ಮೂಗಿನ ವ್ಯಾಕ್ಸಿಂಗ್ ಸ್ವಲ್ಪ ಯೋಚಿಸಿ
Team Udayavani, Sep 9, 2021, 6:30 AM IST
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಮೂಗಿನ ಕೂದಲುಗಳ ವ್ಯಾಕ್ಸ್ ಮಾಡಿಕೊಳ್ಳುತ್ತಿರುವ ಹೊಸ ಟ್ರೆಂಡ್ ಕಾಣಸಿಗುತ್ತಿದೆ. ಸಾಮಾನ್ಯವಾಗಿ ಜನರು ಇಂತಹ ಹೊಸ ವಿಷಯಗಳನ್ನು ನೋಡಿದಾಗ ಒಮ್ಮೆ ಪ್ರಯತ್ನಿಸಿ ನೋಡುತ್ತಾರೆ. ಆದರೆ ಮೂಗಿನ ವ್ಯಾಕ್ಸ್‌ಗೂ ಮುನ್ನ ಸ್ವಲ್ಪ ಯೋಚಿಸುವುದು ಅಗತ್ಯ. ಇದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು ಎನ್ನುತ್ತವೆ ಸಂಶೋಧನ ವರದಿಗಳು.
ತಜ್ಞರ ಪ್ರಕಾರ ಮೂಗಿನ ಒಳಭಾಗದಲ್ಲಿರುವ ಕೂದಲುಗಳು ನಾವು ಉಸಿ ರಾಡುವ ಗಾಳಿಯನ್ನು ಶೋಧಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಲ್ಲದೆ ಈ ಕೂದಲುಗಳು ವೈರಸ್, ಬ್ಯಾಕ್ಟೀರಿಯಾ ಮತ್ತು ಗಾಳಿಯಲ್ಲಿರುವ ಇತರ ರೋಗಕಾರಕಗಳಿಂದ ರಕ್ಷಿಸುತ್ತವೆ. ವೈದ್ಯಕೀಯ ವಿಜ್ಞಾನ ಇದನ್ನು ಶತಮಾನಗಳಿಂದ ಪ್ರತಿಪಾದಿಸುತ್ತಲೇ ಬಂದಿದೆ. ನಮ್ಮ ಉಸಿರಾಟದ ವ್ಯವಸ್ಥೆಯನ್ನು ಸುರಕ್ಷಿತವಾಗಿಡಲು ಮೂಗಿನಲ್ಲಿರುವ ಕೂದಲುಗಳು ಅತ್ಯಗತ್ಯ.
ಅಸ್ತಮಾದ ಅಪಾಯವನ್ನು ಕಡಿಮೆ ಮಾಡುತ್ತದೆ :
2011ರಲ್ಲಿ ಇಂಟರ್‌ನ್ಯಾಶನಲ್ ಆರ್ಕೈವ್ಸ್ ಆಫ್ ಅಲರ್ಜಿ ಮತ್ತು ಇಮ್ಯೂನಾಲಜಿಯಲ್ಲಿ ಪ್ರಕಟವಾದ 233 ರೋಗಿಗಳ ಅಧ್ಯ ಯನದ ಪ್ರಕಾರ ಮೂಗಿನಲ್ಲಿ ಹೆಚ್ಚು ಕೂದಲಿರುವವರಲ್ಲಿ ಅಸ್ತಮಾವನ್ನು ತಡೆಗಟ್ಟುವ ಸಾಮರ್ಥ್ಯ ಹೆಚ್ಚಿರುವುದು ದೃಢಪಟ್ಟಿದೆ. 2015ರಲ್ಲಿ ನಡೆದ ಇನ್ನೊಂದು ಅಧ್ಯಯನದಲ್ಲಿ ಜನರು ಮೂಗಿನೊಳಗಿನ ಕೂದಲು ಕತ್ತರಿಸುವ ಮೊದಲು ಮತ್ತು ಅನಂತರ ಮೂಗಿನ ಗಾಳಿಯ ಹರಿವನ್ನು ಅಳೆದಿದ್ದು, ಮೂಗಿನಲ್ಲಿ ಹೆಚ್ಚು ಕೂದಲಿದ್ದಾಗ ಗಾಳಿಯ ಹರಿವು ಕೂಡ ಹೆಚ್ಚಿರುವುದು ಕಂಡು ಬಂದಿದೆ.
