ಸಂಸತ್ ಅರಳುವ ಸಮಯ
Team Udayavani, May 25, 2019, 5:00 AM IST
ಭಾರತದ ವೈವಿಧ್ಯತೆಯ ಪ್ರಧಾನ ಕಿಂಡಿ ಈ ಪಾರ್ಲಿಮೆಂಟ್. ಇಲ್ಲಿಗೆ ಆಯ್ಕೆಯಾಗಿ ಬರುವವರು ಕೇವಲ ರಾಜಕಾರಣಿಗಳು ಮಾತ್ರವೇ ಅಲ್ಲ. ಕ್ರೀಡಾಪಟುಗಳು, ಗಾಯಕರು, ನಟ- ನಟಿಯರು, ಬೇರೆ ಕ್ಷೇತ್ರಗಳ ಪರಿಣತರೂ ಇದ್ದಾರೆ. ಅದರಲ್ಲೂ ಮೊನ್ನೆ ರಚನೆಗೊಂಡ 17ನೇ ಸಂಸತ್ ಹಲವು ವಿಶೇಷತೆಗಳೊಂದಿಗೆ ಆಕರ್ಷಣೆ ಹುಟ್ಟಿಸಿದೆ. ಅದರ ಒಂದು ಝಲಕ್ ಈ ವಿಶೇಷ…
ಸಂಸತ್‌ಗೆ ಇವರೇ ಹೊಸ ಕಳೆ: ಸದನದಲ್ಲಿ ಕುಳಿತು ಚರ್ಚೆ ಕೇಳಿಸಿಕೊಂಡು, ವಾಪಸಾಗುವ ಸಂಸದರೂ ಅನೇಕರಿರುತ್ತಾರೆ. ಆದರೆ, ಈ ಬಾರಿ 17ನೇ ಲೋಕಸಭೆಗೆ ಕೆಲವು ಅಪರೂಪದ ಅನುಭವಿ, ಜ್ಞಾನಿಗಳ ಪ್ರವೇಶ ಆಗಿದೆ. ಯಾರವರು?
ಅಮಿತ್ ಶಾ: ಬಿಜೆಪಿಯ ಮಟ್ಟಿಗೆ ಚಾಣಕ್ಯ ಅಂತಲೇ ಗುರುತಿಸಿಕೊಂಡ ಅಮಿತ್ ಶಾ, ಇದೇ ಮೊದಲ ಬಾರಿಗೆ ಲೋಕಸಭೆಗೆ ಕಾಲಿಟ್ಟಿದ್ದಾರೆ. ಗುಜರಾತ್‌ನ ಗಾಂಧಿನಗರ ಕ್ಷೇತ್ರದಿಂದ ಕಣಕ್ಕಿಳಿದ ಅವರು 5 ಲಕ್ಷಕ್ಕೂ ಅಧಿಕ ಮತಗಳಿಂದ ದಾಖಲೆಯ ಗೆಲುವು ಪಡೆದಿದ್ದಾರೆ. ಮಾತಿನಲ್ಲೂ ಚಾಣಾಕ್ಷರಾದ ಶಾ, ಪ್ರತಿಪಕ್ಷಗಳ ಮಾತಿನ ಅಸ್ತ್ರಕ್ಕೆ ಪ್ರತಿಯೇಟು ನೀಡಬಲ್ಲಂಥ, ಆಳವಾಗಿ ಸಮರ್ಥಿಸಿಕೊಳ್ಳುವಂಥ ವ್ಯಕ್ತಿತ್ವದವರು. ಸಂಸತ್ತಿನ ಚರ್ಚೆಗಳಲ್ಲಿ ಮುಖ್ಯಧ್ವನಿಯೇ ಆಗಬಹುದೆಂಬ ನಿರೀಕ್ಷೆ ಎಲ್ಲರಿಗೂ ಇದೆ.
