ಸವಾರರ ಹಕ್ಕುಗಳ “ಚಲನ್‌’ ಚಿತ್ರ


Team Udayavani, Sep 13, 2019, 6:00 AM IST

q-40

ಸಂಚಾರ ನಿಯಮಗಳ ಉಲ್ಲಂಘನೆಗೆ “ದುಬಾರಿ ದಂಡ’ ವಿಧಿಸಲಾಗುತ್ತಿರುವ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗುತ್ತಿರುವಂತೆಯೇ, ಕೆಲ ಪೊಲೀಸರ ವರ್ತನೆ ಕುರಿತು ಆಕ್ರೋಶವೂ ವ್ಯಕ್ತವಾಗುತ್ತಿದೆ. ಸಂಚಾರ ನಿಯಮಗಳ ಉಲ್ಲಂಘನೆ ವೇಳೆ ದಂಡದ ಅಸ್ತ್ರ ಪ್ರಯೋಗಿಸುತ್ತಿರುವ ಸಂಚಾರ ಪೊಲೀಸರ ಕರ್ತವ್ಯಗಳು ಹೇಗಿರಬೇಕು. ಅನಗತ್ಯ ದಂಡ ವಿಧಿಸುವುದು, ಪೊಲೀಸರ ಅನುಚಿತ ವರ್ತನೆ ಕಂಡು ಬಂದರೆ ಈ ವಿಚಾರದಲ್ಲಿ ಸಾರ್ವಜನಿಕರ ಹಕ್ಕುಗಳು ಹೇಗಿವೆ ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮನ್ನೂ ಕಾಡುತ್ತಿರಬಹುದು. ಅದಕ್ಕಿಲ್ಲಿದೆ ಉತ್ತರ…

-ಪೊಲೀಸರು ಕೀ ಕಸಿದುಕೊಳ್ಳುವಂತಿಲ್ಲ
-ರಸ್ತೆಯ ತಿರುವುಗಳಲ್ಲಿ ನಿಂತು ಕಾರ್ಯಾಚರಣೆ ನಡೆಸಬಾರದು ಎಂದು ಸೂಚನೆ ನೀಡಿದರೂ ಬದಲಾಗುತ್ತಿಲ್ಲ ಸ್ಥಿತಿ.
-ಸವಾರರಿಗೆ ಹೊಡೆಯುವುದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವಂತಿಲ್ಲ.

ಪೊಲೀಸರಿಗೆ ಎರಡು ಪಟ್ಟು ದಂಡ!
ಸಂಚಾರ ಪೊಲೀಸರೇ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಅವರಿಗೆ ಕಾನೂನು ಅನ್ವಯ ಆಗುವುದಿಲ್ಲವೇ ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಉದ್ಭವಿಸುತ್ತವೆ. ಹೆಚ್ಚು ಚರ್ಚೆಗೂ ಗ್ರಾಸವಾಗುತ್ತಿವೆ. ಆದರೆ, ಕೇಂದ್ರ ಮೋಟಾರು ವಾಹನ ಕಾಯ್ದೆ ಅನ್ವಯ ಕಾನೂನು ಜಾರಿಗೊಳಿಸುವ ಪೊಲೀಸ್‌ ಸಿಬ್ಬಂದಿ ನಿಯಮಗಳನ್ನು ಉಲ್ಲಂಘಿಸಿದರೆ ಅವರಿಗೆ ಎರಡುಪಟ್ಟು ದಂಡ ವಿಧಿಸಬಹುದು.ಜತೆಗೆ, ಸೇವೆಯಿಂದ ಅಮಾನತುಗೊಳಿಸುವ ಶಿಸ್ತುಕ್ರಮವೂ ಜರುಗಿಸಲು ಅವಕಾಶವಿದೆ.

