ನೇಪಥ್ಯಕ್ಕೆ ಸರಿದ ಪದಯಾನ ಪುರುಷ


Team Udayavani, Oct 13, 2021, 5:55 AM IST

ನೇಪಥ್ಯಕ್ಕೆ ಸರಿದ ಪದಯಾನ ಪುರುಷ

ಪದ್ಯಾಣ ಎಂಬ ಊರಿನ ಹೆಸರನ್ನು ನೆನಪಿಸಿ ಕೊಂಡಾಗ ಫಕ್ಕನೆ ಹತ್ತು ಹದಿನೈದು ಕಲಾವಿದರ ಮೊಗಗಳ ಮೆರವಣಿಗೆ ಮನದಲ್ಲಿ ಹಾದು ಹೋಗುತ್ತದೆ. ತೆಂಕುತಿಟ್ಟಿನ ಯಕ್ಷಗಾನದ ಹಿಮ್ಮೇಳದ ಮಟ್ಟಿಗೆ ಅದೊಂದು ಘರಾನಾ. ಈ ಘರಾನಾದ ಬಹುದೊಡ್ಡ ಹೆಸರು ಪದ್ಯಾಣ ಗಣಪತಿ ಭಟ್ಟರು. ಇಂದು ನೇಪಥ್ಯ ಸೇರಿಬಿಟ್ಟರು. ಅರುವತ್ತೆ„ದರ ವಯಸ್ಸು ಮರಣದ್ದೇನೂ ಅಲ್ಲ. ಕಳೆದ ವರ್ಷ ರಂಗ ದಿಂದ ಕೆಳಗಿಳಿದಿದ್ದರು. ಈಗ ಲೋಕದಿಂದಲೇ ನಿರ್ಗಮಿ ಸುತ್ತಾರೆಂದು ಯಾರೂ ಯೋಚಿ ಸಿರಲಿಲ್ಲ. ರಂಗಸ್ಥಳವೇ ಇರಲಿ, ತಾಳಮದ್ದಲೆ, ಗಾನವೈಭವ -ಯಾವುದೇ ಇರಲಿ. ಅಲ್ಲಿ ಗಣ ಪಣ್ಣನ ಛಾಪು ಇದ್ದೇ ಇರುತ್ತಿತ್ತು. ಬಹುಕಾಲ ಗುನುಗುವಂತೆ ಮಾಡುತ್ತಿತ್ತು. ಅಂತರಂಗದ ಆಳದಿಂದ ಎದ್ದು ಬರುವ ಸ್ವರದ ನಾದ ಸುತ್ತೆಲ್ಲ ಆವರಿಸಿ ಕೇಳುಗನ ಮನವನ್ನು ಹೊಕ್ಕು ಅರಿವಿಲ್ಲದೆ ಚಪ್ಪಾಳೆಯಾಗಿ ಚಿಮ್ಮುತ್ತಿತ್ತು. ಅವರು ಎಲ್ಲರ ಪ್ರೀತಿಯ ಗಣಪಣ್ಣ.

ಮಗುವಾಗಿದ್ದಾಗ ಬದುಕಲಾರದ ಬಾಲಕನನ್ನು ಚಿಕ್ಕಮ್ಮ ಬದುಕಿಸಿದರಂತೆ. ಬೆಳೆದ ಕಿಶೋರ- ಏನೂ ಕಲಿಯಲಾಗದ ತಂಟೆಕೋರನನ್ನು ಧರ್ಮಸ್ಥಳದ ಯಕ್ಷಗಾನ ಕೇಂದ್ರವು ಭಾಗವತನನ್ನಾಗಿ ಬದಲಾಯಿ ಸಿತು. ಎಂದೋ ನಿಂತುಹೋಗುತ್ತಿದ್ದ ಸುಪ್ತಪ್ರತಿಭೆ, ಅವರ ಸ್ವರ ನಾಭಿಮೂಲದಿಂದೆದ್ದು ಬಂದಂತೆ ಹೊರಬಂದು ತೆಂಕಿನ ಅಗ್ರಮಾನ್ಯ ಕಲಾವಿದನನ್ನಾಗಿ ರೂಪಿಸಿದ ಕಥೆಯೇ ಬಹುರೋಚಕ.

