ಬೇಡ ಮತ್ತೂಂದು ಕಾಶ್ಮೀರ
Team Udayavani, Jul 15, 2017, 10:20 PM IST
ಡಾರ್ಜಿಲಿಂಗ್ ಹೊತ್ತಿ ಉರಿಯುತ್ತಿದೆ. ಆದರೂ ಅದು ಕಾಯ್ದು ಕುಳಿತುಕೊಳ್ಳಲಿ ಬಿಡಿ. ಈಗಂತೂ ದೇಶದ ಗಮನವೆಲ್ಲ ಪ್ರಮುಖ ವಿಷಯಗಳತ್ತಲೇ ಕೇಂದ್ರೀಕೃತವಾಗಬೇಕಿದೆ. ಹೊಸ ರಾಷ್ಟ್ರಪತಿಯನ್ನು ಆಯ್ಕೆ ಮಾಡಬೇಕು, ಕೋಮು ಬಿಕ್ಕಟ್ಟನ್ನು ಶಮನ ಮಾಡಬೇಕು, ಜಿಎಸ್‌ಟಿ ಅಂದರೇನು ಅಂತ ವಿವರಿಸಬೇಕು, ಕಾಶ್ಮೀರವನ್ನಂತೂ ಕಡೆಗಣಿಸುವಂತೆಯೇ ಇಲ್ಲ. ಇನ್ನು ಕ್ರಿಕೆಟ್ ಪಂದ್ಯಾವಳಿಗಳ ಕುರಿತೂ ಯೋಚಿಸಬೇಕು. ಹೀಗಾಗಿ, ಡಾರ್ಜಿಲಿಂಗ್ ಮತ್ತು ಅದರ ಸಾಯುತ್ತಿರುವ ಜನರು, ಕಾಯ್ದುಕುಳಿತುಕೊಳ್ಳಲಿ ಬಿಡಿ.
ಜುಲೈ 8ರಂದು ಪೊಲೀಸರ ಗುಂಡಿನ ದಾಳಿಗೆ ಮೂವರು ಯುವಕರು ಪ್ರಾಣಬಿಟ್ಟರು. ಅವರ ರಕ್ತ ಡಾರ್ಜಿಲಿಂಗ್‌ನ
ರಸ್ತೆಗಳ ತುಂಬೆಲ್ಲ ಚೆಲ್ಲಿತು. ಗ್ಯಾಂಗ್‌ಟಾಕ್‌ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದವನೊಬ್ಬ ಜುಲೈ 11ರಂದು ಮೃತಪಟ್ಟ. ಅವರಿಗಿಂತ ಮೊದಲು, ಅಂದರೆ ಕಳೆದ ತಿಂಗಳು ಪೊಲೀಸರ ಗುಂಡಿಗೆ ಮೂವರು ಬಲಿಯಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಡಾರ್ಜಿಲಿಂಗ್‌ನ ಬೆಳವಣಿಗೆಗಳ ಗಾಂಭೀರ್ಯ ವನ್ನು ಅರಿಯದೇ ಹೋದರೆ ಇನ್ನಷ್ಟು ಜನರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಅಲ್ಲ, ತಮ್ಮ ಅಹಂಕಾರದ ಕುರ್ಚಿ ಗಳಲ್ಲಿ ಕುಳಿತವರು ಕೆಳಕ್ಕಿಳಿದು ನಿಜ ಸ್ಥಿತಿಯನ್ನು ಅರಿಯಲು ಇನ್ನೆಷ್ಟು ದಿನ ಇದೇ ಪರಿಸ್ಥಿತಿ ಮುಂದುವರಿಯಬೇಕು?
