ಸುದ್ದಿ ಪ್ರವಾಹದಲ್ಲಿ ನಕಲಿಯದ್ದೇ ಮೇಲುಗೈ
Team Udayavani, Oct 6, 2018, 12:30 AM IST
ನಕಲಿ ಸುದ್ದಿಗಳು ಸಾಮಾಜಿಕ ತಾಲತಾಣಗಳ ಅಗ್ರಜರಾದ ವ್ಯಾಟ್‌ಆಪ್, ಫೇಸ್‌ಬುಕ್, ಟ್ವೀಟರ್‌ಗಳಿಗೆ ಅಂಟಿದ ಶಾಪವಾಗಿದೆ. ನಾವು ನ್ಯಾಯ ಯುತವಾದ ಬಳಕೆಗೆ ಮನಸ್ಸು ಮಾಡಿದರೆ ಮುಂಬರುವ ದಿನಗಳಲ್ಲಿ ಕಾನೂನಿಗೆ ಉತ್ತರಿಸಬೇಕಾದ ಅನಿ ವಾರ್ಯತೆಯಿಂದ ಪಾರಾಗಬಹುದು. ಇಲ್ಲದೇ ಹೋದರೆ ಕೈಗೆ ಕೋಳ ತೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ಇತ್ತೀಚಿನ ದಿನಗಳಲ್ಲಿ ನಕಲಿ ಪೋಸ್ಟ್‌ಗಳು ಮತ್ತು ಮಾನಹಾನಿ ಮಾಡುವಂತಹ ಸಂದೇಶಗಳ ಹರಿದಾಟ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತವಾಗುತ್ತಿದೆ. ಈ ಬೆಳವಣಿಗೆ ಮುಂದೊಂದು ದಿನ ಭಾರೀ ಅಪಾಯವನ್ನು ತಂದೊಡ್ಡಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಹಿಂದೆ “ಮಕ್ಕಳ ಕಳ್ಳರ’ ಸುಳ್ಳು ಸುದ್ದಿಯಿಂದಾಗಿ ದೇಶಾದ್ಯಂತ ಸಂಭವಿಸಿದ ಸಮೂಹ ಥಳಿತ, ಸಾವುಗಳೇ ಇದಕ್ಕೆ ಸಾಕ್ಷಿ.
ಈ ಎಲ್ಲ ಚಟುವಟಿಕೆಗಳು ನಡೆಯುತ್ತಿರುವುದು ಅಗ್ರಪಂಕ್ತಿಯಲ್ಲಿ ಗುರುತಿಸಿಕೊಂಡ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್‌ಆ್ಯಪ್ ಹಾಗೂ ಟ್ವೀಟರ್‌ಗಳಲ್ಲಿ. ಸ್ವಲ್ಪ ಗುಣಮಟ್ಟದ ಬಳಕೆದಾರರನ್ನು ಹೊಂದಿರುವ ಟ್ವೀಟರ್‌ನಲ್ಲಿ ನಕಲಿ ಸುದ್ದಿಗಳು ಅಷ್ಟಾಗಿ ಇರುವುದಿಲ್ಲ. ಆದರೆ ಜನಪ್ರಿಯ ಫೇಸ್‌ಬುಕ್ ಹಾಗೂ ವಾಟ್ಸ್‌ಆ್ಯಪ್‌ಗ್ಳಲ್ಲಿ ನಕಲಿ ಸುದ್ದಿಗಳು ಮೇಳೈಸುತ್ತಿವೆ ಎಂಬುದನ್ನು ಬೇಸರವಾದರೂ ಒಪ್ಪಿಕೊಳ್ಳಲೇಬೇಕಿದೆ. ಇಂತಹ ಜಾಲತಾಣಗಳು ಇಂದು ಭಾಷಣಗಳ, ಚರ್ಚೆಗಳ ಪ್ರಮುಖ ವಸ್ತುವಾಗಿವೆ. ಸಭೆ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜಾಲತಾಣಗಳ ವಿರುದ್ಧ ಆಕ್ರೋಶದ ಮಾತು ಕೇಳಿಬರುತ್ತಿದೆ. ಕೆಲವು ಕೆಟ್ಟ ಕೈಗಳಿಂದಾಗಿ ಇಂದು ಸಾಮಾಜಿಕ ಜಾಲತಾಣ ತನ್ನ ಆಶಯದಿಂದ ವಿಮುಖಗೊಂಡಿದೆ.