ನೀವು ತಪ್ಪೇ ಮಾಡಿಲ್ಲ, ಆದರೂ ಮನೆಗೆ ಚಲನ್‌ ಬರುತ್ತದೆ. ಆಗ ಏನು ಮಾಡಬೇಕು?
ನಿಗದಿತ ಸಂಚಾರ ನಿಯಮ ಉಲ್ಲಂಘನೆಗೆ ಸಂಚಾರ ಪೊಲೀಸ್‌ ಅಧಿಕಾರಿ ವಿಧಿಸುವ ದಂಡದ ಮೊತ್ತದ ಚಲನ್‌ನಲ್ಲಿ ವ್ಯತ್ಯಾಸ ಕಂಡು ಬಂದರೆ. ತಪ್ಪೆಸಗದಿದ್ದರೂ ದಂಡ ವಿಧಿಸಿದ್ದರೆ, ದಂಡದ ಚಲನ್‌ ಆಧಾರದಲ್ಲಿಯೇ ಕೋರ್ಟ್‌ ಮೊರೆ ಹೋಗಬಹುದು. ಇಲ್ಲವೇ ನೇರವಾಗಿ ಹಿರಿಯ ಅಧಿಕಾರಿಗಳ ಬಳಿ ದೂರು ಸಲ್ಲಿಸಲು ಅವಕಾಶವಿದೆ. ಅದಕ್ಕೆ ಅಗತ್ಯ ದಾಖಲೆಗಳು ವಾಹನ ಸವಾರನಲ್ಲಿ ಹಾಗೂ ಪೂರಕ ಸಾಕ್ಷ್ಯಗಳು ಪೊಲೀಸರಲ್ಲಿ ಇರಬೇಕು. ಕಾಯ್ದೆ ಅಡಿಯಲ್ಲಿ ಸಕ್ಷಮ ಅಧಿಕಾರಿಗಳು ವಾಹನ ಸವಾರನಿಗೆ ಕೇಳಿದ ಮಾಹಿತಿ ನೀಡದೆ, ಅನುಚಿತವಾಗಿ ವರ್ತನೆ ತೋರಿದರೆ ಎರಡು ಸಾವಿರ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಇದೇ ನೆಪ ಇಟ್ಟುಕೊಂಡು ಪೊಲೀಸರು ವಿನಾಕಾರಣ ದಂಡ ವಿಧಿಸಿದರೂ ಕೂಡ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬಹುದು. ಅಜಾಗರೂಕ ಚಾಲನೆಗೆ ಸಂಬಂಧಿಸಿದಂತೆ ಘಟನಾ ಸ್ಥಳದ ಸಿಸಿಟಿವಿ ಫ‌ೂಟೇಜ್‌ ಹಾಗೂ ಫೋಟೋ ಆಧರಿಸಿ ದಂಡ ವಿಧಿಸಲಾಗುತ್ತಿದೆ. ಸಿಸಿಟಿವಿ ಹಾಗೂ ಫೋಟೋಗಳೇ ಪ್ರಮುಖ ಸಾಕ್ಷ್ಯಗಳು. ಇವು ವಾಹನ ಸವಾರನಿಗೆ ಅನುಕೂಲ ಆಗಬಹುದು.

ಕೆಲವು ಪೊಲೀಸರು ಕೀ ಕಸಿಯುತ್ತಾರಲ್ಲವೇ?
ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ವಾಹನ ವನ್ನು ತಡೆದು ಪೊಲೀಸರು ಮಾಹಿತಿ ಕೇಳಬಹುದು. ದಾಖಲೆಗಳನ್ನು ಪರಿಶೀಲಿಸಿ ದಂಡ ವಿಧಿಸಬಹುದು.ಅದನ್ನು ಹೊರತುಪಡಿಸಿ ವಾಹನಗಳ ಕೀ ಕಸಿದುಕೊಳ್ಳುವಂತಿಲ್ಲ, ಕಾರಿಗೆ ಗುದ್ದುವುದು ಇತ್ಯಾದಿ ಕ್ರಮಗಳಿಗೆ ಮುಂದಾಗುವಂತಿಲ್ಲ.

