ಪೊಲೀಸರಿಗೆ ಉಘೇ ಎಂದ ಭಾರತ!
Team Udayavani, Dec 7, 2019, 6:14 AM IST
ಹೈದರಾಬಾದ್‌ಅತ್ಯಾಚಾರ-ಹತ್ಯೆ ಪ್ರಕರಣದ ಆರೋಪಿಗಳೆಲ್ಲ ಎನ್‌ಕೌಂಟರ್‌ನಲ್ಲಿ ಅಂತ್ಯವಾಗಿದ್ದಾರೆ. ಈ ವಿದ್ಯಮಾನಕ್ಕೆ ದೇಶಾದ್ಯಂತ ಸಂಭ್ರಮಾಚರಣೆಯ ಜತೆ ಜತೆಗೆ, ಅಲ್ಲಲ್ಲಿ ವಿರೋಧದ ಧ್ವನಿಗಳೂ ಕೇಳಿಬರುತ್ತಿವೆ. ಇಡೀ ದೇಶದ ಮನಕಲಕಿದ ಈ ಅತ್ಯಾಚಾರ ಪ್ರಕರಣ ಹಾಗೂ ಈಗಿನ ಎನ್‌ಕೌಂಟರ್ ಬಗ್ಗೆ ಬಂದ ಅಭಿಪ್ರಾಯಗಳಲ್ಲಿ, ಆಯ್ದ ಕೆಲವು ಇಲ್ಲಿವೆ…
ಕಡೇ ಪಕ್ಷ ಒಬ್ಬ ಮಗಳಿಗಾದರೂ ನ್ಯಾಯ ಸಿಕ್ಕಿತಲ್ಲ! ನಾನು ಹೈದರಾ ಬಾದ್‌ಪೊಲೀಸರಿಗೆ ವಂದಿಸುತ್ತೇನೆ. ಕಾನೂನು ಮುರಿದಾದರೂ ಸರಿ ಅಪರಾಧಿಗಳನ್ನು ದಂಡಿಸಿ, ಆಗ ಸಮಾಜ ಹೇಗೆ ಬದಲಾಗುತ್ತದೋ ನೋಡಿ ಎಂದು ನಾನು ಕಳೆದ 7 ವರ್ಷಗಳಿಂದ ಕೂಗುತ್ತಿದ್ದೇನೆ. ನಾನು ವರ್ಷಗಳಿಂದ ಕೋರ್ಟಿಗೆ ಅಲೆ ಯುತ್ತಿದ್ದೇನೆ. ಡಿಸೆಂಬರ್ 13ಕ್ಕೆ ಮತ್ತೂಮ್ಮೆ ಹೋಗಬೇಕು.
ಆಶಾದೇವಿ, ನಿರ್ಭಯಾ ತಾಯಿ
ಹೈದರಾಬಾದ್‌ಪೊಲೀಸರಿಗೆ ಮತ್ತು ಪೊಲೀಸರಿಗೆ ಪೊಲೀಸರಂತೆ ಕಾರ್ಯನಿರ್ವಹಿಸಲು ಅವಕಾಶ ಕೊಟ್ಟ ರಾಜಕೀಯ ನಾಯಕತ್ವಕ್ಕೆ ಅಭಿನಂದನೆ. ಒಳ್ಳೆಯತನಕ್ಕೆ ಯಾವಾಗಲೂ ಗೆಲುವಿದೆ (ಸೂಚನೆ: ಈ ವಿಚಾರದಲ್ಲಿ ಬೋಧನೆ ಮಾಡುತ್ತಿರುವವರೇ ಅರ್ಥಮಾಡಿಕೊಳ್ಳಿ- ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಎನ್‌ಕೌಂಟರ್ ಮಾಡಿದ್ದಾರೆ)
ರಾಜ್ಯವರ್ಧನ್ ರಾಥೋಡ್, ಬಿಜೆಪಿ ನಾಯಕ
ಅತ್ಯಾಚಾರಿಗಳು ತಮ್ಮ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಎಂಬ ಭಾರತೀಯ ಪೊಲೀಸರ “ವಾದ’ವನ್ನು ನಾನು ಶ್ಲಾ ಸುತ್ತೇನೆ. ಮಾಡಿದ ಕರ್ಮ ಅನುಭವಿಸಲೇಬೇಕು. ಈ ಅತ್ಯಾಚಾರಿಗಳೆಲ್ಲ ಸತ್ತದ್ದು ಒಳ್ಳೆಯದೇ ಆಯಿತು. ಪಾಪ ಆ ಹೆಣ್ಣುಮಗು ಎಂಥ ಭಯಾನಕ ಸಾವು ಕಂಡಿತು.
