ಪೇಟೆಂಟ್ ಲೆಕ್ಕದಲ್ಲಿ ರೈತರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪೆಪ್ಸಿಕೋ
Team Udayavani, Apr 28, 2019, 6:00 AM IST
ಗುಜರಾತ್‌ನಲ್ಲಿ ಆಲೂಗಡ್ಡೆಯ ತಳಿಯೊಂದನ್ನು ಬೆಳೆದು ರೈತರು ತಮ್ಮ ಆದಾಯದ ಮೂಲವನ್ನು ನೋಡಿಕೊಂಡಿದ್ದಾರೆ. ಆದರೆ ಇದೀಗ ಆ ಆಲೂಗಡ್ಡೆ ಬೆಳೆ ಅಮೆರಿಕ ಮೂಲದ ಪೆಪ್ಸಿಕೋ ಕಂಪೆನಿಯ ಕಣ್ಣು ಕೆಂಪಾಗಿಸಿದೆ. ಪೆಪ್ಸಿಕೋ ಸಂಸ್ಥೆ ಈ ಜಾತಿಯ ಆಲೂಗಡ್ಡೆಯ ಮೇಲೆ ವಿಶೇಷ ಹಕ್ಕು ಹೊಂದಿದೆ ಎಂದು ಹೇಳಿದೆ. ಈ ಆಲೂಗಡ್ಡೆ ತಳಿಯನ್ನು ಬೆಳೆದ ಗುಜರಾತ್‌ನ ಕೆಲವು ರೈತರ ವಿರುದ್ಧ ಸಂಸ್ಥೆ ಕೋರ್ಟ್‌ನಲ್ಲಿ ದಾವೆ ಹೂಡಿದೆ. “ಸಂಸ್ಥೆಯ ಅನುಮತಿ ಇಲ್ಲದೇ ಅಕ್ರಮವಾಗಿ ಇದನ್ನು ಬೆಳೆಯಲಾಗುತ್ತಿದೆ. ಇದು ಹಕ್ಕು ಸ್ವಾಮ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಸಂಸ್ಥೆ ಆರೋಪಿಸಿದೆ. ಪರಿಣಾಮವಾಗಿ ಗುಜ ರಾತ್‌ನ ಸಬರ್‌ಕಾಂತಾ ಮತ್ತು ಆರವಳ್ಳಿ ಜಿಲ್ಲೆಗಳ 9 ರೈತರ ಮೇಲೆ ಪೆಪ್ಸಿಕೋ ಸಂಸ್ಥೆ ಕೇಸ್ ದಾಖಲಿಸಿದೆ. ಅಹ್ಮದಾಬಾದ್‌ನ ವಾಣಿಜ್ಯ ನ್ಯಾಯಾಲಯ ಈ ನಿರ್ದಿಷ್ಟ ಮಾದರಿಯ ಆಲೂಗಡ್ಡೆ ಬೆಳೆಯದಂತೆ ತಾತ್ಕಾಲಿಕ ತಡೆ ನೀಡಿದೆ.
ಗೊಂದಲ ಯಾಕೆ?
ಪೆಪ್ಸಿಕೋ ಕಂಪೆನಿ ತನ್ನ Lays ಬ್ರ್ಯಾಂಡ್ ಮೂಲಕ ತಯಾರಿಸುವ ಚಿಪ್ಸ್ ಗೆ ಎಫ್ಎಲ್ 2027 ಎಂಬ ವಿಶೇಷ ತಳಿಯ ಆಲೂಗಡ್ಡೆಯನ್ನು ಬಳಸುತ್ತಿದೆ. ಇದು ಎಫ್ಎಲ್ 1867 ಹಾಗೂ ವಿಸ್‌ಚಿಪ್ (Wischip) ತಳಿಗಳ ಹೈಬ್ರಿಡ್ ತಳಿಯಾಗಿದೆ. ಪೆಪ್ಸಿಕೋ ಸಂಸ್ಥೆಯು ಈ ವಿಶೇಷ ಎಫ್ಎಲ್ 2027 ಆಲೂ ತಳಿಯನ್ನು ಸಸ್ಯ ಮಾದರಿ ಮತ್ತು ರೈತರ ಹಕ್ಕು ರಕ್ಷಣೆ ಕಾಯ್ದೆ (PPV FR Act) ಅಡಿ 2001ರಲ್ಲಿ ನೋಂದಾಯಿಸಿಕೊಂಡಿದೆ. ಇದೇ ತಳಿಯ ಆಲೂಗಡ್ಡೆಯನ್ನು ಚಿಪ್ಸ್ ತಯಾರಿಕೆಗೆ ಬಳಸುತ್ತಿತ್ತು. 2009ರ ಬಳಿಕ ಎಫ್ಸಿ 5 ಆಲೂಗಡ್ಡೆಯ ಹಕ್ಕು ಪಡೆದಿತ್ತು. ಈ ಅಂಶ ಈಗ ವಾದ-ಪ್ರತಿವಾದಕ್ಕೆ ಕಾರಣ ವಾಗಿದೆ. 2001ರಿಂದಲೇ ಭಾರತದ ಆಲೂಗಡ್ಡೆಗಳನ್ನು ತನ್ನ ವಿವಿಧ ಬಗೆಯ ಚಾಟ್ಸ್ ತಯಾರಿಕೆಗೆ ಬಳಸಿಕೊಳ್ಳುತಿದೆ. 2009ರ ಬಳಿಕ ಇದನ್ನು ಬಳಸುತ್ತಿತ್ತು.
