ಕೆಲವೊಮ್ಮೆ ಪೆಟ್ಟು ಬಿದ್ದಾಗಲೇ ಪಲ್ಲಟ ಸಾಧ್ಯ ಎನ್ನುತ್ತಿದ್ದ ಸ್ವರ ಸಾಗರ


Team Udayavani, Aug 18, 2020, 6:27 AM IST

ಕೆಲವೊಮ್ಮೆ ಪೆಟ್ಟು ಬಿದ್ದಾಗಲೇ ಪಲ್ಲಟ ಸಾಧ್ಯ ಎನ್ನುತ್ತಿದ್ದ ಸ್ವರ ಸಾಗರ

ಪಂಡಿತ್‌ ಜಸರಾಜ್‌ ಎನ್ನುವ ಹೆಸರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಸದಾ ಕಾಲ ಸ್ಥಾಯಿಯಲ್ಲಿಯೇ ಉಳಿಯುವಂಥದ್ದು. 80 ವರ್ಷಗಳ ಸಂಗೀತ ಸೇವೆಯಲ್ಲಿ ಪಂ. ಜಸ್‌ರಾಜ್‌ ಮೇವಾತಿ ಘರಾನೆಯ ಪ್ರಮುಖ ಶಕ್ತಿಯಾಗಿ, ಅದರ ಪರಿಮಳವನ್ನು ವಿಶ್ವಾದ್ಯಂತ ಪಸರಿಸಿದವರು. “”ಮಂಗಲಂ ಗರುಡಧ್ವಜ, ಮಂಗಳ ಪುಂಡರೀಕಾಕ್ಷಂ….” ಎಂದು ಹಾಡುತ್ತಿದ್ದರೆ ಶ್ರೀಹರಿಯೇ ಧರೆಗಿಳಿದು, ಕಣ್ಮುಚ್ಚಿ ತನ್ಮಯನಾಗಿ ಅವರ ಹಾಡುಕೇಳಿಸಿಕೊಳ್ಳುತ್ತಾನೇನೋ ಎನ್ನುವಂತಿರುತ್ತಿತ್ತು ಈ ಸ್ವರಸಾಮ್ರಾಟನ ಕಂಠಸಿರಿ.

