ಕಳ್ಳಗಿವಿಯೆಂಬ ‘ಪಂಚ್’ ಇಂದ್ರಿಯದ ಪಂಚನಾಮೆ!


Team Udayavani, Aug 21, 2019, 5:26 AM IST

19

ನಮ್ಮ ಮನವಿಯನ್ನು ಯಾರೂ ಕಿವಿಗೇ ಹಾಕಿಕೊಳ್ಳುತ್ತಿಲ್ಲ ಎಂದು ಸಾಮಾನ್ಯ ಜನರು ಒಂದೇ ಸಮನೆ ರೋದಿಸುತ್ತಿದ್ದಾರೆ. ಈ ನಡುವೆ ಜನಪ್ರತಿನಿಧಿಗಳು ಎನಿಸಿಕೊಂಡ ಕೆಲವರ ಮೇಲೆ ಕದ್ದಾಲಿಕೆಯ ಆರೋಪಗಳು ಕೇಳಿಬರುತ್ತಿವೆ. ಕೇಳುವುದು ಎಷ್ಟು ಮುಖ್ಯ ಮತ್ತು ಸರಿಯೋ, ಕದ್ದು ಕೇಳುವುದು ಅಷ್ಟೇ ತಪ್ಪು ಹಾಗೂ ಕೆಟ್ಟದ್ದು ಎಂಬ ಅರಿವು ಅದರಲ್ಲಿ ತೊಡಗಿಸಿಕೊಂಡವರಲ್ಲಿ ಮೂಡಬೇಕಾಗಿದೆ! ಈ ಟೇಪ್‌ ಹಾಗೂ ಟ್ಯಾಪ್‌ಗ್ಳಲ್ಲಿ ಅತಿಯಾಗಿ ತೊಡಗಿಸಿಕೊಂಡವರೂ ಒಂದಲ್ಲ ಒಂದು ದಿನ ಟ್ರ್ಯಾಪ್‌ ಆಗುವುದಂತೂ ಶತಃಸಿದ್ಧ!

ಆಲಿಸುವಿಕೆಯು ಒಂದು ಮಹತ್ವದ ಭಾಷಾ ಕೌಶಲ್ಯವಾಗಿದೆ. ಭಾಷೆಯ ಮೇಲೆ ಹಿಡಿತ ಗಳಿಸಬೇಕಾದರೆ ಒಳ್ಳೆಯ ಆಲಿಸುವಿಕೆ ಅತ್ಯಗತ್ಯ. ಹಾಗೆಯೇ ರಾಜಕೀಯದಲ್ಲಿ ಹಿಡಿತ ಗಳಿಸಬೇಕೆಂದರೆ ಅಲ್ಲಿಯೂ ಆಲಿಸುವಿಕೆ ಇರಲೇಬೇಕು. ಭಾಷೆಗೆ ಹೇಗೆ ಆಲಿಸುವಿಕೆ ಮುಖ್ಯವೋ ಹಾಗೆಯೇ ಭಾಷಣ ಮಾಡುವ ರಾಜಕಾರಣಿಗಳೂ ಆಲಿಸುವಿಕೆಯ ಕಡೆಗೆ ಆದ್ಯ ಗಮನಹರಿಸಬೇಕು. ರಾಜಕಾರಣಿಗಳ ಮೂಲ ಕರ್ತವ್ಯವೇ, ಜನರ ದುಃಖ ದುಮ್ಮಾನಗಳನ್ನು ಆಲಿಸಿ, ಅವುಗಳನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಅದಕ್ಕೆ ಬೇಕಾದ ‘ಪಾಲಿಸಿ’ (policy) ತರುವುದು.