ಸಿಮೋನ್ ಕ್ರಾಮರ್, ಆಂಗ್ಲ ಲೇಖಕಿ
ಇದೇ ಹೈದ್ರಾಬಾದ್ ಪೊಲೀಸರು ಸಂತ್ರಸ್ತೆಯ ಕುಟುಂಬದವರಿಗೆ ಎಫ್ಐಆರ್ ದಾಖಲಿಸಲು ಬಿಡದೇ, ಇದು ತಮ್ಮ ವ್ಯಾಪ್ತಿಯೊಳಗೆಬರುವುದಿಲ್ಲ ಎಂದು ಸಾಗಹಾಕಿದ್ದರು. ಕುಟುಂಬ ಸದಸ್ಯರು ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಹೇಳಿದ ಕೂಡಲೇ ಟಾಲ್‌ಪ್ಲಾಜಾ ಬಳಿ ಸರ್ಚ್ ಮಾಡುವ ಬದಲು, “”ಆ ಹುಡುಗಿಗೆ ಬಾಯ್‌ಫ್ರೆಂಡ್ ಇದ್ದಾನಾ?” ಎಂದು ಪ್ರಶ್ನಿಸಿದ್ದರು.
ರೋಹಿಣಿ ಸಿಂಗ್
ಶ್ವೇತಾ ಪಂಡಿತ್, ಗಾಯಕಿ
ನ್ಯಾಯ ಅಂದರೆ ಇದು ! ಸತ್ಯವೇನೆಂದರೆ ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ ಮನಸ್ಸಿರುವುದಿಲ್ಲ. ಆದರೆ, ಒಂದೊಂದು ಪ್ರಕರಣ ಇತ್ಯರ್ಥವಾಗುವುದಕ್ಕೂ ದಶಕಗಳೇ ಹಿಡಿದರೆ, ಸಂತ್ರಸ್ತರ ಕುಟುಂಬಗಳು ನರಳುತ್ತಲೇ ಬದುಕ ಬೇಕಾಗುತ್ತದೆ. ಅಪರಾಧಿಗಳು ಅಪೀಲು ಮಾಡಿ ಹೊರಬಿದ್ದುಬಿಡುತ್ತಾರೆ.ಹೊರ ಬಂದು ಸಂತ್ರಸ್ತರನ್ನು ಉನ್ನಾವೋ ಘಟನೆಯಲ್ಲಾದಂತೆ ಸುಟ್ಟೂ ಹಾಕುತ್ತಾರೆ.
ಸೈನಾ ನೆಹ್ವಾಲ್, ಬ್ಯಾಡ್ಮಿಂಟನ್ ತಾರೆ
ಗ್ರೇಟ್ ಕೆಲಸ ಮಾಡಿದ್ದೀರಿ ಹೈದರಾಬಾದ್‌ಪೊಲೀಸರೇ. ನಿಮಗೆ ನಮ್ಮ ಸೆಲ್ಯೂಟ್!
ನಾಗಾರ್ಜುನ ಅಕ್ಕಿನೇನಿ, ತೆಲುಗು ನಟ
ಬೆಳಗ್ಗೆ ಎದ್ದವನಿಗೇ ಈ ಶುಭಸುದ್ದಿ ಸಿಕ್ಕಿತು. ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಿದೆ!