ಆಸ್ಥಾನ ಸೇರಬೇಕಿದ್ದ ಅಪ್ಪನಿಗೆ ದಕ್ಕಿದ್ದು ಸಾವು
ಜಸರಾಜರು ಹುಟ್ಟಿದ್ದು ಹರ್ಯಾಣದ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬವೊಂದರಲ್ಲಿ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಬದುಕನ್ನು ಮೀಸಲಾಗಿಟ್ಟ ಕುಟುಂಬವದು. ಹರ್ಯಾಣದಲ್ಲಿ ಹುಟ್ಟಿದರೂ, ಜಸ್‌ರಾಜಜ್‌ರ ಬಾಲ್ಯ, ಯೌವನ ನಡೆದದ್ದು ಹೈದ್ರಾಬಾದ್‌ನಲ್ಲಿ. ಜಸ್‌ರಾಜ್‌ರ ತಂದೆ ಪಂಡಿತ್‌ ಮೋತಿರಾಮ್‌ ಖ್ಯಾತ ಸಂಗೀತರಾರರಾಗಿ ಗುರುತಿಸಿಕೊಂಡಿದ್ದರೂ, ಹಣದ ವಿಚಾರದಲ್ಲಿ ಅವರಿಗೊಂದು ಶಿಸ್ತು ಎನ್ನುವುದು ಇರಲೇ ಇಲ್ಲ. ಹೀಗಾಗಿ, ಸದಾ ಹಣಕ್ಕಾಗಿ ಪರದಾಡುವಂಥ ಸ್ಥಿತಿಯಲ್ಲಿಯೇ ಅವರ ಕುಟುಂಬವಿತ್ತು. ಹೀಗಿರುವಾಗಲೇ, ಈ ಕುಟುಂಬದ ಎಲ್ಲಾ ಸಂಕಷ್ಟಗಳೂ ನಿವಾರಣೆಯಾಗುವಂಥ ಊಹಿಸಲಸಾಧ್ಯವಾದ ಅವಕಾಶ ಮೋತಿರಾಮ್‌ ಅವರ ಎದುರಾಯಿತು. ಆಗಿನ ಹೈದ್ರಾಬಾದ್‌ ನಿಜಾಮ ಮೀರ್‌ ಒಸ್ಮಾನ್‌ ಅಲಿ ಖಾನ್‌ ತಮ್ಮ ಆಸ್ಥಾನದಲ್ಲಿ ಆಸ್ಥಾನ ಸಂಗೀತಗಾರನ ಗೌರವ ಸ್ವೀಕರಿಸಬೇಕೆಂದು ಮೋತಿರಾಮ್‌ ಅವರಿಗೆ ಆಹ್ವಾನ ನೀಡಿದರು. ಇನ್ನೇನು ಭಾಗ್ಯದ ಬಾಗಿಲು ತೆರೆಯಿತು ಎಂದು ಮೋತಿರಾಮ್‌ ಮತ್ತವರ ಪತ್ನಿ ಖುಷಿಯಲ್ಲಿರುವಾಗಲೇ ಜವರಾಯ ಅಪಸ್ವರ ನುಡಿಸಿಬಿಟ್ಟ. ಆಸ್ಥಾನ ಸಂಗೀತಗಾರನ ಗೌರವ ಸ್ವೀಕರಿಸಲು ಕೆಲವೇ ಗಂಟೆಗಳು ಇರುವಾಗಲೇ ಮೋತಿರಾಮ್‌ ಮೃತಪಟ್ಟರು! ಅಲ್ಲಿಂದ ಮತ್ತೂಂದು ಹಂತದ ಸಂಕಷ್ಟದ ಪಯಣ ಆರಂಭವಾಗಿಬಿಟ್ಟಿತು. ತಂದೆಯನ್ನು ಕಳೆದುಕೊಂಡಾಗ ಜಸ್‌ರಾಜ್‌ ನಾಲ್ಕು ವರ್ಷದ ಹುಡುಗ. ಮೋತಿರಾಮ್‌ ಜಸ್‌ರಾಜ್‌ಗೆ ಆಸ್ತಿ ಮಾಡಲಿಲ್ಲ, ಆದರೆ ಸ್ವರ ಬುನಾದಿಯನ್ನು ಹಾಕಿಹೋಗಿದ್ದರು. ಮಗನಿಗೆ ಮೂರನೇ ವಯಸ್ಸಿನಿಂದಲೇ ಸಂಗೀತಾಭ್ಯಾಸ ಆರಂಭಿಸಿದ್ದರು.ಆ ಒಂದು ವರ್ಷದ ಸಂಗೀತವೇ ಬದುಕಿಗೆ ಮುನ್ನುಡಿ ಬರೆಯಿತು ಎನ್ನುತ್ತಿದ್ದರು ಜಸ್‌ರಾಜ್‌.