ಈ ದೇಶದ ಪ್ರತಿಯೊಂದು ಯುದ್ಧಗಳಲ್ಲೂ ತಮ್ಮ ನೆತ್ತರು ಚೆಲ್ಲಿದ ಭಾರತೀಯ ಗೋರ್ಖಾಗಳು ಈಗ ಅನಾಥ ಮತ್ತು ಪರಿತ್ಯಕ್ತ ಭಾವ ಅನುಭವಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಡಾರ್ಜಿಲಿಂಗ್‌ನ ಗುಡ್ಡುಗಾಡು ಪ್ರದೇಶ ಗಳಲ್ಲಿನ ಜನಜೀವನ ನಿಶ್ಚಲವಾಗಿಬಿಟ್ಟಿದೆ. ಅಂತರ್ಜಾಲದ ಸೇವೆಯನ್ನು ಕಡಿತಗೊಳಿಸಲಾಗಿದೆ, ಟೆಲಿವಿಷನ್ ಚಾನೆಲ್‌ಗಳನ್ನು ಬ್ಲಾಕ್ ಮಾಡಲಾಗಿದೆ. ಆಹಾರದ ಕೊರತೆಯಂತೂ ವಿಪರೀತವಾಗುತ್ತಿದೆ. ಮಮತಾ ಬ್ಯಾನರ್ಜಿಯವರ ಸೇಡಿನ ಆಡಳಿತವು ಪೂರೈಕೆ ಮಾರ್ಗಗಳನ್ನೆಲ್ಲ ಕಡಿದು ಹಾಕುತ್ತಿರುವುದೇ ಇದಕ್ಕೆ ಕಾರಣ. ಈ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಯಂಥ ಸನ್ನಿವೇಶ ನಿರ್ಮಾಣವಾಗಿದೆ. ಆದರೆ ರಾಜ್ಯ ಸರ್ಕಾರಕ್ಕಾಗಲಿ ಅಥವಾ ಕೇಂದ್ರಕ್ಕಾಗಲಿ, ಹೋರಾಟಗಾರರನ್ನು ಮಾತುಕತೆಗೆ ಆಹ್ವಾನಿಸುವ, ಆ ಮೂಲಕ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಯಾವ ಅವಸರವೂ ಇದ್ದಂತೆ ಕಾಣುತ್ತಿಲ್ಲ.
ಅಹಂಕಾರದ ಮೇಲೆ ಆಸೀನವಾಗಿರುವ ಮಮತಾ ಸರ್ಕಾರವಂತೂ ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆಯಿಡುತ್ತಿರುವ ಪ್ರಜಾಪ್ರಭುತ್ವಿàಯ ಚಳವಳಿಯನ್ನು ಹೊಸಕಿಹಾಕಲು ಟೊಂಕಕಟ್ಟಿ ನಿಂತಿದೆ. ಯಾವ ರೀತಿಯಿಂದಲೂ ಇಂಥ ಹೋರಾಟಗಳನ್ನು ಅಸಂವಿಧಾನಿಕ ಎಂದು ಕರೆಯುವಂತೆಯೇ ಇಲ್ಲ. ಏಕೆಂದರೆ ಸಂವಿಧಾನದ ಮೂರನೇ ಪರಿಚ್ಛೇದವು ಹೊಸ ರಾಜ್ಯಗಳ ರಚನೆ ಹೇಗಾಗಬೇಕು ಎನ್ನುವುದರ ಬಗ್ಗೆ ಮಾತನಾಡುತ್ತದೆ. ಕೇಂದ್ರ ಸರ್ಕಾರವಂತೂ ತನ್ನ ಎದುರಿರುವ ತಾಂತ್ರಿಕ ಅಡಚಣೆಗಳ ಬಗ್ಗೆ ಮಾತನಾಡುತ್ತಿದೆ. ಡಾರ್ಜಿಲಿಂಗ್ ವಿಷಯದಲ್ಲಿ ತನ್ನ ಕೈಗಳನ್ನು ಕಟ್ಟಿಹಾಕಲಾಗಿದೆ(ರಾಜ್ಯ ಸರ್ಕಾರದ ಸಕ್ರಿಯತೆ ಮುಖ್ಯ) ಎಂದು ಅದು ಹೇಳುತ್ತಿದೆ. ಯಾವ ಕ್ರಮವನ್ನೂ ಕೈಗೊಳ್ಳದೇ ಕೇಂದ್ರ ಸರ್ಕಾರ ತಪ್ಪು ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಆರೋಗ್ಯಕರ ಸಂಬಂಧವೇ ಒಕ್ಕೂಟ ವ್ಯವಸ್ಥೆಯ ಬುನಾದಿ. ಆದರೆ ಯಾವಾಗ ಜೀವ ಹಾನಿಯಾಗುತ್ತವೋ, ಒಂದು ರಾಜ್ಯ ಅಶಾಂತಿಯ ಗೂಡಾಗುತ್ತದೋ, ಆಗ ಕೇಂದ್ರ ಸರ್ಕಾರ ಮುಂದೆ ಬಂದು ಕ್ರಮ ಕೈಗೊಳ್ಳಬೇಕಲ್ಲವೇ?
