ನಮ್ಮ ಹೋರಾಟವಿನ್ನೂ ಮುಗಿದಿಲ್ಲ


Team Udayavani, Jan 2, 2018, 2:39 AM IST

02-2.jpg

ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ಕೋರ್ಟ್‌ ಸಾಧ್ವಿ ಪ್ರಜ್ಞಾ ಮತ್ತು ಪುರೋಹಿತ್‌ ಅವರ ವಿರುದ್ಧ “ಮೋಕಾ’ ಕಾಯ್ದೆಯಡಿಯಲ್ಲಿ ಹಾಕಲಾಗಿದ್ದ ದೋಷಾರೋಪವನ್ನು ಕೈಬಿಟ್ಟು ಅವರಿಗೆ ಕೊಂಚ ನೆಮ್ಮದಿ ಸಿಗುವಂತೆ ಮಾಡಿದೆ. ಆದರೆ ಇಷ್ಟಕ್ಕೇ  ಹೋರಾಟದ ಹಾದಿ ಮುಗಿದಂತಾಗುವುದಿಲ್ಲ ಎನ್ನುತ್ತಾರೆ ಪುರೋಹಿತ್‌ರ ಪತ್ನಿ ಅಪರ್ಣಾ. ರೀಡಿಫ್ ಜಾಲತಾಣಕ್ಕೆ ಅವರು ನೀಡಿರುವ ಸಂದರ್ಶನದ ಆಯ್ದ ಭಾಗವಿದು…

 ಒಂದು ವೇಳೆ ಈಗಲೂ ಯುಪಿಎ ಸರಕಾರ ಅಧಿಕಾರದಲ್ಲಿ ಇದ್ದಿದ್ದರೆ ನಿಮ್ಮ ಪತಿಗೆ ಮಾಲೆಗಾಂವ್‌ ಸ್ಫೋಟ ಪ್ರಕರಣದಲ್ಲಿ ಜಾಮೀನು ಸಿಗುತ್ತಿತ್ತಾ? ಎನ್‌ಡಿಎ ಸರಕಾರ ಅಧಿಕಾರದಲ್ಲಿರು ವುದರಿಂದ ಪತಿಯ ಪ್ರಕರಣಕ್ಕೆ ಸಹಾಯವಾಯಿತೇ? 
– ನನ್ನ ಗಂಡನಿಗೆ ಜಾಮೀನು ಕೊಟ್ಟಿರುವುದು ಸುಪ್ರೀಂ ನ್ಯಾಯಾಲಯವೇ ಹೊರತು, ಈ (ಭಾರತೀಯ ಜನತಾ ಪಾರ್ಟಿ) ಸರಕಾರವಲ್ಲ. ಕೋರ್ಟ್‌ ಆಫ್ ಎನ್‌ಕ್ವೆ„ರಿ (ಭಾರತೀಯ ಸೇನೆಯಿಂದ ಆದೇಶಿತ) ದಾಖಲೆಗಳು ಅವರ ಬಿಡುಗಡೆಗೆ ಸಹಾಯ ಮಾಡಿವೆ. ಇದು ಆರಂಭವಾಗಿದ್ದು 2009ರಲ್ಲಿ, ಅಂತ್ಯಗೊಂಡಿದ್ದು 2012ರಲ್ಲಿ. ಈ ದಾಖಲೆಗಳ ಆಧಾರದ ಮೇಲೆ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ. ಯಾವುದೇ ಸರಕಾರವಿದ್ದರೂ ಅವರಿಗೆ ಜಾಮೀನು ಸಿಕ್ಕೇ ಸಿಗುತ್ತಿತ್ತು.