ಸಂಚಾರ ಪೊಲೀಸರು ಅಡಿಗಡಿಗೆ ನಿಲ್ಲುತ್ತಾರಲ್ಲ?
ವಾಹನಗಳ ತಪಾಸಣೆಗೆ ಸಂಚಾರ ಪೊಲೀಸರು ಎಲ್ಲಿ ನಿಲ್ಲಬೇಕು ಎಂಬ ಸ್ಪಷ್ಟ ನಿಯಮಗಳು ಇಲ್ಲ. ಸಿಗ್ನಲ್‌ ಹೊರತುಪಡಿಸಿ ಅದಕ್ಕಿಂತ ದೂರದಲ್ಲಿ ನಿಂತು ಕಾರ್ಯಾಚರಣೆ ನಡೆಸಬಹುದು. ರಸ್ತೆಯ ತಿರುವುಗಳಲ್ಲಿ ನಿಂತು ಕಾರ್ಯಾಚರಣೆ ನಡೆಸಬಾರದು ಎಂದು ಈ ಹಿಂದಿನ ಸಂಚಾರ ವಿಭಾಗದ ಆಯುಕ್ತರು ಹಲವು ಬಾರಿ ಸೂಚನೆಗಳನ್ನು ನೀಡಿದರೂ, ಈ ಚಾಳಿ ಮಾತ್ರ ಮುಂದುವರಿದಿದೆ.

ಪೊಲೀಸರಿಗೂ ಶುರುವಾಗಿದೆ ಕಿರಿಕಿರಿ
ದುಬಾರಿ ದಂಡ ಪ್ರಯೋಗ ಶುರುವಾಗುತ್ತಲೇ ಸಂಚಾರ ಪೊಲೀಸರು ಕೂಡ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಈ ಕುರಿತು “ಉದಯವಾಣಿ’ಜತೆ ಮಾತನಾಡಿದ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು, “”ಬಹುತೇಕ ಸಂದರ್ಭಗಳಲ್ಲಿ ವಾಹನ ಸವಾರರಿಗೆ ಪರಿಷ್ಕೃತ ದಂಡದ ಮೊತ್ತದ ಬಗ್ಗೆ ಅರಿವಿರುವುದಿಲ್ಲ. ಹಿಂದೆ ಇದ್ದ ದಂಡವನ್ನೇ ಪಾವತಿಗೆ ಪಟ್ಟು ಹಿಡಿಯುತ್ತಾರೆ. ಅವರಿಗೆ ಸಮಜಾಯಿಷಿ ನೀಡಬೇಕು. ಹೊಸ ದರದ ಮಾಹಿತಿ ಬಗ್ಗೆ ಸ್ಪಷ್ಟೀಕರಣ ನೀಡಬೇಕಾಗುತ್ತದೆ. ಕೆಲವೊಮ್ಮೆ ದಂಡ ವಿಚಾರವಾಗಿ ನಿಂದನೆಗೆ ಇಳಿಯುತ್ತಾರೆ. ಅದನ್ನು ಸಹಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿಯೂ ಚಿತ್ರ ವಿಚಿತ್ರವಾಗಿ ಟ್ರೋಲ್‌ ಮಾಡುತ್ತಾರೆ. ಆದರೆ, ನಾವು ಕಾನೂನು ಜಾರಿಗೊಳಿಸುವ ಆಡಳಿತ ಯಂತ್ರದ ಅಧಿಕಾರಿಗಳಷ್ಟೇ ಎಂಬುದನ್ನು ಗಮನದಲ್ಲಿರಿಸಿಕೊಂಡು ಸಾರ್ವಜನಿಕರು ಸಹಕರಿಸಿದರೆ ಅಷ್ಟೇ ಸಾಕು” ಎಂದು ಅವರು ಹೇಳುತ್ತಾರೆ.

