ಊಡ್ಜರೂ ನೂನುಕ್ಕಲ್‌ ಎಂಬ ಕಿರಣ

ಜನರ ಹಕ್ಕುಗಳಿಗಾಗಿ ಹೋರಾಡಿದ ಅಬೊರಿಜಿನಲ್‌ ಮಹಿಳೆ

Team Udayavani, Apr 3, 2022, 11:29 AM IST

4

ಕ್ಯಾತ್‌ ರಾಸ್ಕ ಹುಟ್ಟಿದ್ದು 1920ರಲ್ಲಿ, ಸತ್ತದ್ದು 1993ರಲ್ಲಿ. ಆಕೆಯ ಬದುಕಿನ ಎಪ್ಪತ್ತೆರಡು ವರ್ಷಗಳಲ್ಲಿ ಸುಮಾರು ಅರವತ್ತು ವರ್ಷಗಳನ್ನು ತಮ್ಮ ಜನರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಲೇ ಕಳೆದ ಆಕೆ ನಿರಂತರ ಬರೆಯುತ್ತಲೇ ಹೋದರು. ಪ್ರಶಸ್ತಿಗಳನ್ನು ಪಡೆದರು. ಹೋರಾಟದ ಕ್ರಾಂತಿಯ ಹಾಡುಗಳನ್ನು ಜನಪ್ರಿಯಗೊಳಿಸಿದರು.

ಶಾಲೆಯಲ್ಲಿ ಆಕೆಗೆ ನೀನು ದಾಸ್ಯಕ್ಕೆ ಸೇರಿದವಳು, ಮನೆಕೆಲಸದವಳಾಗಿ ಕೆಲಸ ಮಾಡಲು ಎಷ್ಟು ಬೇಕೋ ಅಷ್ಟು ತಯಾರಾಗು ಸಾಕು ಎನ್ನುವುದನ್ನು ಮನದಟ್ಟು ಮಾಡಿಸಿದ್ದರಂತೆ. ಅದಕ್ಕೆ ವ್ಯತಿರಿಕ್ತವಾಗಿ ಆಕೆಯ ತಾಯಿ ತನ್ನ ಮಕ್ಕಳು ಶಾಲೆಗೆ ಹೋಗಿ ಕಲಿತು ಶಿಕ್ಷಣವಂತರಾಗಬೇಕು ಎಂದು ಶ್ರಮಪಟ್ಟರಂತೆ. ಬಾಲಕಿಯ ತಂದೆಯೂ ಕನಿಷ್ಠ ಓದು-ಬರಹವನ್ನು ಪಡೆದು, ಒಳ್ಳೆಯ ಕೆಲಸಗಾರರಾಗಿದ್ದರೂ ಅವರಿಗೆ ಗುಲಾಮರಿಗೆ ಕೊಡುವ ಒಂದೆರಡು ಕಾಸು ಸಿಗುತ್ತಿತ್ತಂತೆ. ಸರಕಾರ ತಮಗೆ ಬಳುವಳಿಯಾಗಿ ಬಡತನವನ್ನು ಕೊಟ್ಟಿದ್ದರೂ ಸ್ವಾಭಿಮಾನಿ ಕುಟುಂಬ ತಮ್ಮ ಹಸಿವನ್ನು ನಿಯಂತ್ರಿಸಿಕೊಂಡು ಬದುಕಿದರು. ಆ ತಂದೆ ತಾಯಿಯರು ಮಕ್ಕಳಲ್ಲಿ ಕನಸು, ಧೈರ್ಯವನ್ನು ತುಂಬಿದರು. ಆ ಹನಿಹನಿ ತುಂತುರು ಸೇರಿ ಅವರ ಮಗಳು ಕ್ಯಾತ್‌ ತಾನು ಹುಟ್ಟಿದ ಮಿಂಜೆರಿಬ (North Stradbroke ದ್ವೀಪ) ಸಮುದ್ರದ ಮೊರೆತವನ್ನು ಪ್ರತಿಧ್ವನಿಸುವಂತೆ ಆಯಿತು.