ಭೌಗೋಳಿಕವಾಗಿ ಡಾರ್ಜಿಲಿಂಗ್ ಬಹಳ ಸೂಕ್ಷ್ಮಪ್ರದೇಶ. ಈ ಕಾರಣಕ್ಕಾಗಿಯೇ, ಭೂತಾನ್ ಮತ್ತು ಡೋಕ್ಲಾಮ್ ಪ್ರದೇಶದಲ್ಲಿನ ಚೀನಾದ ಹಠಾತ್ ಸಕ್ರಿಯತೆಯನ್ನು ಕಾಕತಾಳೀಯ ಎಂಬಂತೆ ನಾವು ನೋಡಬಾರದು. ಬಾಂಗ್ಲಾದೇಶ
ದಲ್ಲಿರುವ ಭಾರತ ವಿರೋಧಿ ಗುಂಪುಗಳೂ ತಮ್ಮ ಆಂಟೆನಾ ಗಳನ್ನು ಏರಿಸಿಕೊಂಡು ನಿಂತಿವೆ. ಗದ್ದಲದ ಲಾಭ ಪಡೆದು, ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು ಅವು ತಯಾರಿ ನಡೆಸಿವೆ. ಹೀಗೆಲ್ಲ ಆಗುವುದಕ್ಕೆ ಕಾರಣವೆಂದರೆ ಭಾರತದ ಪ್ರಧಾನ ಭೂಭಾಗವನನ್ನು ಈಶಾನ್ಯದೊಂದಿಗೆ ಸಂಪರ್ಕಿಸುವ “ಚಿಕನ್ ನೆಕ್’ ಎಂಬ ಕಿರಿದಾದ 27 ಕಿಲೋಮೀಟರ್ ಪಟ್ಟಿಯು, ನೇಪಾಳ, ಬಾಂಗ್ಲಾ ಮತ್ತು ಭೂತಾನ್‌ನೊಂದಿಗೆ ಗಡಿ ಹಂಚಿಕೊಂಡಿರುವುದು. ಚೀನಾ ಕೂಡ ಈ ಪ್ರದೇಶಜ ಹತ್ತಿರದಲ್ಲೇ ಇದೆ.