ದುರಂತವೆಂದರೆ ನಕಲಿ ಸುದ್ದಿ ಹರಿಬಿಡುವುದರಲ್ಲಿ ಅಕ್ಷರಸ್ಥ ಯುವ ಸಮುದಾಯವೇ ಮುಂದಿದೆ. ಶಿಕ್ಷಣದಿಂದ ಆಲೋಚನಾ ಲಹರಿ ಉನ್ನತಿಯನ್ನು ಕಾಣಬಹುದು ಎಂಬ ಮಾತು ಮಿಥ್ಯವಾಗುತ್ತಿದೆ. ತಾರ್ಕಿಕ ಆಲೋಚನೆಯೇ ಇಲ್ಲದೇ ಅಂಧರಾಗಿ (ಬ್ಲೆ„ಂಡ್) ಬಂದ ಸುದ್ದಿಗಳನ್ನು ಫಾರ್ವರ್ಡ್ ಮಾಡುವುದರಲ್ಲಿ ಇಂದು ಯುವ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವುಗಳಿಗೆ ಕಾರಣಗಳನ್ನು ಹುಡುಕುವ ಪ್ರಯತ್ನ ಆಗಬೇಕಿದೆ. ಎಲ್ಲಿ ಆರಂಭ?
ನ್ಯೂ-ಮೀಡಿಯಾ ಮುಖ್ಯಭೂಮಿಕೆಗೆ ಆಗಮಿಸಿದ ಬಳಿಕ ಸುದ್ದಿಗಳ ಸಂಗ್ರಹ ಜಾಸ್ತಿಯಾಯಿತು. ಆರಂಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ನವ ಮಾಧ್ಯಮಗಳು ಇಂದು ನಕಲಿ ಸುದ್ದಿಗಳ ಬ್ಯಾಂಕ್ ಆಗಿವೆ. (ಆದರೆ ನಮ್ಮಲ್ಲಿ ಕೆಲವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನ್ಯೂ-ಮಿಡಿಯಾಗಳೂ ಇವೆ) ಪರಿಣಾಮವಾಗಿ ಪತ್ರಿಕೆಗಳನ್ನು ಓದುವುದು ಬಿಡಿ, ನೋಡುವ ಕಣ್ಣುಗಳೂ ಕಡಿಮೆಯಾದವು. ಇದರಿಂದ ನೋಡುವುದಕ್ಕೂ ಹಾಗೂ ವಾಸ್ತವ (ಅಪಿಯರೆನ್ಸ್ ಆ್ಯಂಡ್ ರಿಯಾಲಿಟಿ)ಗೆ ಇರುವ ವ್ಯತ್ಯಾಸವನ್ನು ಅರಿತುಕೊಳ್ಳುವುದರಿಂದ ಜನ ವಂಚಿತರಾದರು. ಪರಿಣಾಮವಾಗಿ ಕಂಡದೆಲ್ಲವೂ ಸತ್ಯ ಎಂಬ ಕೆಟ್ಟ ನಂಬಿಕೆಯೇ ಬಲವಾಯಿತು.