ಸೇನೆ ತಮ್ಮ ಪರವಾಗಿ ನಿಂತಿತು ಎಂದು ನಿಮ್ಮ ಪತಿ ಹೇಳುತ್ತಾರೆ. ಆದರೆ ಮಿಲಿಟರಿ ಇಂಟಲಿಜೆನ್ಸ್‌ನ ತನಿಖಾ ವರದಿಯು ಲೆಫ್ಟಿನೆಂಟ್‌ ಕರ್ನಲ್‌ ಪುರೋಹಿತ್‌ “ಹೆಚ್ಚು ಕಟ್ಟರ್‌ವಾದಿ’ಯಾಗಿ ಬದಲಾಗಿದ್ದರು ಎನ್ನುತ್ತದೆ. ಇನ್ನು ನಿಮ್ಮ ಪತಿಗೆ ಇಸ್ಲಾಂ ಬಗ್ಗೆ ತೀವ್ರ ದ್ವೇಷವಿದೆ ಎಂಬ ನಿಮ್ಮ ಹೇಳಿಕೆಯೂ ಆ ವರದಿಯಲ್ಲಿದೆ..
-ಸೇನೆಯು ಸತ್ಯ ಶೋಧನಾ ಸಮಿತಿಗೆ ತನಿಖೆಯ ಆದೇಶ ನೀಡಿತು. ಸೇನೆಯ ಈ ತನಿಖಾ ನ್ಯಾಯಾಲಯ ಉಳಿದ ನ್ಯಾಯಾಲಯಗಳಂತೆಯೇ  ಕಾರ್ಯನಿರ್ವಹಿಸುತ್ತದೆ. ನನ್ನ ಪತಿ 9 ವರ್ಷ ಜೈಲಿನಲ್ಲಿದ್ದಾಗ ಸೇನೆ ಅವರನ್ನು ಅಮಾನತುಗೊಳಿಸಲಿಲ್ಲ ಅಥವಾ ಅವರ ಸೇವಾವಧಿಯನ್ನು ಅಂತ್ಯಗೊಳಿಸಲಿಲ್ಲ. ಈ ಎಲ್ಲ ಆರೋಪಗಳೂ ಸಮಿತಿಯ ಮುಂದೆ ಬಂದಿದ್ದವಾದರೂ, ಈ ಆರೋಪಗಳಲ್ಲಿ ಹುರುಳಿಲ್ಲ ಎನ್ನುವುದು ಅದಕ್ಕೆ ತಿಳಿಯಿತು.

ನಿಮ್ಮ ಪತಿ ಮಿಲಿಟರಿಯ ಗುಪ್ತಚರ ವಿಭಾಗದಲ್ಲಿ ಅಧಿಕಾರಿಯಾಗಿ ದ್ದವರು. ಅವರ ಕೆಲಸದ ವ್ಯಾಪ್ತಿ ಏನಿತ್ತು?
– ನನ್ನ ಪತಿ ಮಿಲಿಟರಿ ಗುಪ್ತಚರ ವಿಭಾಗ(ಎಂಐ)ದಲ್ಲಿ ಏನು ಮಾಡುತ್ತಿದ್ದರು ಎಂಬ ಮಾಹಿತಿಯನ್ನು ನಾನು ಹಂಚಿ ಕೊಳ್ಳುವಂತಿಲ್ಲ.  ಎಂಐ ಅನೇಕ ಸಂಗತಿಗಳನ್ನು ನೋಡಿಕೊಳ್ಳುತ್ತದೆ. ಈ ದಿನಮಾನಗಳಲ್ಲಿ ಯುದ್ಧದ ರೂಪ ಬದಲಾಗುತ್ತಿದೆ, ಯುದ್ಧವೀಗ ಕೇವಲ ಗಡಿಗಳಲ್ಲಷ್ಟೇ ನಡೆಯುತ್ತಿಲ್ಲ. ಬಹಳಷ್ಟು ಚಟುವಟಿಕೆಗಳು (ಭಯೋತ್ಪಾದನೆ) ದೇಶದೊಳಗೇ ಆಗುತ್ತಿವೆ. ಹೀಗಾಗಿ ಎಂಐ  ಇಂಟೆಲಿಜೆನ್ಸ್‌ ಬ್ಯೂರೋ ಮತ್ತು ಪೋಲೀಸರ ಜೊತೆಗೂಡಿ ಕಾರ್ಯನಿರ್ವಹಿಸುತ್ತದೆ. ಆ ನಂತರ ಮಾಹಿತಿ ಹಂಚಿಕೊಳ್ಳುತ್ತದೆ. 