ಪುಟ್ಟ ಹೋಟೆಲ್‌ ಮತ್ತು ಬೇಗಂ ಅಖ್ತರ್‌: ಪಂಡಿತ್‌ ಮೋತಿರಾಮ್‌ ನಿಧನಾ ನಂತರ ಜಸ್‌ರಾಜ್‌ ಕುಟುಂಬದ ಆರ್ಥಿಕ ಸ್ಥಿತಿ ಎಷ್ಟು ವಿಷಮಿಸಿತ್ತೆಂದರೆ, ಕುಟುಂಬ ವನ್ನು ಕಾಪಿಡಲು ಜಸರಾಜ್‌ರ ಹಿರಿಯ ಸಹೋದರ ಪಂಡಿತ್‌ ಪ್ರತಾಪ್‌ ನಾರಾಯಣ ಅವಕಾಶಬಂದಲ್ಲೆಲ್ಲ ತೆರಳಿ ಸಂಗೀತ ಕಚೇರಿಗಳನ್ನು ನಡೆಸುತ್ತಿದ್ದರು. ಆ ಹಣದಲ್ಲೇ ತಮ್ಮನನ್ನೂ ಶಾಲೆಗೆ ಕಳಿಸುತ್ತಿದ್ದರು. ಆದರೆ, ಜಸ್‌ರಾಜ್‌ ವಿದ್ಯೆ ವಜ್ಯìವಾಯ್ತು. ಅವರು ಹೈದ್ರಾಬಾದ್‌ನಲ್ಲಿ ಶಾಲೆಗೆ ಹೋಗುವಾಗ ರಸ್ತೆಯಲ್ಲಿ ಚಿಕ್ಕ ಹೋಟೆಲ್‌ ಎದುರಾಗುತ್ತಿತ್ತಂತೆ. ಆ ಹೋಟೆಲ್‌ನಲ್ಲಿ ಖ್ಯಾತ ಗಾಯಕಿ ಬೇಗಂ ಅಖ್ತರ್‌ ಅವರ ಹಾಡುಗಳು ಬೆಳಗ್ಗೆಯಿಂದ ಸಂಜೆಯವರೆಗೂ ಪ್ಲೇ ಆಗುತ್ತಿತ್ತಂತೆ. ಬೇಗಂ ಅಖ್ತರ್‌ರ ಧ್ವನಿ ಜಸ್‌ರಾಜ್‌ರನ್ನು ಯಾವ ಮಟ್ಟಕ್ಕೆ ಸೆಳೆಯಿತೆಂದರೆ, ಶಾಲೆಗೆ ಹೋಗುವುದನ್ನು ಮರೆತು ಆ ಹೋಟೆಲ್‌ನ ಮುಂದೆಯೇ ಕುಳಿತುಬಿಡುತ್ತಿದ್ದರಂತೆ. “ಬೇಗಂ ಅಖ§ರ್‌ ಧ್ವನಿಯಲ್ಲಿ -“ದೀವಾನ ಬನಾನಾ ಹೇ ತೋ ದೀವಾನ ಬನಾದೇ, ವರ್ನಾ ಕಹೀಂ ತಕಿರ್‌ ತಮಾಶಾ ನ ಬನಾದೇ’ ಎನ್ನುವ ಹಾಡೇ ಪುನರಾವರ್ತನೆಯಾಗುತ್ತಿತ್ತು. ಈ ಹಾಡಿನ ಫಿಲಾಸಫಿ ಆ ಸಮಯದಲ್ಲಿ ನನಗೆ ಅರ್ಥವಾಗುತ್ತಿರಲಿಲ್ಲ. ಆದರೆ, ಸ್ವರಗಳಿಗೆ ನಾನು ಜೀವನಪರ್ಯಂತ ದೀವಾನಾ ಆಗಿಬಿಟ್ಟೆ ನೋಡಿ”ಎಂದು ಸಂದರ್ಶನವೊಂದರಲ್ಲಿ ಮೆಲುಕು ಹಾಕಿದ್ದರು ಜಸ್‌ರಾಜ್‌.

ಜಸ್‌ರಾಜ್‌ಗೆ ಸಂಗೀತದಲ್ಲಿ ಆಸಕ್ತಿಯಿದೆ ಎನ್ನುವುದನ್ನು ಮನಗಂಡ ಅಣ್ಣ, ಮನೆಯಲ್ಲಿಯೇ ತಬಲಾ ವಾದಕನಿದ್ದರೆ, ಆ ಹಣವೂ ಕುಟುಂಬಕ್ಕೆ ನೆರವಾಗುತ್ತದೆಂದು ಭಾವಿಸಿ, ಜಸ್‌ರಾಜ್‌ಗೆ ತಬಲಾ ಪಾಠ ಆರಂಭಿಸಿಬಿಟ್ಟರು!

