ದೇಶದಲ್ಲಿ ಆಕ್ಸಿಜನ್‌ ಆಪರೇಷ‌ನ್‌


Team Udayavani, Apr 24, 2021, 6:10 AM IST

ದೇಶದಲ್ಲಿ ಆಕ್ಸಿಜನ್‌ ಆಪರೇಷ‌ನ್‌

ದೇಶಾದ್ಯಂತ ಆಮ್ಲಜನಕ ಕೊರತೆಯಾಗಿ ಆಸ್ಪತ್ರೆಗಳು ಭಾರೀ ಸಂಕಷ್ಟ ಎದುರಿಸುತ್ತಿವೆ. ಕೆಲವೊಂದು ಆಸ್ಪತ್ರೆಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಸಿಗದೇ ಕೊರೊನಾ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಇದನ್ನು ಮನಗಂಡು, ಟಾಟಾ ಕಂಪೆನಿ,
ರಿಲಯನ್ಸ್‌ ಹಾಗೂ ದೇಶದ ವಾಯು ಸೇನೆಯ ಯುದ್ಧ ವಿಮಾನಗಳೇ ಆಮ್ಲಜನಕ ಪೂರೈಕೆ ಮತ್ತು ಸಾಗಾಟಕ್ಕೆ ಟೊಂಕ ಕಟ್ಟಿ ನಿಂತಿವೆ. ಹೀಗಾಗಿ ಆಮ್ಲಜನಕ ಸರಬರಾಜಿಗಾಗಿ ಹಗಲು ಇರುಳು ಶ್ರಮಿಸುತ್ತಿವೆ. ಅಷ್ಟೇ ಅಲ್ಲ, ಭಾರತೀಯ ರೈಲ್ವೇಯೂ ಆಮ್ಲಜನಕ ಹೊತ್ತ ಲಾರಿಗಳನ್ನೇ ತನ್ನ ಹಳಿಗಳ ಮೇಲೆ ಒಂದು ಕಡೆಯಿಂದ ಮತ್ತೂಂದು ಕಡೆಗೆ ಸಾಗಿಸುವಲ್ಲಿ ನೆರವಾಗುತ್ತಿದೆ.

ಐಎಎಫ್ ವಿಮಾನಗಳ ಜತೆಗೆ ಜನರನ್ನು ಹೊತ್ತೂಯ್ಯುವ ವಿಮಾನಗಳೂ ಆಮ್ಲಜನಕ ಸಾಗಾಟದಲ್ಲಿ ಕೈಜೋಡಿಸಿವೆ. ಒಟ್ಟಾರೆಯಾಗಿ ದೇಶ ಸಂಕಷ್ಟದ ಸ್ಥಿತಿ ಅನುಭವಿಸುತ್ತಿರುವ ಹೊತ್ತಲ್ಲೇ ಈ ಎಲ್ಲವೂ ಆಕ್ಸಿಜನ್‌ ಆಪರೇಷನ್‌ ಅನ್ನು ನಡೆಸುತ್ತಿವೆ.

ಟಾಟಾ ಮತ್ತು ರಿಲಯನ್ಸ್‌
ಟಾಟಾ ಗ್ರೂಪ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. ವೈದ್ಯಕೀಯ ಆಮ್ಲಜನಕ ಅಥವಾ ದ್ರವ ಆಮ್ಲಜನಕದ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ಸರಕಾರದೊಂದಿಗೆ ಕೈಜೋಡಿಸಿವೆ. ಆಕ್ಸಿಜನ್‌ ಕೊರತೆಯನ್ನು ನೀಗಿಸಲು ದ್ರವ ಆಮ್ಲಜನಕವನ್ನು ಸಾಗಿಸಲು 24 ಕ್ರಯೋಜೆನಿಕ್‌ ಕಂಟೇನರ್‌ ಆಮದು ಮಾಡಿಕೊಳ್ಳುವುದಾಗಿ ಟಾಟಾ ಹೇಳಿದೆ. ಸದ್ಯ ದೇಶದಲ್ಲಿ ಆಮ್ಲಜನಕ ಸಾಗಾಟದ್ದೇ ಬಲುದೊಡ್ಡ ಸಮಸ್ಯೆ. ತಿಂಗಳಾಂತ್ಯದಲ್ಲಿ 38 ಕಂಟೇನರ್‌ ಹೊಂದಲು ಟಾಟಾ ಸಮೂಹ ಸಂಸ್ಥೆ ಉದ್ಧೇಶಿಸಿದೆ. ಅಗತ್ಯವಿರುವ ಟ್ಯಾಂಕರ್‌ಗಳು ಲಭ್ಯವಾದ ಬಳಿಕ ದ್ರವ ಆಮ್ಲಜನಕದ ಪೂರೈಕೆಯನ್ನು 700 ಮೆಟ್ರಿಕ್‌ ಟನ್‌ಗಳಿಗೆ ಹೆಚ್ಚಿಸಲು ಟಾಟಾ ಸ್ಟೀಲ್‌ ಯೋಚಿಸಿದೆ.