ಆದರೆ ಇಂಡಿಯನ್‌ ಎಕ್ಸ್‌ಪ್ರೆಸ್‌ ಪ್ರಕಾರ, ಇದೇ ಕೋರ್ಟ್‌ ಆಫ್ ಎನ್‌ಕ್ವೆ„ರಿಯ ವರದಿಯು “ನಿಮ್ಮ ಪತಿ ನಿಮ್ಮ ಮಾತು ಕೇಳಲಿಲ್ಲ ಮತ್ತು ಧಾರ್ಮಿಕ ಗುಂಪುಗಳಿಂದ ದೂರ ಉಳಿಯಲು ಒಪ್ಪಿಕೊಳ್ಳಲಿಲ್ಲ’ ಎಂದು ಹೇಳಿದೆಯಂತಲ್ಲ?
-ಇದು ಶುದ್ಧ ಸುಳ್ಳ. ಎಟಿಎಸ್‌ ಆಗಲಿ, ಕೋರ್ಟ್‌ ಆಫ್ ಎನ್‌ಕ್ವೆ„ರಿ ಆಗಲಿ ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆಯಿರಲಿ..ಯಾವವೂ ಕೂಡ ಈ ನಿಟ್ಟಿನಲ್ಲಿ ನನ್ನ ಕರೆಸಿ ಹೇಳಿಕೆಯನ್ನು ದಾಖಲಿಸಿಕೊಂಡಿಲ್ಲ. 

ಹಿಂದುತ್ವ ಮತ್ತು ಹಿಂದೂರಾಷ್ಟ್ರದ ಬಗ್ಗೆ ನಿಮ್ಮ ಯೋಚನೆ ಏನು? ಅವು ಇಸ್ಲಾಂನೊಂದಿಗೆ ಮುನ್ನಡೆಯಬಲ್ಲವೇ? ನಿಮ್ಮ ಪತಿ ಹಿಂದೂ ರಾಷ್ಟ್ರದ(ಹೊಸ ಸಂವಿಧಾನದ ಜೊತೆಗೆ) ಸ್ಥಾಪನೆಯನ್ನು ಬಯಸಿದ್ದರು ಎನ್ನುವ ಆರೋಪವಿದೆ…
-ಸೇನೆಯಲ್ಲಿ ಧರ್ಮ ಎನ್ನುವುದು ಮುಖ್ಯ ವಿಷಯವೇ ಅಲ್ಲ. ವಿವಿಧ ಧರ್ಮದ ಜನರು ನನ್ನ ಪತಿಯ ಜೊತೆ ಕೆಲಸ ಮಾಡಿದ್ದಾರೆ. ಪತಿಯ ತಲೆಯಲ್ಲಿ ಅಥವಾ ನಮ್ಮ ತಲೆಯಲ್ಲಿ ಇಂಥ ಯೋಚನೆಗಳು ಬಂದಿಲ್ಲ.  ಯಾರು ಹಿಂದೂ, ಯಾರು ಅಲ್ಲ ಎನ್ನುವುದರಿಂದ ಏನುಪಯೋಗವಿದೆ? ನನ್ನ ಗಂಡ ಅರೆಸ್ಟ್‌ ಆದದ್ದೇ ಅವರ ವಿರುದ್ಧ ಈ ರೀತಿಯ ಆರೋಪಗಳ ಸುರಿಮಳೆ ಹರಿಸಲಾಯಿತು. ಹಿಂದುತ್ವ ಮತ್ತು ಇಸ್ಲಾಂ ಈಗಾಗಲೇ ಸಹಬಾಳ್ವೆ ನಡೆಸುತ್ತಿವೆ-ಸೇನೆಯ ಹೊರಗೂ, ಸೇನೆಯ ಒಳಗೂ.

