ಪ್ಲಾಸ್ಟಿಕ್‌ಗೆ ಕಡಿವಾಣ : ಜು.1ರಿಂದ ಏಕ ಬಳಕೆಯ ಪ್ಲಾಸ್ಟಿಕ್‌ಗೆ ದೇಶಾದ್ಯಂತ ನಿಷೇಧ
Team Udayavani, Jun 30, 2022, 6:55 AM IST
ಜುಲೈ 1ರಿಂದ ದೇಶಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ದೇಶಾದ್ಯಂತ ಜಾರಿಗೆ ಬರಲಿದೆ. ನಾವು ದಿನನಿತ್ಯ ಬಳಸುವಂಥ ಅನೇಕ ವಸ್ತುಗಳ ಮೇಲೆ ಈ ನಿಷೇಧ ಅನ್ವಯವಾಗಲಿದೆ. ಶಾಂಪೂ ಬಾಟಲಿಯಿಂದ ಹಿಡಿದು ಇಯರ್‌ಬಡ್‌ವರೆಗೆ, ಸಿಗರೇಟ್ ಪ್ಯಾಕ್‌ನಿಂದ ಹಿಡಿದು ಗಿಫ್ಟ್ ರ್ಯಾಪರ್‌ವರೆಗೆ ಎಲ್ಲದಕ್ಕೂ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ. ಈ ನಿಯಮದ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ಏನಿದು ಏಕಬಳಕೆಯ ಪ್ಲಾಸ್ಟಿಕ್?
ಹೆಸರೇ ಹೇಳುವಂತೆ, ಒಂದೇ ಬಾರಿಗೆ ಬಳಸಿ ಬಿಸಾಡುವಂಥ ಪ್ಲಾಸ್ಟಿಕ್ ವಸ್ತುಗಳನ್ನು ಏಕಬಳಕೆಯ ಪ್ಲಾಸ್ಟಿಕ್ ಎನ್ನುತ್ತಾರೆ. ಶಾಂಪೂ, ಮಾರ್ಜಕ, ಕಾಸೆ¾ಟಿಕ್ಸ್, ಪಾಲಿಥೀನ್ ಚೀಲ, ಫೇಸ್ ಮಾಸ್ಕ್, ಕಾಫಿ ಕಪ್ ಸೇರಿದಂತೆ ದೇಶದಲ್ಲಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಪ್ಲಾಸ್ಟಿಕ್‌ಗಳಿವು.
ನಿಷೇಧ ಏಕೆ?
ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರಕ್ಕೆ ಅತಿದೊಡ್ಡ ಅಪಾಯ ಉಂಟುಮಾಡುತ್ತದೆ. ಅದು ವಿಘಟನೆಗೊಳ್ಳದೇ ದೀರ್ಘಕಾಲ ಪರಿಸರದಲ್ಲಿ ಉಳಿದು, ಮೈಕ್ರೋಪ್ಲಾಸ್ಟಿಕ್ ಆಗಿ ಪರಿವರ್ತನೆಗೊಳ್ಳುತ್ತದೆ. ನಂತರ ಅದು ನಮ್ಮ ಆಹಾರದ ಮೂಲಗಳನ್ನು ಪ್ರವೇಶಿಸಿ, ಮಾನವನ ದೇಹಕ್ಕೂ ಎಂಟ್ರಿ ಪಡೆಯುತ್ತದೆ.
ಅನುಷ್ಠಾನ ಹೇಗೆ?
– ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿಯ ಮೇಲ್ವಿಚಾರಣೆಯಲ್ಲಿ ನಿಷೇಧ ಅನುಷ್ಠಾನಗೊಳ್ಳಲಿದೆ.
– ಈಗಾಗಲೇ ರಾಷ್ಟ್ರ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಈ ಕುರಿತು ನಿರ್ದೇಶನ ನೀಡಲಾಗಿದೆ.
– ನಿಷೇಧಿತ ವಸ್ತುಗಳ ಅಂತಾರಾಜ್ಯ ಸಾಗಣೆ ತಡೆಗೆ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸುವಂತೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ
– ನಿಷೇಧಿತ ವಸ್ತುಗಳಿಗೆ ಅಗತ್ಯವಿರುವ ಕಚ್ಚಾ ವಸ್ತು ರವಾನಿಸದಂತೆ ಎಲ್ಲ ಪೆಟ್ರೋಕೆಮಿಕಲ್ ಕೈಗಾರಿಕೆಗಳಿಗೆ ಸೂಚಿಸಲಾಗಿದೆ.
