National Tourism Day: ಕಣ್ಮನ ಸೆಳೆಯುವ ತಾಣ ಪಂಚಮಿಕಲ್ಲು


Team Udayavani, Jan 25, 2024, 2:55 PM IST

10-uv-fusion

ಹಸುರ ಕಾನನದ ಮಧ್ಯೆ ಕಂಗೊಳಿಸುವ ಮಲೆನಾಡ ಸೊಬಗನ್ನು ಆಸ್ವಾದಿಸಲು ಎಲ್ಲ ಪ್ರವಾಸಿ ಪ್ರಿಯರಿಗೂ ಬಲು ಇಷ್ಟನೇ. ಕಾಫಿ-ಚಹಾ ತೋಟಗಳ ಸ್ವಾದ, ಬೆಟ್ಟ ಗುಡ್ಡಗಳ ರಮಣೀಯ ನೋಟ, ಅಲ್ಲಲ್ಲಿ ಕಾಣ ಸಿಗುವ ಜಲಪಾತಗಳ ಸಿಂಗಾರದ ಜತೆಗೆ ಇಳಿಜಾರು ಪ್ರದೇಶಗಳು, ಹೀಗೆ ನಾನಾ ರೀತಿಯಾದ ಪ್ರದೇಶಗಳನ್ನು ಮಲೆನಾಡ ಸೀಮೆಯಲ್ಲಿ ಕಾಣಬಹುದು.

ಮಲೆನಾಡಿನಲ್ಲಿ ಚಾರಣಕ್ಕೆಂದೇ ಹೇಳಿ ಮಾಡಿಸಿದ ಅಸಂಖ್ಯ ತಾಣಗಳಿವೆ. ಪ್ರತಿಯೊಂದು ತಾಣವೂ ಪ್ರಕೃತಿ ಸೌಂದರ್ಯದಿಂದ ಸಂಪತ½ರಿತವಾಗಿದೆ. ಮಳೆಗಾಲದಲ್ಲಿ ಮಲೆನಾಡ ಸೌಂದರ್ಯವು ಮೈವೆತ್ತಂತೆ ಇಲ್ಲಿನ ಜಲಧಾರೆಗಳು ಧುಮ್ಮಿಕ್ಕಿ ಹರಿಯುವುದನ್ನು ನೋಡುವುದೇ ಸೊಗಸು. ಬೆಟ್ಟ-ಗುಡ್ಡಗಳು ಸುರಿವ ಮಳೆಯ ನಡುವೆ ಹಸುರುಟ್ಟು ಶೋಭಿಸುತ್ತಿವೆ.

ಇದೇ ಕಾರಣಕ್ಕೆ ಚಾರಣಿಗರು ಮಳೆಗಾಲದಲ್ಲಿ ಮಲೆನಾಡಿನ ಸೊಬಗನ್ನು ಮಿಸ್‌ ಮಾಡಿಕೊಳ್ಳುವುದಿಲ್ಲ. ಮಲೆನಾಡಿನ ಮೂಲೆ-ಮೂಲೆ ಜಾಲಾಡದೆ ಅವರು ತೃಪ್ತಿಪಡುವುದಿಲ್ಲ. ಇಂಥ ಚಾರಣಿಗರು ಚಾರಣದ ಸವಿಯನ್ನು ಮನಸಾರೆ ಅನುಭವಿಸಲು ಹೇಳಿ ಮಾಡಿಸಿದ ಹೊಚ್ಚ ಹೊಸ ತಾಣ ಪಂಚಮಿ ಕಲ್ಲು.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮೇಗುಂದ ಗ್ರಾಮದಲ್ಲಿ ಕಾಣಸಿಗುವ ಪ್ರವಾಸಿ ತಾಣವೇ ಪಂಚಮಿ ಕಲ್ಲು. ಅಂಕುಡೋಂಕಾದ ದಾರಿಯಲ್ಲಿ ಸಾಗಿದಾಗ ಸುಂದರವಾದ ಬೆಟ್ಟ ಗುಡ್ಡಗಳಿಂದ ಸುತ್ತುವರೆದು, ಬೆಟ್ಟದ ತುತ್ತ ತುದಿಯಲ್ಲಿ ಒಂದು ಸುಂದರ ಸ್ಮಾರಕವು ಕಾಣಸಿಗುತ್ತವುದು, ಅದೇ ಪಂಚಮೀ ಕಲ್ಲು. ಇದು ಜೈನ ಧರ್ಮದವರಿಗೆ ಸಂಬಂಧಿಸಿದ ತಾಣವಾಗಿದ್ದು. ಈ ಜೈನ ಸ್ಮಾರಕವು ಹಲವಾರು ವರ್ಷಗಳಿಂದ ಅಸ್ತಿತ್ವದಲ್ಲಿದೆ.