ಹದಿನಾರು ವರ್ಷದ ಹುಡುಗಿ ಕ್ಯಾತ್‌ ತಾನು ನರ್ಸಿಂಗ್‌ ಓದಬೇಕೆಂದು ಕೇಳಿಕೊಂಡರೂ ಜನಾಂಗೀಯ ಧೋರಣೆಯಿಂದ ಅದನ್ನು ನಿರಾಕರಿಸಲಾಯಿತು. ಎರಡನೇ ವಿಶ್ವ ಮಹಾಯುದ್ಧದ ಸಮಯದಲ್ಲಿ (1941-44) ಆಸ್ಟ್ರೇಲಿಯನ್‌ ವುಮೆನ್ಸ್‌ ಆರ್ಮಿ ಸರ್ವಿಸ್‌ ಸೇರಿ ಕ್ಯಾತ್‌ ಸ್ವಿಚ್‌ ಆಪರೇಟರ್‌ ಆದರು. ಅದೇ ವೇಳೆಯಲ್ಲೇ ಬ್ರೂಸ್‌ ವಾಕರ್‌ ಅವರನ್ನು ಮದುವೆಯಾದರು. ಇಬ್ಬರು ಮಕ್ಕಳಾದ ಅನಂತರ, 1960ರ ದಶಕದಲ್ಲಿ ರಾಜಕೀಯ ಪ್ರವೇಶಿಸಿ, ತಮ್ಮ ಜನರ ಹಕ್ಕುಗಳಿಗಾಗಿ ಹೋರಾಡುತ್ತಾ ಸಂವಿಧಾನದಲ್ಲಿ ಅವನ್ನೂ ಸೇರಿಸುವ ನಿಟ್ಟಿನಲ್ಲಿ ಗಟ್ಟಿದನಿಯಾದರು. 1967ರಲ್ಲಿ ಅಬೊರಿಜಿನಲ್‌ ಜನರನ್ನು ಕಾನೂನುಬದ್ಧವಾಗಿ ಸಂವಿಧಾನದಲ್ಲಿ ಸೇರಿಸಲಾಯ್ತು.

ಬದಲಾವಣೆಗಳನ್ನು ತರುವತ್ತ ಮಾಡಿದ ಅವರ ಶ್ರಮ ಪ್ರಸಿದ್ಧಿಯಾಗಿತ್ತು. ಅದಕ್ಕೆ ಕಾರಣ ಆಕೆಯ ಕವನಗಳು. 1964ರಲ್ಲಿ ಪ್ರಕಟವಾದ We are going ಕವನಸಂಕಲನ ಅವರ ಜನರ ಸ್ಥಿತಿಗೆ ಕನ್ನಡಿ ಹಿಡಿದು ತೋರಿದ್ದು ಅಲ್ಲದೆ ತಾವು ಇತರೇ ಜನಾಂಗವಲ್ಲ, ಆಸ್ಟ್ರೇಲಿಯನ್‌ ಮಣ್ಣಿನ ಮಕ್ಕಳು ಎಂದು ಜಗತ್ತಿಗೆ ಸಾರಿತು. ಓದುಗರಾದ ಬಿಳಿಯರು ಅವರ ಕವನಗಳನ್ನು ಮೆಚ್ಚಿಕೊಂಡರು. ಕವನಗಳನ್ನು ಬರೆದು ಪ್ರಕಟಿಸಿದ ಮೊಟ್ಟಮೊದಲ ಆಸ್ಟ್ರೇಲಿಯನ್‌ ಅಬೊರಿಜಿನಲ್‌ ಬರಹಗಾರ್ತಿ ಎಂಬ ಹೆಗ್ಗಳಿಕೆ ಅವರದ್ದು.