ರವಿಶಂಕರ್ ಪ್ರಸಾದ್: ಬಿಹಾರದ ಪಟನಾ ಸಾಹಿಬ್ ಕ್ಷೇತ್ರದಿಂದ ಸ್ಪರ್ಧಿಸಿ, ಕಾಂಗ್ರೆಸ್‌ನ ಶತ್ರುಘ್ನ ಸಿನ್ಹಾರನ್ನು ಮಣಿಸಿದ ಘಟಾನುಘಟಿ. ಬಿಜೆಪಿಯ ಇನ್ನೊಂದು ತೂಕದ ಧ್ವನಿ. ನ್ಯಾಯಾಂಗದ ಕುರಿತು ಅಪಾರ ಜ್ಞಾನವುಳ್ಳ ಇವರು, ಈ ಹಿಂದಿನ ಸರ್ಕಾರದಲ್ಲಿ ಕಾನೂನು ಸಚಿವರೂ ಆಗಿದ್ದಂಥವರು. ಸಂಸತ್ತಿನ ರಚನಾತ್ಮಕ ಚರ್ಚೆಗಳಲ್ಲಿ ಇವರ ಮಾರ್ಗದರ್ಶನವನ್ನು ನಿರೀಕ್ಷಿಸಲು ಅಡ್ಡಿಯಿಲ್ಲ.
ಸುಮಲತಾ: ಮಂಡ್ಯ ಕ್ಷೇತ್ರದ ರೋಚಕ ಹಣಾಹಣಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ, ಸಿಎಂ ಪುತ್ರನನ್ನು ಸೋಲಿಸಿದ ದಿಟ್ಟೆ. ಇಷ್ಟು ದಿನ ನಟಿಯಾಗಿ ಕಂಡಿದ್ದ ಸುಮಲತಾರ ಒಳಗೆ ಯೋಗ್ಯ ರಾಜಕಾರಣಿ, ಚತುರ ವಾಗ್ಮಿಯನ್ನು ಕಂಡಿದ್ದೂ ಇದೇ ಚುನಾವಣೆಯಲ್ಲಿಯೇ. ಆಲೋಚನೆಗೆ ಹಚ್ಚುವಂಥ ಮಾತಿನಿಂದಲೇ ಗಮನ ಸೆಳೆದಾಕೆ. ಪತಿ ಅಂಬರೀಶ್ ಅವರ ಸುದೀರ್ಘ ರಾಜಕೀಯದ ಅನುಭವವನ್ನು ಹತ್ತಿರದಿಂದ ನೋಡಿದ ಇವರಿಗೆ ಸಂಸತ್ ಅನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಹೊತ್ತೇನೂ ಬೇಕಿಲ್ಲ. ಚರ್ಚೆಗಳಲ್ಲಿ ಗಮನ ಸೆಳೆಯುವಂಥವರು.
ತೇಜಸ್ವಿ ಸೂರ್ಯ: ಹದಿನೇಳನೇ ಲೋಕಸಭೆಗೆ ಆಯ್ಕೆಯಾದ ಅತ್ಯಂತ ಕಿರಿಯ ಸಂಸದ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ರನ್ನು ಮಣಿಸಿ, ದಿಲ್ಲಿಗೆ ಮುಖಮಾಡಿದಂಥವರು. ಪ್ರಖರ ವಾಗ್ಮಿ, ವಸ್ತುನಿಷ್ಠವಾಗಿ ಮಾತಾಡಬಲ್ಲ ಯುವ ಪ್ರತಿಭೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆ ಮೇಲೆ ಅಪಾರ ಹಿಡಿತ, ಸ್ವತಃ ವಕೀಲರೂ ಆಗಿರುವುದರಿಂದ ಕಾನೂನಾತ್ಮಕ ಜ್ಞಾನ ಇವರ ಶಕ್ತಿ. ಸಂಸತ್ತಿನ ಗುಣಮಟ್ಟದ ಚರ್ಚೆಗಳಲ್ಲಿ ಇವರ ಧ್ವನಿಯೂ ಸೇರಿಕೊಳ್ಳ ಬಹುದು.
ಗೌತಮ್ ಗಂಭೀರ್, ಮಾಜಿ ಕ್ರಿಕೆಟಿಗ: ಚುನಾವಣೆಯ ಹೊಸ್ತಿಲಿನಲ್ಲಿ ಬಿಜೆಪಿ ಸೇರಿ, ಈಗ ಸಂಸತ್‌ಗೆ ಆಯ್ಕೆಯಾಗಿದ್ದಾರೆ. ಪೂರ್ವ ದೆಹಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅರವಿಂದ್ ಸಿಂಗ್ ಲೌಲಿಯನ್ನು ಪೆವಿಲಿಯನ್‌ನಲ್ಲಿ ಕೂರಿಸಿದ ಹೆಗ್ಗಳಿಕೆ.
