Pay By Car: ಸ್ಕ್ಯಾನ್ ಬೇಡ, ಕಾರ್ಡ್ ಬೇಡ, ಕಾರೊಳಗಿಂದಲೇ ಪಾವತಿಸಿ!
ಪೇ ಬೈ ಕಾರ್ ತಂತ್ರಜ್ಞಾನದ ಮೂಲಕ ಪೆಟ್ರೋಲ್ ಬಂಕ್‌ಗಳಲ್ಲಿ ಸಂಪರ್ಕರಹಿತ ಪಾವತಿ
Team Udayavani, Sep 12, 2023, 7:30 AM IST
ನವದೆಹಲಿ: ಡಿಜಿಟಲ್ ಮಾದರಿ ಪಾವತಿಯಲ್ಲಿ ಭಾರತದಲ್ಲಿ ವಿಪರೀತ ಪ್ರಯೋಗಗಳು ನಡೆಯುತ್ತಿವೆ. ಇದೀಗ “ಪೇ ಬೈ ಕಾರ್’ ಎಂಬ ತಂತ್ರಜ್ಞಾನವೊಂದನ್ನು ಅಮೆಜಾನ್ ಮತ್ತು ಮಾಸ್ಟರ್‌ಕಾರ್ಡ್ ಸೇರಿಕೊಂಡು ಸಿದ್ಧಪಡಿಸಿವೆ. ಇದರ ಮೂಲಕ ಪೆಟ್ರೋಲ್ ಬಂಕ್‌ಗಳಲ್ಲಿ ಸಂಪರ್ಕರಹಿತವಾಗಿ ಹಣ ಪಾವತಿ ಮಾಡಬಹುದು. ಕಾರುಗಳ ಮಾಲಿಕರಿಗೆ ಇನ್ನು ಪಾವತಿ ಇನ್ನಷ್ಟು ವೇಗ, ಸುಲಭ ಆಗಲಿದೆ.
ಏನಿದು ಪೇ ಬೈ ಕಾರ್?:
ಇದುವರೆಗೆ ಪೆಟ್ರೋಲ್ ಬಂಕ್‌ಗಳಲ್ಲಿ ಕಾರಿಗೆ ಇಂಧನ ಹಾಕಿಸಿದ ಮೇಲೆ, ಸ್ಮಾರ್ಟ್ ಫೋನ್, ಕ್ರೆಡಿಟ್-ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಪಾವತಿ ಮಾಡಬೇಕಿತ್ತು. ನಗದು ಪಾವತಿಯಂತೂ ಹಿಂದಿನಿಂದಲೂ ಇದ್ದೇ ಇದೆ. ಅಮೆಜಾನ್-ಮಾಸ್ಟರ್‌ಕಾರ್ಡ್‌ನಡಿ ಬರುವ ಟೋನ್‌ಟ್ಯಾಗ್ ಸಂಸ್ಥೆ ಸಿದ್ಧಪಡಿಸಿರುವ ಪೇ ಬೈ ಕಾರ್ ಬಳಸಿದರೆ, ಇತರೆ ಯಾವುದೇ ಸಾಧನಗಳ ಅಗತ್ಯವಿರುವುದಿಲ್ಲ.
ಏನು ಮಾಡಬೇಕು?:
ಕಾರಿನ ಇನ್ಫೊಟೇನ್‌ಮೆಂಟ್ ಸಿಸ್ಟಮ್‌ನಲ್ಲಿ (ಡ್ಯಾಶ್‌ಬೋರ್ಡ್‌ನಲ್ಲಿರುವ ಡಿಜಿಟಲ್ ಪರದೆ, ಅದರ ಮೂಲಕ ಸಿನಿಮಾ ನೋಡಬಹುದು, ಜಿಪಿಎಸ್ ಕೂಡ ಬಳಸಬಹುದು) ಯುಪಿಐಯನ್ನು ಲಿಂಕ್ ಮಾಡಿರಬೇಕು. ನೀವು ಬಂಕ್‌ಗೆ ಹೋಗಿ ನಿರ್ದಿಷ್ಟ ತೈಲ ಪೂರೈಕೆ ಜಾಗದಲ್ಲಿ ನಿಂತಾಗ, ನಿಮ್ಮ ಇನ್ಫೊಟೇನ್‌ಮೆಂಟ್ ಸಿಸ್ಟಮ್‌ನಲ್ಲಿ ಇಂಧನ ಕೇಂದ್ರದ (ಫ್ಯೂಯೆಲ್ ಡಿಸ್ಪೆನ್ಸರ್) ಸಂಖ್ಯೆ ಕಾಣಿಸುತ್ತದೆ. ಅದೇ ವೇಳೆ ನೀವು ಬಂದಿದ್ದೀರೆಂದು ನಿಮ್ಮ ಕಾರಿನಲ್ಲಿರುವ ಸೌಂಡ್ ಬಾಕ್ಸ್ ತಿಳಿಸುತ್ತದೆ. ಆಗ ಸಿಬ್ಬಂದಿ ಬರುತ್ತಾರೆ, ನೀವು ಕಾರೊಳಗಿಂದಲೇ ಎಷ್ಟು ಮೊತ್ತಕ್ಕೆ ಇಂಧನ ಹಾಕಬೇಕೆಂದು ಒತ್ತುತ್ತೀರಿ. ಅದು ಧ್ವನಿಯ ರೂಪದಲ್ಲಿ ಹೊರಕ್ಕೆ ಕೇಳಿಸುತ್ತದೆ. ಅವರು ಅಷ್ಟು ಇಂಧನ ಹಾಕುತ್ತಾರೆ. ನೀವು ಈಗ ಲಿಂಕ್ ಆಗಿರುವ ಯುಪಿಐ ಮೂಲಕ ಪಾವತಿ ಮುಗಿಸುತ್ತೀರಿ. ಅಲ್ಲಿಗೆ ಸಂಪರ್ಕರಹಿತವಾಗಿ ಪೂರ್ಣ ಕ್ರಿಯೆಗಳು ಮುಗಿಯುತ್ತವೆ. ಈ ವ್ಯವಸ್ಥೆ ಮೂಲಕ ಫಾಸ್ಟಾಗ್ ರೀಚಾರ್ಜ್ ಕೂಡ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.