ಡಾ. ಕುಮಾರ್‌ವಿಶ್ವಾಸ್, ಆಪ್ ಮಾಜಿ ನಾಯಕ
ಧನ್ಯವಾದ ಹೈದರಾಬಾದ್‌ಪೊಲೀಸರೇ. ಎನ್‌ಕೌಂಟರ್ ವಿಚಾರದಲ್ಲಿ ಭಾರತೀಯ ನಾಗರಿಕರು ತೋರಿಸುತ್ತಿರುವ ಈ ಸಂತೋಷವು “ನ್ಯಾಯಾಂಗ ವ್ಯವಸ್ಥೆ ಮತ್ತು ರಾಜಕೀಯ ಇಚ್ಛಾಶಕ್ತಿಯ’ ಬಗ್ಗೆ ಅವರು ಎಷ್ಟೊಂದು ನಂಬಿಕೆ ಕಳೆದುಕೊಂಡಿದ್ದಾರೆ ಎನ್ನುವುದರ ಸೂಚನೆಯೂ ಹೌದು. ನ್ಯಾಯಾಂಗ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ನಾವೆಲ್ಲ ಯೋಚಿಸಬೇಕಿದೆ.
ಶೆಫಾಲಿ ವೈದ್ಯ, ಲೇಖಕಿ
ಕೇರಳದಲ್ಲಿ ಪಾತಕಿಯೊಬ್ಬ 13 ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದ. ಆ ಪಾತಕಿಯ ನ್ನು ಆ ಹೆಣ್ಣುಮಗುವಿನ ತಂದೆ ಕೊಂದುಹಾಕಿದ. ಏಕೆಂದರೆ, ಕೇರಳ ನ್ಯಾಯಾಲಯ ಅತ್ಯಾಚಾರಿಗೆ ಜಾಮೀನು ನೀಡಿತ್ತು! ನಿರ್ಭಯಾಳನ್ನು ಕೊಂದ “ಬಾಲಾಪರಾಧಿ’ ಈಗ ಆರಾಮಾಗಿ ಓಡಾಡಿಕೊಂಡಿದ್ದು, ಆತನಿಗೆ ಹೊಲಿಗೆ ಯಂತ್ರ ಒದಗಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ, ಇಂಥ ಎನ್‌ಕೌಂಟರ್‌ಗಳಿಂದ ಖುಷಿ ಆಗುವುದು ಸಹಜವಲ್ಲವೇನು?
ಸಂಜಯ್ ನಿರುಪಮ್, ಕಾಂಗ್ರೆಸ್ ನಾಯಕ
ಈ ಎನ್‌ಕೌಂಟರ್ ಕಾನೂನುಬಾಹಿರ ಎಂದೇನೋ ಅನ್ನಿಸಬಹುದು. ಆದರೆ ಇದರ ಅಗತ್ಯವಂತೂ ಈಗ ಇತ್ತು. ದೇಶದ ಮಹಿಳೆಯರಲ್ಲಿ ಭದ್ರತೆಯ ಭಾವನೆ ಮೂಡಿಸಿದ ಹೈದರಾಬಾದ್‌ಪೊಲೀಸರಿಗೆ ಅಭಿ ನಂದನೆ. ಈ ವಿಚಾರವನ್ನು ಮಾನವಹಕ್ಕು ಹೋರಾಟಗಾರರು ವಿರೋಧಿಸಬಹುದು, ಆದರೆ ಒಂದು ಬಲಿಷ್ಠ ಸಂದೇಶ ಕಳುಹಿಸಲೇಬೇಕಿತ್ತು.
ಮನೇಕಾ ಗಾಂಧಿ, ಬಿಜೆಪಿ ನಾಯಕಿ
ಇದು ಭಯಾನಕ ಘಟನೆ. ಜನರನ್ನು ಹೀಗೆಲ್ಲ ಸಾಯಿಸಬಾರದು. ಕಾನೂನನ್ನು ಕೈಗೆತ್ತಿಕೊಳ್ಳುವುದು ತಪ್ಪು, ಹೇಗಿದ್ದರೂ ನ್ಯಾಯಾಲಯಗಳು ಅಪರಾಧಿಗಳನ್ನು ನೇಣುಗಂಬವೇರಿಸುತ್ತಿದ್ದವಲ್ಲ?
ಹರ್ಭಜನ್ ಸಿಂಗ್, ಕ್ರಿಕೆಟರ್
ಅತ್ಯಾಚಾರಿಗಳನ್ನು ಹೇಗೆ ಶಿಕ್ಷಿಸಬೇಕು ಎಂದು ತೋರಿಸಿಕೊಟ್ಟ ತೆಲಂಗಾಣ ಪೊಲೀಸರಿಗೆ ಅಭಿನಂದನೆ. ಇಂಥ ಕೃತ್ಯಗಳನ್ನೆಸಗಲು ಭವಿಷ್ಯದಲ್ಲಿ ಯಾರಿಗೂ ಧೈರ್ಯವಾಗಬಾರದು.