ಪಡೆದ ಮತಗಳು: 6,96,156 – ಅಂತರ: 3,91,222
ರಾಜ್ಯವರ್ಧನ್ ಸಿಂಗ್ ರಾಥೋಡ್: ಒಲಿಂಪಿಕ್ ಪದಕ ವಿಜೇತ ಮಾಜಿ ಶೂಟರ್. ಇವರದ್ದು ಮರು ಆಯ್ಕೆ. ರಾಜಸ್ಥಾನದ ಜೈಪುರ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಪುನರಾಯ್ಕೆ ಆಗಿದ್ದಾರೆ.
ಪಡೆದ ಮತಗಳು: 8,20,132 – ಅಂತರ: 3,93,171
ಸಂಸತ್‌ನ ನಾರಿಶಕ್ತಿ: ಹದಿನೇಳನೇ ಲೋಕಸಭೆಗೆ ರಂಗು ತುಂಬಿರುವ ಇನ್ನೊಂದು ಸಂಗತಿ ನಾರಿಶಕ್ತಿ. 78 ಸಂಸದೆಯರ ದೊಡ್ಡ ಪಡೆಯನ್ನೇ ಇಲ್ಲಿ ಕಾಣಬಹುದು. ಅದರಲ್ಲಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶದಿಂದ ಆಯ್ಕೆಯಾದ ಸಂಸದ ನಾರಿಮಣಿಯರೇ ಹೆಚ್ಚು…
ಕರ್ನಾಟಕ
* ಶೋಭಾ ಕರಂದ್ಲಾಜೆ ಉಡುಪಿ- ಚಿಕ್ಕಮಗಳೂರು- (ಬಿಜೆಪಿ)
* ಸುಮಲತಾ- ಮಂಡ್ಯ (ಪಕ್ಷೇತರ)
ಜಾರ್ಖಂಡ್
* ಅನ್ನಪೂರ್ಣಾ ದೇವಿ- ಕೊಡಾರ್ಮ- (ಬಿಜೆಪಿ)
* ಗೀತಾ ಕೋರಾ- ಸಿಂಘºಮ್ (ಕಾಂಗ್ರೆಸ್)
ಪಂಜಾಬ್
* ಹರ್ಸಿಮ್ರತ್ ಕೌರ್ – ಭಟಿಂಡಾ (ಎಸ್‌ಎಡಿ)
* ಪ್ರಣೀತ್ ಕೌರ್- ಪಟಿಯಾಲ (ಕಾಂಗ್ರೆಸ್)
ತಮಿಳುನಾಡು
* ಜ್ಯೋತಿಮಣಿ- ಕರೂರ್ (ಕಾಂಗ್ರೆಸ್)
* ಸುಮತಿ- ಚೆನ್ನೈ ದಕ್ಷಿಣ (ಡಿಎಂಕೆ)
* ಕನ್ಹಿಮೊಳಿ- ತೂತುಕುಡಿ (ಡಿಎಂಕೆ)
ರಾಜಾಸ್ಥಾನ
* ರಂಜೀತ ಕೊಲಿ- ಭಾರತ್‌ಪುರ್ (ಬಿಜೆಪಿ)
* ಜಾಸ್ಕೌರ್ ಮೀನಾ- ಡೌಸಾ (ಬಿಜೆಪಿ)
* ದಿಯಾ ಕುಮಾರಿ- ರಾಜಸಮಂಡ್ (ಬಿಜೆಪಿ)
ಉತ್ತರಪ್ರದೇಶ
* ಸ್ಮತಿ ಇರಾನಿ- ಅಮೇಠಿ (ಬಿಜೆಪಿ)
