ಶಬರಿಮಲೆ: ಪಂಪಾ ನದಿಯಲ್ಲಿ ಹಾಗೇ ಉಳಿದಿದೆ ಜಲಪ್ರಳಯದ ಕರಾಳ ಛಾಯೆ
Team Udayavani, Jan 11, 2020, 1:57 PM IST
ಶಬರಿಮಲೆ: ಕೇರಳದ ಜಲಪ್ರಳಯ ಶತಮಾನದ ಪ್ರಾಕೃತಿಕ ದುರಂತಗಳಲ್ಲಿ ಒಂದು. ರಾಜ್ಯದ ನದಿಗಳೆಲ್ಲಾ ಉಕ್ಕಿ ಹರಿದು, ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು ನಮಗೆಲ್ಲಾ ತಿಳಿದೇ ಇದೆ. ಆನಂತರ ಮಳೆಯ ಪ್ರಮಾಣ ಕಡಿಮೆಯಾಗಿ ಜನರು ತಮ್ಮ ಜೀವನ ಕಟ್ಟಿಕೊಳ್ಳಲು ಪಟ್ಟ ಪಾಡು ತಿಳಿಯದವರು ಯಾರು ಇಲ್ಲ.
ಈ ಜಲಪ್ರಳಯಕ್ಕೆ ಸಿಕ್ಕ ಶಬರಿಮಲೆ ಕ್ಷೇತ್ರಕ್ಕೆ ದೈವೀಕ ಸಂಬಂಧವಿರುವ ಪಂಪಾ ನದಿಯೂ ಈಗಲೂ ಜಲಪ್ರಳಯದ ಕರಾಳ ಛಾಯೆಯನ್ನು ತೋರಿಸುತ್ತಿದೆ.
ತುಂಬಿ ಹರಿಯುತ್ತಿದ್ದ ಪಂಪಾನದಿಯ ತುಂಬಾ ಮರಳಿನ ರಾಶಿ ಹಾಗೇ ಇದೆ. ಜಲಪ್ರಳಯವಾಗಿ ವರ್ಷ ಎರಡಾದರೂ ಪಂಪಾ ಸ್ಥಿತಿ ಬದಲಾಗಿಲ್ಲ.
ಪಂಪಾ ನದಿಯು ಈಗ ಕೇವಲ ಸಣ್ಣ ತೊರೆಯಂತೆ ಹರಿಯುತ್ತಿದೆ.ಅಯ್ಯಪ್ಪ ಸ್ವಾಮಿಯ ಪೂರ್ವ ಹಿನ್ನೆಲೆಯಲ್ಲಿ ಇದೇ ಪಂಪಾ ನದಿಯ ತೀರದಲ್ಲಿ ಪಂದಳರಾಜ ರಾಜಶೇಖರ ಅವರಿಗೆ ಮಣಿಕಂಠ ದೊರಕಿದ್ದು ಎಂಬ ಐತಿಹ್ಯವಿರುವುದರಿಂದ ಶಬರಿಮಲೆಗೆ ಬರುವ ಎಲ್ಲಾ ಭಕ್ತಾದಿಗಳು ಪಂಪಾನದಿಯಲ್ಲಿ ಪುಣ್ಯ ಸ್ನಾನ ಮಾಡಿಯೇ ನೀಲಿಮಲೆ, ಶಬರಿ ಪೀಠ, ಅಪ್ಪಾಚಿಮೇಡು ಏರಿ ಪವಿತ್ರ ಶಬರಿಮಲೆಯ ಸ್ವಾಮಿ ಅಯ್ಯಪ್ಪ ನ ಸನ್ನಿಧಾನಕ್ಕೆ ಹೋಗುತ್ತಾರೆ.
ಆದರೆ ಈ ಹಿಂದಿನ ಪಂಪಾ ನದಿಯ ಸೊಬಗು ಈಗಿಲ್ಲ ಎಂಬ ವೇದನೆ ಎಲ್ಲಾ ಭಕ್ತರಿಗೆ ಭಾಸವಾಗುತ್ತಿರಿವುದು ಸುಳ್ಳಲ್ಲ. ಪಂಪಾ ನದಿಯ ಹಿಂದಿನ ಸೊಬಗು ಕಾಣಲು ನದಿಯಲ್ಲಿ ಲೋಡ್‌ಗಟ್ಟಳೆ ಬಿದ್ದಿರುವ ಮರಳಿನ ರಾಶಿ ತೆರವು ಮಾಡಬೇಕಿದೆ.
ನದಿಗೆ ಬಟ್ಟೆ ಎಸೆಯದಂತೆ ಸೂಚನೆ
ಪಂಪಾನದಿಯಲ್ಲಿ ಅಯ್ಯಪ್ಪ ಭಕ್ತಾದಿಗಳು ತಮ್ಮ ಬಟ್ಟೆಗಳನ್ನು ತೇಲಿಬಿಡುತ್ತಿದ್ದು, ಇದರಿಂದಲೂ ಪಂಪಾನದಿಯ ಪವಿತ್ರತೆಗೆ ಧಕ್ಕೆಯಾಗುತ್ತದೆ. ಈ ಬಟ್ಟೆಗಳಿಂದ ನದಿ ತೀರದಲ್ಲಿ ರಾಶಿಯಾಗುತ್ತಿದೆ. ಸ್ವಚ್ಚತಾ ಸಿಬಂದಿಗಳು ನದಿಯಿಂದ ನಿರಂತರವಾಗಿ ಬಟ್ಟೆಗಳನ್ನು ತೆರವು ಮಾಡುತ್ತಿದ್ದಾರೆ.
ಇದಕ್ಕಾಗಿ ಭಕ್ತಾದಿಗಳು ಪಂಪಾನದಿಯಲ್ಲಿ ಯಾವುದೇ ಬಟ್ಟೆಗಳನ್ನು ಎಸೆಯದೇ ಕ್ಷೇತ್ರದ ಪಾವಿತ್ರ್ಯತೆ ರಕ್ಷಣೆ ಹಾಗೂ ಸ್ವಚ್ಛ ಶಬರಿಮಲೆ ಪರಿಕಲ್ಪನೆಗೆ ಸಹಕರಿಸುವಂತೆ ತಿರಾವೂಂಕೂರು ದೇವಸ್ವಂ ಬೋರ್ಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Tribute Dr.Singh: ಡಾ.ಮನಮೋಹನ್ ಸಿಂಗ್ ಆಡಳಿತದ ಜನಪರ ಯೋಜನೆಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.