ಪಾರ್ಕಿನ್ಸನ್ ಬಗ್ಗೆ ಭಯ ಬೇಡ
Team Udayavani, Apr 12, 2022, 4:45 PM IST
ಪಾರ್ಕಿನ್ಸನ್ ರೋಗವೆಂಬುದು ಒಂದು ನ್ಯೂರೋ ಡಿಜೆನೆರೇಟಿವ್ ಡಿಸಾರ್ಡರ್. ಕನ್ನಡದಲ್ಲಿ ಹೇಳುವುದಾದರೆ ಚಲನೆಯಲ್ಲಿನ ಅಸ್ವಸ್ಥತೆ. ಕೈ ಮತ್ತು ಕಾಲುಗಳಲ್ಲಿ ನಡುಕ, ಚಲನೆಯಲ್ಲಿ ನಿಧಾನಗತಿ ಕಾಣಿಸುವುದು ಇದರ ಪ್ರಮುಖ ಲಕ್ಷಣ. ಹಾಗಾದರೆ, ಇದು ಯಾವ ರೀತಿ ಬಾಧಿಸುತ್ತದೆ? ಇದಕ್ಕೆ ಚಿಕಿತ್ಸೆ ಹೇಗೆ ಎಂಬುದರ ಮೇಲೊಂದು ನೋಟ.
ಪಾರ್ಕಿನ್ಸನ್ ಬಾಧಿಸುವುದೇಕೆ?
ಇದೇ ಕಾರಣದಿಂದ ಬರುತ್ತದೆ ಎಂದು ಹೇಳಲು ಅಸಾಧ್ಯ. ಅನುವಂಶಿಕ ಮತ್ತು ಪರಿಸರ ಅಂಶಗಳು ಕಾರಣವಿರಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಕೆಲವೊಮ್ಮೆ ಈ ಎರಡು ಸಂಯೋಜನೆಯ ಮೂಲಕವು ಬರಬಹುದು. ಈ ಕಾಯಿಲೆಗೆ ತುತ್ತಾದ ವ್ಯಕ್ತಿಯ ಮೆದುಳಿನಲ್ಲಿ ಡೋಪಮೈನ್ ನಷ್ಟ ಅನುಭವಿಸುತ್ತಾನೆ. ಡೋಪಮೈನ್ ಮುಖ್ಯವಾಗಿ ಚಲನೆ, ಭಾವನಾತ್ಮಕ ಪ್ರತಿಕ್ರಿಯೆಗಳು, ಸಂತೋಷ, ನೋವು ಅನುಭವಿಸುವ ಸಾಮರ್ಥ್ಯವನ್ನು ಹೊಂದಿದೆ. ಡೋಪಮೈನ್ ಹಾನಿಯಾದಂತೆ ಚಲನೆ ನಿಧಾನಗೊಳ್ಳುತ್ತದೆ.
ಪಾರ್ಕಿನ್ಸನ್ ಬಂದಿದೆ ಎಂದು ತಿಳಿಯುವುದು ಹೇಗೆ?
ನಡುಕ, ಸಣ್ಣ ಕೈಬರಹ, ವಾಸನೆಯ ನಷ್ಟ, ನಿದ್ರೆಗೆ ತೊಂದರೆ, ಓಡಲು ಅಥವಾ ನಡೆಯಲು ತೊಂದರೆ, ಮಲಬದ್ಧತೆ, ಮೃದು ಅಥವಾ ಕಡಿಮೆ ಧ್ವನಿ, ಭಾವನೆ ತೋರ್ಪಡಿಸಲು ಕಷ್ಟವಾಗುವುದು, ತಲೆತಿರುಗುವಿಕೆ, ಮೂಛೆì, ನಿಂತಿರುವಾಗ ಬಗ್ಗುವುದು ಪ್ರಮುಖ ಲಕ್ಷಣಗಳು. ಇವು ಕಾಣಿಸಿಕೊಂಡ ತತ್‌ಕ್ಷಣ ನರವಿಜ್ಞಾನಿ ವೈದ್ಯರನ್ನು ಕಾಣಬೇಕು.
ಪಾರ್ಕಿನ್ಸನ್ ಕಾಯಿಲೆ ಇರುವವರಿಗೆ ವ್ಯಾಯಾಮ ಬಹುಮುಖ್ಯ. ದಿನವೂ ತಪ್ಪದೇ ವ್ಯಾಯಾಮ ಮತ್ತು ದೈಹಿಕ ಕಸರತ್ತು ಮಾಡುತ್ತಿದ್ದರೆ ಪಾರ್ಕಿನ್ಸನ್ ಕಾಯಿಲೆಯಿಂದ ಗುಣಮುಖರಾಗಬಹುದು. ಜತೆಗೆ ಆಗಾಗ ತಜ್ಞ ವೈದ್ಯರನ್ನು ಭೇಟಿ ಮಾಡಿ ಅಗತ್ಯವಿರುವ ಚಿಕಿತ್ಸೆ ಪಡೆದರೆ, ಪಾರ್ಕಿನ್ಸನ್ ಜತೆಯಲ್ಲಿಯೂ ಬಾಳಬಹುದು.
– ಡಾ| ಸಾತ್ವಿಕ್ ಆರ್.ಶೆಟ್ಟಿ, ಮಣಿಪಾಲ್ ಆಸ್ಪತ್ರೆ, ಬೆಂಗಳೂರು.
ಚಿಕಿತ್ಸೆಯುಂಟೇ?
ಚಿಕಿತ್ಸೆ ಇದೆ. ಕೆಲವೊಮ್ಮೆ ಔಷಧಗಳನ್ನು ನೀಡಿ ನಿಯಂತ್ರಿಸಬಹುದು. ಇನ್ನೂ ಕೆಲವೊಮ್ಮೆ ಶಸ್ತ್ರಚಿಕಿತ್ಸೆ ನಡೆಸಿ ನಿವಾರಿಸಬಹುದು. ಹಾಗೆಯೇ, ಲೆಸಿಯೋನಿಂಗ್, ಡಿಯುಒಪಿಎ ಚಿಕಿತ್ಸೆ ಮೂಲಕವೂ ನಿಯಂತ್ರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.