ಬೈಕ್‌ ನಿಲ್ಲಿಸದೆ ಇದ್ದರೆ ಪೊಲೀಸರು ಏನು ಮಾಡಬೇಕು?
ವಾಹನ ತಪಾಸಣೆ ವೇಳೆ ಸಿಬ್ಬಂದಿ ಅನುಚಿತ ವರ್ತನೆ ತೋರುವುದು, ಹಲ್ಲೆಗೆ ಮುಂದಾಗುವುದು ಇತ್ಯಾದಿ ಕ್ರಮಗಳನ್ನು ಕೈಗೊಳ್ಳುವಂತಿಲ್ಲ. ಬೈಕ್‌ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಹೊಡೆಯಲು ಮುಂದಾಗುವುದು, ಹಿಮ್ಮೆ ಟ್ಟುವುದು, ಅವಾಚ್ಯಶಬ್ದಗ ಳಿಂದ ನಿಂದನೆ ಮಾಡುವಂತಿಲ್ಲ. ವಾಹನ ಸವಾರನ ನಿಯಮ ಉಲ್ಲಂಘನೆ ಬಗ್ಗೆ ಮುಂದಿನ ಸಿಗ್ನಲ್‌ನಲ್ಲಿರುವ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಎಲ್ಲ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಇದನ್ನು ಮೀರಿಯೂ ಸಿಬ್ಬಂದಿ ಇದೇ ಮಾದರಿ ಅನುಸರಿಸಿದರು ಎಂಬ ದೂರುಗಳು ಬಂದರೆ ಅಮಾನತು ಶಿಕ್ಷೆಗೆ ಗುರಿಯಾಗಲಿದ್ದಾರೆ.

ಫೋಟೋ ತೆಗೆಯಲು ಅವಕಾಶವಿದೆಯೇ?
ಸಂಚಾರ ನಿಯಮ ಉಲ್ಲಂ ಸದೇ ಇಲ್ಲದಿದ್ದ ವೇಳೆಯೂ ಪೊಲೀಸರು ವ್ಯಕ್ತಿಗಳ ಜತೆ ವಾಹನ ಫೋಟೋ ತೆಗೆಯುವಂತಿಲ್ಲ. ಆದರೆ, ಚಾಲನೆ ವೇಳೆ ಮೊಬೈಲ್‌ ಬಳಕೆ, ಸೀಟ್‌ ಬೆಲ್ಟ್ ಧರಿಸದೇ ವಾಹನ ಚಲಾಯಿಸುತ್ತಿರುವುದು ಕಂಡು ಬಂದರೆ ಸಾಕ್ಷ್ಯಕ್ಕಾಗಿ ಫೋಟೋ ತೆಗೆಯಬಹುದು. ಒಂದು ವೇಳೆ ನಿಯಮ ಮೀರಿ ಅತಿವೇಗ ಚಾಲನೆ ಸಂದರ್ಭದಲ್ಲಿ ನಿರ್ದಿಷ್ಟ ವಾಹನ ಹಾಗೂ ವಾಹನ ನೋಂದಣಿ ಸಂಖ್ಯೆಯನ್ನು ಮಾತ್ರವೇ ಗುರಿಯಾಗಿಸಿ ಫೋಟೋ ತೆಗೆಯಬಹುದು. ಸಿವಿ ಲ್‌ ಪೊಲೀಸರೂ ತುರ್ತು ಸಂದರ್ಭಗಳಲ್ಲಿ ವಾಹನಗಳನ್ನು ತಡೆದು ಪರಿಶೀಲನೆ ನಡೆಸಬಹುದು. ಇಲ್ಲವೇ ಸಂಚಾರ ಪೊಲೀಸರ ಜತೆ ಜಂಟಿ ಕಾರ್ಯಾಚರಣೆಯಲ್ಲಿ ಭಾಗಿಯಾಗಬಹುದು. ಆದರೆ, ಕಾನೂನು ಸುವ್ಯವಸ್ಥೆ ಪಾಲನೆ, ಅಪರಾಧ ಕೃತ್ಯಗಳ ಆರೋಪಿಗಳನ್ನು ಹಿಡಿಯುವ ಕಾರ್ಯಚರಣೆ ಇನ್ನಿತರೆ ಸಂದ‌ರ್ಭಗಳಲ್ಲಿ ಸಾಮಾನ್ಯವಾಗಿ ವಾಹನ ತಪಾಸಣೆ ನಡೆಸಬಹುದು.