ಸೋನಂ ಮಹಾಜನ್
ಅತ್ಯಾಚಾರಿಗಳಿಗೆ ಹಾಗೂ ಕೊಲೆಗಡುಗರಿಗೇಕೆ ಮಾನವಹಕ್ಕು? ಇಂಥ ರಾಕ್ಷಸರ ಸದ್ದಡಗಿಸುವ ದೇಶವಾಗೋಣ. ಸತ್ಯಮೇವ ಜಯತೇ.
ಬಬಿತಾ ಫೋಗಟ್
ಹೈದರಾಬಾದ್‌ಪೊಲೀಸರ ಈ ಕೆಲಸದಿಂ ದಾಗಿ ಇಡೀ ದೇಶ ಸಂತೋಷಪಡುತ್ತಿದೆ. ದೇಶದ ಮಹಿಳೆಯರಲ್ಲಿ ಇಂದು ಭಿನ್ನ ರೀತಿಯ ಸಕಾರಾತ್ಮಕ ಬೆಳಕು ಮೂಡಿದೆ.
ಅಶೋಕ್ ಪಂಡಿತ್, ನಿರ್ದೇಶಕ
ಈ ನಾಲ್ಕೂ ಅತ್ಯಾಚಾರಿಗಳನ್ನು ಹೊಡೆದುರುಳಿಸಿದ ಪೊಲೀಸರ ವಿರುದ್ಧ ಯಾರೂ ಬೆರಳು ತೋರಿಸಬಾರದು. ಅವರಿಗೆ ಯಾವುದೇ ಪ್ರಶ್ನೆ ಕೇಳಬಾರದು. ಬದಲಾಗಿ, ಈ ದಿಟ್ಟತನಕ್ಕಾಗಿ ಅವರಿಗೆ ಅತ್ಯುನ್ನತ ಪೊಲೀಸ್ ಅವಾರ್ಡ್‌ಗಳನ್ನು ಕೊಡಬೇಕು.
ರುಚಿರಾ ಚತುರ್ವೇದಿ, ಕಾಂಗ್ರೆಸ್ ಸದಸ್ಯೆ
ವ್ಯವಸ್ಥೆಯ ಮೇಲಿನ ಅಸಮಾಧಾನವು ನಾವು ಈ ಎನ್‌ಕೌಂಟರ್ ಅನ್ನು ಶ್ಲಾ ಸಲು ಕಾರಣವಾಗಿರಬಹುದು. ಆದರೆ ಇಂಥ ಎನ್‌ಕೌಂಟರ್‌ಗಳಿಂದಾಗಿ ಕಾನೂನಿನ ಉಲ್ಲಂಘನೆಯು ಸಹಜವಾಗಿಬಿಡುತ್ತದೆ. ನಮಗೆ ಎಷ್ಟೇ ಸಿಟ್ಟಿರಲಿ, ಅಸಮಾಧಾನವಿರಲಿ, ಕಾನೂನನ್ನು ಕೈಗೆತ್ತಿಕೊಂಡೆವೆಂದರೆ, ನಮ್ಮ ದೇಶವು mobocracy ಆಗುತ್ತದಷ್ಟೇ ಹೊರತು democracy ಆಗುವುದಿಲ್ಲ.
ಶಾಕಿಂಗ್. ನಮಗೇನಾಗಿದೆ? ಇವರೇ ನಿಜವಾದ ಅಪರಾಧಿಗಳು ಎನ್ನುವುದಕ್ಕೆ ಸಾಕ್ಷ್ಯವೆಲ್ಲಿದೆ? ಬಹುಶಃ ಆ ನಾಲ್ವರಿಗೆ ಒಬ್ಬ ವಕೀಲನೂ ಇರಲಿಲ್ಲವೆನಿಸುತ್ತದೆ, ಅವರ ವಿಚಾರಣೆಯೂ ಆಗಲಿಲ್ಲ. ಅಂಥವರನ್ನು ಎನ್‌ಕೌಂಟರ್‌ನಲ್ಲಿ ಸಾಯಿಸಲಾಗಿದೆ. ನಾವು ಸಂಭ್ರಮಾಚರಿಸುತ್ತಿದ್ದೇವೆ!
