ತೈಲ ವಾಹನಗಳ ದೀರ್ಘಾಯುಷ್ಯ; ಇ-ಕಾರುಗಳಿಗೆ ಹಿನ್ನಡೆ
Team Udayavani, Mar 22, 2021, 6:46 AM IST
ಜಗತ್ತಿನ ಹಲವು ರಾಷ್ಟ್ರಗಳು ಮತ್ತು ವಾಹನ ತಯಾರಕ ಕಂಪೆನಿಗಳು ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ನಿರೀಕ್ಷೆ ಹೊಂದಿವೆ. ಹಸುರು ಮನೆ ಅನಿಲಗಳನ್ನು ನಿಯಂತ್ರಿಸಲು ಎಲೆಕ್ಟ್ರಾನಿಕ್ ವಾಹನಗಳೆ ಉತ್ತಮ ಮಾರ್ಗ ಎಂದು ಕಂಡುಕೊಂಡಿವೆ. ಆದರೆ ಅಮೆರಿಕದಲ್ಲಿ ಮಾತ್ರ ಎಲೆಕ್ಟ್ರಾನಿಕ್ ವಾಹನಗಳಿಗೆ ಬೇಡಿಕೆ ಕುದುರಲು ಇನ್ನೂ ಕೆಲವು ವರ್ಷಗಳು ಬೇಕಾದೀತು. ಕಾರಣ ಪ್ರಸ್ತುತ ಆಧುನಿಕ ತಂತ್ರಜ್ಞಾನದೊಂದಿಗೆ ಉತ್ಪಾದನೆಗೊಳ್ಳುತ್ತಿರುವ ಪೆಟ್ರೋಲ…-ಡೀಸೆಲ್ ವಾಹನಗಳು ಮೊದಲಿಗಿಂತ ಹೆಚ್ಚು ಬಾಳಿಕೆ ಅವಧಿಯನ್ನು ಹೊಂದಿರಲಿವೆ ಎಂದಿದೆ ಆರ್ಥಿಕ ಮುನ್ಸೂಚನೆ ಸಂಸ್ಥೆ ಐಎಸ್‌ಎಚ್ ಮಾರ್ಕೆಟ್‌ನ ವರದಿ.
17 ಮಿಲಿಯನ್ ವಾಹನಗಳು :
ಅಮೆರಿಕದ ಜನರು ಪ್ರತೀ ವರ್ಷ ಸುಮಾರು 17 ಮಿಲಿಯನ್ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಖರೀದಿಸು ತ್ತಾರೆ. ಈ ವಾಹನಗಳು 10ರಿಂದ 20 ವರ್ಷಗಳ ವರೆಗೆ ಸಂಚಾರ ಯೋಗ್ಯವಾಗಿರುತ್ತವೆ. ಐಎಚ್‌ಎಸ್ ಮಾರ್ಕೆಟ್‌ನ ವರದಿಯ ಪ್ರಕಾರ ಅಮೆರಿಕದಲ್ಲಿ ಲೈಟ್ ಡ್ನೂಟಿ ವಾಹನಗಳ ಸರಾಸರಿ ಬಾಳಿಕೆ ಅವಧಿ 12 ವರ್ಷಗಳಾಗಿವೆ.
ಬಳಸಿದ ವಾಹನಗಳ ರಫ್ತು! :
ಪ್ರತೀ ವರ್ಷ ಅಮೆರಿಕದಿಂದ ಬಳಸಲ್ಪಟ್ಟ ಸಾವಿರಾರು ವಾಹನಗಳನ್ನು ಇರಾಕ್ ಮತ್ತು ಮೆಕ್ಸಿಕೋದಂಥ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಅಲ್ಲಿ ಅವುಗಳನ್ನು ದುರಸ್ತಿಗೊಳಿಸಿ ದೀರ್ಘಕಾಲ ಓಡಿಸಲಾಗುತ್ತದೆ.