– ಪ್ಲಾಸ್ಟಿಕ್ ಸಮಸ್ಯೆ ನಿವಾರಣೆ ಕುರಿತು ನಾಗರಿಕರಿಗೆ ಜಾಗೃತಿ ಮೂಡಿಸಲು ಸಿಪಿಸಿಬಿ ಕುಂದುಕೊರತೆ ನಿವಾರಣಾ ಆ್ಯಪ್ ಅನಾವರಣ ಮಾಡಲಾಗಿದೆ
– ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ನಿಯಂತ್ರಣಾ ಕೊಠಡಿ ರಚನೆಗೆ ಕ್ರಮ ಕೈಗೊಳ್ಳಲಾಗಿದೆ
– ಹೊಸ ವಾಣಿಜ್ಯ ಪರವಾನಗಿ ವಿತರಣೆ ವೇಳೆ ಏಕಬಳಕೆ ಪ್ಲಾಸ್ಟಿಕ್ ಅನ್ನು ಬಳಸುವುದಿಲ್ಲ ಎಂಬ ಷರತ್ತು ವಿಧಿಸಲಾಗುತ್ತಿದೆ.
– ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಕಂಡುಬಂದರೆ ಅಂಥ ಅಂಗಡಿಗಳ ಲೈಸೆನ್ಸ್ ರದ್ದು ಮಾಡಲಾಗುತ್ತದೆ
– ನಿಯಮ ಉಲ್ಲಂಘಿಸಿದವರಿಗೆ 5 ವರ್ಷಗಳ ಜೈಲು ಶಿಕ್ಷೆ ಅಥವಾ 1 ಲಕ್ಷ ರೂ.ವರೆಗೆ ದಂಡ ಅಥವೂ ಎರಡನ್ನೂ ವಿಧಿಸಲಾಗುತ್ತದೆ.
– ನಿಯಮ ಉಲ್ಲಂಘನೆಯ ಬಗ್ಗೆ ನಿಗಾ ವಹಿಸಲು ವಿಶೇಷ ಜಾರಿ ತಂಡಗಳನ್ನೂ ರಚಿಸಲಾಗಿದೆ
ಯಾವ ದೇಶಗಳಲ್ಲಿ ನಿಷೇಧ?
ಬಾಂಗ್ಲಾದೇಶ, ನ್ಯೂಜಿಲೆಂಡ್, ಚೀನಾ, ಅಮೆರಿಕ, ಐರೋಪ್ಯ ಒಕ್ಕೂಟ, ವನೌತು, ಸೆಷೆಲ್ಸ್ ಸೇರಿ ನೂರಾರು ದೇಶಗಳಲ್ಲಿ ನಿಷೇಧ ಜಾರಿಯಲ್ಲಿದೆ.
ಪ್ರತಿ ವರ್ಷ ಜಗತ್ತಿನಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯ- 300 ದಶಲಕ್ಷ ಟನ್
ಈ ಪೈಕಿ ಸಮುದ್ರಕ್ಕೆ ಸೇರುವ ತ್ಯಾಜ್ಯದ ಪ್ರಮಾಣ- 14 ದಶಲಕ್ಷ ಟನ್
ಪ್ರತಿ ದಿನ ಭಾರತದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ- 1.5 ಲಕ್ಷ ಮೆಟ್ರಿಕ್ ಟನ್
ಪ್ರತಿ ದಿನ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯ- 9,589 ಮೆಟ್ರಿಕ್ ಟನ್
ಭಾರತದಲ್ಲಿ ಮರುಬಳಕೆಯಾಗುವ ಪ್ಲಾಸ್ಟಿಕ್ ತ್ಯಾಜ್ಯ- 2,876 ಮೆ.ಟನ್
ಸಂಸ್ಕರಿಸದೇ ಪರಿಸರಕ್ಕೆ ಸೇರುವ ಪ್ಲಾಸ್ಟಿಕ್ ತ್ಯಾಜ್ಯ – 6,712 ಮೆ.ಟನ್
2050ರ ವೇಳೆಗೆ ಹಸಿರುಮನೆ ಅನಿಲದಲ್ಲಿ ಪ್ಲಾಸ್ಟಿಕ್‌ಗಳ ಪಾಲು- ಶೇ.10
ಯಾವುದಕ್ಕೆ ನಿಷೇಧ?