* ಮನೇಕಾ ಗಾಂಧಿ- ಸುಲ್ತಾನ್‌ಪುರ್ (ಬಿಜೆಪಿ)
* ರೀಟಾ ಬಹುಗುಣ ಜೋಶಿ- ಅಲಹಾಬಾದ್ (ಬಿಜೆಪಿ)
* ಸಂಘಮಿತ್ರ ಮೌರ್ಯ- ಬದೌನ್ (ಬಿಜೆಪಿ)
* ರೇಖಾವರ್ಮ- ದೌರಾಹ್ರಾ (ಬಿಜೆಪಿ)
* ಸಂಗೀತಾ ಆಜಾದ್- ಲಾಲ್‌ಗಂಜ್ (ಬಿಎಸ್‌ಪಿ)
* ಹೇಮಾ ಮಾಲಿನಿ- ಮಥುರಾ (ಬಿಜೆಪಿ)
* ಕೇಶಾರಿ ದೇವಿ ಪಟೇಲ್- ಫುಲ್ಪುರ್ (ಬಿಜೆಪಿ)
* ಸಾಧ್ವಿ ನಿರಂಜನ್ ಜ್ಯೋತಿ- ಫತೇಪುರ್ (ಬಿಜೆಪಿ)
ಮಧ್ಯಪ್ರದೇಶ
* ಸಂಧ್ಯಾ ರೇ- ಭಿಂಡ್ (ಬಿಜೆಪಿ)
* ಸಾಧ್ವಿ ಪ್ರಜ್ಞಾ ಸಿಂಗ್ – ಭೋಪಾಲ್ (ಬಿಜೆಪಿ)
* ಹಿಮಾದ್ರಿ ಸಿಂಗ್- ಶಾಹೊªàಲ್ (ಬಿಜೆಪಿ)
* ರಿತಿ ಪಾಠಕ್- ಸಿಧಿ (ಬಿಜೆಪಿ)
ಛತ್ತೀಸ್‌ಗಢ
* ಜ್ಯೋತ್ಸಾ ಚರಣ್‌ದಾಸ್ ಮಹಾಂತ್- ಕೊಬ್ರಾ (ಕಾಂಗ್ರೆಸ್)
* ಗೋಮತಿ ಸಾಯಿ- ರಾಯ್‌ಗಢ್ (ಬಿಜೆಪಿ)
* ರೇಣುಕಾ ಸಿಂಗ್ ಸರುಟಾ- ಸರ್ಜುಗ (ಬಿಜೆಪಿ)
ಬಿಹಾರ
* ಮಿಸಾ ಭಾರತಿ- ಪಾಟಲಿಪುತ್ರ (ಆರ್‌ಜೆಡಿ)
* ರಮಾದೇವಿ- ಶಿಯೋಹಾರ್ (ಬಿಜೆಪಿ)
* ಕವಿತಾ ಸಿಂಗ್- ಶಿವಾನ್ (ಜೆಡಿಯು)
* ವೀಣಾ ದೇವಿ- ವೈಶಾಲಿ (ಎಲ್‌ಜೆಪಿ)
ಪಶ್ಚಿಮ ಬಂಗಾಳ
* ಕಕೋಲಿ ಘೋಷ್‌ದಸ್ತಿದಾರ್- ಬರಸಾತ್ (ತೃಣಮೂಲ)
* ಅಪರೂಪ ಪೊಡ್ಡಾರ್- ಅರಾಮ್‌ಬಾಗ್ (ತೃಣಮೂಲ)
* ನುಸ್ರತ್ ಜಹಾನ್ ರುಹಿ- ಬಸಿರ್ಹಾತ್ (ತೃಣಮೂಲ)
* ಶತಾಬ್ದಿ ರಾಯ್- ಬಿಭುìಮ್ (ತೃಣಮೂಲ)
* ಮಿಮಿ ಚಕ್ರವರ್ತಿ- ಜಾದವ್‌ಪುರ್ (ತೃಣಮೂಲ)
* ಪ್ರತಿಮಾ ಮೊಂಡಲ್- ಜಾಯ್‌ನಗರ್ (ತೃಣಮೂಲ)