ಇ-ವಾಹನಗಳ ಅಳವಡಿಕೆ ಸುಲಭವಲ್ಲ :
ನೇಚರ್ ಕ್ಲೈಮೇಟ್ ಚೇಂಜ್‌ನ ಇತ್ತೀಚಿನ ಅಧ್ಯಯನದ ಪ್ರಕಾರ ಅಮೆರಿಕನ್ನರು ಪ್ರಸ್ತುತ ಇರುವ ಮಾದರಿಯನ್ನೇ ಮುಂದುವರಿಸಿದರೆ 2050ರ ವೇಳೆಗೆ ದೇಶಕ್ಕೆ ಸುಮಾರು 350 ಮಿಲಿಯನ್ ಎಲೆಕ್ಟ್ರಿಕ್ ವಾಹನಗಳು ಬೇಕಾಗಲಿವೆ. ಇದಕ್ಕೆ ದೇಶಾದ್ಯಂತ ಎಲೆ ಕ್ಟ್ರಾನಿಕ್ ಗ್ರಿಡ್‌ಗಳನ್ನು ವಿಸ್ತರಿಸಬೇಕಾ ಗುತ್ತದೆ. ಲೀಥಿಯಂ ಮತ್ತು ಕೋಬಾಲ್ಟ್ ನಂತಹ ಬ್ಯಾಟರಿಗಳನ್ನು ತಯಾರಿಸಲು ಅಪಾರ ಪ್ರಮಾಣದ ವಸ್ತುಗಳನ್ನು ಬಳಸಬೇಕಾಗುತ್ತದೆ. ಅಮೆರಿಕನ್ನರು ಕಡಿಮೆ ಸಂಖ್ಯೆಯ ವಾಹನಗಳನ್ನು ಬಳಸಿದರೆ ಮುಂದಿನ 30 ವರ್ಷಗಳಿಗೆ 205 ಮಿಲಿಯನ್ ಎಲೆಕ್ಟ್ರಿಕ್ ವಾಹನಗಳಷ್ಟೆ ಸಾಕು.
ಅಪಾಯ ಏನು? :
ಯುಎಸ್‌ಎನ ಒಟ್ಟು ಹಸುರು ಮನೆ ಅನಿಲಗಳ ಹೊರಸೂಸುವಿಕೆಯ ಮೂರನೇ ಒಂದು ಭಾಗ ವಾಹನಗಳಿಂದಾಗು ತ್ತಿರುವುದರಿಂದ ಇದನ್ನು ನಿಯಂತ್ರಿಸಲು ಅಮೆರಿಕಕ್ಕೂ ಆಸಕ್ತಿ ಇದೆ. ಆದರೆ ಕೆಲವು ಆರ್ಥಿಕ ಸಂಶೋಧನೆಗಳ ಪ್ರಕಾರ, ವಾಹನ ತಯಾರಕರು ಕ್ರಮೇಣ ಹೊಸ ಪೆಟ್ರೋಲ…-ಡೀಸೆಲ್ ವಾಹನಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಿದರೆ, ಹಳೆಯ ವಾಹನಗಳನ್ನೇ ದೀರ್ಘಕಾಲ ಓಡಿಸುವ ಸಾಧ್ಯತೆಯಿದೆ. ಇದರಿಂದ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಮತ್ತಷ್ಟು ಕಡಿಮೆಯಾಗಲಿದೆ.
1990ರಿಂದ ಪ್ಯಾರಿಸ್ ಹೊಸ ಬಸ್ ಮತ್ತು ರೈಲು ಮಾರ್ಗಗಳು, ಸೈಕಲ್ ಪಥಗಳು, ಕಾಲುದಾ ರಿಗಳನ್ನು ವಿಸ್ತರಣೆ ಮಾಡಿದೆ. ಇಷ್ಟು ಮಾತ್ರವಲ್ಲದೇ ನಗರ ವ್ಯಾಪ್ತಿಯಲ್ಲಿ ವಾಹನಗಳನ್ನು ನಿಷೇಧಿಸುವ ಮೂಲಕ ವಾಹನಗಳ ಮೇಲಿನ ಅವಲಂಬನೆಯನ್ನು ಶೇ. 45ರಷ್ಟು ಕಡಿಮೆ ಮಾಡಿದೆ. ಈ ಮಾದರಿ ಯನ್ನು ಕೆಲವು ದೇಶಗಳು ಅನುಸರಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !
Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Story Of Generations: ಪೀಳಿಗೆಗಳ ವೃತ್ತಾಂತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.