ಮೊದಲಿನಂತೆ ಈಗಲೂ ಕೂಡ ಪಶ್ಚಿಮ ಬಂಗಾಳದಲ್ಲಿ ತಪ್ಪು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಆದರೆ ಇದನ್ನು ಕೇಳುವವರು ಯಾರು? ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಗಾಳದಲ್ಲಿನ ಎರಡು ಸನ್ನಿವೇಶಗಳನ್ನು ನಿಭಾಯಿಸಿದ ರೀತಿಯಲ್ಲೇ ಇಬ್ಬಗೆತನ ವಿದೆ. ಗೋರ್ಖಾಲ್ಯಾಂಡ್ ಬೇಡಿಕೆಯನ್ನು ಪರಿಹರಿಸಲು ರಾಜಕೀಯ ಮಾರ್ಗವನ್ನು ಬಿಟ್ಟು ಬೇರಾವ ಮಾರ್ಗವೂ ಕೆಲಸ ಮಾಡುವುದಿಲ್ಲ. ಇದು ಗೊತ್ತಿದ್ದರೂ ಮಮತಾ ಪೊಲೀಸರನ್ನು ಜನರ ಮೇಲೆ ಹರಿಬಿಡುತ್ತಿದ್ದಾರೆ. ಇನ್ನೊಂದೆಡೆ ಬಸೀರ್‌ಹಾಟ್‌ನಲ್ಲಿ ಕಠಿಣ ಕಾನೂನು ಸುವ್ಯವಸ್ಥೆಯ ಅಗತ್ಯವಿದೆ. ಆದರೆ ತಮ್ಮ ಪಕ್ಷದ ಓಟ್‌ಬ್ಯಾಂಕ್ ಅನ್ನು ಕಳೆದುಕೊಳ್ಳಬಹುದೆಂಬ ಭಯದಿಂದಾಗಿ ಅಲ್ಲಿ ಮಮತಾ ತುಂಬಾ ಸೌಮ್ಯವಾಗಿ ವರ್ತಿಸುತ್ತಿದ್ದಾರೆ. ಈ ಬಗ್ಗೆ ಸುಮ್ಮನೇ ಯೋಚಿಸಿ ನೋಡಿ. ಬಸೀರ್‌ಹಾಟ್‌ನಲ್ಲಿ ಮೃತಪಟ್ಟ ವ್ಯಕ್ತಿಯ ಹೆಸರು ಕಾರ್ತಿಕ್ ಘೋಷ್ ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ. ಆದರೆ ಡಾರ್ಜಿಲಿಂಗ್‌ನಲ್ಲಿ ಮೃತಪಟ್ಟ 7 ಜನರಲ್ಲಿ ಒಬ್ಬೇ ಒಬ್ಬನ ಹೆಸರಾದರೂ ಗೊತ್ತಿದೆಯೇ?
ಡಾರ್ಜಿಲಿಂಗ್‌ನಲ್ಲಿ ಇನ್ನಷ್ಟು ಪಡೆಗಳನ್ನು ನಿಯೋಜಿಸುವ ತಂತ್ರಕ್ಕೆ ಮೊರೆ ಹೋಗುವುದು ಮತ್ತು ಆ ಮೂಲಕ ನಾಯಸಮ್ಮತ ಆಂದೋಲನವೊಂದನ್ನು ಪುಡಿ ಮಾಡಲು ಪ್ರಯತ್ನಿಸುವುದು ನಿಜಕ್ಕೂ ಬಹಳ ಅಪಾಯಕಾರಿ ನಡೆ.
ಇದರಿಂದಾಗಿ ಡಾರ್ಜಿಲಿಂಗ್‌ನಲ್ಲಿನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಸ್ಥಳೀಯ ರಾಜಕೀಯ ನಾಯಕತ್ವದ ಮೇಲೆ ಗೂಬೆ ಕೂರಿಸುವ ಅವಕಾಶ ಮಮತಾ ಸರ್ಕಾರಕ್ಕೆ ಸಿಗುತ್ತದೆ ಎನ್ನುವುದು ಖರೆ. ಕೇಂದ್ರ ಬಿಜೆಪಿ ಮತ್ತು ಜೋರ್ಖಾ ಜನಮುಕ್ತಿ ಮೊರ್ಚಾವನ್ನು ಒಂದೇ ಕಲ್ಲಿನಲ್ಲಿ ಹೊಡೆದುರುಳಿಸುವ ಅವಕಾಶವದು. ಆದರೆ ಇದರಿಂದಾಗಿ ಎಷ್ಟು ಬೆಲೆ ತೆರಬೇಕಾಗಬಹುದು ಎಂದು ರಾಜ್ಯ ಸರ್ಕಾರ ಯೋಚಿಸಿದೆಯೇ? ಕೇಂದ್ರೀಯ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುತ್ತಾ ಹೋದರೆ ಡಾರ್ಜಿಲಿಂಗ್‌ನ ಜನರ ಜೀವಕ್ಕೆ ಅಪಾಯ ಹೆಚ್ಚುತ್ತಾ ಹೋಗುವುದಿಲ್ಲವೇ?