ಮೂಗಿನೊಳಗಿನ ರಚನೆ ಸಂಪೂರ್ಣ ಕುಹರ ನಿರೋಧಕ :
1896ರಲ್ಲಿ ವೈದ್ಯರ ತಂಡವೊಂದು ಪ್ರತಿಷ್ಠಿತ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್‌ನಲ್ಲಿ ಹೇಳಿರುವ ಪ್ರಕಾರ ಮಾನವನ ಮೂಗಿನಲ್ಲಿ ಕೆಲವೊಮ್ಮೆ ಮೊಡವೆಗಳು ಕಾಣಿಸಿಕೊಳ್ಳ ಬಹುದು. ಇದು ಮಾಲಿನ್ಯ, ಧೂಳು, ಮಣ್ಣು ಮತ್ತು ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ. ಮೂಗಿನ ಕೂದಲುಗಳು ತೇವಾಂಶ ಭರಿತವಾಗಿ ಒಂದು ಬಲೆ ರೂಪಿಸಿಕೊಂಡಿರುತ್ತದೆ. ಇದರಿಂದ ಯಾವುದೇ ರೀತಿಯ ವೈರಸ್ ಅಥವಾ ಬ್ಯಾಕ್ಟೀರಿಯಾಗಳು ಶ್ವಾಸಕೋಶಕ್ಕೆ ತಲುಪದಂತೆ ತಡೆಯುತ್ತದೆ. ಹಾಗಾಗಿ ಎಲ್ಲಿ ಯಾದರೂ ನಾವು ಮೂಗಿನ ಕೂದಲುಗಳನ್ನು ಟ್ರಿಮ್ ಮಾಡಿದಲ್ಲಿ ಅಥವಾ ಮೇಣಗಳನ್ನು ಹಚ್ಚಿ ತೆಗೆದಲ್ಲಿ ವೈರಸ್ ಶ್ವಾಸಕೋಶದೊಳಗೆ ಹೋಗಲು ನಾವೇ ಹೆದ್ದಾರಿ ನಿರ್ಮಿಸಿಕೊಟ್ಟಂತಾಗುತ್ತದೆ.
ಮೂಗಿನೊಳಗೆ ಕೂದಲುಗಳಿರುವುದು ಏಕೆ ಮುಖ್ಯ? :
ಮೂಗಿನಿಂದ ಹಿಡಿದು ತುಟಿಯ ಭಾಗದ ವರೆಗೆ ತ್ರಿಕೋನಾಕಾರದಲ್ಲಿದ್ದು ಈ ಭಾಗವು ದೇಹದ ಸೂಕ್ಷ್ಮ ಪ್ರದೇಶವಾಗಿದೆ. ದೇಹದ ಪ್ರಮುಖ ನರಗಳು ಮುಖದ ಈ ಭಾಗಗಳ ಮೂಲಕ ಹಾದು ಹೋಗುತ್ತವೆ. ಇದು ನೇರವಾಗಿ ಮೆದುಳಿನೊಂದಿಗೆ ಸಂಪರ್ಕ ವಿಟ್ಟುಕೊಂಡಿರುವುದರಿಂದ ನಾವು ಎಷ್ಟು ಜಾಗರೂಕರಾಗಿದ್ದರೂ ಸಾಲದು. ಅಲ್ಲದೆ ಕಣ್ಣು, ಮೂಗು ಮತ್ತು ಬಾಯಿಯ ಸುತ್ತಲಿನ ಭಾಗದಲ್ಲಿ ಸೋಂಕು ಬಹು ಬೇಗ ಆಕ್ರಮಿಸಿಕೊಳ್ಳುತ್ತದೆ. ಹೀಗಾಗಿ ಮೂಗಿನೊಳಗಿರುವ ಕೂದಲುಗಳು ಅತೀ ಮುಖ್ಯವಾಗಿದ್ದು ಇವು ನಾವು ಉಸಿರಾಡುವ ಸಂದರ್ಭದಲ್ಲಿ ಈ ಕೂದಲುಗಳು ಗಾಳಿಯಲ್ಲಿರುವ ವೈರಸ್, ಬ್ಯಾಕ್ಟೀರಿಯಾ ಆದಿಯಾಗಿ ಇನ್ನಿತರ ಕಲ್ಮಶಗಳು ಶ್ವಾಸಕೋಶ ಪ್ರವೇಶಿಸದಂತೆ ತಡೆಯೊಡ್ಡುತ್ತವೆ.
ಮೂಗಿನೊಳಗಿನ ಕೂದಲುಗಳ ವ್ಯಾಕ್ಸಿಂಗ್‌ನಿಂದ ಉಸಿರಾಟಕ್ಕೂ ತೊಂದರೆಯಾಗುತ್ತದೆ ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ. ಕೊರೊನಾ ಸಾಂಕ್ರಾ ಮಿಕದ ಸಂದರ್ಭದಲ್ಲಿ ವ್ಯಾಕ್ಸಿಂಗ್‌ನಿಂದ ದೂರವಿದ್ದು ಮೂಗಿನ ಹೊಳ್ಳೆಗಳನ್ನು ಆದಷ್ಟು ಸ್ವತ್ಛವಾಗಿಟ್ಟುಕೊಳ್ಳಬೇಕು. ದಿನಕ್ಕೆ ಒಂದು ಬಾರಿಯಾದರೂ ಉಗುರು ಬೆಚ್ಚಗಿನ ನೀರಿನಲ್ಲಿ ಮೂಗನ್ನು ಸ್ವತ್ಛಗೊಳಿಸುವುದು ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.