ಇನ್ನು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ…) ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್‌ಗೆ ದಿನಕ್ಕೆ 700 ಮೆಟ್ರಿಕ್‌ ಟನ್‌ ದ್ರವ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲು ಬದ್ಧವಾಗಿರುವುದಾಗಿ ಹೇಳಿದೆ. ಆರ್‌ಐಎಲ್‌ ತನ್ನ ಜಾಮ್‌ನಗರ್‌ ತೈಲ ಸಂಸ್ಕರಣಾಗಾರಗಳಲ್ಲಿ ದಿನಕ್ಕೆ 700 ಟನ್‌ಗಳಷ್ಟು ವೈದ್ಯಕೀಯ ಆಮ್ಲಜನಕವನ್ನು ಉತ್ಪಾದಿಸಲು ನಿರ್ಧರಿಸಿದೆ. ಇದನ್ನು ಕೋವಿಡ್‌ -19 ಭಾದಿತ ರಾಜ್ಯಗಳಿಗೆ ಹಸ್ತಾಂತರಿಸಲಾಗುತ್ತದೆ. ಒಟ್ಟು ಉತ್ಪಾದನ ಸಾಮರ್ಥ್ಯವನ್ನು ದಿನಕ್ಕೆ 1,000 ಟನ್‌ಗಳಿಗೆ ಹೆಚ್ಚಿಸಲು ಕಂಪೆನಿ ನಿರ್ಧರಿಸಿದೆ.

ಜಿಂದಾಲ್‌ ಸ್ಟೀಲ್‌ ಮತ್ತು ಪವರ್‌: ಜಿಂದಾಲ್‌ ಸ್ಟೀಲ್‌ ಮತ್ತು ಪವರ್‌ 500 ಮೆಟ್ರಿಕ್‌ ಟನ್‌ ಆಮ್ಲಜನಕವನ್ನು ಪೂರೈಸಲು ಮುಂದಾಗಿದೆ. ಅದನ್ನು ಅಗತ್ಯವಿರುವ ಆಸ್ಪತ್ರೆಗಳಿಗೆ ರವಾನಿಸಲಿದೆ.

ಆಮ್ಲಜನಕ ಸ್ಥಾವರ ನಿರ್ಮಾಣ
ಕಾರ್ಪೋರೆಟ್‌ ರಸಗೊಬ್ಬರ ತಯಾರಿಕ ಸಂಸ್ಥೆ ಇಪ್ಕೋ ಮೂಲಕ ಮುಂದಿನ 15 ದಿನಗಳಲ್ಲಿ ಸುಮಾರು 30 ಕೋಟಿ ರೂ.ಗಳ ವೆಚ್ಚದಲ್ಲಿ ನಾಲ್ಕು ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುವುದಾಗಿ ತಿಳಿಸಿದೆ. ಉತ್ತರ ಪ್ರದೇಶ, ಗುಜರಾತ್‌ ಮತ್ತು ಒಡಿಶಾದಲ್ಲಿ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗುತ್ತದೆ. ಮತ್ತೂಂದು ಕಂಪೆನಿ ಪಾರದೀಪ್‌ ಫಾಸೆ#àಟ್ಸ್‌ ಲಿಮಿಟೆಡ್‌ (ಪಿಪಿಎಲ…) ಒಡಿಶಾದ ವಿವಿಧ ಆರೋಗ್ಯ ಸೌಲಭ್ಯಗಳಲ್ಲಿ ಮೂರು ಪ್ರಶರ್‌ ಸ್ವಿಂಗ್‌ ಆಡ್ಸೋರ್‌ಪ್ಷನ್‌ (ಪಿಎಸ್‌ಎ) ಆಮ್ಲಜನಕ ಉತ್ಪಾದನ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಇನ್ನು ಎಂಐ ಇಂಡಿಯಾ, ದೇಶಾದ್ಯಂತ ಆಸ್ಪತ್ರೆಗಳಿಗೆ 1,000ಕ್ಕಿಂತ ಹೆಚ್ಚು ಆಮ್ಲಜನಕ ಸಾಂದ್ರಕಗಳನ್ನು ಸಂಗ್ರಹಿಸಲು 3 ಕೋಟಿ ರೂ. ನೀಡುವುದಾಗಿ ಹೇಳಿದೆ.