ಧ್ಯಾನಕ್ಕಾಗಿ ಜೈನ ಸಂತರ ವಿಹಾರ ತಾಣವಾಗಿದ್ದು, ಹೆಸರೇ ಸೂಚಿಸುವಂತೆ ಈ ರಚನೆಯು ದೊಡ್ಡದಾದ ಕಲ್ಲಿನ ಮೇಲೆ ಚಿಕ್ಕದಾದ ಕಲ್ಲಿನ ಗೋಪುರದಿಂದ ನಿರ್ಮಿಸಲ್ಪಟ್ಟಿದೆ. ಪಂಚಮಿ ಕಲ್ಲು ಎಂಬ ಪ್ರವಾಸಿ ತಾಣವು ಪ್ರಸುತ್ತ ದಿನಗಳಲ್ಲಿ ಸದ್ದಿಲ್ಲದೆ ಸದ್ದು ಮಾಡುತ್ತಿದೆ. ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಈ ಜಾಗಕ್ಕೆ ಇತ್ತೀಚಿನ ದಿನಗಳಲ್ಲಿ ಭೇಟಿ ನೀಡುತ್ತಿದ್ದು, ಹಾಗಾಗೀ ಬೆಟ್ಟದ ಮೇಲಿರುವ ಸುಂದರವಾದ ಕಲ್ಲಿನ ಮಂಟಪವು ನೋಡುಗರ ಕಣ್ಮನ ಸೆಳೆಯುತ್ತಿದೆ.

ಇತಿಹಾಸ ಲಭ್ಯವಿರುವ ಶಾಸನದ ಉಲ್ಲೇಖಗಳ ಆಧಾರದ ಮೇಲೆ ಈ ದೇವಾಲಯವು, 15ನೇ ಶತಮಾನದ ಅಂದರೆ ವಿಜಯನಗರ ಅವಧಿಯಂದು ಎಂದು ತಿಳಿದುಬರುತ್ತದೆ. ಮೇಗುಂದದಲ್ಲಿ ಅಂದರೆ ಪಂಚಮಿಕಲ್ಲು ಇಲ್ಲಿ 2 ಶಾಸನಗಳು ಕಂಡು ಬರುತ್ತವೆ, ಅವುಗಳು ದೀಪಾವಳಿ ಹಬ್ಬವನ್ನು ನಿಯಮಿತವಾಗಿ ನಡೆಸಲು ಈ ದೇವಾಲಯದಲ್ಲಿರುವ ಶಾಂತಿ ನಾಥ ಮತ್ತು ಪಾಶ್ವನಾರ್ಥ ತೀರ್ಥಂಕರ ವಿಗ್ರಹಗಳಿಗೆ ನೀಡಿದ ಭೂದಾನದ ವಿವರಗಳನ್ನು ಒಳಗೊಂಡಿದೆ. ಪರ್ಯಂಕಾಸನದಲ್ಲಿ ಸುಮಾರು 3 ಅಡಿ ಎತ್ತರದ ಕಪ್ಪು ಬಣ್ಣದ ಕಲ್ಲಿನ ವಿಗ್ರಹವು ಅಲ್ಲಿನ ಮುಖ್ಯ ದೇವತೆ ಎಂದೂ ಕರೆಯುತ್ತಾರೆ.

