ಮುಕ್ತಛಂದದ ಮೂಕಜ್ಜಿ
Team Udayavani, Aug 20, 2017, 2:05 AM IST
ನಮ್ಮ ಅಕ್ಷರಲೋಕದ ರಾಜಕಾರಣ ಮೂಕಜ್ಜಿಯ ಸುಳಿವೂ ಇಲ್ಲದಂತೆ ಮರೆಗೆ ತಳ್ಳಿದೆ. ಮಹಿಳಾ ಅಧ್ಯಯನ ಕೇಂದ್ರಗಳಾಗಲಿ, ವಿಶ್ವವಿದ್ಯಾಲಯಗಳಾಗಲಿ ಗೋಡೆದಾಟಿ ಮೂಕಜ್ಜಿಯನ್ನು ತಲುಪಲಿಲ್ಲ. ನಮ್ಮ ಅಕ್ಷರ ಆಳುವ ಧಾಷ್ಟ್ಯಕ್ಕೆ ಅಪ್ಪಟ ಪ್ರತಿಭೆಯೊಂದು ಬಲಿಯಾದುದು ನಮ್ಮ ನಡುವಿನ ವಿಷಾದ…
“”ಗೊಡ್ಡು ಪುರೋಹಿತರು ನುಡಿದರಿಂತೆಂದು
ಅಡ್ಡಿಮಾಡದೆ ಬೋಳು ತಲೆಮಾಡಿರೆಂದು
ದುಡ್ಡಿನಾಸೆಗೆ ûೌರಿಕನು ಓಡಿ ಬಂದು
ಬಡ್ಡುಕೂಪಿನೊಳು ತಲೆಬೋಳಿಸಿದನಂದು”
– ಹೀಗೆ ಪದಕಟ್ಟಿ ದನಿಯೆತ್ತಿ ಹಾಡಿದ್ದು ಯಾವ ಚಳುವಳಿಕಾರರ ತಂಡವಲ್ಲ, ಪ್ರತಿಭಟನಾಕಾರರ ದಂಡಲ್ಲ. ಪುರುಷರೂಪಿ ವ್ಯವಸ್ಥೆ ತನ್ನ ಬದುಕನ್ನು ಕಸಿದ ಕ್ರೌರ್ಯವನ್ನು ಬಿಚ್ಚಿಟ್ಟ ಆಶುಕವಿ ಮೂಕಜ್ಜಿ ಎಂಬ ಬಾಲವಿಧವೆ. ಮೂಕಜ್ಜಿ ಅಂದರೆ – ಕೂತಲ್ಲಿ ನಿಂತಲ್ಲಿ ಹಾಡು ಹೊಸೆವ ಆಶುಕವಿ, ಕತೆಕಟ್ಟುವ ಅಜ್ಜಿ, ಚತುರ ವಾಗ್ಮಿ, ದೊಡ್ಡ ವಿಚಾರವಾದಿ, ರಾಜಕೀಯ ವಿಶ್ಲೇಷಕಿ – ಒಟ್ಟಿಂದ ಅದ್ಭುತ ಪ್ರತಿಭಾವಂತೆ.
