ಟ್ವಿಟರ್‌ಗೆ ಪರಾಗ್ ಅಗರ್ವಾಲ್ ಸ್ಪರ್ಶ
Team Udayavani, Dec 1, 2021, 7:30 AM IST
ಜಾಗತಿಕ ಮನ್ನಣೆಯ ಕಂಪೆನಿಗಳಾದ ಮೈಕ್ರೋಸಾಫ್ಟ್, ಗೂಗಲ್, ಐಬಿಎಂ, ಆಡೋಬ್‌ನಂಥ ಕಂಪೆನಿಗಳಲ್ಲಿ ಭಾರತ ಮೂಲದ ಸಿಇಒಗಳು ತಮ್ಮದೇ ಆದ ಛಾಪು ಒತ್ತುತ್ತಿದ್ದಾರೆ.
ಈಗ ಈ ಸಾಧಕರ ಸಾಲಿಗೆ ಭಾರತದ ಮತ್ತೊಬ್ಬ ಯಂಗ್ ಸಿಇಒವೊಬ್ಬರ ಆಗಮನವಾಗಿದೆ. ಸಾಮಾಜಿಕ ಜಾಲ ತಾಣ ಸಂಸ್ಥೆ ಟ್ವಿಟರ್‌ನ ನೂತನ ಸಿಇಒ ಆಗಿ ಪರಾಗ್ ಅಗರ್ವಾಲ್ ಅವರ ನೇಮಕವಾಗಿದೆ.
ಮಹಾರಾಷ್ಟ್ರದಲ್ಲಿ ಜನಿಸಿದ್ದ ಪರಾಗ್ ಅಗರ್ವಾಲ್, ಅಟಾಮಿಕ್ ಎನರ್ಜಿ ಸೆಂಟ್ರಲ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಬಳಿಕ ಬಾಂಬೆ ಐಐಟಿಯಲ್ಲಿ ಬಿಟೆಕ್ ಮುಗಿಸಿ, ಅಮೆರಿಕದ ಸ್ಟಾನ್‌ಫೋರ್ಡ್ ವಿವಿಯಲ್ಲಿ 2005ರಿಂದ 2012ರ ವರೆಗೆ ಪಿಎಚ್‌ಡಿ ಮಾಡಿದ್ದಾರೆ.
ಪರಾಗ್ ಅಷ್ಟೇ ಅಲ್ಲ, ಅವರ ಪತ್ನಿ ವಿನೀತಾ ವೈದ್ಯರಾಗಿದ್ದು, ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನಲ್ಲಿ ಎಂಡಿ ಮತ್ತು ಪಿಎಚ್‌ಡಿ ಮುಗಿಸಿದ್ದಾರೆ. ಔಷಧ ಅಭಿವೃದ್ಧಿ ಮತ್ತು ರೋಗಿಗಳ ಸೇವಾ ಪೂರೈಕೆ ವಿಚಾರದಲ್ಲಿ ಕೆಲಸ ಮಾಡುತ್ತಿದ್ದು, ವೆಂಚರ್ ಕ್ಯಾಪಿಟಲಿಸ್ಟ್ ಕೂಡ ಆಗಿದ್ದಾರೆ. ಪರಾಗ್ ಅವರ ತಾಯಿ ನಿವೃತ್ತ ಶಿಕ್ಷಕರಾಗಿದ್ದು, ತಂದೆ ಅಟಾಮಿಕ್ ಎನರ್ಜಿ ಸಂಸ್ಥೆಯ ಹಿರಿಯ ನಿರ್ದೇಶಕರಾಗಿದ್ದಾರೆ. ಪರಾಗ್-ವಿನೀತಾರಿಗೆ ಒಬ್ಬ ಪುತ್ರ ಇದ್ದಾನೆ.
2006ರಲ್ಲಿ ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ಸಂಶೋಧಕರಾಗಿ ಕೆಲಸ ಆರಂಭಿಸಿದ ಪರಾಗ್, 2007ರ ಜೂನ್‌ನಿಂದ 2008ರ ಸೆಪ್ಟಂಬರ್ ವರೆಗೆ ಯಾಹೂ ಕಂಪೆನಿಯಲ್ಲಿಯೂ ರಿಸರ್ಚರ್ ಆಗಿ ಕೆಲಸ ಮಾಡಿದ್ದರು. ಮತ್ತೆ ಮೈಕ್ರೋಸಾಫ್ಟ್ ಗೆ ಮರಳಿ ಬಂದು, ನಾಲ್ಕು ತಿಂಗಳು ಕೆಲಸ ಮಾಡಿ, ಎಟಿ ಆ್ಯಂಟ್‌ಟಿ ಲ್ಯಾಬ್ಸ್ ನಲ್ಲಿಯೂ ಕೆಲಸಕ್ಕೆ ಸೇರಿದ್ದರು. ಇಲ್ಲೂ ಕೇವಲ 4 ತಿಂಗಳು ಮಾತ್ರ ಕೆಲಸ ಮಾಡಿದ್ದರು.