ದೇವಾಲಯದ ರಚನೆ

ದೇವಾಲಯದ ಪ್ರವೇಶದ್ವಾರದಲ್ಲಿ ಚತುರ್ಮುಖ ತೀರ್ಥಂಕರ ವಿಗ್ರಹದೊಂದಿಗೆ ಸುಮಾರು 25 ಅಡಿ ಎತ್ತರದ ಮಾನಸ್ತಂಭವನ್ನು ಸ್ತಾಪಿಸಲಾಗಿದೆ. ಮಾನಸ್ತಂಭದ ತಳಹದಿಯ ಉದ್ದಕ್ಕೂ ಎಲ್ಲ 4 ದಿಕ್ಕಿನಲ್ಲೂ ಕುದುರೆ ಬ್ರಹ್ಮ ಯಕ್ಷಗಳ ಸವಾರಿ ಮಾಡುತ್ತಿರುವ ವಿಗ್ರಹಗಳನ್ನು ಗೋಡೆ ಮೇಲೆ ಕೆತ್ತಲಾಗಿದೆ. ಈ ದೇವಾಲಯವು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದೆ. ದೇವಾಲಯವನ್ನು ಪ್ರವೇಶಿಸಿದ ಕೂಡಲೇ ಸುಮಾರು 15 ಅಡಿ ಉದ್ದದ ಹಾದಿ ಸಿಗುತ್ತದೆ. ಅದರ ಅನಂತರ ವಿಶಾಲವಾದ ಸಭಾಂಗಣ/ ನವರಂಗಳಂತಹ ಎರಡು ಕಂಬಗಳನ್ನು ಕಾಣಬಹುದು.

ನವರಂಗವು ಆಕರ್ಷಕವಾಗಿ ಛಾವಣಿಯ ರಚನೆಯನ್ನು ಮಾಡಿದೆ. ನವರಂಗನ ಮತ್ತು ಗರ್ಭಗೃಹ ನಡುವೆ ಅಂತರಾಳದಂತಹ ಸಣ್ಣ ಸಭಾಂಗಣವನ್ನು ಕಾಣಬಹುದು. ನವರಂಗದಿಂದ ಅಂತರಾಳಕ್ಕೆ ಹೋಗುವ ದ್ವಾರದಲ್ಲಿ ದ್ವಾರಪಾಲಕಗಳೊಂದಿಗೆ ಅದರ 3 ಬದಿಗಳಲ್ಲಿ 24 ತೀರ್ಥಂಕರ ವಿಗ್ರಹಗಳನ್ನು ಕೆತ್ತಲಾಗಿದೆ. ಅಂತರಾಳವು 4 ಕಂಬಗಳನ್ನು ಹೊಂದಿದೆ ಮತ್ತು ಗಂಧಕುಟಿಯನ್ನು ಹೊಂದಿದೆ ಬಾಗಿಲಿನ ಸುತ್ತಲೂ ಕಮಾನಿನಂತಹ ಆಯತಾಕಾರದ ರಚನೆಯು ಗರ್ಭಗೃಹಕ್ಕೆ ಕಾರಣವಾಗುತ್ತದೆ.

ಈ ಕೋಶಗಳಲ್ಲಿ ಸಣ್ಣ ಜೈನ ವಿಗ್ರಹಗಳನ್ನು ಇರಿಸಲಾಗಿದೆ. ಗಂಧಕುಟಿಯಲ್ಲಿ ಸಣ್ಣ ಜೈನ ವಿಗ್ರಹಗಳನ್ನು ಕೆತ್ತಲಾಗಿದ್ದು, ಅಂತರಾಳದಲ್ಲಿ ಇನ್ನೂ ಅನೇಕ ತೀರ್ಥಂಕರರ ವಿಗ್ರಹಗಳು ಮತ್ತು ಪದ್ಮಾವತಿ ಯಕ್ಷಿ ದೇವಿಯ ವಿಗ್ರಹವನ್ನು ಪರ್ಯಾಯಕಾಸನದಲ್ಲಿ ಸ್ಥಾಪಿಸಲಾಗಿದೆ.

ಪಂಚಮಿ ಕಲ್ಲು:- ಮೇಗುಂದದ ಶಾಂತಿನಾಥ ಬಸದಿಯಿಂದ ಸುಮಾರು 3 ಕಿ.ಮೀ ದೂರದಲ್ಲಿ ಸಲ್ಲೇಖನವನ್ನು ಅಭ್ಯಾಸ ಮಾಡುವ ಮೂಲಕ ಸಮಾಧಿಯನ್ನು ಸಾಧಿಸಿದ ಜೈನ ಮುನಿಗಳ 4 ವಿಭಿನ್ನ ಪಾದ/ ಅಡಿ ಅನಿಸಿಕೆಗಳನ್ನು ಹೊಂದಿರುವ ಎತ್ತರದ ಪ್ರದೇಶವನ್ನು ಕಾಣಬಹುದು. ಈ ಸ್ಥಳವನ್ನು ಪಂಚಮಿ ಕಲ್ಲು ಎಂದು ಕರೆಯುತ್ತಾರೆ.

-ಸೌಮ್ಯಾ

ಕಾರ್ಕಳ

 

ಟಾಪ್ ನ್ಯೂಸ್

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.