ಸಂವಿಧಾನದಲ್ಲಿ ಆರ್ಟಿಕಲ್ 3 ಇರುವವರೆಗೂ ಹೊಸ ರಾಜ್ಯಗಳ ರಚನೆಗೆ ಅವಕಾಶವಿದ್ದೇ ಇರುತ್ತದೆ. ಸತ್ಯವೇನೆಂದರೆ ಚಿಕ್ಕ ರಾಜ್ಯಗಳು ಭಾರತದ ಮತ್ತು ಭಾರತೀಯರ ಬೆಳವಣಿಗೆಗೆ ಸಹಕರಿಸಿವೆ. ಗೋವಾ, ಸಿಕ್ಕಿಂ, ದೆಹಲಿ, ಹಿಮಾಚಲ ಪ್ರದೇಶ, ಕೇರಳ, ಉತ್ತರಾಖಂಡ, ಜಾರ್ಖಂಡ್, ಛತ್ತೀಸ್‌ಗಢ ಸೇರಿದಂತೆ ಇನ್ನಿತರ ಚಿಕ್ಕ ರಾಜ್ಯಗಳು ದೊಡ್ಡ ರಾಜ್ಯಗಳಿಗಿಂತ ಹೆಚ್ಚು ಯಶಸ್ಸು ಸಾಧಿಸಿವೆ. ವಿಭಜನೆಯಾದರೆ ಒಂದೇ ಸಾರಿಗೆ ಸಮಸ್ಯೆಯೆಲ್ಲವೂ ಬಗೆಹರಿಯುವುದರಿಂದ ಬಂಗಾಳಕ್ಕೂ ಲಾಭವಾಗಲಿದೆ. ಹಲವು ವರ್ಷಗಳಿಂದ ಕಾಡುತ್ತಿರುವ ಅನಿಶ್ಚಿತತೆಯ ಸಮಸ್ಯೆಯೂ ದೂರವಾಗುತ್ತದೆ. ಈ ಕಾರಣಕ್ಕಾಗಿಯೇ, ಮಮತಾ ಬ್ಯಾನರ್ಜಿ ಯವರೇ, ದಯವಿಟ್ಟೂ ನಾವು ಹೊಡೆದಾಡುವುದು ಬೇಡ. ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸೋಣ. ಆದರೆ ಯಾವುದೇ ಕ್ರಮ ಕೈಗೊಳ್ಳುವುದಕ್ಕೂ ಮುನ್ನ ಒಂದು ಕ್ಷಣ ಸುಮ್ಮನಾಗಿ ಈ ಪ್ರಶ್ನೆಯನ್ನು ಕೇಳಿಕೊಳ್ಳಿ: ನೂರು ವರ್ಷಕ್ಕೂ ಹೆಚ್ಚು ಕಾಲದಿಂದ ಕಾಡುತ್ತಿರುವ ಒಂದು ಸಮಸ್ಯೆಯನ್ನು ಅಲ್ಪಕಾಲದಲ್ಲಿ ಬಗೆಹರಿಸಲು ಸಾಧ್ಯವಿದೆಯೇ? ಅಥವಾ ಐದು ವರ್ಷದ ಹಿಂದೆ ಕೈಗೊಂಡ ಕ್ರಮಗಳನ್ನೇ ಈಗ ಕೈಗೊಂಡರೆ ಫಲಪ್ರದ ಮತ್ತು ಶಾಶ್ವತ ಪರಿಹಾರ ಸಿಗುತ್ತದೆಯೇ? ಮುಖ್ಯಮಂತ್ರಿಗಳೇ, ಇಲ್ಲಿಯವರೆಗಿನ ಸೋಕಾಲ್ಡ್ ಪರಿಹಾರೋಪಾಯಗಳೆಲ್ಲ ವಿಫಲಗೊಂಡಿರುವಾಗ ವಿಭಿನ್ನ ಮಾರ್ಗವನ್ನು ಅನುಸರಿಸುವ ಅಗತ್ಯ ರಾಜ್ಯ ಸರ್ಕಾರಕ್ಕಿದೆಯಲ್ಲವೇ? ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೂ ಡಾರ್ಜಿಲಿಂಗ್‌ನ ಬೆಟ್ಟಗಳು ನಗುವುದಿಲ್ಲ. ಈ ದೇಶಕ್ಕಾಗಿ ತನ್ನ ಬೆವರು, ಕಣ್ಣೀರು ಮತ್ತು ರಕ್ತವನ್ನು ಹರಿಸಿರುವ ಗೋರ್ಖಾಗಳಿಗೆ ಪ್ರೀತಿ ಮತ್ತು ಒಪ್ಪಿಗೆ ಸಿಗುವವರೆಗೂ ಇಲ್ಲಿನ ಬೆಟ್ಟಗಳು ನಗುವುದಿಲ್ಲ. ತಮ್ಮನ್ನು ಈ ದೇಶದ ಎರಡನೆಯ ದರ್ಜೆಯ ನಾಗರಿಕರಂತೆ ಬಳಸಿಕೊಳ್ಳಲಾಗುತ್ತಿದೆ ಎಂಬ ಭಾವನೆಯು ಗೋರ್ಖಾಗಳ ಮನದಿಂದ ದೂರವಾಗುವಂಥ ಪರಿಹಾರ ಬೇಕು. ಆದರೆ ಇದೆಲ್ಲ ಸಾಧ್ಯವಾಗಬೇಕೆಂದರೆ, ಅಧಿಕಾರದಲ್ಲಿರುವವರಿಗೆ ದೂರದೃಷ್ಟಿಯಿರಬೇಕು, ಸರಿಯಾದ ಸಮಯದಲ್ಲಿ ಸರಿಯಾದ ಹೆಜ್ಜೆ ಇಡುವ ಸಾಮರ್ಥಯವಿರಬೇಕು. ತಾತ್ಕಾಲಿಕ ಪರಿಹಾರಗಳಿಂದಾಗಿ ಗಾಯದ ಮೇಲೆ ಬ್ಯಾಂಡೇಜ್ ಸುತ್ತಿದಂತಾಗುತ್ತದೆಯೇ ಹೊರತು, ಮುಲಾಮು ಹಚ್ಚಿದಂತಲ್ಲ.
ಡಾರ್ಜಿಲಿಂಗ್ ಅನ್ನು ಸ್ವಿಜರ್‌ಲೆಂಡ್ ಮಾಡಿ ಎಂದು ನಾವು ಎಂದೂ ಬಯಸಿಲ್ಲ, ಆದರೆ ಅದು ಮತ್ತೂಂದು ಕಾಶ್ಮೀರವಾಗು ವುದೂ ನಮಗೆ ಬೇಕಿಲ್ಲ.
(ಲೇಖಕರು ಗೋರ್ಖಾ ಜನಮುಕ್ತಿ ಮೋರ್ಚಾದ ಸದಸ್ಯರು, ಮಾಜಿ ಪತ್ರಕರ್ತರು)
– ಸ್ವರಾಜ್ ಥಾಪಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ
ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್
Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ
Mulki: ರೈಲಿನಲ್ಲಿ ಕೊಲೆ: ಓರ್ವ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.