ಹಿಂದೂಗಳ ಮೇಲೆ ಹೆಚ್ಚುತ್ತಿರುವ ಉಗ್ರ ದಾಳಿಗಳಿಂದ ನಿಮ್ಮ ಪತಿ ರೋಸಿಹೋಗಿದ್ದರು ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ಅದೇ ಕಾರಣಕ್ಕಾಗಿ ಅವರು…
– (ಮಾತು ತುಂಡರಿಸಿ)ಆ ರೀತಿ ಅವು ಆರೋಪಿಸುತ್ತಿವೆಯಷ್ಟೆ. ನಾನು ಮತ್ತು ನೀವೂ ಕೂಡ ಉಗ್ರ ದಾಳಿಗಳಾದಾಗ ಸಹಜವಾಗಿಯೇ ಕೋಪಗೊಳ್ಳುತ್ತೇವೆ ತಾನೆ? ಹಾಗೆಂದು ಆ ಕೋಪದಲ್ಲಿ ಏನಾದರೂ ಮಾಡುವುದಿಲ್ಲವಲ್ಲ? ಹಾಗೆಯೇ ನನ್ನ ಪತಿಯೂ ಏನೂ ಮಾಡಿಲ್ಲ. 

ಆದರೆ ಅವರಿಗೆ ಏನಾದರೂ ಮಾಡಲು ಶಕ್ತಿಯಿತ್ತಲ್ಲ. ಏಕೆಂದರೆ ಅವರು ಸೇನೆಯಲ್ಲಿದ್ದರು…
– ಇಲ್ಲ . ಒಂದು ವಿಷಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ. ಮಿಲಿಟರಿಯಲ್ಲಿ ಇದ್ದಾಕ್ಷಣ ಮನಸ್ಸಿಗೆ ಬಂದಂತೆ ಮುನ್ನಡೆಯುವ ಅಧಿಕಾರ ದಕ್ಕಿಬಿಡುವುದಿಲ್ಲ. ಸೇನೆಯಲ್ಲಿನ ಪ್ರತಿಯೊಂದು ಹುದ್ದೆಗೂ ತನ್ನದೇ ಆದ ಮಿತಿಗಳಿವೆ. ಮಿಲಿಟರಿ ಗುಪ್ತಚರ ವಿಭಾಗದಲ್ಲಿದ್ದರೂ ನನ್ನ ಪತಿಗೂ ಮಿತಿಗಳಿದ್ದವು. ತಮಗೆ ಬಂದ ಸೂಚನೆಗಳನ್ನು ಮೀರಿ ನಡೆಯುವುದು ಅವರಿಗೆ ಅಸಾಧ್ಯವಾಗಿತ್ತು. ಮಾಹಿತಿ ಕಲೆಹಾಕುವುದು ಹಾಗೂ ಅದನ್ನು ಹಿರಿಯ ಅಧಿಕಾರಿಗಳಿಗೆ  ಮತ್ತು ಇತರೆ ಗುಪ್ತಚರ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವ ಸೂಚನೆಯಷ್ಟೆ ಅವರಿಗಿತ್ತು. ಈಗ ಅವರ ಮೇಲಿರುವ ಆರೋಪವಿದೆಯಲ್ಲ, ಆ ರೀತಿ ನಡೆದುಕೊಳ್ಳುವ ಅಧಿಕಾರ(ಶಕ್ತಿ) ಅವರಿಗೆ ಇರಲಿಲ್ಲ. 

ಆದರೆ ಮಾಲೆಗಾಂವ್‌ ಸ್ಫೋಟದಲ್ಲಿ ಬಳಸುವುದಕ್ಕಾಗಿ ನಿಮ್ಮ ಪತಿ ಆರ್‌ಡಿಕ್ಸ್‌ ಪೂರೈಸಿದರು ಎನ್ನುವ ಆರೋಪವಿದೆ. 
-ನಾವು ಮೊದಲ ದಿನದಿಂದಲೂ ಹೇಳುತ್ತಲೇ ಬಂದಿದ್ದೇವೆ. ಆರ್‌ಡಿಎಕ್ಸ್‌ ದಕ್ಕಿಸಿಕೊಳ್ಳುವ ಸಾಧ್ಯತೆಯೇ ಅವರಿಗೆ ಇರಲಿಲ್ಲ. ಮಿಲಿಟರಿ ಇಂಟೆಲಿಜೆನ್ಸ್‌ ಇದೆಯಲ್ಲ, ಅದು ಕಾರ್ಯಾಚರಣೆಯಲ್ಲಿ ಭಾಗವಹಿಸುವುದೇ ಇಲ್ಲ. ಮಾಹಿತಿ ಕಲೆಹಾಕುವುದಷ್ಟೇ ಅದರ ಕೆಲಸ. ಅದರ ಆಧಾರದ ಮೇಲೆ ಇತರೆ ವಿಭಾಗಗಳು ಕಾರ್ಯಾಚರಣೆ ನಡೆಸುತ್ತವೆ. 