ಲ್ಯಾಬ್ ಟೆಸ್ಟ್‌ನಲ್ಲೂ ಸಾಬೀತು
ರೈತರು ಬೆಳೆದ ಆಲೂಗಡ್ಡೆಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ. ಇದನ್ನು ಐಸಿಆರ್ ಮತ್ತು ಸೆಂಡ್ರಲ್ ಪೊಟೇಟೋ ರಿಸರ್ಚ್ ಇನ್‌ಸ್ಟಿಟ್ಯೂಟ್ ಶಿಮ್ಲಾದಲ್ಲಿ ಪರೀಕ್ಷೆ ಮಾಡಲಾಗಿದೆ. ಇದರ ಡಿಎನ್‌ಎ ವರದಿಯಲ್ಲಿ ಸಾಬೀತಾಗಿದೆ. ಬಳಿಕ ರೈತರ ವಿರುದ್ಧ ಪೆಪ್ಸಿಕೋ ಪ್ರಕರಣ ದಾಖಲಿಸಿದೆ.
ಸಂಸ್ಥೆ ವಿರುದ್ಧ ಹೋರಾಟ
ರೈತರ ಮೇಲೆ ಕೇಸ್ ಹಾಕಿರುವ ಪೆಪ್ಸಿಕೋ ಕಂಪೆನಿಯ ವಿರುದ್ಧ ರೈತರು ಮತ್ತು ಹಲವು ಸಂಘಟನೆಗಳು ಈಗಾಗಲೇ ಹೋರಾಟ ಪ್ರಾರಂಭಿಸಿವೆ. ಇದರೊಂದಿಗೆ ರೈತರು ಮತ್ತು ಎಂಎನ್‌ಸಿ (ಮಲ್ಟಿ ನ್ಯಾಶನಲ್) ಕಂಪೆನಿಗಳ ನಡುವಿನ ಸಂಘರ್ಷಕ್ಕೆ ಆಲೂಗಡ್ಡೆ ಕಾರಣವಾಗಿದೆ.
ಶೇ. 50 ಆಲೂ ಪೆಪ್ಸಿಕೋ ಪಾಲು
ಭಾರತದ ಶೇ. 50ರಷ್ಟು ರಫ್ತಾಗುತ್ತಿದ್ದ ಪಾಲಿನ ಆಲೂಗಡ್ಡೆಯನ್ನು ಪೆಪ್ಸಿಕೋ ಆಮದು ಮಾಡಿಕೊಳ್ಳುತ್ತಿತ್ತು. ಪಂಜಾಬ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ರಾಜ್ಯಗಳಿಂದ ಪೆಪ್ಸಿಕೋ ಆಲೂಗಡ್ಡೆಯನ್ನು ಪಡೆಯುತ್ತಿತ್ತು. ಕ್ರಿಸ್ಪೀ ಚಾಟ್ಸ್ ಗಳಿಗೆ ಭಾರತದ ಆಲೂಗಡ್ಡೆಯನ್ನು ಬಳಸುವ ಸಂಸ್ಥೆ ಲೇಸ್ ಚಿಪ್ಸ್‌ಗಾಗಿ ಮಾತ್ರ ಪ್ರತ್ಯೇಕ ಬ್ರ್ಯಾಂಡ್ ಒಂದನ್ನು ಬಳಸುತಿತ್ತು.
ಪಂಜಾಬ್‌ನಲ್ಲಿ ಬೆಳೆಯಲು ಅನುಮತಿ!
2009ರಲ್ಲಿ ಈ ತಳಿಯನ್ನು ಭಾರತದಲ್ಲಿ ಎಫ್ಸಿ 5 ಎಂಬ ಟ್ರೇಡ್ ಮಾರ್ಕ್‌ನೊಂದಿಗೆ ಪರಿಚಯಿಸ ಲಾಯಿತು. ಪಂಜಾಬ್‌ನ ಕೆಲವು ರೈತರಿಗೆ ಈ ಪ್ರಭೇದದ ಆಲೂಗಡ್ಡೆ ಬೆಳೆಯುವ ಹಕ್ಕನ್ನು ಸಂಸ್ಥೆ ನೀಡಿತ್ತು. ಹಕ್ಕು ಪಡೆದ ರೈತರು ಬೆಳೆದ ಆ ಆಲೂಗಡ್ಡೆಯನ್ನು ಕಂಪೆನಿಯೇ ನೇರವಾಗಿ ಖರೀದಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಗುಜರಾತ್‌ನಲ್ಲಿ ತಮ್ಮ ಅನುಮತಿ ಪಡೆಯದೆಯೇ ಕೆಲವು ರೈತರು ಈ ಮಾದರಿಯ ಆಲೂಗಡ್ಡೆ ಬೆಳೆಯುತ್ತಿರುವುದು ಪೆಪ್ಸಿಕೋ
ಗಮನಕ್ಕೆ ಬಂದಿತ್ತು.