ಚರ್ಮ ಬಾರಿಸುವವ, ನಿನಗೇನು ಗೊತ್ತು ಸಂಗೀತ?
ಪೆಟ್ಟು ಬೀಳದೇ ಇದ್ದರೆ ಮನುಷ್ಯ ತನ್ನ ಜೀವನವನ್ನು ಪಲ್ಲಟಗೊಳಿಸುವುದಿಲ್ಲ, ಬದಲಾವಣೆ ತರುವುದಿಲ್ಲ ಎನ್ನಲಾಗುತ್ತದೆ. ಪಂಡಿತ್‌ ಜಸ್‌ರಾಜ್‌ರ ಜೀವನದಲ್ಲೂ ಹೀಗೇ ಆಯಿತು. ಅದು ಲಾಹೋರ್‌ನ ಸರಸ್ವತಿ ಮ್ಯೂಸಿಕ್‌ ಕಾಲೇಜಿನಲ್ಲಿ ಆಯೋಜನೆಯಾಗಿದ್ದ ಪ್ರಖ್ಯಾತ “ನಂದ ಸಂಗೀತೋತ್ಸವ’. ಆ ಉತ್ಸವದಲ್ಲಿ ಪಾಲ್ಗೊಂಡಿದ್ದ ಪಂಡಿತ್‌ ಪ್ರತಾಪ್‌ ನಾರಾಯಣ್‌ ಅವರಿಗೆ ತಬಲಾ ಸಾಥಿಯಾಗಿ ಬಾಲಕ ಜಸ್‌ರಾಜ್‌ ಕೂಡ ಲಾಹೋರ್‌ಗೆ ಹೋಗಿದ್ದರು. ಇವರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಲು ಪಂಡಿತ್‌ ಕುಮಾರ ಗಂಧರ್ವರೂ ಬಂದಿದ್ದರು. 2ನೇ ದಿನ ಸಂಜೆ ಕುಮಾರ್‌ ಗಂಧರ್ವರಿಗೆ ಲಾಹೋರ್‌ ರೆಡಿಯೋ ಸ್ಟೇಷನ್‌ನಲ್ಲಿ ಹಾಡಲು ಆಹ್ವಾನ ಬಂದಿತ್ತು. ಆಗ ಕುಮಾರ ಗಂಧರ್ವ ರು, ಪ್ರತಾಪ್‌ ನಾರಾಯಣರ ಬಳಿ ಬಂದು, “”ಸಂಜೆ ರೇಡಿಯೋ ದಲ್ಲಿ ಕಾರ್ಯಕ್ರಮವಿದೆ. ತಬಲಾವಾದಕ ಬೇಕು. ಜಸ್‌ರಾಜ್‌ ಪ್ರತಿಭಾನ್ವಿತ. ಅವನನ್ನು ಕರೆದೊಯ್ಯಲಾ?” ಎಂದರಂತೆ. ಕೂಡಲೇ ಪ್ರತಾಪ್‌ ಒಪ್ಪಿದರು.

ರೇಡಿಯೋ ಕಾರ್ಯಕ್ರಮವೂ ನಡೆಯಿತು. ಮರುದಿನ ಬೆಳಗ್ಗೆ ಉತ್ಸವದಲ್ಲಿ ಭಾಗಿಯಾಗಿದ್ದ ಮತ್ತೂಬ್ಬ ಸಂಗೀತಗಾರ ಪಂಡಿತ್‌ ಅಮರ್‌ನಾಥ್‌ ಜೀ ಅವರು ಪ್ರತಾಪ್‌ ನಾರಾಯಣರ ಜತೆ ಮಾತನಾಡುತ್ತಾ, “”ಏನ್ರೀ ಇದು? ಕುಮಾರ್‌ ಗಂಧರ್ವರನ್ನ ನಾವೆಲ್ಲ ಮಾದರಿ ಅನ್ನುವಂತೆ ನೋಡ್ತೀವಿ. ಆದರೆ ಅವರೇ ಹೀಗೆ ತಪ್ಪು ತಪ್ಪಾಗಿ ಹಾಡಿಬಿಟ್ಟರೆ ಹೇಗೆ?. ಭೀಮ್‌ಪಲಾಸ್‌ ರಾಗದಲ್ಲಿ ಆರಂಭಿಸಿ ಧೈವತ್‌ನಲ್ಲಿ ಸಮವಿಟ್ಟುಬಿಟ್ಟರಲ್ಲ!” ಎಂದು ಕುಹಕದಿಂದ ಮಾತನಾಡಿದರಂತೆ. ಇದನ್ನು ಕೇಳಿ ಬಾಲಕ ಜಸ್‌ರಾಜ್‌ಗೆ ಸಹಿಸಲಾಗಲಿಲ್ಲ. ” ಗಂಧರ್ವರು ಎಲ್ಲಿ ತಪ್ಪು ಹಾಡಿದ್ದಾರೆ? ಭೀಮ್‌ಪಲಾಸ್‌ನಲ್ಲಿ ಎಲ್ಲೂ ಎಡವಟ್ಟು ಮಾಡಿಲ್ಲ. ನೀವು ತಪ್ಪಾಗಿಭಾವಿಸಿದ್ದೀರಿ’ ಎಂದರಂತೆ!