ಆದರೆ ಪುರೋಹಿತ್‌ರ ಮನೆಯಲ್ಲಿ ಎರಡು ದಾಖಲೆ ರಹಿತ ಶಸ್ತ್ರಾಸ್ತ್ರಗಳಿದ್ದವು ಎನ್ನುತ್ತವೆ ವರದಿಗಳು…
-ಅವರ ಬಳಿ ಆ ರೀತಿಯ ಯಾವ ಶಸ್ತ್ರಾಸ್ತ್ರವೂ ಇರಲಿಲ್ಲ. ಒಟ್ಟು ಮೂರು ವೆಪನ್‌ಗಳಿದ್ದವು. ಮೂರಕ್ಕೂ ಪರವಾನಗಿಯಿತ್ತು. ಅವನ್ನು ಪರವಾನಗಿಗಳ ಜೊತೆಗೇ ಮಿಲಿಟರಿಗೆ ಸಲ್ಲಿಸಿದ್ದಾರೆ. ಸೇನೆಯ ತನಿಖಾ ನ್ಯಾಯಾಲಯದಲ್ಲಿ ಈ ಆರೋಪ ಸುಳ್ಳೆಂದು ರುಜುವಾತಾಗಿದೆ. 

ಮಹಾರಾಷ್ಟ್ರದ ಅಂದಿನ ಎಟಿಎಸ್‌ ಮುಖ್ಯಸ್ಥ ಹೇಮಂತ್‌ ಕರ್ಕರೆ ರಚಿಸಿದ ಎಫ್ಐಆರ್‌, “ಪುರೋಹಿತ್‌ ಅವರೇ ದೇಶದಲ್ಲಿನ ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಸೃಷ್ಟಿಯಾದ “ಅಭಿನವ ಭಾರತ’ದ ಹಿಂದಿನ ಮಾಸ್ಟರ್‌ ಮೈಂಡ್‌’ ಎನ್ನುತ್ತದೆ.
-ಅಭಿನವ್‌ ಭಾರತ ಪ್ರಕರಣವಿನ್ನೂ ವಿಚಾರಣೆಯಲ್ಲಿದೆ. 