ಗಣಪತಿ ಭಟ್ಟರು ಅರ್ಧ ಶತಮಾನದಷ್ಟು ಕಾಲ ಭಾಗವತರಾಗಿ ಅನುಭವ ಹೊಂದಿದ ಹಿರಿಯರು. ಚೌಡೇಶ್ವರಿ ಮೇಳದಿಂದ ತೊಡಗಿ ಅನೇಕ ಮೇಳಗಳ ತಿರುಗಾಟವಾದರೂ ಸುದೀರ್ಘ‌ ಅವಧಿಯ ಅವರ ಕಲಾಯಾನ ಸುರತ್ಕಲ್‌ ಮೇಳದಲ್ಲೇ ನಡೆದುದು ವಿಶೇಷ. ಅಗರಿ ಶ್ರೀನಿವಾಸ ಭಾಗವತರು, ಶೇಣಿ ಗೋಪಾಲಕೃಷ್ಣ ಭಟ್ಟರು, ತೆಕ್ಕಟ್ಟೆ ಆನಂದ ಮಾಸ್ತರರು, ಅಗರಿ ರಘುರಾಮ ಭಾಗವತರು ಮುಂತಾದ ಮಹಾನ್‌ ಕಲಾವಿದರೊಂದಿಗಿನ ಸುದೀರ್ಘ‌ವಾದ ಒಡನಾಟದ ಅದೃಷ್ಟವನ್ನು ಪಡೆದವರು ಗಣಪಣ್ಣ. ಮಾತಿನ ಮಲ್ಲರಾದ ಶೇಣಿಯವರಿಗೆ ಮಾತಿಗಿಂತ ಮೌನವನ್ನೇ ಇಷ್ಟಪಡುವ ಗಣಪತಿ ಭಟ್ಟರು ಬಲು ಪ್ರೀತಿಯ ಭಾಗವತ. ಕನ್ನಡ – ತುಳು ಭಾಷೆಗಳ ಪ್ರಸಂಗಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದ ಭಟ್ಟರು ತಾಳಮದ್ದಲೆಯಲ್ಲೂ ಬಹುಬೇಡಿಕೆಯ ಕಲಾವಿ ದರು. ಮಳೆಗಾಲದ ತಾಳಮದ್ದಲೆಗೆ ನಾಲ್ಕು ತಿಂಗಳು ಮೊದಲೇ ಕೇಳಿದರೂ ಅವರು ಲಭ್ಯರಾಗದಿದ್ದು ದುಂಟು. ಒಪ್ಪಿದ ಕಾರ್ಯಕ್ರಮವಾದರೆ ತಪ್ಪಿಸುವ ಮಾತಿಲ್ಲ. ನಮ್ಮ ಒಂದು ಕಾರ್ಯಕ್ರಮಕ್ಕೆ ಒಪ್ಪಿದ್ದ ಅವರಿಗೆ ಬೆಂಗಳೂರಿನಲ್ಲಿ ನಿರಂತರ ಕಾರ್ಯ ಕ್ರಮವಿತ್ತು. ನಮ್ಮಕಾರ್ಯಕ್ರಮಕ್ಕಾಗಿಯೇ ಬಂದು ಮರುದಿನ ಮರಳಿದ್ದರು. ಸುರತ್ಕಲ್‌ ಮೇಳ ನಿಂತ ಮೇಲೆ ಮುಂದೆ ಹೊಸನಗರ ಬದಲಾದ ಹೆಸರಿನ ಹನುಮಗಿರಿ ಮೇಳದ ಪ್ರಧಾನ ಭಾಗವತರಾಗಿ ಬಹುಮಂದಿ ಸುಪ್ರಸಿದ್ಧ ಕಲಾವಿದರ ಕಾಲಮಿತಿ ಯಕ್ಷಗಾನವನ್ನು ಅವರು ಸಂಯೋಜಿಸುತ್ತಿದ್ದ ರೀತಿ ಅನ್ಯಾದೃಶ.

ಇದನ್ನೂ ಓದಿ:ಐಟಿ ದಾಳಿಗೆ ಸಿದ್ದರಾಮಯ್ಯ ಕಾರಣ: ಎಚ್‌ಡಿಕೆ

ಒಂದೂವರೆ ತಾಸಿನಲ್ಲಿ ರುಕ್ಮಿಣೀ ಕಲ್ಯಾಣ, ಅಷ್ಟೇ ಅವಧಿಯಲ್ಲಿ ಕಾಲನೇಮಿ ಕಾಳಗದಂತಹ ಪ್ರಸಂಗಗಳನ್ನು ಅವರು ನಡೆಸಿದ ರೀತಿಯನ್ನು ನಾನು ನೋಡಿದ್ದೇನೆ. ಬಹುಶಃ ಹನುಮಗಿರಿ ಮೇಳದ ಸಂಯೋಜನೆಯ ಪ್ರಯೋಗ ಚಿಂತನೆ ಯಲ್ಲಿ ಭಾಗವತರ ಪಾತ್ರ ಬಹಳವಿತ್ತು. ಮೇಳ ವನ್ನು ಬಿಡುವಾಗಲೂ ಬೇಡಿಕೆ ಯುಳ್ಳ ಹಿರಿಯ ಭಾಗವತರಾ ಗಿಯೇ ಉಳಿದಿದ್ದರು. ಅವರ ಮನೆಯಲ್ಲಿ ನಿತ್ಯವೂ ಹಲವು ಶಿಷ್ಯರಿಗೆ ಕಲಿಸುತ್ತಿದ್ದರಂತೆ.