ಮೂಕಾಂಬಿಕೆ – ಹೆತ್ತವರು ಹುಟ್ಟಿಗೆ ಇಟ್ಟ ಹೆಸರು. ಕರೆದದ್ದು ಮೂಕಾಂಬು. ಖ್ಯಾತಿ ಪಡೆದದ್ದು ಮೂಕಜ್ಜಿ. ಮೂಕಾಂಬಿಕೆ ಹುಟ್ಟಿದ್ದು 110 ವರ್ಷಗಳ ಹಿಂದೆ – 28-8-1908ರಂದು. ಅವರ ಹಿರೀಕರದು ಕಡುಬಡತನದ ಬ್ರಾಹ್ಮಣ ಪುರೋಹಿತ ಮನೆತನ. ಸರಸ್ವತಿಯಮ್ಮ – ನಾಗಪ್ಪ ಉಡುಪರ ಮಗಳು ಈಕೆ. ಹುಟ್ಟಿದ್ದು, ಬದುಕಿದ್ದು ಎಲ್ಲವೂ ಕುಂದಾಪುರ ತಾಲೂಕಿನ ಮೂಡಲಾಗಿನ ಉಳ್ಳೂರು ಎಂಬ ಸಣ್ಣ ಹಳ್ಳಿ. ಆಡುವ ವಯಸ್ಸಿಗೆ (ಹತ್ತು ವರ್ಷ) ನಾಗೂರಿನ ನಾರಾಯಣ ಐತಾಳರೊಂದಿಗೆ ಮದುವೆ, ಸೋದರಿಕೆ ಸಂಬಂಧ. ಹದಿನೈದಕ್ಕೆ ತಾಯ್ತನ, ಹದಿನಾರಕ್ಕೆ ವೈಧವ್ಯ. ಮೂಕಜ್ಜಿಯವರ ಪರಿಭಾಷೆಯಲ್ಲಿ ಹೇಳುವುದಾದರೆ “”ಹತ್ತಕ್ಕೆ ಬಂಧನ, ಹದಿನಾರಕ್ಕೆ ಬಿಡುಗಡೆ.” ಎಂಟು ತಿಂಗಳ ಹಸುಗೂಸನ್ನು ಸೊಂಟದಲ್ಲಿ ಚಚ್ಚಿಕೊಂಡು ತವರಿಗೆ ಮರುಪಯಣ. ತಾಯಿ ಮತ್ತು ಅಣ್ಣನ ಒತ್ತಾಸೆಯಲ್ಲಿ ಅವರ ಪ್ರತಿಭಾಶಕ್ತಿಗೆ ಹೊಸ ಚಾಲನೆ.
ಮೂಕಜ್ಜಿ ತನ್ನ ಸೃಜನಶಕ್ತಿಯ ಬೇರನ್ನು ತನ್ನ ಕುಲಮೂಲದ ಋಣಪ್ರಜ್ಞೆಯಲ್ಲಿ ಗುರುತಿಸುತ್ತಾರೆ. “”….ನನ್ನ ಅಜ್ಜಿ ಮಹಾಲಕ್ಷ್ಮಮ್ಮ ವಾರ್ಧಿಕ ಷಟ³ದಿಯಲ್ಲಿ “ಕಂಪಾಸರ ಕಾಳಗ’ ಖಂಡಕಾವ್ಯವನ್ನು ಬರೆದವಳು. ಮುದ್ದಣನಿಗೆ ರಾಮಪಟ್ಟಾಭಿಷೇಕದ ಆರಂಭದ ಹದಿನಾರು ಪದ್ಯಗಳನ್ನು ಕಟ್ಟಿಕೊಟ್ಟವಳು. ನನ್ನ ಅಮ್ಮ ಸರಸ್ವತಿಯಮ್ಮ “ಕುಂದಾಪುರ ಪುರವರ್ಣನಂ’, “ಮಾರಿಕಾಮಹಾತೆ¾’ ಕಟ್ಟಿದವಳು. ಸೋದರ ಮಾವಂದಿರಾದ ಬವುಲಾಡಿ ವೆಂಕಟರಮಣ ಹೆಬ್ಟಾರ, ಬವುಲಾಡಿ ಹಿರಿಯಣ್ಣ ಹೆಬ್ಟಾರ ಖ್ಯಾತ ಯಕ್ಷಗಾನ ಕವಿಗಳು. ನವ್ಯ ಕವಿ ಗೋಪಾಲಕೃಷ್ಣ ಅಡಿಗ, ಸಾಹಿತಿ ಬಿ. ಎಚ್. ಶ್ರೀಧರ, ಮೃದಂಗವಾದಕ ನಾಗೇಂದ್ರ ಉಡುಪ, ಪತ್ರಕರ್ತ ಎಂ. ಜಯರಾಮ ಅಡಿಗ ನನ್ನ ಸಮೀಪ ಬಂಧುಗಳು”. ಅಂದರೆ ಈ ಅಜ್ಜಿ “ಅಂತಿಂಥ ಅಜ್ಜಿ ನಾನಲ್ಲ’ ಎನ್ನುವುದನ್ನು ಹೇಳುತ್ತದೆ.