ಎಟಿಎಸ್‌ನ ತನಿಖಾ ವರದಿಯು “ಪುರೋಹಿತ್‌ ಅಭಿನವ ಭಾರತ್‌ ಅನ್ನು ಸ್ಥಾಪಿಸಿ ಆ ತಂಡವನ್ನು ರಾಯಗಢದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್‌ ಕೋಟೆಗೆ ಕರೆದುಕೊಂಡು ಹೋಗಿ ಯಶಸ್ಸಿಗಾಗಿ ಪ್ರಾರ್ಥಿಸಿದರು’ ಎನ್ನುತ್ತದೆ. ಇನ್ನು ತನಿಖಾ ನ್ಯಾಯಾಲಯವೂ ಕೂಡ ನಿಮ್ಮ ಪತಿಯ ಬಳಿ ಶಿವಾಜಿ ಮಹಾರಾಜ್‌ ಕುರಿತ ಅನೇಕ ಪುಸ್ತಕಗಳಿದ್ದವು ಎನ್ನುವುದನ್ನು ಪತ್ತೆಹಚ್ಚಿದೆ.
– ಸತ್ಯವೇನೆಂದರೆ ಇದೆಲ್ಲ ವಿಚಾರಣಾ ನ್ಯಾಯಾಲಯದ ತನಿಖೆಯ ಭಾಗವಾಗಿಯೇ ಇಲ್ಲ.  ಅದಿರಲಿ, ನನ್ನ ಪತಿಯ ಬಳಿ ಶಿವಾಜಿ ಪುಸ್ತಕಗಳಿದ್ದವೋ ಇಲ್ಲವೋ ಎನ್ನುವುದು ಏಕೆ ಮುಖ್ಯವಾಗಬೇಕು? ನನ್ನ ಪ್ರಕಾರ ಮಹಾರಾಷ್ಟ್ರದ 85 ಪ್ರತಿಶತ ಜನರ ಬಳಿ ಶಿವಾಜಿ ಕುರಿತ ಪುಸ್ತಕಗಳಿರುತ್ತವೆ. ಇನ್ನು ನನ್ನ ಪತಿ ಪೇಶ್ವೆಗಳು ಮತ್ತು ಮರಾಠರ ಇತಿಹಾಸವನ್ನೂ ಬಹಳಷ್ಟು ಓದಿಕೊಂಡಿದ್ದಾರೆ. ಮರಾಠಾ ಹೋರಾಟಗಾರರು ಅನುಸರಿಸಿದ ತಂತ್ರಗಳನ್ನು ಅವರು ಬಳಸಿಕೊಳ್ಳುತ್ತಿದ್ದರು. ಅಮೆರಿಕನ್‌ ಸೇನೆಯಲ್ಲೂ ಬಾಜಿರಾವ್‌ ಪೇಶ್ವೆ ಮತ್ತು ಆತನ ಯುದ್ಧ ತಂತ್ರಗಳ ಬಗ್ಗೆ ನಿರ್ದಿಷ್ಟ ಕೋರ್ಸ್‌ ಇದೆ. ಏಕೆಂದರೆ ಒಂದೇ ಒಂದು ಯುದ್ಧವನ್ನೂ ಸೋಲದ ಸೇನಾ ಮುಖ್ಯಸ್ಥನಾಗಿದ್ದ ಬಾಜಿರಾವ್‌.  ನನ್ನ ಪತಿ ಮರಾಠಾ ಲೈಟ್‌ ಇನೆ#ಂಟ್ರಿಗೆ ಸೇರಿದವರು. ಅವರಿಗೆ ಮರಾಠಾ ಇತಿಹಾಸ ಗೊತ್ತಿಲ್ಲವೆಂದರೆ ತಮ್ಮ ತಂಡದ ಮುಂದೆ ನಿಲ್ಲುವುದಾದರೂ ಹೇಗೆ?

2015-2016ರಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಪುರೋಹಿತ್‌ ಅಂದಿನ ರಕ್ಷಣಾ ಸಚಿವ ಮನೋಹರ್‌ ಪಾರಿಕ್ಕರ್‌ ಅವರಿಗೆ ಒಂದು ಪತ್ರ ಬರೆಯುತ್ತಾರೆ. ಅದರಲ್ಲಿ ಅವರು “”ನನ್ನ ಘನತೆ ಮತ್ತು ಗೌರವವನ್ನು ದೋಚಲಾಗಿದೆ. ದೇಶ ಸೇವೆ ಮಾಡಿದ್ದಕ್ಕಾಗಿ ನನ್ನನ್ನು ಶಿಕ್ಷಿಸಲಾಗುತ್ತಿದೆ” ಎಂದಿದ್ದರು. ಈಗ ಪುರೋಹಿತ್‌ ಜಾಮೀನಿನ ಮೇಲಿದ್ದಾರೆ, ಹಾಗಿದ್ದರೆ ಅವರ ಘನತೆ ಪುನಃ ದಕ್ಕಿತೇ?
-ನೋಡಿ ಎಲ್ಲಿಯವರೆಗೂ ಅವರು “ನಿರಪರಾಧಿ’ ಎಂದು ತೀರ್ಪು ಬರುವುದಿಲ್ಲವೋ ಅಲ್ಲಿಯವರೆಗೂ ಕಳೆದುಕೊಂಡ ಗೌರವ ಸಿಗುವುದಿಲ್ಲ. ನಮ್ಮ ಮುಂದೆ ಈಗ ದೊಡ್ಡ ಯುದ್ಧವಿದೆ. ನಿಸ್ಸಂಶಯವಾಗಿಯೂ ಅವರಿಗೆ ಮಸಿ ಹತ್ತಿದೆ. ಏಕೆಂದರೆ ಅವರ ವಿರುದ್ಧ ಉಗ್ರವಾದದ ಆರೋಪಗಳಿವೆ. ಸೇನೆಯ ಯಾವುದೇ ಅಧಿಕಾರಿಯಾಗಿರಲಿ, ಈ ರೀತಿಯ ಆರೋಪ ಬಹಳ ಭಯಾನಕವಾದದ್ದು. ಅದರ ಬಗ್ಗೆ ಏನು ಅಂತ ಹೇಳುವುದು. ಆದರೂ ನಾವು ಹೋರಾಡುತ್ತೇವೆ. ಈಗ ನನ್ನ ಪತಿಗೆ ವಾಪಸ್‌ ಸಿಕ್ಕಿರುವುದು ತಮ್ಮ ರ್‍ಯಾಂಕ್‌ ಅಷ್ಟೆ. 