ರೈತರ ವಾದ ಹೀಗೆ
ಗುಜರಾತ್‌ನ 9 ರೈತರು ಈ ಆಲೂಗಡ್ಡೆ ತಳಿಯ ಬೀಜಗಳನ್ನು ಸ್ಥಳೀಯ ವಾಗಿಯೇ ಖರೀದಿಸಿದ್ದಾರೆ. ಇವುಗಳು ಸ್ವಂತ ಜಮೀನಿನಲ್ಲೇ ತಯಾರಿಸಲ್ಪಟ್ಟ ಬೀಜಗಳಾಗಿವೆ. ಪೆಪ್ಸಿಕೋ ಕಂಪೆನಿಗೆ ಈ ಮಾದರಿಯ ತಳಿಯು ಸೇರಿದ್ದೆಂಬ ವಿಚಾರ ಈ ರೈತರಿಗೆ ತಿಳಿದಿರಲಿಲ್ಲ. ಈ ವಿಷಯ ಕಂಪೆನಿಗೆ ಗೊತ್ತಿದ್ದರೂ ರೈತರಿಗೆ ಇರುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ರೈತರ ವಿರುದ್ಧ ಪ್ರಕರಣ ಹೂಡಿರುವುದು ಬಹಳ ಗಂಭೀರ. ಹೆದರಿಸಲು ಕೋರ್ಟ್ ಅಸ್ತ್ರ ಬಳಸಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
1 ಕೋಟಿ ರೂ. ಪರಿಹಾರ ಕೇಳಿದ ಪೆಪ್ಸಿಕೋ
ಹಕ್ಕುಸ್ವಾಮ್ಯವನ್ನು ಗುಜರಾತ್ ರೈತರು ಮೀರಿದ್ದಾರೆ ಎಂದಿರುವ ಪೆಪ್ಸಿಕೋ 9 ರೈತರಿಂದ ಸುಮಾರು 1 ಕೋ. ರೂ. ಅನ್ನು ಪರಿಹಾರದ ರೂಪದಲ್ಲಿ ಕೇಳಿದೆ. ಮಾತ್ರವಲ್ಲದೇ ಈ ಎರಡು ಜಿಲ್ಲೆಗಳ ರೈತರಿಂದ ತಲಾ 20 ಲಕ್ಷ ರೂ.ಅನ್ನು ಪರಿಹಾರ ರೂಪದಲ್ಲಿ ಸಂಸ್ಥೆಗೆ ನೀಡುವಂತೆ ಕೋರ್ಟ್‌ನಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖೀಸಿದೆ. ಈ ಪ್ರಕರಣದಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಬಾಯ್‌ಕಾಟ್ ಪೆಪ್ಸಿಕೋ ಅಭಿಯಾನ
ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ವಿಶೇಷವಾಗಿ ಪೆಪ್ಸಿಕೋ ಸಂಸ್ಥೆಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಅಭಿಯಾನ ಆರಂಭಗೊಂಡಿದೆ. ಭಾರತದ ರೈತರು ಅಭಿವೃದ್ಧಿ ಪಡಿಸಿದ ವಿಶೇಷ ಆಲೂಗಡ್ಡೆಯ ಮೇಲೆ ಸವಾರಿ ಮಾಡಲು ಹೊರಟಿರುವ ಪೆಪ್ಸಿಕೋ ಅನ್ನು ಬಹಿಷ್ಕರಿಸಬೇಕು ಎಂಬ ಕೂಗು ಬಲವಾಗಿ ಕೇಳಿಬಂದಿದೆ. ಇದಕ್ಕಾಗಿ #BoycottPepsi ಎಂಬ ಹ್ಯಾಶ್‌ಟ್ಯಾಗ್ ಅಭಿಯಾನ ಟ್ವೀಟರ್‌ನಲ್ಲಿ ಪ್ರಾರಂಭವಾಗಿದೆ.
ಉದಯವಾಣಿ ಸ್ಪೆಷಲ್ ಡೆಸ್ಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Tribute Dr.Singh: ಡಾ.ಮನಮೋಹನ್ ಸಿಂಗ್ ಆಡಳಿತದ ಜನಪರ ಯೋಜನೆಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.