ಆದರೆ ಆಲಿಸುವುದಕ್ಕಿಂತಲೂ ಆಲಸ್ಯಕ್ಕೇ ಹೆಚ್ಚು ಪ್ರಾಧಾನ್ಯತೆ ಕೊಡುವ ಈ ಕಾಲದ ರಾಜಕಾರಣಿಗಳು ಈ ತತ್ವವನ್ನು ಪಾಲಿಸುತ್ತಾರೆಯೇ ಎನ್ನುವುದು ಮಾತ್ರ ಯಕ್ಷಪ್ರಶ್ನೆ! ಅದೇನೇ ಆದರೂ ಜನರ ಜೊತೆಗಿದ್ದು ಅವರ ಅಳಲನ್ನು ಆಲಿಸದ ಕೆಲವು ಆಳುಗರು ಇತರ ನಾಯಕರ ಫೋನ್‌ ಕರೆಗಳನ್ನು ಮಾತ್ರ ಚೆನ್ನಾಗಿಯೇ ಕದ್ದು ಆಲಿಸುತ್ತಾರೆ. ಸದ್ಯ ಫೋನ್‌ ಕದ್ದಾಲಿಕೆಯ ವಿಷಯವು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಆರೋಪಿತರ ಪಾಲಿಗೆ ತುಸು ತ್ರಾಸದಾಯಕವಾಗಿದೆ.

ಎಲ್ಲಾ ಮನುಷ್ಯರಂತೆ ರಾಜಕಾರಣಿಗಳಿಗೂ ದೇವರು ಎರಡು ಕಿವಿಗಳನ್ನು ನೀಡಿದ್ದರೂ, ಕೆಲವರಿಗೆ ಅದು ಸಾಕಾಗುತ್ತಿಲ್ಲ. ಅಧಿಕಾರದ ಸ್ಥಾನದಲ್ಲಿರುವವರು ಆದಷ್ಟೂ ಎಲ್ಲಾ ಕಡೆಗಳಲ್ಲಿಯೂ ತಮ್ಮ ಕಣ್ಣು, ಕಿವಿ ಇಡುವುದು ಆಡಳಿತದ ಹಿತದೃಷ್ಟಿಯಿಂದ ಒಳ್ಳೆಯದು ಎಂಬ ಅಭಿಪ್ರಾಯವಿದೆ. ಆದರೆ ಅದಕ್ಕೆಂದೇ ಕೊಟ್ಟ ಎರಡೂ ಕಿವಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದವರು, ಅಲ್ಲಲ್ಲಿ ತಮ್ಮ ಕಳ್ಳಗಿವಿಗಳನ್ನು ಇಡುವ ಮೂಲಕ ಅದರ ಮೊರೆ ಹೋಗುತ್ತಿದ್ದಾರೆ. ಪಂಚೇಂದ್ರಿಯಗಳಲ್ಲಿ ಒಂದಾದ ಕಿವಿಯ ಅಪ್ಡೇಟೆಡ್‌ ವರ್ಶನ್‌ ಎಂದೇ ಹೇಳಬಹುದಾದ ‘ಕಳ್ಳಗಿವಿ’ಯು ಆರನೇ ಇಂದ್ರಿಯವಾಗಿ, ಅದು ಒಮ್ಮೊಮ್ಮೆ ಅಂಥವರ ಪಾಲಿಗೆ ‘ಪಂಚ್’ ಇಂದ್ರಿಯವಾಗಿ ಪರಿಣಮಿಸುವುದಿದೆ. ಆಲಿಸುವುದೇನೋ ಒಳ್ಳೆಯ ಅಭ್ಯಾಸವೇ, ಆದರೆ ಕದ್ದಾಲಿಸುವುದಲ್ಲ ಎನ್ನುವುದು ಕೆಲವರಿಗೆ ಅರ್ಥವಾಗಬೇಕಿದೆಯಷ್ಟೇ!