ಅಶುಕವಿ ಮೂಕಜ್ಜಿ: “”ಶಾಲಿ ಕಾಲೇಜಿಗೆ ಕಾಲಿಟ್ಟವಳ್ ನಾನಲ್ಲ” ಎಂದು ಹಾಡುಕಟ್ಟಿದ ಮೂಕಜ್ಜಿ ಓದು ಬಲ್ಲವರು, ಆದರೆ ಬರೆಯಲಾರರು. ಆಕೆ ಓದು ಕಲಿತ ಬಗೆಯೇ ರೋಚಕ. “”ನನ್ನಮ್ಮ ದಿನಾಲೂ ಮಜ್ಜಿ ಕಡುಸಮಿಗೆ ಜೈಮಿನಿ ಭಾರತ, ಹರಿಶ್ಚಂದ್ರ ಕಾವ್ಯ ಎಲ್ಲ ಹೇಳುದ್, ನನ್‌ಹತ್ರ ಪುಸ್ತ$R ಹಿಡ್ಕೊ ಅಂಬ್ª. ಅವ್Û ಹಗೂರಕೆ ಬಾಯಿಪಾಠ ಹೇಳ್ತಾ ಮಜಿY ಕಡುದು, ನಾನ್ ಅಕ್ಷರ ಕಾತ ಹೋಪ್ª. ಮನ್‌ಸ್ರ್ ಕಂಡ್ ಗುರ್ತ ಹೀಡೀತಿಲ್ಯ ಹಾಂಗೆ ಅಕ್ಷರ್ª ಒತ್ತ್, ಯಾತ, ಇರಿ ಎಲ್ಲ ನಂಗೊತ್ತಾಯ್¤.” ಮೂಕಜ್ಜಿ ತ್ರಿಪದಿ, ಚೌಪದಿ, ಭಾಮಿನಿ, ವಾರ್ಧಕ, ಲಾವಣಿ – ಹೀಗೆ ಎಲ್ಲ ಛಂದದಲ್ಲೂ ಪದ ಕಟ್ಟಿದ್ದಾರೆ. ಆದರೆ ಅವರಿಗೆ ಯಾವುದೇ ಛಂದಶಾÏಸ್ತ್ರದ ಹೊಲಬಿಲ್ಲ. ಗುರು, ಲಘ, ಮಾತ್ರೆಗಳ ಹಂಗಿಲ್ಲ. “ಕೆಮಿಂದ್ ಕೇಂಡ್ ದಾಟಿ ಮ್ಯಾಲೆ ಪದೊಮಾಡ್ತೆ’ ಎಂದು ತನ್ನ ಛಂದದ ಚಳಕದ ಗುಟ್ಟನ್ನು ಬಿಚ್ಚಿಡುತ್ತಾರೆ.
ವರ್ಷ ಐದಕ್ಕೆ ಹಾಡುಕಟ್ಟಿ ಹಾಡಿ ಕುಣಿದ ಮೂಕಾಂಬು ಹಾಡು ಕಟ್ಟುತ್ತಲೇ ಬದುಕು ಕಟ್ಟಿಕೊಂಡವರು. ಹಾಗಿದ್ದೂ ತಾನೊಬ್ಬಳು ಕವಿಯಾಗಬೇಕೆಂದು ಅವರು ಕವಿತೆ ಕಟ್ಟಿದ್ದಿಲ್ಲ. ವಾಲ್ಮೀಕಿಯ ಶೋಕವೇ ಶ್ಲೋಕವಾದಂತೆ, ಪಟ್ಟ ಪಾಡೆಲ್ಲವೂ ಹುಟ್ಟು ಹಾಡಾಗುತ್ತಾ ಹೊಮ್ಮಿದ ಕಾವ್ಯ ಪ್ರತಿಭೆ ಮೂಕಜ್ಜಿ ಯದು. ಹೆಣ್ಣೆಂಬ ಕಟ್ಟಿನಿಟ್ಟಿನಲ್ಲಿ ತನ್ನ “ಕಾಣ್R ಕೇಣ್R’ ಎಂಬ ಮಾಆಸಿಯನ್ನು ಒಡಲಲ್ಲಿ ಹೊತ್ತು ಕಾವುಕೊಟ್ಟ “ಹಾಡುಹಕ್ಕಿಯ ಗರಿಕಿತ್ತು ಗಪ್ಪೆಂದು ಕೂರಿಸಿದ್ದು ಮದುವೆ. ಹತ್ತು ವರ್ಷದ ಕೂಸಿಗೆ ಮದುವೆಯ ಬಗ್ಗೆ ಇದ್ದ ಕನಸು, ಕಲ್ಪನೆ ಅಂದರೆ “”ಮದಿ ಆರೆ ಮನಿತುಂಬ ನೆಂಟ್ರಿಷ್ಟ್ ಸೇರ್Œ. ತಲಿತುಂಬ ಜಲ್ಲಿ ಬಿಡ್Œ, ಹೊಟ್ಟಿ ತುಂಬ ಪಾಯ್ಸ ತಿಂಬುಕಾತ್ತ್ ಎಂಬ ಕುಶಿ.” ಆದರೆ ವಾಸ್ತವ ವೈವಾಹಿಕ ಬದುಕು ಘೋರ ನರಕ. ಮೂಕಾಂಬು ಆ ಕಡುಕಷ್ಟಕ್ಕೆ ಕರಗಲಿಲ್ಲ, ಕರಟಲಿಲ್ಲ. ಹಾಡು, ಕತೆ ಕಟ್ಟುತ್ತಾ ಗಟ್ಟಿಯಾದರು.