ಇದನ್ನೂ ಓದಿ:ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!
2011ರಲ್ಲಿ ಟ್ವಿಟರ್ ಸಂಸ್ಥೆಗೆ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿ ಆರು ವರ್ಷಗಳ ಕಾಲ ಇದೇ ಹುದ್ದೆಯಲ್ಲಿಯೇ ಮುಂದುವರಿದಿದ್ದರು. 2017ರಲ್ಲಿ ಪರಾಗ್ ಅಗರ್ವಾಲ್ ಅವರನ್ನು ಕಂಪೆನಿಯ ಟೀಫ್ ಟೆಕ್ನಾಲಜಿ ಆಫೀಸರ್ ಆಗಿ ನೇಮಕ ಮಾಡಲಾಗಿತ್ತು.
ಒಂದು ರೀತಿ ಟ್ವಿಟರ್ ಸಂಸ್ಥೆಯ ಆರಂಭದಿಂದಲೂ ಇರುವ ಪರಾಗ್, ಈ ಕಂಪೆನಿಯ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. 2016-17ರಲ್ಲಿ ಟ್ವಿಟರ್ ಸಂಸ್ಥೆ ಅಸಾಧಾರಣ ಬೆಳವಣಿಗೆ ಸಾಧಿಸಿದ್ದು, ಇದಕ್ಕೆ ಇವರೇ ಕಾರಣ. 2019ರ ಡಿಸೆಂಬರ್‌ನಲ್ಲಿ ಪರಾಗ್ ಅವರನ್ನು ಟ್ವಿಟರ್ ಸಂಸ್ಥೆ ಯೋಜನೆಯ ಹೊಣೆ ನೀಡಲಾಗಿತ್ತು. ಇದನ್ನು ಟ್ವಿಟರ್‌ನಲ್ಲಿ ಹಂಚಿಕೆಯಾಗುತ್ತಿದ್ದ ಕೀಳು ಭಾಷೆ ಮತ್ತು ತಪ್ಪು ಮಾಹಿತಿಯನ್ನು ತಪ್ಪಿಸುವ ಕೆಲಸ ಮಾಡಲು ಆರಂಭಿಸಲಾಗಿತ್ತು. ಅಂದರೆ ಆರ್ಕಿಟೆಕ್ಟ್ ಎಂಜಿನಿಯರ್ಸ್ ಮತ್ತು ಡಿಸೈನರ್ಸ್‌ಗಳನ್ನು ಒಳಗೊಂಡ ಸ್ವತಂತ್ರ ತಂಡವಾಗಿತ್ತು.
ಈ ಹಿಂದೆ ಸಿಇಒ ಆಗಿದ್ದ ಜಾಕ್ ಡೋರ್ಸೆ ವಿಚಾರವಾಗಿ ಎಲಿಯಟ್ ಮ್ಯಾನೇಜ್‌ಮೆಂಟ್ ಕಂಪೆನಿಗೆ ಅಸಮಾಧಾನವಿತ್ತು. ಜಾಕ್ ಟ್ವಿಟರ್‌ನ ಸಹ-ಸ್ಥಾಪಕರಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಟ್ವಿಟರ್ ಸಂಸ್ಥೆಯ ಬೆಳವಣಿಗೆ ವಿಚಾರದಲ್ಲಿ ಜಾಕ್ ಕೆಲಸ ಮಾಡುತ್ತಿಲ್ಲ ಎಂಬ ಆರೋಪವಿತ್ತು. ಕಳೆದ ವರ್ಷವೇ ಕಂಪೆನಿ ಇವರಿಗೆ ಕರೆ ಮಾಡಿ ವಿಷಯ ತಿಳಿಸಿತ್ತು. ಆಗಿನಿಂದಲೇ ಪರಾಗ್ ಅವರಿಗೆ ಬೇರೆ ಬೇರೆ ಜವಾಬ್ದಾರಿಗಳನ್ನು ನೀಡಿ ಸಿಇಒ ಮಾಡಲು ಸಿದ್ಧತೆ ನಡೆಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆ ಮೇಲೆ ತಾಲಿ ‘ಬ್ಯಾನ್’ !
Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!
International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?
New Year 2025:ಹಳೆ ವ್ಯಕ್ತಿಗೆ ಹೊಸ ವರ್ಷ….ಹಳೆ ವರ್ಷದಲ್ಲಿ ಕಲಿತ ಎಲ್ಲಾ ಅನುಭವ ಪಾಠವಾಗಲಿ
ರಾಷ್ಟ್ರಮಟ್ಟದಲ್ಲೂ ಪ್ರತಿಭಟಿಸಲಿ, ಬಿಜೆಪಿಯವರೇ ಮೂಗು ಕೊಯ್ಯಿಸಿಕೊಳ್ತಾರೆ: ಪ್ರಿಯಾಂಕ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.