ಸದ್ಯಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಾರು
Team Udayavani, Mar 26, 2022, 7:40 AM IST
ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರಕಾರ ವಿಶ್ವಾಸಮತ ಪ್ರಕ್ರಿಯೆ ಯಿಂದ ಸೋಮವಾರ (ಮಾ. 28)ದ ವರೆಗೆ ಜೀವ ದಾನ ಪಡೆದುಕೊಂಡಿದೆ.
ಶುಕ್ರವಾರ ಪಾಕಿಸ್ಥಾನದ ಸಂಸತ್‌ನ ಕೆಳಮನೆ, ನ್ಯಾಷನಲ್ ಅಸೆಂಬ್ಲಿಯಲ್ಲಿ ಸ್ಪೀಕರ್ ಅಸಾದ್ ಖಾಸಿರ್ ಅವರು ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ಕಲಾಪವನ್ನು ಸೋಮವಾರ ಸಂಜೆ 4 ಗಂಟೆಗೆ ಮುಂದೂಡಲಾಗಿದೆ ಎಂದು ಪ್ರಕಟಿಸಿದರು.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ಥಾನ್ ತೆಹ್ರೀಕ್-ಇ-ಇನ್ಸಾಫ್ ನೇತೃತ್ವದ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತು ವಳಿಯನ್ನು ವಿಪಕ್ಷಗಳ ಒಕ್ಕೂಟ ಮಂಡಿಸಿವೆ.
ಇದನ್ನೂ ಓದಿ:ಚಾಮರಾಜನಗರ: ನಗರಸಭೆ ಸದಸ್ಯನಿಗೆ ಒಂದು ವರ್ಷ ಜೈಲು ಶಿಕ್ಷೆ
ಜತೆಗೆ ಸರಕಾರಕ್ಕೆ ಬೆಂಬಲ ನೀಡಿರುವ ನಾಲ್ಕು ಪಕ್ಷಗಳು ಈಗಾಗಲೇ ಸರಕಾರಕ್ಕೆ ಬೆಂಬಲ ವಾಪಸ್ ಪಡೆದಿವೆ.
ನ್ಯಾಶನಲ್ ಅಸೆಂಬ್ಲೆಯಲ್ಲಿ ಒಟ್ಟು 342 ಸದಸ್ಯ ಬಲ ಇದ್ದು, ಇಮ್ರಾನ್ ಸರಕಾರ ಅಧಿಕಾರ ಉಳಿಸಿಕೊಳ್ಳಲು 172 ಸಂಸದರ ಬಲ ಪ್ರಾಪ್ತಿ ಮಾಡಿಕೊಳ್ಳಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.