ಉತ್ತಮವಾದ ಆಲಿಸುವ ಕೌಶಲ್ಯ ಹೊಂದಿದರೆ ಮಾತ್ರ, ಒಳ್ಳೆಯ ಮಾತುಗಾರ, ಓದುಗ ಹಾಗೂ ಬರಹಗಾರನಾಗಲು ಸಾಧ್ಯ ಎಂಬ ಅಭಿಪ್ರಾಯವಿದೆ. ಅದು ಭಾಷೆಯ ಸ್ವರೂಪ ಮತ್ತು ಲಕ್ಷಣ. ಇದೇ ರೀತಿಯಲ್ಲಿ, ‘ಕಳ್ಳಗಿವಿ’ ಉಳ್ಳವರು ತಮ್ಮ ವಿರೋಧಿಗಳು ಆಡುವ ಮಾತು, ಅಭಿಪ್ರಾಯ ಹಾಗೂ ತಂತ್ರಗಳನ್ನು ಕದ್ದು ಕೇಳಿಸಿಕೊಳ್ಳುತ್ತಾರೆ. ಅದರೊಂದಿಗೆ ತಮ್ಮ ಭಾಷಣ, ಹೇಳಿಕೆಗಳಲ್ಲಿ ಅವರ ಬಗ್ಗೆ ಹೆಚ್ಚು ನಿಖರವಾಗಿ ಮಾತನಾಡುವ, ಅವರ ತಂತ್ರ, ಪ್ರತಿತಂತ್ರ ಮತ್ತು (ಕುಟಿಲ)ಉಪಾಯಗಳು ಏನು ಎನ್ನುವ ಪಟ್ಟಿಯನ್ನು ಸಾರ್ವಜನಿಕವಾಗಿ ಓದುವ ಹಾಗೂ ಲಭ್ಯ ಮಾಹಿತಿಗಳ ಆಧಾರದಲ್ಲಿ ಆರೋಪಗಳನ್ನು ಮಾಡುತ್ತಾ ಅವರ ರಾಜಕೀಯ ಭವಿಷ್ಯದ ಹಣೆಬರಹವನ್ನು ಬರೆಯುವ ಕೃತ್ಯಕ್ಕೆ ಮುಂದಾಗುತ್ತಾರೆ. ಮಾತು, ಓದು, ಬರವಣಿಗೆಯು ಕದ್ದು ಆಲಿಸುವ ಮೂಲಕ ಸುಗಮವಾಗುತ್ತದೆ ಎಂಬ ಕಾರಣದಿಂದಲೇ ಕೆಲವರು ಈ ಕದ್ದಾಲಿಕೆಯನ್ನು ಅವಲಂಬಿಸಿರುತ್ತಾರೆ.

ಕೇಳಲೆಂದೇ ಇರುವ ಕಿವಿಯನ್ನು ಕಿವುಡಾಗಿಸಿ ಇಟ್ಟುಕೊಂಡಿರುವ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಂದಾಗಿ ವ್ಯವಸ್ಥೆಯೇ ಕಿವುಡಾಗಿದೆ, ನಮ್ಮ ಮನವಿಯನ್ನು ಯಾರೂ ಕಿವಿಗೇ ಹಾಕಿಕೊಳ್ಳುತ್ತಿಲ್ಲ ಎಂದು ಸಾಮಾನ್ಯ ಜನರು ಒಂದೇ ಸಮನೆ ರೋದಿಸುತ್ತಿದ್ದಾರೆ. ಈ ನಡುವೆ ಜನಪ್ರತಿನಿಧಿಗಳು ಎನಿಸಿಕೊಂಡ ಕೆಲವರ ಮೇಲೆ ಕದ್ದಾಲಿಕೆಯ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ, ಕೇಳುವುದು ಎಷ್ಟು ಪ್ರಧಾನವಾದುದು ಮತ್ತು ಸರಿಯೋ, ಅಷ್ಟೇ ತಪ್ಪು ಹಾಗೂ ಕೆಟ್ಟದ್ದು, ಕದ್ದು ಕೇಳುವುದು ಎಂಬ ಅರಿವು ಅದರಲ್ಲಿ ತೊಡಗಿಸಿಕೊಂಡವರಲ್ಲಿ ಮೂಡಬೇಕಾಗಿದೆ. ಇದು ಬಹಳ ಸರಳವಾದ ತತ್ವದ ಮೇಲೆ ನಿಂತಿದೆ. ಅದರಂತೆ ಎಲ್ಲವನ್ನೂ ಕೇಳಿಸಿಕೊಂಡರೆ, ಜನರು ಹಾಗೂ ಮಾಧ್ಯಮಗಳಿಂದ ಹೊಗಳಿಕೆ, ಅದೇ ಕದ್ದು ಕೇಳಿಸಿಕೊಂಡರೆ ಅವರಿಂದಲೇ ಸಿಗಲಿದೆ ಭಾರೀ ತೆಗಳಿಕೆ!