ಆ ಕಾಲದಲ್ಲಿ ತಬಲಾವಾದಕರನ್ನು ಕೀಳಾಗಿಯೇ ನೋಡುವ ಮನಸ್ಥಿತಿ ಕೆಲವರಲ್ಲಿ ಇತ್ತು. ಈ ಕಾರಣಕ್ಕಾಗಿಯೇ ಅಮರ್‌ನಾಥ್‌ ಸಿಟ್ಟಿನಿಂದ, “”ಏ ಜಸ್‌ರಾಜ್‌! ನೀನು ಸತ್ತ ಪ್ರಾಣಿಯ ಚರ್ಮ ಬಾರಿಸುವವನು. ರಾಗಗಳ ಬಗ್ಗೆ ಮಾತಾಡೋಕ್ಕೆ ಅರ್ಹತೆ ಬೇಕು” ಎಂದುಬಿಟ್ಟರಂತೆ!

14 ವರ್ಷದ ಬಾಲಕ ಜಸ್‌ರಾಜ್‌ಗೆ ಈ ಮಾತು ಎಷ್ಟು ಚುಚ್ಚಿತೆಂದರೆ ನಾನು ದೊಡ್ಡ ಗಾಯಕನಾಗುವವರೆಗೂ ತಲೆಗೂದಲನ್ನು ಕತ್ತರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿಬಿಟ್ಟರಂತೆ! ಕೇವಲ ಜಸ್‌ರಾಜ್‌ ಅಷ್ಟೇ ಅಲ್ಲ, ತಮ್ಮ ತಮ್ಮನ ಬಗ್ಗೆ ಹೀಗೆ ಅವಹೇಳನ ಮಾಡಿ ಮಾತಾಡಿದ್ದು ಪ್ರತಾಪ್‌ ನಾರಾಯಣ್‌ ಅವರಿಗೂ ನೋವು ಕೊಟ್ಟಿತು. ಆ ಕ್ಷಣದಲ್ಲೇ ಅವರು ತಮ್ಮನನ್ನು ಶಾಸ್ತ್ರೀಯ ಸಂಗೀತ ಗಾಯಕನಾಗಿಸಬೇಕೆಂದು ಪಣತೊಟ್ಟುಬಿಟ್ಟರಂತೆ!