ಪೇಯ್ಡ ನಕಲಿ ಸುದ್ದಿಗಳು
ಇಂದು ಪೇಯ್ಡ ನಕಲಿ ಸುದ್ದಿಗಳು ಎಂಬ ಅತೀ ಅಪಾಯದ ವಹಿವಾಟು ಆರಂಭವಾಗಿದೆ. ಇವುಗಳು ಸಾಮಾಜಿಕ ಜಾಲಾತಾಣಗಳಲ್ಲಿ ಅತ್ಯಂತ ಹೆಚ್ಚು ಸಕ್ರಿಯವಾಗಿ ತನ್ನ “ಟಾರ್ಗೆಟ್ ಆಡಿಯನ್ಸ್’ ಅನ್ನು ತಲುಪುವ ಕೆಲಸ ಮಾಡುತ್ತಿವೆ. ಇದರಿಂದ ಯಾವುದು ನೈಜ ಸುದ್ದಿ, ಯಾವುದು ನಕಲಿ ಸುದ್ದಿ ಎಂದು ಓದುಗ ದೃಢ ನಿರ್ಧಾರಕ್ಕೆ ಬರಲಾಗದೇ ಅದರ ದಾಸನಾಗಿ ಬಿಡುತ್ತಾನೆ. ಪದೇ ಪದೇ ಆ ನಿರ್ದಿಷ್ಟ ಸುದ್ದಿಯ ಖಾತೆಗೆ ಭೇಟಿ ನೀಡಿ ಅಲ್ಲಿರುವ ಒಂದಷ್ಟು ಸುದ್ದಿಗಳನ್ನು, ಅವುಗಳ ಲಿಂಕ್‌ಗಳನ್ನು ಶೇರ್ ಮಾಡುತ್ತಾನೆ. ಇದರಿಂದ ಓದುಗರ ಅಭಿರುಚಿ ನೈಜತೆಗಿಂತ ಕಪೋಲಕಲ್ಪಿತವಾಗುತ್ತದೆ ಹಾಗೂ ಬಾಹ್ಯ ಮೂಲಗಳಿಂದ ಪ್ರಭಾವಿತ ಸುದ್ದಿಗಳು ಹೆಚ್ಚು ಕಲರ್‌ಫುಲ್ ಆಗಿ ಕಾಣಿಸುತ್ತವೆ.
ಅಜಮಾಸು 60 ಪ್ರತಿಶತದಷ್ಟು ನಕಲಿ ಸುದ್ದಿಗಳು ರಾಜಕೀಯ ಪಕ್ಷಗಳ ಖಾತೆಗಳಿಂದಲೇ ಹರಿದಾಡುತ್ತಿವೆ. ರಾಜಕೀಯ ಪಕ್ಷಗಳ ಐಟಿ ಸೆಲ್‌ಗಳೂ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಂತಹ ಫೇಕ್ ಸುದ್ದಿಗಳನ್ನು ಹೆಚ್ಚು ಪ್ರಸಾರ ಮಾಡುತ್ತಿವೆ. ಆಡಳಿತ ಪಕ್ಷ ವಿಪಕ್ಷಗಳ ಮೇಲೆ, ವಿಪಕ್ಷಗಳು ಆಡಳಿತದ ವಿರುದ್ಧ ಬಹಳಷ್ಟು ನಕಲಿ ಸುದ್ದಿಯನ್ನು ಸೃಷ್ಟಿಸಿ ಹರಿಬಿಡುತ್ತವೆ. ಆದರೆ ಮುಗª ಬಳಕೆದಾರರಿಗೆ ಸುಳ್ಳೆಲ್ಲವೂ ಸತ್ಯವೆನಿಸಿಬಿಡುತ್ತದೆ.
ಬಹುತೇಕ ನ್ಯೂಸ್ ಚಾನೆಲ್‌ಗಳು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಕಾರ್ಯಕ್ರಮಗಳನ್ನು “ಲೈವ್ ಸ್ಟ್ರೀಮ್’ ಮಾಡುತ್ತಿವೆ. ರಾಜಕೀಯ ಪಕ್ಷಗಳ ಸುದ್ದಿಗಳು ಬಂದ ಸಂದರ್ಭದಲ್ಲಿ ಸಾಮಾಜಿಕ ತಾಣಗಳಲ್ಲಿ ಮೆಸೇಜ್‌ಗಳು, ವೃಥಾರೋಪಗಳು, ನಕಲಿ, ಇಲ್ಲಸಲ್ಲದ ಆರೋಪಗಳು ಹರಿದಾಡುತ್ತಿವೆ. ಇಂತಹ ಚಟುವಟಿಕೆಯಲ್ಲಿ ಯುವಕರೇ, ಅದರಲ್ಲೂ ವಿದ್ಯಾವಂತ ಯುವಕರೇ ಹೆಚ್ಚಿರುವುದು ಶಿಕ್ಷಣ ವ್ಯವಸ್ಥೆಯನ್ನು ನಾಚುವಂತೆ ಮಾಡಿದೆ. ವಿದ್ಯಾವಂತರಿಗೂ ಅವಿದ್ಯಾವಂತರಿಗೂ ಸಾಮಾಜಿಕ ಜಾಲತಾಣಗಳು ಭಿನ್ನವಾಗಿಲ್ಲ. ಈ ಇಬ್ಬರು ಬಳಸುವ ವಿಧಾನಗಳಲ್ಲೂ ವ್ಯತ್ಯಾಸ ಇಲ್ಲ.
ಇದೊಂದು ಗಂಭೀರ ವಿಷಯವಾಗಿದ್ದು, ರಾಜಕೀಯ ಲಾಭಕ್ಕಾಗಿ, ಪೂರ್ವಗ್ರಹ ಪೀಡಿತರಾಗಿ ಇಂತಹ ಹಿತಾಸಕ್ತಿಯನ್ನು ಅಪ್ಪಿಕೊಂಡರೆ ಮುಂದೊಂದು ದಿನ ಅದು ಸೃಷ್ಟಿದವನನ್ನೇ ಸುಡುವ ಭಸ್ಮಾಸುರನಾಗಬಹುದು. ಈ ನಿಟ್ಟಿನಲ್ಲಿ ಸರ್ಕಾರ ಏನು ಮಾಡಬಹುದು?
1.ರಾಜಕೀಯ ಪಕ್ಷಗಳ ಹೆಸರಿನಿಂದ ಹರಿಯುವ ನಕಲಿ ಸುದ್ದಿಗಳ ಮೇಲೆ ಸೈಬರ್ ವಿಭಾಗ ಕಣ್ಣಿಡಬೇಕು. ಸೈಬರ್ ಇಲಾಖೆಗೆ ಸಹಕಾರ ಆಗುವಂತಹ ಕಾನೂನಿನ ಅವಕಾಶಗಳನ್ನು ಸರಕಾರಗಳು ಮಾಡಿಕೊಡಬೇಕು. ಈಗಿರುವ ಕಾನೂನಿನ ತೊಡಕನ್ನು ನಿವಾರಿಸಬೇಕು.
2.ಟ್ರೋಲ್‌ಗಳ ಮೇಲೆ ಕಣ್ಣಿಡಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಎಂಬ ಮಾತು ಕೇಳಿಬಂದರೆ, ಆಯಾ ತಾಣಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳನ್ನು ಬಳಕೆದಾರಿಗೆ ಮನವರಿಕೆ ಮಾಡಿಕೊಡಬೇಕು.
3.ಸುದ್ದಿ ನೀಡುವ ಹೆಸರಿನೊಂದಿಗೆ ಸ್ಥಾಪಿತ ವಾದ ಕೆಲವು ಸಂಸ್ಥೆಗಳು ಬರೀ ನಕಲಿ ಸುದ್ದಿಗಳನ್ನೇ ಬಿತ್ತರ ಮಾಡುತ್ತಿವೆ. ಇಂಥವುಗಳಿಗೆ ಕಡಿವಾಣ ಬೀಳಬೇಕು. ಮುಖ್ಯವಾಗಿ ನಕಲಿ ಸುದ್ದಿಗಳು ಹೊರಬೀಳುವುದೇ ಇಂಥ ವೆಬ್‌ಸೈಟ್‌ಗಳಿಂದ. ಇವುಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸುವಂತಾಗಬೇಕು.
ಕಾರ್ತಿಕ್ ಅಮೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.