಬೇಕಿದೆ.
ಎಲ್ಲ ತಿಟ್ಟುಗಳಿಗೆ ಸಮಾನ ನ್ಯಾಯ ಒದಗಿಸುತ್ತೀರಾ? ಮೂಡಲಪಾಯದ ಬೆಳವಣಿಗೆಗೆ ಯೋಜನೆ ರೂಪಿಸುತ್ತೀರಾ?
ಮೂಲಭೂತವಾಗಿ ಯಕ್ಷಗಾನದ ತಿಟ್ಟುಗಳ ನಡುವೆ ಇರುವ ಒಂದಷ್ಟು ವ್ಯತ್ಯಾಸವನ್ನು ಹೊರತುಪಡಿಸಿದರೆ ಎಲ್ಲವೂ ಒಂದೇ. ಹೀಗಾಗಿ ಯಕ್ಷಗಾನ ಕಲೆಗೆ ನ್ಯಾಯ ಒದಗಿಸುವಾಗ ಎಲ್ಲ ತಿಟ್ಟುಗಳಿಗೂ ನ್ಯಾಯ ಸಿಕ್ಕೇ ಸಿಗುತ್ತದೆ. ಮೂಡಲಪಾಯ ಕೂಡ ಯಕ್ಷಗಾನ ಅಕಾಡೆಮಿಯ ಭಾಗವಾಗಿದೆ. ಈ ಕಲೆಯ ಕುರಿತು ನನಗೆ ಒಂದಷ್ಟು ಕಲ್ಪನೆಗಳಿವೆ. ಹಿರಿಯರ ಮಾರ್ಗದರ್ಶನ ಪಡೆದು ಇದರ ಬೆಳವಣಿಗೆಗೂ ಶ್ರಮಿಸುತ್ತೇನೆ.
ಕಲೆಯ ಪ್ರಚಾರಕ್ಕೆ ಸಾಮಾಜಿಕ ಜಾಲತಾಣವನ್ನು ಯಾವ ರೀತಿ ಬಳಸಿಕೊಳ್ಳುತ್ತೀರಿ?
ಪ್ರಸ್ತುತ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣಗಳು ಅತ್ಯವಶ್ಯಕವಾಗಿ ಬೇಕು. ಹೀಗಾಗಿ ಅಕಾಡೆಮಿ ಸಂಗ್ರಹದಲ್ಲಿರುವ ಹಳೆಯ ಪ್ರಾತ್ಯಕ್ಷಿಕೆ ಮುಂತಾದ ದೃಶ್ಯಮುದ್ರಿಕೆಗಳನ್ನು ಯೂಟ್ಯೂಬ್, ಪೇಸ್‌ಬುಕ್ ಮುಂತಾದ ಜಾಲತಾಣದಲ್ಲಿ ಪ್ರಸಾರ ಮಾಡಲಾಗುವುದು. ಕಲಾವಿದರ ಪರಿಚಯ ಮಾಡಿಕೊಡಲಾಗುವುದು. ಕಲಾವಿದರಿಗೆ ಅಕಾಡೆಮಿ ಕುರಿತು ಮಾಹಿತಿ, ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ವೆಬ್‌ಸೈಟ್ ವ್ಯವಸ್ಥೆ ಮಾಡಲಾಗುವುದು.
ಕಲಾವಿದರ ಹಿತದೃಷ್ಟಿಯ ರಕ್ಷಣೆಗೆ ನಿಮ್ಮ ಚಿಂತನೆ, ಯೋಚನೆಗಳೇನು?
ಯಕ್ಷಗಾನ ಕಲಾವಿದರಿಗೆ ವೃದ್ಧಾಪ್ಯದಲ್ಲಿ ಜೀವನ ಸಾಗಿಸಲು ಸರಕಾರ ನೀಡುತ್ತಿರುವ ಮಾಸಾಶನ ಸಾಕಷ್ಟು ನೆರವಾಗುತ್ತಿದೆ. ಅದು ಸಕಾಲದಲ್ಲಿ ಸಿಗಬೇಕು, ಫಲಾನುಭವಿಗಳ ಆಯ್ಕೆ ಕ್ಷಿಪ್ರವಾಗಿ ನಡೆಯಬೇಕು. ಮಾಸಾಶನ ಮೊತ್ತ ಐದು ಸಾವಿರ ರೂ.ಗಳಿಗೆ ಏರಿಕೆಯಾಗಬೇಕು. ಪ್ರಸ್ತುತ ವೃತ್ತಿ ಮೇಳದಲ್ಲಿ ಸೇವೆ ಸಲ್ಲಿಸುವ ಕಲಾವಿದರನ್ನು ಗುರುತಿಸಲು ಸರಿಯಾದ ವ್ಯವಸ್ಥೆ ಇಲ್ಲ. ಹೀಗಾಗಿ ವಿಶ್ವಕೋಶದಲ್ಲಿ ಎಲ್ಲ ಕಲಾವಿದರನ್ನು ಗುರುತಿಸುವ ಕೈಪಿಡಿ ರೂಪಿಸಬೇಕು ಎನ್ನುವ ಕನಸಿದೆ.
-ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ
ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Amparu: ಬೈಕ್ ಸ್ಕಿಡ್; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು
KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್ ರಾಜ್ ಮೌರ್ಯ
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.