ಅವರ ಬರವಣಿಗೆಗಳು ದೂರದ ಇಂಗ್ಲೆಂಡ್‌, ಅಮೆರಿಕ ಮತ್ತು ಯೂರೋಪ್‌ ಗಳನ್ನು ತಲುಪಿತು. ಇಂಗ್ಲೆಂಡಿನಲ್ಲಿ ಆಕೆಯನ್ನು ಮೆಚ್ಚುವ ಓದುಗರು ಹೆಚ್ಚಾದರು. ಪ್ರಶಸ್ತಿಗಳು ಹುಡುಕಿಕೊಂಡು ಬಂದವು. 1970ರಲ್ಲಿ ಅವರಿಗೆ Member of the Order of the British Empire (MBE) ಅತ್ಯುನ್ನತ ಗೌರವ ಲಭಿಸಿತು. ಅದೇ ವರ್ಷ ತಮ್ಮ ಹುಟ್ಟಿದ ಊರಿಗೆ ((North Stradbroke) ಬಂದು, ಅಲ್ಲಿ ಭೂಮಿ ಖರೀದಿಸಿ, ಅಲ್ಲಿ ಮೂನ್ಗಾಲ್ಬ ಎಂಬ ಹೆಸರಿನ ಸಾಂಸ್ಕೃತಿಕ ಕೇಂದ್ರವನ್ನು ಆರಂಭಿಸಿದರು. ಸಾವಿರಾರು ಜನರು ಬಂದು ಆಕೆಯ ಬಾಯಿಂದ ಅವರ ಜನರ ಕಥೆಗಳನ್ನು, ಡ್ರೀಮ್‌ಟೈಮ್‌ ಕಥೆಗಳನ್ನು ಕೇಳಿದರು. ಅವರ ಜನರ ಸಂಸ್ಕೃತಿಯ ಆಳ ಅಗಲಗಳನ್ನು ತಿಳಿದರು. ಇನ್ನೂ ಹೆಚ್ಚು ಬರೆಯುತ್ತಲೇ, ಪ್ರಶಸ್ತಿಗಳು ಬರುತ್ತಿದ್ಧಾಗಲೇ ಅವರು ಫ‌ುಲ್‌ ಬ್ರೈಟ್‌ ಫೆಲೋಶಿಪ್‌ ಪಡೆದು ಅಮೆರಿಕ ಪ್ರವಾಸವನ್ನು ಕೈಗೊಂಡು (1978-79) ಆ ದೇಶದ ಉದ್ದಗಲಕ್ಕೂ ಸಂಚರಿಸುತ್ತಾ ತಮ್ಮ ಜನರ ಕಥೆಗಳನ್ನು, ವ್ಯಥೆಯನ್ನೂ, ಹೋರಾಟವನ್ನು, ಸ್ವಾಭಿಮಾನವನ್ನು ಹೇಳಿದರು.

ಮಧ್ಯದಲ್ಲಿ ತಮ್ಮ ಕುಲದ ಚಿತ್ರಕಲೆಯನ್ನು ಅಭ್ಯಸಿಸಿ, ಪ್ರಕಟಿಸಿದರು. ಅನೇಕ ಸಂಸ್ಥೆಗಳಿಗೆ ಜೀವಕೊಟ್ಟು, ಅವರ ದನಿಯನ್ನು ದೊಡ್ಡದಾಗಿಸಿದರು. ಶಾಲೆಗಳನ್ನು ಮುನ್ನಡೆಸಿದರು; ಯೂನಿವರ್ಸಿಟಿಗಳಲ್ಲಿ ಪಾಠ ಹೇಳಿದರು. ಹಲವಾರು ಗೌರವ ಡಾಕ್ಟರೆಟ್‌ಗಳನ್ನು ಪಡೆದರು.