ಕಿವಿಗೆ ಇಯರ್‌ ಫೋನ್‌ ಸಿಕ್ಕಿಸಿಕೊಂಡು ತಮಗಿಷ್ಟವಾದ ಹಾಡು, ಮಾತು, ಹರಟೆ ಹಾಗೂ ಭಾಷಣಗಳನ್ನು ಕೇಳಿಸಿಕೊಳ್ಳುವುದು ಸರಿಯಾದ ನಡವಳಿಕೆ. ಆದರೆ ಬೇರೆಯವರ ಫೋನ್‌ ಸಂಭಾಷಣೆಗಳಿಗೆ ಕಳ್ಳ ಮಾರ್ಗಗಳ ಮೂಲಕ ತಮ್ಮ ಈಯರನ್ನು ತೂರಿಸುವುದು ಮಾತ್ರ ಅತ್ಯಂತ ಕೆಟ್ಟ ಚಾಳಿ. ಇದರ ಜಾಲಕ್ಕೆ ಸಿಕ್ಕಿಬಿದ್ದು ಎಷ್ಟೋ ರಾಜಕಾರಣಿಗಳು, ತಮ್ಮ ಪಾಳಿ ಮುಗಿಯುವ ಮುನ್ನವೇ ಅಧಿಕಾರದಿಂದ ಕೆಳಗೆ ಇಳಿದ ಉದಾಹರಣೆಗಳು ಸಾಕಷ್ಟಿವೆ. ಅಂದರೆ ಕಳ್ಳಗಿವಿಯ ಮೊರೆ ಹೋದರೆ ಒಂದಲ್ಲ ಒಂದು ದಿನ ಜನರಿಂದಲೇ ಚೆನ್ನಾಗಿ ಕಿವಿ ಹಿಂಡಿಸಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಎನ್ನುವುದಂತೂ ಸುಸ್ಪಷ್ಟ!

ಆಳುಗರೇ ನೀವೊಳ್ಳೆಯ ಕೇಳುಗರಾಗಿ ಎಂಬ ನಿರೀಕ್ಷೆ ಜನಸಾಮಾನ್ಯರದ್ದು. ಅವರಿಗೋ ಅದನ್ನು ಕೇಳುವುದಕ್ಕಿಂತಲೂ, ಬೇರೆಯವರ ಮಾತುಗಳನ್ನು ಕೇಳಲು, ಬೇರೆಯವರು ಹೇಳಿದ್ದನ್ನು ಯಾರಿಗೂ ಗೊತ್ತಾಗದಂತೆ ಧ್ವನಿ ಮುದ್ರಿಸಿ ಜನರಿಗೆ ಕೇಳಿಸಲು ಹಾಗೂ ಕೊನೆಗೆ ಜನರ ಮುಂದೆ ಬಂದು ಮತ ಕೇಳುವುದು ಈ ಬಗೆಯ ಕೆಲಸಗಳಲ್ಲಿಯೇ ಅತಿಯಾದ ಆಸಕ್ತಿ. ಹೀಗಾಗಿರುವುದರಿಂದಲೇ ಜನರಿಗೆ ರಾಜಕೀಯದ ಬಗ್ಗೆ ನಿರಾಸಕ್ತಿ ಮೂಡಿರುವುದು ಎಂದು ಬೇರೆ ಹೇಳಬೇಕಾಗಿಲ್ಲ ನೋಡಿ. ಈ ಬಗೆಯ ಕೇಳುವಿಕೆಯ ಫ‌ಲವಾಗಿಯೇ ಅಲ್ಲವೇ, ಆ(ವೀ)ಡಿಯೋ ಟೇಪ್‌, ಫೋನ್‌ ಟ್ಯಾಪ್‌ ಇತ್ಯಾದಿಗಳು ರಾಜಕೀಯದಲ್ಲಿ ಈ ಮಟ್ಟಿಗೆ ಸುದ್ದಿಯಾಗುತ್ತಿರುವುದು!