ಕತೆಗಾರ್ತಿ -ವಿಚಾರವಾದಿ: ಮೂಕಜ್ಜಿ ಹಾಡಿನ ಗೂಡಷ್ಟೇ ಅಲ್ಲ, ಅವರೊಬ್ಬ ಅಜ್ಜಿಕತೆಯ ಕೊಪ್ಪರಿಗೆ. ರಾತ್ರಿ ಬೆಳಗಾದರೂ ಬರಿದಾಗದ ಅವರ ಕಥಾಜೋಳಿಗೆ, ಬತ್ತದ ಕಂಠ, ಕರಗದ ಉತ್ಸಾಹ, ಕಥಾಲೋಕದ ಒಳಸೇರುವ ತಾದಾತ್ಮದಲ್ಲಿ ಅವರೊಬ್ಬ ಮಾದರಿ ಕತೆಗಾರ್ತಿಯಾಗಿ ನಿಲ್ಲುತ್ತಾರೆ. ಅವರು ಬಳಸುವ ಆಂಗಿಕ ಭಾಷೆ, ಮುಖಭಾವ, ಸ್ವರಭಾವ, ಹಸ್ತಾಭಿನಯ ಎಲ್ಲವೂ ಕತೆ ಹೇಳುವುದು ಅವರಿಗೆ ಕತೆಕಟ್ಟುವ ಕಾಯಕವಾಗಿದೆ. ಹಾಗಾಗಿಯೇ ಮೂಕಜ್ಜಿಯವರ ಕಥಾ ಪ್ರಕ್ರಿಯೆಯನ್ನು ಬರಿಯ ಧ್ವನಿ ಮುದ್ರಣದಿಂದಷ್ಟೇ ಹಿಡಿದಿರಿಸುವುದು ಸಾಧ್ಯವಾಗದು. ಅದು ಬಹುಮಾಧ್ಯಮ ದಾಖಲಾತಿಯನ್ನು ಅಪೇಕ್ಷಿಸುತ್ತದೆ. ಮೂಕಜ್ಜಿಯನ್ನು ಬರಿಯ ಆಶುಕವಿಯೆಂದೇ ಬಹುತೇಕ ಅವರನ್ನು ಕುರಿತು ಬರೆಯಲಾಗಿದೆಯೇ ಹೊರತು ಅವರನ್ನು ಒಬ್ಬ ವಿಚಾರವಾದಿಯಾಗಿ, ಸ್ತ್ರೀಪರ ಚಿಂತಕಿಯಾಗಿ ಗುರುತಿಸಲಾಗಿಲ್ಲ. ಮೂಕಜ್ಜಿ ಒಬ್ಬ ಗ್ರಾಮೀಣ ಪರಿಸರದಲ್ಲಿ, ಸಾಂಪ್ರದಾಯಿಕ ಬ್ರಾಹ್ಮಣ ಮನೆತನದಲ್ಲಿ ವಿಧವೆ ಹೆಣ್ಣಿಗಿದ್ದ ಎಲ್ಲ ನಿಷೇಧ, ಕಟ್ಟುಪಾಡುಗಳನ್ನು ಅನುಭವಿಸುತ್ತಲೇ ಅದನ್ನು ದಾಟಿ ಬೆಳೆದವರು. ಮೂಕಜ್ಜಿಗೆ ವಿಚಾರವಾದ ಎನ್ನುವುದು ಸೋಗಲ್ಲ, ಅದು ಬದುಕು ಮತ್ತು ಬದುಕಿನ ರೀತಿ ಅವರಿಗೆ. “”ಈ ಜ್ಯೋತಿಷ್ಯ ಜಾತ್ಕ, ಎಲ್ಲ ಬರಿ ಡೋಂಗಿ.