ಡಿಜಿಟಲ್‌ ದಾಖಲೆ ತೋರಿಸಬಹುದೇ?
ವಾಹನಕ್ಕೆ ಸಂಬಂಧಪಟ್ಟ ದಾಖಲೆಗಳನ್ನು, ಉದಾ- ಡ್ರೈವಿಂಗ್‌ ಲೈಸೆನ್ಸ್‌ ಮತ್ತು ನೋಂದಣಿ ಸರ್ಟಿಫಿಕೇಟ್‌ಗಳನ್ನು ನಿಮ್ಮ ಮೊಬೈಲ್‌ ಫೋನ್‌ ಮೂಲಕ ಡಿಜಿಟಲ್‌ ರೂಪದಲ್ಲೂ ತೋರಿಸಬಹುದು. ಕೇಂದ್ರ ಸರ್ಕಾರ ಇದಕ್ಕಾಗಿಯೇ ಹೊರತಂದಿರುವ DigiLocker and mParivahan ಆ್ಯಪ್‌ಗ್ಳನ್ನು ಪ್ಲೇಸ್ಟೋರ್‌ ಮತ್ತು ಐಒಎಸ್‌ ಆ್ಯಪ್‌ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ. ಆಧಾರ್‌ ಮತ್ತು ನಿಮ್ಮ ಫೋನ್‌ ನಂಬರ್‌ನೊಂದಿಗೆ ಲಿಂಕ್‌ ಆಗುವ ಈ ಆ್ಯಪ್‌ಗ್ಳಲ್ಲಿ ನಿಮ್ಮ ಇ-ದಾಖಲೆಗಳೆಲ್ಲವನ್ನೂ ಉಳಿಸಿಕೊಳ್ಳಿ. ಈ ಬಗ್ಗೆ ಮಾತನಾಡಿದ ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು- “ಡಿಜಿಟಲ್‌ ದಾಖಲೆ ಎಂದರೆ ದಾಖಲೆಗಳನ್ನು ಫೋನ್‌ನಲ್ಲಿ ಸ್ಕ್ಯಾನ್ ಮಾಡಿಯೋ ಅಥವಾ ಫೋಟೋ ತೆಗೆದಿಟ್ಟುಕೊಂಡು ತೋರಿಸುವುದಲ್ಲ. ಡಿಜಿ ಲಾಕರ್‌ ಮತ್ತು ಎಂ ಪರಿವಾಹನ್‌ ಆ್ಯಪ್‌ಗ್ಳಲ್ಲೇ ಅವುಗಳನ್ನು ಸ್ಟೋರ್‌ ಮಾಡಬೇಕು’ ಎನ್ನುತ್ತಾರೆ.

ಉಲ್ಲಂಘಿಸದಿರಿ ನಿಯಮ
ವಾಹನದ ಆರ್‌ಸಿ, ಇನ್ಸುರೆನ್ಸ್‌, ಮಾಲಿನ್ಯ ಪ್ರಮಾಣ ಪತ್ರ, ಚಾಲನಾ ಪರವಾನಗಿ ಇಟ್ಟುಕೊಳ್ಳಿ
ಕಡ್ಡಾಯವಾಗಿ ನೀವು ಮತ್ತು ಹಿಂಬದಿ ಸವಾರ ಹೆಲ್ಮೆಟ್‌ ಧರಿಸಿ
ಸಿಗ್ನಲ್‌ ಜಂಪ್‌ ಮಾಡಬೇಡಿ
ಕುಡಿದು ವಾಹನ ಚಲಾಯಿಸಬೇಡಿ
ಚಾಲನೆ ಮಾಡುವಾಗ ಮೊಬೈಲ್‌ ಫೋನ್‌, ಇಯರ್‌ ಫೋನ್‌ ಬಳಸಬೇಡಿ
ವ್ಹೀಲಿಂಗ್‌ ಮಾಡದಿರಿ
ವೇಗದ ಚಾಲನೆ ಬೇಡ
ಮೂರು ಜನರನ್ನು ಕೂರಿಸಿಕೊಳ್ಳಬೇಡಿ
ನಂಬರ್‌ ಪ್ಲೇಟ್‌ ಸ್ಪಷ್ಟವಾಗಿ ಇರಲಿ
ಫ‌ುಟ್‌ಪಾತ್‌ನ ಮೇಲೆ ಬೈಕ್‌ ಹತ್ತಿಸಬೇಡಿ
ಆ್ಯಂಬುಲೆನ್ಸ್‌ಗೆ ದಾರಿ ಬಿಡಿ
ಸೀಟ್‌ ಬೆಲ್ಟ್ ಧರಿಸಿರಿ
ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಕಾರಿನಲ್ಲಿ ಕೂರಿಸಬೇಡಿ.
ಪ್ರಖರ ಹೈ ಬೀಮ್‌ ಹೆಡ್‌ ಲೈಟ್‌ ಬಳಸಬೇಡಿ
ಅಪ್ರಾಪ್ತ ವಯಸ್ಸಿನವರಿಗೆ ವಾಹನ ಚಲಾಯಿಸಲು ಬಿಡಬೇಡಿ