ಈ ಟೇಪ್‌ ಹಾಗೂ ಟ್ಯಾಪ್‌ಗ್ಳಲ್ಲಿ ಅತಿಯಾಗಿ ತೊಡಗಿಸಿಕೊಂಡವರೂ ಒಂದಲ್ಲ ಒಂದು ದಿನ ಟ್ರ್ಯಾಪ್‌ ಆಗುವುದಂತೂ ಶತಃಸಿದ್ಧ! ‘ನೋಡಲು ಎರಡು ಕಣ್ಣು ಸಾಲದು’ ಎನ್ನುವಂತೆ ಕದ್ದಾಲಿಸುವವರದ್ದು ‘ಕೇಳಲು ಎರಡು ಕಿವಿ ಸಾಲದು’ ಎಂಬ ಸೂತ್ರ. ಇದರಲ್ಲಿಲ್ಲ ತನ್ನ ಪಾತ್ರ ಎಂದರೂ, ಸತ್ಯಾಂಶ ಬಹಿರಂಗವಾಗುವುದು ತನಿಖೆಯಿಂದ ಮಾತ್ರ. ‘ಮೈಯ್ಯೆಲ್ಲಾ ಕಿವಿಯಾಗಿ ಕೇಳುವುದು’, ‘ಗೋಡೆಗಳಿಗೂ ಕಿವಿಯಿದೆ’ ಎಂಬಿತ್ಯಾದಿ ಮಾತುಗಳ ಸುಧಾರಿತ ಹಾಗೂ ಆಧುನಿಕ ರೂಪವೇ ಈ ಕದ್ದಾಲಿಕೆಗೆ ಕಾರಣವಾಗುವ ಈ ಕಳ್ಳಗಿವಿಯೆಂಬ ‘ಪಂಚ್’ಇಂದ್ರಿಯ!

ಒಗ್ಗರಣೆ: ತನ್ನ ಗಂಡ ಏನು ಮಾತನಾಡುತ್ತಾನೆ ಎಂದು ಕಿವಿಗೊಡುವ ಹೆಂಡತಿಯರೇ ಈ ಕದ್ದಾಲಿಕೆಯ ಶಾಶ್ವತ ರಾಯಭಾರಿಗಳು!

ಟಾಪ್ ನ್ಯೂಸ್

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Women’s Ashes Series: Big Fight between Australia-England

Women’s Ashes Series: ಆಸ್ಟ್ರೇಲಿಯ-ಇಂಗ್ಲೆಂಡ್‌ ಬಿಗ್‌ ಫೈಟ್‌

Assam: ಕಲ್ಲಿದ್ದಲು ಗಣಿ ಒಳಗೆ ಪ್ರವಾಹ: 3 ಸಾವು, 6 ಕಾರ್ಮಿಕರು ನಾಪತ್ತೆ!

Assam: ಕಲ್ಲಿದ್ದಲು ಗಣಿ ಒಳಗೆ ಪ್ರವಾಹ: 3 ಸಾವು, 6 ಕಾರ್ಮಿಕರು ನಾಪತ್ತೆ!

HD-swamy

ನಿಮ್ಮ ಖೊಟ್ಟಿ ಗ್ಯಾರಂಟಿ ಸರ್ಕಾರದ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಎಚ್‌ಡಿಕೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Joshi-rader

Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್‌ ಸ್ಥಾಪನೆ: ಕೇಂದ್ರ ಸಚಿವ ಜೋಶಿ

Gangolli: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Gangolli: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Two more children test positive for HMP virus: Number of cases in the country rises to 7

HMP: ಮತ್ತಿಬ್ಬರು ಮಕ್ಕಳಲ್ಲಿ ಎಚ್‌ಎಂಪಿ ವೈರಸ್‌: ದೇಶದಲ್ಲಿ 7ಕ್ಕೇರಿದ ಕೇಸ್‌

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಭಾರತದ 21 ಸ್ಪರ್ಧಿಗಳು ಭಾಗಿ

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಭಾರತದ 21 ಸ್ಪರ್ಧಿಗಳು ಭಾಗಿ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್‌

Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್‌

Women’s Ashes Series: Big Fight between Australia-England

Women’s Ashes Series: ಆಸ್ಟ್ರೇಲಿಯ-ಇಂಗ್ಲೆಂಡ್‌ ಬಿಗ್‌ ಫೈಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.