ಪುರಿ ಬಳಿ ಕೋನಾರ್ಕ್‌ ದೇಗುಲದ ಪ್ರತಿಸೃಷ್ಟಿ 


Team Udayavani, Aug 24, 2021, 6:20 AM IST

Untitled-2

ಒಡಿಶಾದ 23 ವರ್ಷದ ಯುವಕ ಸ್ಮಿತೇಶ್‌ ಮೊಹಾಪಾತ್ರ ಎಂಬ ಶಿಲ್ಪಿ, ಶಿಥಿಲಾವಸ್ಥೆಯಲ್ಲಿರುವ 800 ವರ್ಷಗಳಷ್ಟು ಹಳೆಯದಾದ ಕೋನಾರ್ಕ್‌ ಸೂರ್ಯ ದೇಗುಲದ ಪ್ರತಿಸೃಷ್ಟಿಯಲ್ಲಿ ತೊಡಗಿದ್ದಾನೆ. ಇದರ ಹಿಂದಿನ ಪ್ರೇರಣೆ ಯಾರು, ಎಲ್ಲಿ  ಇದರ ನಿರ್ಮಾಣ ನಡೆಯುತ್ತಿದೆ; ಅದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಅಜ್ಜನ ಕನಸಿಗೆ ಮೊಮ್ಮಗನ ಆಸರೆ  :

ಸ್ಮಿತೇಶ್‌ ಅಜ್ಜ ರಘುನಾಥ್‌ ಮೊಹಾಪಾತ್ರ ದೇಶದ ಹೆಸರಾಂತ ಶಿಲ್ಪಿ. ರಾಜ್ಯಸಭಾ ಸದಸ್ಯರೂ ಆಗಿದ್ದ ಅವರ ಶಿಲ್ಪ ಕೌಶಲ್ಯಕ್ಕೆ, ಸಂಸತ್ತಿನ ಸೆಂಟ್ರಲ್‌ ಹಾಲ್‌ನ ಸೂರ್ಯ ದೇವರ ವಿಗ್ರಹ, ರಾಜೀವ್‌ ಗಾಂಧಿ ಸಮಾಧಿಯ “ರಾಜೀವ ಲೋಚನ’ವೇ ಸಾಕ್ಷಿ. 2013ರಲ್ಲಿ ಕೋನಾರ್ಕ್‌ ದೇಗುಲದ ದುಃಸ್ಥಿತಿಯನ್ನು ನೋಡಿ ಮರುಗಿದ್ದ ಅವರು, ಅದರ ಮರು ನಿರ್ಮಾಣ ಮಾಡಬೇಕೆಂದೆಣಿಸಿ, ಪುರಿ ಪುಣ್ಯಕ್ಷೇತ್ರದ ಬಳಿ 100 ಎಕರೆ ಭೂಮಿ ಖರೀದಿಸಿ, ಶಂಕುಸ್ಥಾಪನೆ ನೆರವೇರಿಸಿದ್ದರು. ಇದೇ ವರ್ಷ ಮೇ ತಿಂಗಳಲ್ಲಿ ಕೊರೊನಾಕ್ಕೆ ಬಲಿಯಾದರು. ಅವರ ಆಸೆಯನ್ನು ಮೊಮ್ಮಗ ಈಡೇರಿಸಲು ಮುಂದಾಗಿದ್ದಾನೆ.

ಅಂದಾಜು ವೆಚ್ಚವೆಷ್ಟು?  :

2017ರಲ್ಲಿ ಲೆಕ್ಕ ಹಾಕಿದಂತೆ 300 ಕೋಟಿ ರೂ. ಅವಶ್ಯಕತೆಯಿತ್ತು. ಆದರೆ, ಸರಿದ ಕಾಲದ ಜತೆಗೆ ವೆಚ್ಚ ವೂ ಅಧಿಕವಾಗುವ ಸಾಧ್ಯತೆ ಯಿದೆ. ವಿಶ್ವದ ನಾನಾ ಭಾಗಗಳಿಂದ ಕೆಲವು ದಾನಿಗಳು ಉದಾರ ದಾನ ನೀಡುತ್ತಿ ದ್ದಾರೆಂದು ಸ್ಮಿತೇಶ್‌ ತಿಳಿಸಿದ್ದಾರೆ.

ಎಲ್ಲಿದೆ ದೇಗುಲ?  :

ಒಡಿಶಾದ ಪುರಿ ಕ್ಷೇತ್ರ ಹಾಗೂ ಸಖೀಗೋಪಾಲ್‌ ಊರಿನ ನಡುವೆ ಈ ಹೊಸ ದೇಗುಲ ನಿರ್ಮಾಣವಾಗುತ್ತಿದೆ. ಕೋನಾರ್ಕ್‌ ದೇಗುಲದಿಂದ 30 ಕಿ.ಮೀ. ದೂರವಿರುವ ಇದರ ಹೆಸರು “ಆದಿತ್ಯ ನಾರಾಯಣ ದೇವಸ್ಥಾನ’.

ಅದೇ ಮಾದರಿಯಲ್ಲಿ ನಿರ್ಮಾಣ: ಕೋನಾರ್ಕ್‌ ದೇಗುಲವನ್ನು ನಿರ್ಮಿಸಲಾ ಗಿರುವ ವಾಸ್ತುಶಿಲ್ಪದ ಮಾದರಿ ಯಲ್ಲೇ ಅದರ ಪ್ರತಿಕೃತಿಯನ್ನೂ ನಿರ್ಮಿಸಲಾಗುತ್ತಿದೆ.  ಮೂಲ ದೇಗುಲದಲ್ಲಿ ಬಳಸಲಾಗಿರುವ ಮರಳುಗಲ್ಲು ಹಾಗೂ ಕಪ್ಪು ಗ್ರಾನೈಟ್‌ ಕಲ್ಲನ್ನೇ ಇಲ್ಲೂ ಬಳಸಲಾಗಿದ್ದು ಈಗಾಗಲೇ ದೇಗುಲದ ಪಾರ್ಶ್ವ ಗೋಡೆಗಳು, ಎರಡು ದೈತ್ಯ ಚಕ್ರ ನಿರ್ಮಾಣವಾಗಿವೆ.

800 ವರ್ಷ: ಹಳೆಯದು ಈಗಿರುವ ಕೋನಾರ್ಕ್‌ ದೇಗುಲ

1,200 : ನಿರ್ಮಾಣದಲ್ಲಿ ತೊಡಗಿದ್ದ ಶಿಲ್ಪಿಗಳ ಸಂಖ್ಯೆ

12 ವರ್ಷಗಳು : ದೇಗುಲ ನಿರ್ಮಾಣಕ್ಕೆ ತಗುಲಿದ್ದ ಅವಧಿ

ಟಾಪ್ ನ್ಯೂಸ್

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.