ಜಾತ್ಕ ಕಂಡ್ ಮದಿ ಆಯಿ ಮುಂಡಿ ಆದವ್Å ಎಷ್ಟ್ ಹೆಂಗ್ú ಇಲ್ಲೆ. ಎಲ್ಲ ದುಡ್ಡ್ಮಾಡು ಬಹುಕೃತ ವೇಷ. ಕವಿx ಹಾಕ್ಕಂಡ್ ಭವಿಷ್ಯ ಹೇಳುದ್, ಹಕ್ಕಿ ಶಕುನ ಎಂಬ್ª ಎಲ್ಲ ಕಣRಟ್ಟ್. ಜೋಯಿಸ್ರ್ ಹತ್ರ ಹೋದವರ್ ಯಾರಾರು ಉದ್ಧಾರ ಆದ್ª ಇತ್ತಾ” ಎಂದು ಮುಗ್ಧ ಜನರನ್ನು ಸುಲಿಯುವ ಹುನ್ನಾರವನ್ನು ತೀವ್ರವಾಗಿ ವಿರೋಧಿಸುತ್ತಾರೆ. ಲಿಂಗವ್ಯವಸ್ಥೆಯಲ್ಲಿ ಹೆಣ್ಣು ಅನುಭವಿಸುವ ತವಕ, ತಲ್ಲಣ, ತಾಕಲಾಟ, ಶೋಷಣೆ ಬಗೆಗೆ, ಹೆಣ್ಣಿನ ಕೀಳ್‌ಗಳೆಯುವಿಕೆಯ ಲಿಂಗ ರಾಜಕಾರಣವನ್ನು ಕಟುವಾಗಿ ಪ್ರಶ್ನಿಸುವ ಮೂಕಜ್ಜಿ, ಗಂಡಿನ ಶ್ರೇಷ್ಠತ್ವಕ್ಕೆ ಸವಾಲು ಹಾಕುತ್ತಾರೆ. “”ಈ ಪಾಟಿ ಗಂಡ್ ಗಂಡ್ ಅಂದ್ ಜೀವ ಬಿಡ್ರಲೆ, ಗಂಡೇನ್ ಹೆಚ್c, ಹೆಣ್ಣೇನ್ ಕಡೆ? ಎಲ್ಲರೂ ಗಂಡ್ ಮಗೀನೆ ಹೆತ್ತ್ರೆ ಹೆಣ್ಣೇ ಇಲ್ದಿರೆ ಏನಕ್R! ಮನ್ú ಆಯ್ ಹುಟ್ಟಿ, ಮನ್ú ಆಯಿ ಹಾನಿ ಮಾಡೆ ಬಧ್ಕುದ್ ಹೆಚ್ಚಿಂದ್” ಎಂದು ಜೀವನದರ್ಶನದ ವ್ಯಾಖ್ಯಾನ ಮಾಡುತ್ತಾರೆ. “”ಹೆಣ್ಣು ಗಂಡ್ ಇಬ್ರಿಗೂ ವಿದ್ಯೆಕೊಟ್ರೆ ಈ ಮೇಲ್ ಕೀಳ್ ಎಂಬುದ್ ಹೋತ್ತ್. ಆರೆ ವಿದ್ಯಾವಂತ್ರಿಗೂ ಗಂಡ್ ಅಂಬ್ ಪಾಸಿ ಬಿಡಲ್ಲೆ!” ಎನ್ನುವುದೇ ದುರಂತ ಎನ್ನುತ್ತಾರೆ. ಹೀಗೆ ಗಂಡು ಹೆಣ್ಣು