ಸಾಮಾನ್ಯ ನಾಗರಿಕರಿಗೆ ಹೋಲಿಸಿದರೆ ಸೇನೆಯಲ್ಲಿ ಅಧಿಕಾರಿಗಳ ನಿವೃತ್ತಿ ವಯಸ್ಸು ಬಹಳ ಚಿಕ್ಕದು. ಒಂದು ವೇಳೆ ನಿಮ್ಮ ಪತಿ ಇನ್ನೊಂದು 5 ವರ್ಷದಲ್ಲಿ ನಿವೃತ್ತಿಯಾಗುತ್ತಾರೆ ಮತ್ತು ಈ ಪ್ರಕರಣ ಆಗಲೂ ಮುಂದುವರಿದಿರುತ್ತದೆ ಎಂದುಕೊಳ್ಳಿ. ಆಗ ಅವರಿಗೆ ಸೇನೆಯ ಭದ್ರತೆ ಮತ್ತು ಬೆಂಬಲ ಇರುವುದಿಲ್ಲವಲ್ಲ? 
-ನನಗೆ ಆ ಬಗ್ಗೆ ಹೆದರಿಕೆಯೇ ಇಲ್ಲ. ತನಿಖಾ ನ್ಯಾಯಾಲಯದ ಪೇಪರ್‌ಗಳ ಮೂಲಕ ನಾವು ತಪ್ಪು ಮಾಡಿಲ್ಲ ಎನ್ನುವುದನ್ನು ಸಾಬೀತುಪಡಿಸುತ್ತೇವೆ. ನಾನೀಗ ಒಂದು ಪಾಠವನ್ನು ಕಲಿತಿದ್ದೇನೆ. ಪ್ರತಿ ದಿನವನ್ನೂ ದಿಟ್ಟವಾಗಿ ಎದುರಿಸಬೇಕು ಎನ್ನುವ ಪಾಠವದು. 

ಸಂದರ್ಶನ: ಅಪರ್ಣ ಪುರೋಹಿತ್‌

ಟಾಪ್ ನ್ಯೂಸ್

Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ

Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ

ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Siddu–kanaka

Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ

PCB: Five coaches in a year; Aaqib Javed has been selected as Pakistan’s white ball coach

PCB: ಒಂದು ವರ್ಷದಲ್ಲಿ ಐದು ಕೋಚ್; ‌ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್‌ ಜಾವೇದ್ ಆಯ್ಕೆ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…ಡ್ರೋನ್‌ ಏರ್‌ಟ್ಯಾಕ್ಸಿ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ

ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Australia’s assistant coach to skip Perth test because of the IPL auction!

BGT 2024: ಐಪಿಎಲ್‌ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ

Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ

ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Siddu–kanaka

Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ

PCB: Five coaches in a year; Aaqib Javed has been selected as Pakistan’s white ball coach

PCB: ಒಂದು ವರ್ಷದಲ್ಲಿ ಐದು ಕೋಚ್; ‌ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್‌ ಜಾವೇದ್ ಆಯ್ಕೆ

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.