ಪದ್ಯಾಣವೆಂಬುದು ಅವರ ಮೂಲ ನೆಲೆಯ ಹೆಸರಾ ದರೂ ಅವರ ಹಿರಿಯರ ಕಾಲದಲ್ಲೇ ಕಲ್ಮಡ್ಕ ಸಮೀಪದ ಗೋಳ್ತಾಜೆಗೆ ವಾಸ್ತವ್ಯವನ್ನು ಬದಲಾಯಿಸಿದ್ದರು.

ಆಟ ಕೂಟಗಳಂತೆ ಇತ್ತೀಚೆಗೆ ಪ್ರಸಿದ್ಧವಾದ ಗಾನ ವೈಭವಗಳಲ್ಲೂ ಅತ್ಯಂತ ಪ್ರಸಿದ್ಧರಾಗಿದ್ದ ಗಣಪತಿ ಭಟ್ಟರ ನಿರ್ಗಮನದಿಂದ ತೆಂಕುತಿಟ್ಟಿನ ಯಕ್ಷಗಾನ ಕ್ಷೇತ್ರದ ಹಿರಿಮೆಯ ಗರಿಯೊಂದು ಕಳಚಿದಂತಾಯಿತು.

ಎಸ್‌ಪಿಬಿಯವರು ನಡೆಸುತ್ತಿದ್ದ “ಎದೆ ತುಂಬಿ ಹಾಡಿದೆನು…’ ಗಾನ ಸರಣಿಯಲ್ಲಿ  ನಿರ್ಣಾಯಕರಾಗಿ ಭಾಗವಹಿಸಿದ ಯಕ್ಷಗಾನದ ಭಾಗವತ ಗಣಪತಿ ಭಟ್ಟರು. ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರಾಗಿ ಬೆಳೆದು ತನ್ನದೇ ಪರಂಪರೆಯನ್ನು ಸೃಷ್ಟಿಸಿದ ವಿಶಿಷ್ಟ ಭಾಗವತರು. ಅವರ ಶಿಷ್ಯ ರವಿಚಂದ್ರ ಕನ್ನಡಿಕಟ್ಟೆಯವರಲ್ಲಿ ಅವರದೇ ನಡೆಯನ್ನು ಕಾಣಬಹುದು. ತೆಂಕಿನಲ್ಲಿ ಈಗ ಪದ್ಯಾಣ ಶೈಲಿಯೂ ಪ್ರಸಿದ್ಧವಾಗಿದೆ.

ಮೃದು ಮಾತಿನ, ನಿರ್ಮಲ ಮನದ, ಅದ್ಭುತ ನಿರ್ದೇಶಕ, ರಂಗ ಪರಿಣತ, ಸಮಗ್ರ ಹಿಮ್ಮೇಳದ ಅರಿವಿರುವ ಹಿರಿಯ ಭಾಗವತರನ್ನು ಯಕ್ಷರಂಗ ಕಳೆದುಕೊಂಡಿದೆ.

2016ರಲ್ಲಿ ಗಣಪತಿ ಭಟ್ಟರಿಗೆ ಅರುವತ್ತು ವರ್ಷವಾದಾಗ ಯಕ್ಷಗಾನದ ಮಹಾಪೋಷಕ ಟಿ. ಶ್ಯಾಮ ಭಟ್ಟರ ಮುತುವರ್ಜಿಯಲ್ಲಿ ಬಹುದೊಡ್ಡ ಗೌರವವನ್ನೂ “ಪದಯಾನ’ ವೆಂಬ ಅಭಿನಂದನ ಗ್ರಂಥವನ್ನೂ ಅವರಿಗೆ ಸಮರ್ಪಿಸಲಾಗಿತ್ತು. ಪದ್ಯಾಣದ ಪದ ಈಗ ಯಾನವನ್ನೂ ನಿಲ್ಲಿಸಿದೆ.

ಪತ್ನಿ, ಇಬ್ಬರು ಪುತ್ರರು, ಅಪಾರ ಅಭಿಮಾನಿ ಗಳನ್ನು ಅಗಲಿದ ಮಹಾಚೇತನಕ್ಕೆ ಸದ್ಗತಿಯೊದಗಲಿ. ಅವರ ಅಗಲುವಿಕೆಯ ದುಃಖವನ್ನು  ಸಹಿಸುವ ಶಕ್ತಿಯನ್ನು ಭಗವಂತನು ಎಲ್ಲರಿಗೂ ನೀಡಲಿ.

– ಶ್ರೀಧರ ಡಿ.ಎಸ್‌., ತಾಳಿಪಾಡಿ

ಟಾಪ್ ನ್ಯೂಸ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.