* ಮಾಲಾ ರಾಯ್- ಕೋಲ್ಕತಾ ದಕ್ಷಿಣ (ತೃಣಮೂಲ)
* ಮಹುವಾ ಮೊಯಿತ್ರಾ- ಕೃಷ್ಣನಗರ (ತೃಣಮೂಲ)
* ಸಾಜಾ ಅಹ್ಮದ್- ಉಲುಬೆರಿಯಾ (ತೃಣಮೂಲ)
ಗುಜರಾತ್
* ಭಾರತಿ ಶಿಯಾಲ್- ಭಾವಾನಗರ್ (ಬಿಜೆಪಿ)
* ದರ್ಶನ ಜರ್ದೋಶ್- ಸೂರತ್ (ಬಿಜೆಪಿ)
* ರಂಜನಾ ಬೆನ್ ಭಟ್- ವಡೋದರಾ (ಬಿಜೆಪಿ)
* ಶಾರದಾ ಬೆನ್- ಮಹೇಸನಾ (ಬಿಜೆಪಿ)
* ಪೂನಮ್ ಬೆನ್ ಮಾದಮ್- ಜಾಮ್‌ನಗರ್ (ಬಿಜೆಪಿ)
ಮಹಾರಾಷ್ಟ್ರ
* ಸುಪ್ರಿಯಾ ಸುಳೆ- ಬಾರಾಮತಿ- (ಕಾಂಗ್ರೆಸ್)
* ಡಾ. ಭಾರತಿ ಪ್ರವೀಣ್ ಪವಾರ್- ದಿಂಡೋರಿ (ಬಿಜೆಪಿ)
* ಪೂನಮ್ ಮಹಾಜನ್- ಮುಂಬೈ ನಾರ್ತ್ ಸೆಂಟ್ರಲ್ (ಬಿಜೆಪಿ)
* ಡಾ. ಹೀನಾ ವಿಜಯಕುಮಾರ್ ಗಾವಿಟ್- ನಂದೂರ್ಬರ್ (ಬಿಜೆಪಿ)
* ರಕ್ಷಾ ಖಾಡ್ಸೆ- ರೇವರ್ (ಬಿಜೆಪಿ)
ಆಂಧ್ರಪ್ರದೇಶ
* ಗೊಡ್ಡೆಟಿ ಮಾಧೇವಿ- ಅರುಕು (ವೈಎಸ್ಸಾರ್‌ಸಿಪಿ)
* ಚಿಂತಾ ಅನುರಾಧಾ- ಅಮಲಾಪುರಂ (ವೈಎಸ್ಸಾರ್‌ಸಿಪಿ)
* ಬಿ.ವಿ. ಸತ್ಯವತಿ- ಅನಕಪಲ್ಲಿ (ವೈಎಸ್ಸಾರ್‌ಸಿಪಿ)
* ವಂಗಾ ಗೀತಾ ವಿಶ್ವನಾಥ್-
ಕಾಕಿನಾಡ (ವೈಎಸ್ಸಾರ್‌ಸಿಪಿ)
ಒರಿಸ್ಸಾ
* ಪ್ರಮಿಳಾ ಬಿಸಾಯಿ- ಅಸ್ಕಾ (ಬಿಜೆಡಿ)
* ಮಂಜುಲತಾ ಮಂಡಲ್- ಭದ್ರಕ್ (ಬಿಜೆಡಿ)
* ರಾಜಶ್ರೀ ಮಲ್ಲಿಕ್- ಜಗತ್‌ಸಿಂಗ್‌ಪುರ್ (ಬಿಜೆಡಿ)
* ಶರ್ಮಿಷ್ಠ ಸೇಥಿ- ಜಾಜು³ರ್ (ಬಿಜೆಡಿ)
* ಚಂದ್ರಾಣಿ – ಕಿಯೋಂಝರ್ (ಬಿಜೆಡಿ)
ಸುಮಲತಾ ಅಂಬರೀಶ್: ದಕ್ಷಿಣದ ಬಹುಭಾಷಾ ತಾರೆ. ದಿಢೀರ್ ರಾಜಕೀಯ ಪ್ರವೇಶ.