ಎಲ್ಲರಿಗೂ ಆಶ್ಚರ್ಯವಾಗುವಂತೆ 1988ರಲ್ಲಿ ರಾಣಿ ಎರಡನೇ ಎಲಿಜಬೆತ್‌ ನೀಡಿದ್ದ ಗೌರವವನ್ನು ವಾಪಸ್‌ ಮಾಡಿದರು. ಆಗ ಅವರು ಹೇಳಿದ್ದು “ಎರಡು ಶತಮಾನಗಳ ಕಾಲದ ನಮ್ಮ ಜನರ ನೋವನ್ನು, ಸಾವನ್ನು, ಎಲ್ಲದರಿಂದ ವಂಚಿತರಾಗಿ ನಮ್ಮದೇ ನೆಲದಲ್ಲಿ ನಾವು ಪರದೇಶಿಗಳು, ಅನಾಥರೂ ಆದದ್ದನ್ನು ಈ ವರ್ಷ ನೆನಪಿಸುತ್ತದೆ. ಆಸ್ಟ್ರೇಲಿಯನ್‌ ಮತ್ತು ಬ್ರಿಟಿಷ್‌ ಸರಕಾರಗಳು ನಮ್ಮ ಅಬೊರಿಜನಲ್‌ ಜನರ ಎಲ್ಲ ಹಕ್ಕುಗಳನ್ನು ಅವರಿಗೆ ಕೊಟ್ಟು, ನಮ್ಮ ಪೂರ್ವಜರಿಂದ ಪಡೆದ ನೆಲವನ್ನು, ಅದರ ಹಕ್ಕನ್ನೂ ವಾಪಸ್‌ ಕೊಡಬೇಕು. ಅವರು ನಡೆಸಿದ ನರಮೇಧ, ಕೊಲೆಗಳು, ಸುಲಿಗೆ, ನಮ್ಮ ಭಾಷೆಗಳನ್ನು ಸಂಸ್ಕೃತಿಯನ್ನು ನಾಶಮಾಡಿದ್ದು ಎಲ್ಲವನ್ನೂ ಅವರು ಒಪ್ಪಿಕೊಳ್ಳಬೇಕು. ಹಿಂದೆ ನಾನು ಈ ಗೌರವವನ್ನು ಸ್ವೀಕರಿಸಿದಾಗ ಅದರಿಂದ ನಮ್ಮ ಜನರಿಗೆ ಮತ್ತಷ್ಟು ಧೈರ್ಯ, ಗುರುತಿಸುವಿಕೆ, ಪ್ರೋತ್ಸಾಹ ಸಿಗುತ್ತದೆ, ಅದರಿಂದ ಹಲವಾರು ಬಾಗಿಲುಗಳು ತೆರೆಯುತ್ತವೆ ಎಂದು ಭಾವಿಸಿದ್ದೆ. ಪರಿಸ್ಥಿತಿ ನಾನಂದುಕೊಂಡಂತೆ ಸುಧಾರಿಸಲಿಲ್ಲ, ಅವರು ಕ್ಷಮಾಪಣೆ ಕೇಳಿಲ್ಲ, ನಮ್ಮ ನೆಲವನ್ನು ಇನ್ನೂ ಕೊಟ್ಟಿಲ್ಲ. ಎಷ್ಟೋ ಸುಧಾರಣೆಗಳು ಇನ್ನೂ ಆಗಬೇಕಿವೆ’.

ಅದೇ ವರ್ಷ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡು ಊಡ್ಜರೂ ನೂನುಕ್ಕಲ್‌ ಆದರು. ತಮ್ಮ ಕುಲದ (ನೂನುಕ್ಕಲ್) ಹೆಸರನ್ನು ತಮ್ಮ ಕವನಗಳಂತೆಯೇ ಅಜರಾಮರಗೊಳಿಸಿದರು.‌

ಡಾ| ವಿನತೆ ಶರ್ಮಾ, ಬ್ರಿಸ್ಬೇನ್‌

ಟಾಪ್ ನ್ಯೂಸ್

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Shiroor: ಡಿವೈಡರ್‌ಗೆ ಕಾರು ಢಿಕ್ಕಿ

Shiroor: ಡಿವೈಡರ್‌ಗೆ ಕಾರು ಢಿಕ್ಕಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

rape

Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.