ಎಂದು ದೇಹಕ್ಕಂಟಿಸಿದ ಭೇದವನ್ನು ದೊಡ್ಡ ಮಟ್ಟದಲ್ಲಿ ನಿರಾಕರಿಸುವ ಮೂಕಜ್ಜಿ ಹೆಣ್ಣು ದುರ್ಬಲೆ ಎನ್ನುವ ಜಂಡರ್‌ತಂತ್ರವನ್ನು ಮುರಿಯುತ್ತಾರೆ. ವಿಧವೆಗೆ ಹೇರಲಾದ ವಿಧಿ ನಿಷೇಧ – ಕೇಶ ಮುಂಡನದ ಬಗೆಗೆ ಮೂಕಜ್ಜಿ ವ್ಯಥೆಯಿಂದಷ್ಟೇ ಅಲ್ಲ, ಸಿಟ್ಟಿನಿಂದ ಕೆಂಡವಾಗುತ್ತಾರೆ. “”ಈ ಮಂಡಿ ಬೋಳುÕದ್ ಅಂಬ್ª ಒಂದ್ ಹೆಣ್ಣಿಗೆ ವಧಾಸ್ಥಾನಕ್ಕೆ ನಿಲ್ಸಿದಷ್ಟೇ ಸಂಕ್ಟದ್ದು. ತಲಿಕೂದ್É ಅಂಬ್ª ಹುಟ್ಟ್ತನೇ ಬಂದದ್ª.
ಈ ತಲಿ ಕೂದ್ಲಿಗೂ, ಆ ಗಂಡ್‌ನಿಗೂ, ಕಾಮಕ್ಕೂ ಏನ್ ಸಂಬಂಧ? ಇವ್Å ಕುರೂಪ ಮಾಡೂದಂಬೆR ಕಾಮಕ್ಕೆ ರೂಪೊ ಇತ್ತಾ? ಮಂಡಿ ಬೋಳಿÕ ಮುಂಡಿ ಮಾಡಿದವ್Å ಬಸ್ರ್ ಆದ್ª ಎಷ್ಟ್ ಬೇಕ್? ಪರಪುರುಷನ್ ಕಾಂಬುಕ್ ಆಗ್ ಅಂದ್ ಮಂಡಿ ಬೋಳಿÕ ಕುಳ್Õತ್ರಲೆ ಮತ್ತ್ ಮಂಡಿ ಬೋಳುÕಕೆ ಪರಪುರುಷನಿಗೆ ತಲಿ ಕೊಟ್Rಂಡ್ ಕೊಕಣ್R ಅದ್ ಎಷ್ಟ್ ಸಂಕ್ಟದ್ª ಅಂತೆ? ನನ್Y ತಲಿಬೋಳ್Õಕಂಬ್R ಮನ್ಸ್ ಇರಲ್ಲೆ. ಆದ್ರೆ ಎಡಿಯ ಅಂದ್ರೆ ಬಿಡಾŒ ಎಳ್ಕಂಡ್ ಹೋಪ್Å. ಆಗಿÛಕೆ ಆದನ್ನೆಲ್ಲ ಎದ್ರಿಸು ಧೈರ್ಯವೂ ಇರ್ಲಿಲ್ಲೆ. ಈಗೇನಾರೂ ಅವ್Å ಎದ್ರ್ ಸಿಕ್Rರೆ ಇದೆಲ್ಲ ಹೆಣ್ಣಿಗೇ ಯಾಕ್ ಅಂದ್ ಅವ್Å ಮುಕುದ್ ಮ್ಯಾಲ್ ಉಗ್ª ಕೇತಿದ್ದೆ.”