ಪೆಟ್ರೋಲಿಯಂ ಸಂಸ್ಥೆಗಳ ಸಾಥ್‌
ಕೆಲವು ಸರಕಾರಿ ಸ್ವಾಮ್ಯದ ಕಂಪೆನಿಗಳಾದ ಇಂಡಿಯನ್‌ ಆಯಿಲ್‌ ಕಾರ್ಪೋರೆಷನ್‌ (ಐಒಸಿ) ಮತ್ತು ಭಾರತ್‌ ಪೆಟ್ರೋಲಿಯಂ ಕಾರ್ಪೋರೆಷನ್‌ ಲಿಮಿಟೆಡ್‌ (ಬಿಪಿಸಿಎಲ…) ಸಹ ತಮ್ಮ ಸಂಸ್ಕರಣಾಗಾರಗಳಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆಯನ್ನು ಎದುರಿಸುತ್ತಿರುವ ರಾಜ್ಯಗಳಿಗೆ ನೀಡುವುದಾಗಿ ಹೇಳಿದೆ. ದಿಲ್ಲಿ, ಹರಿಯಾಣ ಮತ್ತು ಪಂಜಾಬ್‌ನ ವಿವಿಧ ಆಸ್ಪತ್ರೆಗಳಿಗೆ ಐಒಸಿ ಉಚಿತವಾಗಿ 150 ಟನ್‌ ದ್ರವ ಆಮ್ಲಜನಕವನ್ನು ಪೂರೈಸಲು ಪ್ರಾರಂಭಿಸಿತ್ತು. ಬಿಪಿಸಿಎಲ್‌ ಕೂಡ ದಿನಕ್ಕೆ 100 ಟನ್‌ ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಪೂರೈಸುತ್ತಿದೆ.