ಹೇಮಾ ಮಾಲಿನಿ: ಬಾಲಿವುಡ್‌ನ ಹಿರಿಯ ನಟಿ. ಉತ್ತರ ಪ್ರದೇಶದ ಮಥುರಾ ಕ್ಷೇತ್ರದಿಂದ 2ನೇ ಬಾರಿಗೆ ಸ್ಪರ್ಧಿಸಿ ಜಯಗಳಿಸಿದ್ದಾರೆ.
ಕಿರಣ್ ಖೇರ್: ಚಂಡೀಗಡ ಕ್ಷೇತ್ರದಿಂದ ಮರು ಆಯ್ಕೆ ಪಡೆದ ನಟಿ. ಕಾಂಗ್ರೆಸ್‌ನ ಪವನ್ ಕುಮಾರ್ ಬನ್ಸಾಲ್‌ರನ್ನು ಮಣಿಸಿದವರು.
ಮಿಮಿ ಚಕ್ರವರ್ತಿ: ಪ. ಬಂಗಾಳದ ಖ್ಯಾತ ನಟಿ. ಟಿಎಂಸಿ ಪಕ್ಷದಿಂದ ಟಿಕೆಟ್ ಪಡೆದು ಜಾಧವ್‌ಪುರದಲ್ಲಿ ಸ್ಪರ್ಧಿಸಿದ್ದರು. ಬಿಜೆಪಿಯ ಅನುಪಮ್ ಹಜ್ರಾ ವಿರುದ್ಧ ಗೆಲವು ಪಡೆದರು.
ಬಾಬುಲಾಲ್ ಸುಪ್ರಿಯೊ: ಗಾಯಕ, ನಟ. ಕಳೆದ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದರು. ಪ.ಬಂಗಾಳದ ಅಸಾನ್ಸೋಲ್‌ನಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ, ಟಿಎಂಸಿ ಅಭ್ಯರ್ಥಿ ಮೂನ್‌ರನ್ನು ಮಣಿಸಿದರು.
ದೀಪಕ್ ಅಧಿಕಾರಿ: ಬಂಗಾಳಿ ನಟ. ಘಾಟಲ್ ಕ್ಷೇತ್ರದಿಂದ ಟಿಎಂಸಿ ಟಿಕೆಟ್‌ನಿಂದ ಸ್ಪರ್ಧಿಸಿ ಸತತ 2ನೇ ಬಾರಿಗೆ ಸಂಸದರು.
ರವಿ ಕಿಶನ್: ಹಿಂದಿ, ಭೋಜು³ರಿ ಸಿನಿಮಾ ನಟ. ಕೈ ತೊರೆದು ಬಿಜೆಪಿ ಸೇರಿ, ಈಗ ಸಂಸದರು.
ನುಸ್ರತ್ ಜಹಾನ್ ರೂಹಿ: ಬಂಗಾಳಿಯ ಖ್ಯಾತ ನಟಿ. ಚುನಾವಣೆ ಹೊಸ್ತಿಲಿನಲ್ಲಿ ರಾಜಕೀಯ ಪ್ರವೇಶ. ಪಶ್ವಿಮ ಬಂಗಾಳದ ಬಸಿರ್ಹಾಟ್ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ನಿಂತು, ಬಿಜೆಪಿ ವಿರುದ್ಧ ಭಾರಿ ಅಂತರದಲ್ಲಿ ಗೆದ್ದಿªದ್ದಾರೆ.
ಹಂಸರಾಜ್ ಪದ್ಮಶ್ರೀ ಪುರಸ್ಕೃತ ಗಾಯಕ: ವಾಯವ್ಯ ದೆಹಲಿಯ ಬಿಜೆಪಿ ಸಂಸದ
ಎಂ. ತಿವಾರಿ: ನಟ, ಗಾಯಕ. ಶೀಲಾ ದಿಕ್ಷಿತ್ ವಿರುದ್ಧ ಜಯ ಸಾಧಿಸಿದ ಬಿಜೆಪಿಗ.
ಸನ್ನಿ ಡಿಯೋಲ್: ಬಾಲಿವುಡ್ ನಟ. ಪಂಜಾಬ್‌ನ ಗುರು ದಾಸ್‌ಪುರದಿಂದ ಆಯ್ಕೆ ಆದ ಬಿಜೆಪಿ ಸಂಸದ.