ಇಂದು ಸ್ತ್ರೀವಾದ ಎತ್ತುವ ಲಿಂಗ ಸಮಾನತೆಯ ಆಶಯವನ್ನು ಮೂಕಜ್ಜಿ ತಮ್ಮ ಹಾಡುಗಳಲ್ಲಿ ಅನೇಕ ನೆಲೆಗಳಲ್ಲಿ ಸ್ಥಾಪಿಸುತ್ತಾರೆ. ವಿಧವೆ ಹೆಣ್ಣೊಬ್ಬಳು “ಮುಂಡ್‌ಬಸ್ರ್’ ಹೊತ್ತಾಗ, ಸಮಾಜಿಕ ಬಹಿಷ್ಕಾರದ ಆತಂಕದಲ್ಲಿದ್ದಾಗ ಮೂಕಜ್ಜಿಯ ಹೆಣ್ತನ ಅವಳನ್ನು ಗ್ರಹಿಸುವ ಬಗೆ, ಸ್ಪಂದಿಸುವ ರೀತಿ ಅಪ್ಪಟ ತಾಯ್ತನದ ದೃಷ್ಟಿಯದು. ಆ ಹೆಣ್ಣಿಗೆ ಸಾಂತ್ವನ ಹೇಳುವಲ್ಲಿಯೇ ನಿಲ್ಲದೆ ಹೆಣ್ಣಿನ ಮಾನ, ಗೌರವ ಕಾಪಾಡುವಲ್ಲಿ ಶೀಲದ ಒಮ್ಮುಖ ಹೇರಿಕೆಯನ್ನು ನಿರಾಕರಿಸಿ ಬದುಕು ಕಟ್ಟಿಕೊಡುತ್ತಾರೆ ಎನ್ನುವುದು ಅತ್ಯಂತ ಮಹತ್ವವಾದದ್ದು.
ಮೂಕಜ್ಜಿ ಜಾತಿ, ಧರ್ಮ, ಲಿಂಗದ ತಡೆಗೋಡೆಗಳ ಹಂಗು ತೊರೆದು ಬದುಕಿದವರು. ಅವರದು ಸ್ಮಾರ್ತ ಸಂಪ್ರದಾಯದ ಕುಟುಂಬ. ಆದರೆ ಅವರ ಅಂಕಿತ, ಆರಾಧ್ಯದೈವ ಎರಡೂ ವೈಷ್ಣವ ಸಂಪ್ರದಾಯದ ಗೋಪಾಲಕೃಷ್ಣ. “ಹಿಂದೂ ಮುಸನ್ಮಾನರೆಂಬ ಭೇದವೆಂಬುದೇನಿಲ್ಲ ನಮ್ಮ ಬಂಧುಗಳೆಲ್ಲ’ ಎನ್ನುವುದು ಮೂಕಜ್ಜಿ ನಂಬಿದ ಬಲವಾದ ಸತ್ಯ. ಕೃಷ್ಣನನ್ನು ಸ್ತುತಿಸುವ ಅವರು ಕ್ರಿಸ್ತನಿಗೂ ಕೀರ್ತನೆ ಕಟ್ಟಿ ಪಾಡಿದ್ದಾರೆ. ಮಡಿಯ ವಿಚಾರದಲ್ಲಿ ಮೂಕಜ್ಜಿಯವರ “ಒಲವು ಅಂತರಂಗ-ಬಹಿರಂಗ ಶುದ್ಧಿಗೆ. ಮಡಿ ಎಂದರೆ ಒಡಲು ಚೊಕ್ಕದಲಿ ಇರಬೇಕು, ನಿತ್ಯದಿ ತೊಳೆದಾರಿದ ಸೀರೆ ಉಡಬೇಕು’ ಎಂದು ಮಡಿಯ ನಿರ್ವಚನ ಮಾಡುತ್ತಾರೆ. “ಮೂಕಜ್ಜಿ ತನ್ನೂರಿನ ಸುತ್ತಮುತ್ತ ರಾಷ್ಟ್ರಪ್ರೇಮವನ್ನು ಬಿತ್ತರಿಸುವ ಭಾರತಮಾತೆ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ, ಗಾಂಧೀಜಿ, ನೆಹರೂ, ಸರೋಜಿನಿ ನಾಯ್ಡುರಂತಹ ರಾಷ್ಟ್ರನಾಯಕರ ಕುರಿತು ಹಾಡುಕಟ್ಟಿ ನಾಡುಕಟ್ಟುವ ಕಾಯಕದ ಜತೆಗೆ ಅದನ್ನು ಹಳ್ಳಿಯ ಹೆಂಗಸರಿಂದ ಹಾಡಿಸಿ ಸ್ವಾತಂತ್ರ್ಯದ ಕಿಚ್ಚನ್ನು ಮೂಡಿಸಿದರು. ಒಂದು ಶತಮಾನದ ಕಾಲಕ್ಕೆ ಸಾಕ್ಷಿಯಾದ ಮೂಕಜ್ಜಿ ಭಾರತದ ಎಲ್ಲ ಸ್ಥಿತ್ಯಂತರಗಳನ್ನು ಕಂಡವರು. “ಹಳ್ಳಿಯ ಸ್ಟೋರು’, “ಬಂಗ್ಲಾವಿಜಯ’, “ಎಮರ್ಜೆನ್ಸಿ’, “ಪಶ್ಚಾತ್ತಾಪ’, “ಮಿತಸಂತಾನ’, “ಮೌಡ್ಯ’, “ಚುನಾವಣೆ’, “ಸೂರು’ ಇತ್ಯಾದಿ ಕವನಗಳಲ್ಲಿ ಜನಜಾಗೃತಿ ಮೂಡಿಸಿದರು. ಕರಾವಳಿಯಲ್ಲಿ ಮೂಕಜ್ಜಿ ಮನೆಮಾತು. ನಾಡಿನ ಬಹುತೇಕ ಪತ್ರಿಕೆಗಳು ಮೂಕಜ್ಜಿಯನ್ನು ಪ್ರಕಟಿಸಿದವು. “ಮೂಕಜ್ಜಿ ಬದುಕು ಸಾಹಿತ್ಯ’ (1988, ಗಾಯತ್ರೀ ನಾವಡ) ಮೊದಲ ಬಾರಿ ಕೃತಿರೂಪದಲ್ಲಿ ಹೊರಬಂತು. ಉಪ್ಪುಂದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಮೂಕಜ್ಜಿಗೆ ಗೌರವ ಸಲ್ಲಿಸಿವೆ. “ಮೂಕಜ್ಜಿಯ ಹಾಡುಗಳು’ (2000, ಕನರಾಡಿ ವಾದಿರಾಜ ಭಟ್ಟ, ಉಳ್ಳೂರು ಸುಬ್ರಹ್ಮಣ್ಯ ಐತಾಳ) ಹೊರಬಂದಿದೆ. “ಮುಕ್ತಛಂದದ ಮೂಕಜ್ಜಿ’ (2015, ಗಾಯತ್ರೀ ನಾವಡ) ಕನ್ನಡ ಸಂಘ ಕಾಂತಾವರ ಪ್ರಕಟಿಸಿದೆ. ಹೀಗಿದ್ದೂ ನಮ್ಮ ಅಕ್ಷರಲೋಕದ ರಾಜಕಾರಣ ಮೂಕಜ್ಜಿಯ ಸುಳಿವೂ ಇಲ್ಲದಂತೆ ಮರೆಗೆ ತಳ್ಳಿದೆ. ಮಹಿಳಾ ಅಧ್ಯಯನ ಕೇಂದ್ರಗಳಾಗಲಿ, ವಿಶ್ವವಿದ್ಯಾಲಯಗಳಾಗಲಿ ಗೋಡೆದಾಟಿ ಮೂಕಜ್ಜಿಯನ್ನು ತಲುಪಲಿಲ್ಲ. ನಮ್ಮ ಅಕ್ಷರ ಆಳುವ ಧಾಷ್ಟ್ಯಕ್ಕೆ ಅಪ್ಪಟ ಪ್ರತಿಭೆಯೊಂದು ಬಲಿಯಾದುದು ನಮ್ಮ ನಡುವಿನ ವಿಷಾದ ವ್ಯಂಗ್ಯ. 16-07-1998 – ಮೂಕಜ್ಜಿ ಸಾವಿನೊಂದಿಗೆ ಕನ್ನಡ ಮೌಖೀಕ ಪರಂಪರೆಯ ದೊಡ್ಡ ದನಿ ಅಡಗಿತು. ಮುಕ್ತಛಂದ ಅವರ ಬದುಕು ಬರಹದ ಮುಖ್ಯ ಧೋರಣೆ. ಈ ಮೂಕಜ್ಜಿ ಎಂಬ ಮುಕ್ತ ಛಂದದ ಜತೆ ಆಪ್ತವಾಗಿ ಬದುಕಿದ್ದೇವೆ ಎನ್ನುವುದೇ ನನಗೆ ಅಭಿಮಾನ.
– ಡಾ. ಗಾಯತ್ರೀ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.