ಬಲೂನು ಕಡ್ಡಿಗಳು, ಪ್ಲಾಸ್ಟಿಕ್ ಕಡ್ಡಿ ಇರುವ ಧ್ವಜ, ಸಿಗರೇಟ್ ಪ್ಯಾಕ್, ಕಟ್ಲೆರಿ ವಸ್ತುಗಳು(ಪ್ಲಾಸ್ಟಿಕ್ ತಟ್ಟೆ, ಕಪ್, ಲೋಟ, ಫೋರ್ಕ್, ಚಮಚ, ಚಾಕು, ಟ್ರೇ), ಇಯರ್‌ಬಡ್, ಸಿಹಿತಿಂಡಿ ಬಾಕ್ಸ್‌ಗಳು, ಕ್ಯಾಂಡಿ ಮತ್ತು ಐಸ್‌ಕ್ರೀಂ ಕಡ್ಡಿಗಳು, ಆಹ್ವಾನ ಪತ್ರಿಕೆಗಳು, ಅಲಂಕಾರಕ್ಕೆ ಬಳಸುವ ಪಾಲಿಸ್ಟಿರೀನ್, ಥರ್ಮೋಕೋಲ್, ಗಿಫ್ಟ್ ರ್ಯಾಪರ್‌ಗಳು, 100 ಮೈಕ್ರಾನ್‌ಗಳಿಗಿಂತ ಕಡಿಮೆಯಿರುವ ಪಿವಿಸಿ ಪ್ಲಾಸ್ಟಿಕ್ ಬ್ಯಾನರ್‌ಗಳು ಇತ್ಯಾದಿಗಳು ಮಾರುಕಟ್ಟೆಗಳಿಂದ ಕಣ್ಮರೆಯಾಗಲಿವೆ.
ಪರ್ಯಾಯಗಳೇನು?
– ಥರ್ಮೋಕೋಲ್ ಬದಲಿಗೆ: ಮರುಬಳಕೆಯ ಕಾಗದ, ಹನಿಕೋಂಬ್ ಕಾಗದ ಬಳಸಬಹುದು
– ಪ್ಲಾಸ್ಟಿಕ್ ಕಡ್ಡಿಗಳ ಬದಲಿಗೆ: ಐಸ್‌ಕ್ರೀಂಗೆ ಮರದ ಕಡ್ಡಿ, ಲಾಲಿಪಪ್‌ಗೆ ಕಾಗದದ ಕಡ್ಡಿ, ನೀರಿನಿಂದ ತೊಳೆಯಬಹುದಾದ ಇಯರ್‌ಬಡ್‌ಗಳು, ಬಲೂನುಗಳಿಗೆ ದಾರ ಬಳಸಬಹುದು
– ಪ್ಲಾಸ್ಟಿಕ್ ಕಟ್ಲೆರಿ ಬದಲಿಗೆ: ಕಾಗದ, ಬಿದಿರು, ಅಡಿಕೆ ಎಲೆಯಿಂದ ತಯಾರಿಸಲಾದ ತಟ್ಟೆ, ಪ್ಲೇಟು, ಲೋಟಗಳು ಹಾಗೂ ಮಣ್ಣಿನ ಮಡಿಕೆಗಳು, ಸ್ಟೀಲ್ ಪ್ಲೇಟ್, ಲೋಹದ ಬಾಟಲಿಗಳನ್ನು ಪರ್ಯಾಯವಾಗಿ ಬಳಕೆ ಮಾಡಬಹುದು
– ಪಿವಿಸಿ ಬ್ಯಾನರ್ ಬದಲಿಗೆ: ಮರುಬಳಕೆಯಾಗಬಹುದಾದ ಪಾಲಿಥಿಲೀನ್ ವಸ್ತುಗಳಿಂದ ತಯಾರಿಸಿದ ಬ್ಯಾನರ್‌ಗಳು
88,000 ಘಟಕಗಳಿಗೆ ಬೀಗ?
ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ತೊಡಗಿಕೊಂಡಿರುವಂಥ ಸುಮಾರು 88 ಸಾವಿರ ಘಟಕಗಳಿವೆ. ಈ ಘಟಕಗಳಲ್ಲಿ ಸುಮಾರು 10 ಲಕ್ಷ ಮಂದಿ ಕೆಲಸ ಮಾಡುತ್ತಿದ್ದು, 25 ಸಾವಿರ ಕೋಟಿ ರೂ. ಮೌಲ್ಯದ ಉತ್ಪನ್ನಗಳು ರಫ್ತಾಗುತ್ತಿವೆ. ಜು.1ರಿಂದ ನಿಷೇಧ ಜಾರಿಯಾದರೆ, ಈ ಎಲ್ಲ ಘಟಕಗಳೂ ದಿವಾಳಿಯಾಗಲಿವೆ, ಇಲ್ಲಿರುವ ಲಕ್ಷಾಂತರ ಮಂದಿ ಕೆಲಸ ಕಳೆದುಕೊಳ್ಳುತ್ತಾರೆ ಎಂದು ಅಖೀಲ ಭಾರತ ಪ್ಲಾಸ್ಟಿಕ್ ಉತ್ಪಾದಕರ ಸಂಘ(ಎಐಪಿಎಂಎ) ಆತಂಕ ವ್ಯಕ್ತಪಡಿಸಿದೆ. ಜತೆಗೆ, ಈ ನಿಷೇಧದಿಂದ ಎಫ್ಎಂಸಿಜಿ(ಫಾಸ್ಟ್ ಮೂವಿಂಗ್ ಕನ್ಸೂéಮರ್ ಗೂಡ್ಸ್) ವಲಯ, ವೈಮಾನಿಕ ಉದ್ದಿಮೆ ಮತ್ತು ಕ್ಷಿಪ್ರ ಸೇವೆಯ ರೆಸ್ಟಾರೆಂಟ್‌ಗಳಿಗೂ ಹೊಡೆತ ಬೀಳಲಿದೆ. ಹಲವಾರು ಸಣ್ಣ ಉದ್ದಿಮೆಗಳು ಹಾಗೂ ಕೈಗಾರಿಕೆಗಳು ಈ ನಿಷೇಧವನ್ನು ಕನಿಷ್ಠ 6 ತಿಂಗಳಿಂದ 1 ವರ್ಷ ಮುಂದೂಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇವೆ. ಆದರೆ, ಇದಕ್ಕೆ ನಿರಾಕರಿಸಿರುವ ಕೇಂದ್ರ ಸರ್ಕಾರ, ನಿಷೇಧ ಜಾರಿಯಾಗಿಯೇ ಸಿದ್ಧ ಎಂದಿದೆ.
2020ರಲ್ಲಿ ಜಾಗತಿಕವಾಗಿ ಸಮುದ್ರ ಸ್ವತ್ಛಗೊಳಿಸುವಾಗ ಸಿಕ್ಕಿದ್ದೇನು?
– ಸಿಗರೇಟ್ ತುಂಡುಗಳು- 9,64,521
– ಪ್ಲಾಸ್ಟಿಕ್ ಪಾನೀಯ ಬಾಟಲಿಗಳು- 6,27,014
– ಆಹಾರದ ರ್ಯಾಪರ್‌ಗಳು- 5,73,534
– ಇತರೆ ತ್ಯಾಜ್ಯ – 5,19,438
– ಬಾಟಲಿಗಳ ಮುಚ್ಚಳಗಳು – 4,09,855
– ಪ್ಲಾಸ್ಟಿಕ್ ಚೀಲಗಳು- 2,72,399
– ಸ್ಟಿರರ್‌ಗಳು- 2,24,170
– ಪ್ಲಾಸ್ಟಿಕ್ ಕಂಟೈನರ್‌ಗಳು- 2,22,289
– ಪಾನೀಯದ ಕ್ಯಾನ್‌ಗಳು- 1,62,750
– ಗಾಜಿನ ಪಾನೀಯ ಬಾಟಲಿಗಳು- 1,46,255
ಪರಿಸರದಲ್ಲಿರುವ ಪ್ಲಾಸ್ಟಿಕ್ ನಮ್ಮ ದೊಡ್ಡ ಶತ್ರು. ಪರಿಸರಕ್ಕೆ ಸೇರುವ ಯಾವ ಪ್ಲಾಸ್ಟಿಕ್‌ಗಳನ್ನು ನಮಗೆ ಸಂಗ್ರಹಿಸಲು, ಆ ಮೂಲಕ ಪುನರ್ಬಳಕೆ ಮಾಡಲು ಆಗುವುದಿಲ್ಲವೋ ಅಂತಹ ಪ್ಲಾಸ್ಟಿಕ್‌ಗಳನ್ನು ನಿಷೇಧಿಸಲಾಗುತ್ತಿದೆ.
– ಕೇಂದ್ರ ಪರಿಸರ ಸಚಿವಾಲಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.