ಸಂಜುಕ್ತಾ ಬಸು, ಖ್ಯಾತ ಫೋಟೋಗ್ರಾಫರ್
ಸಂಜುಕ್ತಾ ಅವರೇ, ಯಾವ ಸಾಕ್ಷ್ಯಾಧಾರಗಳು ಇಲ್ಲದೆಯೇ ನೀವು ಪೊಲೀಸರನ್ನು ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸುತ್ತಿದ್ದೀರಿ. ಈ ಎನ್‌ಕೌಂಟರ್ ನಕಲಿ ಎನ್ನುವುದಕ್ಕೆ ನಿಮ್ಮ ಬಳಿ ಮಾಹಿತಿ ಇದೆಯೇ, ತನಿಖೆ, ವಿಚಾರಣೆ ಆಗಿದೆಯೇ? ಕ್ರಿಮಿನಲ್‌ಗಳಿಗೆ ಕೋರ್ಟ್‌ನಲ್ಲಿ ವಿಚಾರಣೆ ನಡೆಯಬೇಕು, ಆದರೆ ಹೈದರಾಬಾದ್‌ಪೊಲೀಸರನ್ನು ವಿಚಾರಣೆ ನಡೆಸದೆಯೇ ಶಿಕ್ಷಿಸಬೇಕೇ? ಇದ್ಯಾವ ನ್ಯಾಯ?
ಅರುಣ್ ಬೋತ್ರಾ, ಹಿರಿಯ ಪೊಲೀಸ್ ಅಧಿಕಾರಿ
ಶೋಭಾ ಕರಂದ್ಲಾಜೆ, ಬಿಜೆಪಿ ನಾಯಕಿ
ನಾನು ಹೈದರಾಬಾದ್‌ಪೊಲೀಸರಿಗೆ ಅಭಿನಂದಿಸುತ್ತೇನೆ. ಇಂದು ನಾವು ನಮ್ಮ ದೇಶದ ಹೆಣ್ಣುಮಕ್ಕಳನ್ನು ರಕ್ಷಿಸಬೇಕಿದೆ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕಿದೆ.
ಧನ್ಯಾ ರಾಜೇಂದ್ರನ್, ಪತ್ರಕರ್ತೆ
ತೆಲಂಗಾಣ ಪೊಲೀಸರನ್ನು ನೀವು ಈಗ ಅಭಿನಂದಿಸುತ್ತಿರಬಹುದು, ಆದರೆ ಇದೇ ಪೊಲೀಸರು ಸಂತ್ರಸ್ತೆಯ ಕುಟುಂಬವನ್ನು ಹೇಗೆ ನಡೆಸಿಕೊಂಡರು, ಏನೆಲ್ಲ ಮಾತನಾಡಿದರು ಎನ್ನುವುದನ್ನು ಮರೆಯದಿರಿ. ಪೊಲೀಸರು ತಮ್ಮ ಕಾರ್ಯವೈಖರಿಯನ್ನು ಬದಲಿಸಿಕೊಳ್ಳಬೇಕಾದ ಅಗತ್ಯವೂ ಇದೆ. ನಿಮ್ಮ ಈ ಸಂಭ್ರಮದಲ್ಲಿ ಅವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಬೇಡ.
ಕಾಂಚನ್ ಗುಪ್ತಾ
ನಮ್ಮ ನ್ಯಾಯಾಂಗ ವ್ಯವಸ್ಥೆಯ ಪರಿಸ್ಥಿತಿ: 59,535 ಕೇಸುಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದರೆ, 45 ಲಕ್ಷ ಪ್ರಕರಣಗಳು ಹೈಕೋರ್ಟ್‌ನಲ್ಲಿ ಹಾಗೂ 31.57 ಲಕ್ಷ ಪ್ರಕರಣಗಳು ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇವೆ. ಹೀಗಿರುವಾಗ ಜನಕ್ಕೆ “ಕಾನೂನಿನ ಪ್ರಕ್ರಿಯೆ’ಗಳ ಮೇಲೆ ನಂಬಿಕೆಯಾದರೂ ಹೇಗೆ ಬಂದೀತು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.