ಕೇರಳದಲ್ಲಿ ಆಮ್ಲಜನಕ ಸಮಸ್ಯೆ ಇಲ್ಲ
ಪ್ರಸ್ತುತ ದೇಶದಲ್ಲಿ ಹೆಚ್ಚುವರಿ ಆಮ್ಲಜನಕವನ್ನು ಹೊಂದಿರುವ ಏಕೈಕ ರಾಜ್ಯ ಕೇರಳ. ಇದಕ್ಕೆ ಒಂದು ಕಾರಣವೆಂದರೆ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತ ಸಂಸ್ಥೆ(ಪೆಸೊ) ಮತ್ತು ರಾಜ್ಯ ಆರೋಗ್ಯ ಇಲಾಖೆಯು ಪ್ರತೀ ರೋಗಿಯ ಆಮ್ಲಜನಕದ ಅಗತ್ಯವನ್ನು ಲೆಕ್ಕಹಾಕಿ ಖಚಿತಪಡಿಸಿಕೊಂಡಿದೆ. ಕಳೆದ ವರ್ಷದ ಮಾರ್ಚ್‌ 23ರಿಂದ ಆಮ್ಲಜನಕದ ಉತ್ಪಾದನ ಘಟಕಗಳು ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದನೆಯನ್ನು ಆರಂಭಿಸಿದ್ದವು. ಕೇರಳವು ದಿನಕ್ಕೆ 204.75 ಟನ್‌ ವೈದ್ಯಕೀಯ ಆಮ್ಲಜನಕವನ್ನು ಉತ್ಪಾದಿಸುತ್ತದೆ. ಇದರಲ್ಲಿ ದಿನಕ್ಕೆ 35 ಟನ್‌ ಕೋವಿಡ್‌ ಪ್ರಕರಣಕ್ಕೆ ಮತ್ತು ಕೋವಿಡ್‌ ಅಲ್ಲದ ಆರೈಕೆ ಘಟಕಗಳು ದಿನಕ್ಕೆ 45 ಟನ್‌ಗಳನ್ನು ಬಳಸುತ್ತಿವೆ. ಕಳೆದ ವರ್ಷ ಕೋವಿಡ್‌ ಮತ್ತು ಕೋವಿಡ್‌ ಅಲ್ಲದ ಎರಡೂ ಕಾರಣಗಳಿಂದಾಗಿ ಬೇಡಿಕೆ ದಿನಕ್ಕೆ 100 ಟನ್‌ ಆಗಿತ್ತು. ಕೇರಳ ತನ್ನ ವೈದ್ಯಕೀಯ ಆಮ್ಲಜನಕವನ್ನು ವಿವಿಧ ರಾಜ್ಯ ಮತ್ತು ಕೇಂದ್ರ ಪಿಎಸ್‌ಯುಗಳ ಮೂಲಕ ಉತ್ಪಾದಿಸುತ್ತದೆ.

ಐಎಎಫ್, ವಿಮಾನಯಾನ ಕಂಪೆನಿಗಳಿಂದ ಸಾಗಾಟಕ್ಕೆ ನೆರವು
ಭಾರತೀಯ ವಾಯುಪಡೆಯು ತನ್ನ ಮೂರು ವಿಮಾನಗಳನ್ನು ಪಶ್ಚಿಮ ಬಂಗಾಲದ ಪಾನಘರ್‌ಗೆ ಕಳುಹಿಸಿದೆ. ಈ ವಿಮಾನಗಳನ್ನು ವೈದ್ಯಕೀಯ ಸಿಬಂದಿ, ಆಮ್ಲಜನಕ ಕಂಟೇನರ್‌ಗಳು, ಸಿಲಿಂಡರ್‌ಗಳು, ಟ್ರಾಲಿಗಳು ಮತ್ತು ಅಗತ್ಯ ಔಷಧಗಳನ್ನು ಅಗತ್ಯವಿರುವ ಸ್ಥಳಗಳಿಗೆ ನಿಯೋಜಿಸಲಾಗುವುದು.

ಇನ್ನು ಪ್ರಯಾಣಿಕ ವಿಮಾನಯಾನ ಸಂಸ್ಥೆಗಳು ಕೂಡ ಸರಕಾರಗಳಿಗೆ ನೆರವಾಗುತ್ತಿವೆ. ಸರಕು ಸಾಗಣೆ ಬೇಡಿಕೆಯನ್ನು ಪೂರೈಸಲು ಹೆಚ್ಚಿನ ವಿಮಾನಗಳನ್ನು ಮೀಸಲಿರಿಸಲಾಗಿದೆ. ಇಂಡಿಗೋ ಪ್ರಸ್ತುತ ಲಸಿಕೆ ಸಾಗಣೆ ಯಲ್ಲಿ ಮುಂಚೂಣಿಯಲ್ಲಿದೆ. ಪುಣೆ, ಹೈದರಾಬಾದ್‌ ಮತ್ತು ಮುಂಬಯಿ ಪ್ರಮುಖ ಲಸಿಕೆ ಉತ್ಪಾದನ ಕೇಂದ್ರಗಳಿಂದ ಜನವರಿ 12ರಿಂದ ಎಪ್ರಿಲ್‌ 12ರ ವರೆಗೆ 81,437 ಕೆ.ಜಿ. ಕೋವಿಡ್‌ ಲಸಿಕೆಯನ್ನು ಸಾಗಿಸಲಾಗಿದ್ದು, ಲಸಿಕೆ ಸಾರಿಗೆ ವಿಭಾಗದಲ್ಲಿ ಶೇ. 36.6ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ ಎಂದು ಇಂಡಿಗೋ ತಿಳಿಸಿದೆ.