ರಸ್ತೆಗಳಿರುವುದು ಸಂಚಾರಕ್ಕೆ ಹೊರತು ನಿಯಮ ಉಲ್ಲಂಘಿಸಿ ಅಪಘಾತ ಮಾಡಲು ಅಲ್ಲ. ವಾಹನ ಸವಾರರು ಸುರಕ್ಷಿತವಾಗಿ ವಾಹನ ಚಲಾಯಿಸಿ, ತಾವು ಸುರಕ್ಷಿತವಾಗಿರುವುದರೊಂದಿಗೆ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರ ಜೀವನವನ್ನು ರಕ್ಷಿಸಿ. ವಾಹನ ಸವಾರರು ಎಚ್ಚೆತ್ತುಕೊಂಡು ಸಂಚಾರ ನಿಯಮ ಪಾಲನೆ ಮಾಡಿ
ರವಿಕಾಂತೇಗೌಡ, ಜಂಟಿ ಪೊಲೀಸ್‌ ಆಯುಕ್ತ ಸಂಚಾರ ವಿಭಾಗ

#ನಾಟ್‌ ಫೈನ್‌ ಎಂದ ಜನ
@ ರಾಜೇಶ್‌ ರಾವ್‌
ಒಂದು ವರ್ಗ ಹೊಸ ನಿಯಮಗಳನ್ನು ಈ ಪರಿ ವಿರೋಧಿಸಲು ಪ್ರಮುಖ ಕಾರಣವೆಂದರೆ ಟ್ರಾಫಿಕ್‌ ಪೊಲೀಸರ ಲಂಚ ಗುಳಿತನ, ಆರ್‌ಟಿಒ ಭ್ರಷ್ಟಾಚಾರ, ರಸ್ತೆ ಸರಿ ಮಾಡದ ಸರ್ಕಾರಗಳ ಜಾಡ್ಯ.

@ ಸಂಭವ್‌ ಕುಮಾರ್‌
ಆರ್‌ಟಿಒ ಕಚೇರಿಗಳಲ್ಲಿನ ಏಜೆಂಟ್‌ ಲಾಬಿಗೆ ಕಡಿವಾಣ ಹಾಕಿ. ಹೆಲ್ಮೆಟ್‌ ಮೇಲೆ ಎಂಆರ್‌ಪಿ ಕಡ್ಡಾಯ ಮಾಡಿ. ವಾಹನ ವಿಮೆ ಪಡೆಯಲು ಸುಗಮ ವ್ಯವಸ್ಥೆ ಕಲ್ಪಿಸಿ. ಮೊದಲು ರಸ್ತೆ ಸರಿಪಡಿಸಿ.

@ ಪ್ರಶಾಂತ್‌ ಎಸ್‌
ರಾಜ್ಯದ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಿದ ನಂತರವೇ ಹೊಸ ಟ್ರಾಫಿಕ್‌ ನಿಯಮ ಜಾರಿಗೊಳಿಸಬೇಕಿತ್ತು.

@ ಅವಂತ್‌ ಕುಮಾರ್‌
ಜನ ಸರಿಯಾಗಿ ನಿಯಮ ಪಾಲಿಸಿದರೆ ದಂಡ ತೆರುವ ಪ್ರಮೇಯವೇ ಎದುರಾಗುವುದಿಲ್ಲ.

ಟಾಪ್ ನ್ಯೂಸ್

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Jharkhand Polls: Coalition of INDIA to power in tribal state; A setback for BJP

Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

banner

Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.