“ಮರುದಿನ ಬೆಳಗ್ಗೆ ನಾಲ್ಕು ಗಂಟೆಗೆ ಅಣ್ಣ ನನ್ನನ್ನು ಎಬ್ಬಿಸಿ, ಜಸ್‌ರಾಜ್‌ ಇವತ್ತಿಂದ ಗಾಯನ ಪಾಠ ಆರಂಭ” ಎಂದು ದೃಢ ಧ್ವನಿಯಲ್ಲಿ ಹೇಳಿದರು. ಮುಂದೆ ಜಸ್‌ರಾಜ್‌ರನ್ನು ಪ್ರಖ್ಯಾತ ಹಿಂದುಸ್ತಾನಿ ಸಂಗೀತಜ್ಞ ಗುಲಾಮ್‌ ಖಾದರ್‌ ಖಾನ್‌ ಅವರ ಗರಡಿಗೆ ಸೇರಿಸಿಬಿಟ್ಟರು. ಮೇವಾಕ್‌ ಘರಾನೆಯ ಗುಲಾಮ್‌ ಖಾದರ್‌ ಖಾನ್‌, ಜಸ್‌ರಾಜ್‌ರನ್ನು ಸಂಗೀತಲೋಕದ ಅವಿಚ್ಛಿನ್ನ ಶಕ್ತಿಯಾಗಿಸುವಲ್ಲಿ ದೊಡ್ಡ ಪಾತ್ರವಹಿಸಿಬಿಟ್ಟರು. ಅಂದು ಲಾಹೋರ್‌ನ ನಂದೋತ್ಸವದಲ್ಲಿ ತಬಲಾವಾದನ ಮಾಡಿದ್ದ ಹುಡುಗ, ಮುಂದೆ ಅದೇ ವೇದಿಕೆಯ ಮೇಲೆ ರಾಜ-ಮಹಾರಾಜರು, ಹೆಸರಾಂತ ಸಂಗೀತಗಾರರೆದುರು, “ಕಾಹೇ ಗಯೇಥೇ ಕೃಷ್ಣ ಕನ್ಹಯ್ನಾ..’ ಎಂದು ಆದ್ರìವಾಗಿ ಹಾಡಿದಾಗ, ಇಡೀ ಸಭಾಂಗಣ ಎಷ್ಟು ಮೂಕವಿಸ್ಮಿತವಾಯಿತೆಂದರೆ, ಆ ನಂದ ಉತ್ಸವದಲ್ಲಿ ಸಾಕ್ಷಾತ್‌ ಬಾಲ ಕೃಷ್ಣನೇ ವೇದಿಕೆಯ ಮೇಲೆ ಜಸ್‌ರಾಜ್‌ರ ಎದುರು ಅಂಬೆಗಾಲು ಇಡುತ್ತಿದ್ದಾನೇನೋ ಎಂಬಂತೆ ಭಾಸವಾಗುತ್ತಿತ್ತು ಎಂದು ಅಂದಿನ ಪತ್ರಿಕೆಗಳೆಲ್ಲ ಬರೆದಿದ್ದವು. ಪಂಡಿತ್‌ ಜಸ್‌ರಾಜ್‌ ಕೇವಲ ಅಪಾರ ಪ್ರತಿಭೆಯ ಸಂಗೀತರಾರರಾಗಿಯಷ್ಟೇ ಅಲ್ಲದೇ, ಭಾರತೀಯ ಸಂಗೀತವನ್ನು ದೇಶ-ವಿದೇಶಗಳಿಗೆ ಕೊಂಡೊಯ್ದ ಸಂಗೀತ ಸೇವಕರಾಗಿಯೂ ಜನಮಾನಸದಲ್ಲಿ ಉಳಿಯಲಿದ್ದಾರೆ. ಅವರು ಆರಂಭಿಸಿದ ಶಾಸ್ತ್ರೀಯ ಸಂಗೀತದ ಶಾಲೆಗಳು ಅಟ್ಲಾಂಟಾ, ಟಾಂಪಾ, ವ್ಯಾಂಕೋವರ್‌, ಟೊರೊಂಟೋ, ನ್ಯೂಯಾ ರ್ಕ್‌, ನ್ಯೂಜೆರ್ಸಿ, ಪಿಟ್ಸ್‌ಬರ್ಗ್‌, ಮುಂಬೈ ಮತ್ತು ಕೇರಳದಲ್ಲಿ ನಿತ್ಯ ಸಾವಿರಾರು ಸಂಗೀತ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುತ್ತಿವೆ. ಇದೇ ಜನವರಿಯಲ್ಲಿ ತಮ್ಮ 90ನೆಯ ವಯಸ್ಸಿಗೆ ಪದಾರ್ಪಣೆ ಮಾಡಿದ್ದ ಜಸ್‌ರಾಜ್‌ ಅವರು ಜಗದಾದ್ಯಂತ ಹರಡಿರುವ ತಮ್ಮ ಶಿಷ್ಯ ವೃಂದಕ್ಕೆ “ಸ್ಕೈಪ್‌’ ವಿಡಿಯೋ ಕಾಲಿಂಗ್‌ ಮೂಲಕ ಸಂಗೀತ ಪಾಠಗಳನ್ನು ಮಾಡುತ್ತಿದ್ದರಂತೆ! “ದೀವಾನ ಬನಾನಾ ಹೇ ತೋ ದೀವಾನ ಬನಾದೇ” ಎನ್ನುವ ಬೇಗಂ ಅಖ್ತರ್‌ರ ಆ ಹಾಡು, ಪಂಡಿತ್‌ ಜಸ್‌ರಾಜ್‌ ಎಂಬ ಸಂಗೀತ ಸಾಮ್ರಾಟನ ಜೀವನದಲ್ಲಿ ಅಕ್ಷರಶಃ ಸತ್ಯವಾಯಿತು.

ರಾಘವೇಂದ್ರ ಆಚಾರ್ಯ

ಟಾಪ್ ನ್ಯೂಸ್

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

Donald Trump Salry: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Kannada-Horata

Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

byndoor

Udupi: ಬೈಕಿಗೆ ಕಾರು ಢಿಕ್ಕಿ; ಸವಾರನಿಗೆ ಗಾಯ

dw

Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.