ಏತನ್ಮಧ್ಯೆ ಏರ್‌ ಏಷ್ಯಾ ಇಂಡಿಯಾ ಇಲ್ಲಿಯವರೆಗೆ 50 ಟನ್‌ ಲಸಿಕೆ ಸಾಗಿಸಿದೆ. ಸುಮಾರು 17 ಮಿಲಿಯನ್‌ ಡೋಸ್‌ ಅಥವಾ ದೇಶಾದ್ಯಂತ ಸಾಗಿಸ ಲಾದ ಒಟ್ಟು ಲಸಿಕೆಗಳಲ್ಲಿ ಸುಮಾರು ಶೇ. 18-20ರಷ್ಟನ್ನು ಸಾಗಿಸಿದೆ ಎಂದು ಕಂಪೆನಿ ತಿಳಿಸಿದೆ. ಇಂಡಿಗೋ ಮತ್ತು ಸೈಸ್‌ಜೆಟ್‌ ಲಸಿಕೆ ಸಾಗಣೆಗೆ ಸರಕು ವಿಮಾನಗಳನ್ನು ಮೀಸಲಿಟ್ಟರೆ ಇತರ ವಿಮಾನ ಯಾನ ಸಂಸ್ಥೆಗಳು ತಮ್ಮ ಪ್ರಯಾಣಿಕರ ವಿಮಾನಗಳ ಜಾಗವನ್ನು ಬಳಸಿಕೊಳ್ಳುತ್ತವೆ. 280ಕ್ಕೂ ಹೆಚ್ಚು ವಿಮಾನ ಗಳನ್ನು ಹೊಂದಿರುವ ಇಂಡಿಗೋ, ತನ್ನ 10 ಪ್ರಯಾಣಿಕ ವಿಮಾನಗಳನ್ನು ಸರಕು ಸಾಗಣೆಗೆ ಬಳಸಿಕೊಳ್ಳಲಾರಂಭಿಸಿದೆ. ಸ್ಪೈಸ್‌ಜೆಟ್‌ 19 ಸರಕು ವಿಮಾನಗಳನ್ನು ಹೊಂದಿದ್ದು, ಇದರಲ್ಲಿ ಬೋಯಿಂಗ್‌ 737, ಮತ್ತು ಕ್ಯೂ 400 ವಿಮಾನಗಳು ಸೇರಿವೆ.

ಟಾಪ್ ನ್ಯೂಸ್

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maha Kumbh Mela 2025: ಛತ್ತೀಸ್‌ ಗಢ ಟು ಪ್ರಯಾಗ್‌ ರಾಜ್;‌ ಸ್ಕೇಟಿಂಗ್‌ ಮೂಲಕ ಕುಂಭಮೇಳಕ್ಕೆ ಆಗಮಿಸಿದ ಯುವಕ

Maha Kumbh: ಛತ್ತೀಸ್‌ ಗಢ ಟು ಪ್ರಯಾಗ್‌;‌ ಸ್ಕೇಟಿಂಗ್‌ ಮೂಲಕ ಕುಂಭಮೇಳಕ್ಕೆ ಆಗಮಿಸಿದ ಯುವಕ

mahatma-gandhi

Belagavi Congress Session: “ತ್ರಿಸೂತ್ರ’ವೇ ನವಭಾರತದ ಮಂತ್ರ!

Work-Time

Work Time Issue: ವಾರಕ್ಕೆ 90 ಗಂಟೆ ಕೆಲಸ ಸಲೀಸಾ?

Jalachara-4

Winter Season: ಚಳಿಗಾಲದಲ್ಲಿ ಕಡಲಿಗೆ ಇಳಿಯುವ ಮುನ್ನ…

CO2

ಶೂನ್ಯ ಇಂಗಾಲದ ಗುರಿ: ಜಾಗತಿಕ ಸಹಭಾಗಿತ್ವ ಅಗತ್ಯ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

14

Sullia: ಚರಂಡಿಯಲ್ಲಿ ಸಿಲುಕಿದ ಶಾಲಾ ವಾಹನ

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.