ಇವರಿಲ್ಲದ ಪಾರ್ಲಿಮೆಂಟ್ ಅನ್ನು ಊಹಿಸಲು ಸಾಧ್ಯವೇ?
ಎಲ್‌ಕೆ ಆಡ್ವಾಣಿ: 91 ವರ್ಷದ ಹಿರಿಯ ಜೀವ, ಸಂಸತ್‌ನಿಂದ ದೂರ. ಈ ಅನುಭವಿ ರಾಜಕಾರಣಿಗೆ ಬಿಜೆಪಿಯ ಟಿಕೆಟ್ ಸಿಗಲಿಲ್ಲ.
ಎಚ್‌ಡಿ ದೇವೇಗೌಡ: ರೈತ, ಕನ್ನಡಿಗರ ಪರ ಧ್ವನಿ ಆಗಿದ್ದ ಹಿರಿಯ ಸಂಸತ್ಪಟು. ಸೋತ ಕಾರಣದಿಂದ ಸಂಸತ್ ಪ್ರವೇಶಿಸುತ್ತಿಲ್ಲ.
ಮಲ್ಲಿಕಾರ್ಜುನ ಖರ್ಗೆ: ಹಿರಿಯ ಕೈ ನಾಯಕ, ವಿಪಕ್ಷ ಮುಖಂಡನಿಗೂ ದಿಲ್ಲಿ ಪ್ರವೇಶಿಸಲು ಎದುರಾಗಿದ್ದು ಸೋಲು.
ಶತ್ರುಘ್ನ ಸಿನ್ಹಾ: ಹಿರಿಯ ನಟ, ಕಾಂಗ್ರೆಸ್ ಪಕ್ಷದ ಮುಖಂಡನ ಪರಾಭವವೂ ಸಂಸತ್‌ಗೆ ಆದ ಒಂದು ನಷ್ಟ.
ಅನಂತ್ ಕುಮಾರ್: ವಾಕ್ಪಟು, ಉತ್ತಮ ಆಡಳಿತಗಾರ ಆಗಿದ್ದ ಇವರೀಗ ನಮ್ಮೊಂದಿಗಿಲ್ಲ. ಸಂಸತ್‌ಗೂ ಇದು ಬಹುದೊಡ್ಡ ನೋವು.
ಜ್ಯೋತಿರಾದಿತ್ಯ ಸಿಂಧಿಯಾ: ಕಾಂಗ್ರೆಸ್‌ನ ಕೆಲವೇ ಕೆಲವು ವಾಕ್ಪಟುಗಳಲ್ಲಿ ಒಬ್ಬರಾಗಿದ್ದ ಸಿಂಧಿಯಾಗೂ ಸೋಲು.
ಸುಷ್ಮಾ ಸ್ವರಾಜ್: ಒಳ್ಳೆಯ ವಾಕ್ಪಟು, ಅನುಭವಿ ರಾಜಕಾರಣಿ. ಅನಾರೋಗ್ಯದ ಕಾರಣದಿಂದ ಸ್ಪರ್ಧಿಸಿರಲಿಲ್ಲ.
ಮುದ್ದಹನುಮೇಗೌಡ: ಕನ್ನಡದ ವಿಚಾರಗಳ ಪರ ಧ್ವನಿಯಾಗಿದ್ದ ಇವರಿಗೆ ಕಾಂಗ್ರೆಸ್ ಟಿಕೆಟ್ ನೀಡದೆ, ನಷ್ಟ ತೆರಬೇಕಾಯಿತು.
ಮುರಳಿ ಮನೋಹರ ಜೋಶಿ: ಬಿಜೆಪಿಯ ಹಿರಿಯ ತಲೆ. ರಚನಾತ್ಮಕ ಚರ್ಚೆಗಾರ. ಸ್ಪರ್ಧೆಗೆ ಆಸಕ್ತಿ ತೋರಲಿಲ್ಲ.
ಸುಮಿತ್ರಾ ಮಹಾಜನ್: 16ನೇ ಸಂಸತ್ತನ್ನು ಮುನ್ನಡೆಸಿದ ಸ್ಪೀಕರ್. ಸ್ಪರ್ಧೆಗೆ ನಿರಾಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.