ಪಿಎಂ ಕೌಶಲ ಅಭಿವೃದ್ಧಿ ಯೋಜನೆ


Team Udayavani, Jan 17, 2021, 7:30 AM IST

ಪಿಎಂ ಕೌಶಲ ಅಭಿವೃದ್ಧಿ ಯೋಜನೆ

ಪ್ರಧಾನ ಮಂತ್ರಿ ಕೌಶಲ ವಿಕಾಸ್‌ ಯೋಜನೆ (ಪಿಎಂಕೆವಿವೈ)ಯ ಮೂರನೇ ಹಂತವು ಜನವರಿ 15ರಂದು ಆರಂಭವಾಗಿದೆ. ಕೇಂದ್ರ ಸರಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಪಿಎಂಕೆವಿವೈ ಅನ್ನು ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ನಡೆಸುತ್ತಿದೆ. ಇದಕ್ಕಾಗಿ ಸರಕಾರ 948.90 ಕೋಟಿ ರೂ. ಖರ್ಚು ಮಾಡಲಿದೆ. 2021-22ರ ವೇಳೆಗೆ ಯೋಜನೆಯಡಿ 1.5 ಕೋಟಿ ಜನರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ.

2015ರಲ್ಲಿ ಆರಂಭ :

ಕೇಂದ್ರ ಸರಕಾರವು 2015ರಲ್ಲಿ ಪಿಎಂಕೆವಿವೈ ಅನ್ನು ಪ್ರಾರಂಭಿ ಸಿತು. ಎರಡನೇ ಹಂತ(ಪಿಎಂಕೆವಿವೈ 2.0)ವನ್ನು 2016ರಲ್ಲಿ ಪ್ರಾರಂಭಿಸಲಾ ಯಿತು. ಪಿಎಂಕೆವಿವೈ ನ ಅಧಿಕೃತ ವೆಬ್‌ಸೈಟ್‌ನ ಮೂಲಕ 2020ರ ಅಕ್ಟೋಬರ್‌ 20ರ ವರೆಗೆ ಒಟ್ಟು 33.20 ಲಕ್ಷ ಜನರಿಗೆ ತರಬೇತಿ ನೀಡಲಾಗಿದೆ. ಸರಕಾರ 2020ರಲ್ಲಿ 1 ಕೋಟಿ ಜನರಿಗೆ ತರಬೇತಿ ನೀಡುವ ಗುರಿ ಇಟ್ಟುಕೊಂಡಿತ್ತು.

ಯೋಜನೆಯ ಉದ್ದೇಶವೇನು? :

ದೇಶದ ಕೈಗಾರಿಕೆಗಳಿಗೆ ಕೌಶಲಯುಕ್ತ ಯುವಕರನ್ನು ಒದಗಿಸುವ ಉದ್ದೇಶದಿಂದ ಪಿಎಂಕೆವಿವೈ ಅನ್ನು ಜಾರಿಗೆ ತರಲಾಗಿದೆ. ಈ ತರಬೇತಿಯ ಲಾಭವನ್ನು ಪಡೆದುಕೊಳ್ಳುವ ಮೂಲಕ ಯುವಜನತೆ ಸ್ವಂತ ಉದ್ಯಮವನ್ನು ಪ್ರಾರಂಭಿಸಬಹುದು ಅಥವಾ ಬೇರೆಲ್ಲಾದರೂ ಉದ್ಯೋಗ ಪಡೆಯಬಹುದು. ಇದಲ್ಲದೆ ಈ ಯೋಜನೆಯಡಿ ತರಬೇತಿ ಪಡೆದ ಯುವಕರಿಗೆ ಸರಕಾರದಿಂದ ಉದ್ಯೋಗ ದೊರಕಿಸಿಕೊಡುವ ಪ್ರಯತ್ನಗಳು ಸಹ ನಡೆಯುತ್ತವೆ. ಜಾಬ್‌ ಫೇರ್‌ನಂಥ ವೇದಿಕೆಗಳು ಇದಕ್ಕೆ ಪರಿಣಾಮಕಾರಿಯಾಗಿದೆ.

1.5 ಲಕ್ಷ ರೂ. ಸಾಲ :

ಈ ಯೋಜನೆಯಡಿ ಸರಕಾರವು 1.5 ಲಕ್ಷ ರೂ.ಗಳ ವರೆಗೆ ಸಾಲವನ್ನು ನೀಡುತ್ತದೆ. ಕಡಿಮೆ ವಿದ್ಯಾವಂತರು ಅಥವಾ 10ನೇ, 12ನೇ ತರಗತಿಯ ಡ್ರಾಪ್‌ಟೌಟ್‌ ಆದವರೂ ಈ ಯೋಜನೆಯ ಫ‌ಲಾನುಭವಿಗಳಾಗಬಹುದು. ಈ ಯೋಜನೆಯಡಿ ತರಬೇತಿ ಪಡೆಯುವವರಿಗೆ ಪ್ರತೀ 6 ತಿಂಗಳುಗಳಿಗೊಮ್ಮೆ ಸರಕಾರವು ಉದ್ಯೋಗ ಮೇಳವನ್ನು ಆಯೋಜಿಸುತ್ತದೆ.

ದೇಶದ  600 ಜಿಲ್ಲೆಗಳಲ್ಲಿ ತರಬೇತಿ :

729 ಪ್ರಧಾನ ಮಂತ್ರಿ ಕೌಶಲ ಕೇಂದ್ರ (ಪಿಎಂಕೆಕೆ)ಗಳು, ಇತರ ತರಬೇತಿ ಕೇಂದ್ರಗಳು ಮತ್ತು  200ಕ್ಕೂ ಹೆಚ್ಚು ಕೈಗಾರಿಕಾ ತರಬೇತಿ ಸಂಸ್ಥೆಗಳ ಮೂಲಕ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಪಿಎಂಕೆವಿವೈ 3.0 ಅಡಿಯಲ್ಲಿ ದೇಶಾದ್ಯಂತ 600 ಜಿಲ್ಲೆಗಳಲ್ಲಿ ಮುಂದಿನ ಮೂರು ತಿಂಗಳುಗಳ ಅವಧಿಯಲ್ಲಿ 8 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ.

ನೋಂದಾಯಿಸಿ ಕೊಳ್ಳುವುದು ಹೇಗೆ? :

ಈ ಯೋಜನೆಯಲ್ಲಿ ಹೆಸರು, ವಿಳಾಸ ಮತ್ತು ಇಮೇಲ್‌ ಇತ್ಯಾದಿಗಳನ್ನು ttp://pmkvyofficial.org ನಲ್ಲಿ ಭರ್ತಿ ಮಾಡಬೇಕು. ಅನಂತರ ಅರ್ಜಿದಾರರು ತರಬೇತಿ ನೀಡಲು ಬಯಸುವ ತಾಂತ್ರಿಕ ಕ್ಷೇತ್ರವನ್ನು ಆಯ್ಕೆ ಮಾಡಬೇಕಾಗುತ್ತದೆ. ಇದು ನಿರ್ಮಾಣ, ಎಲೆಕ್ಟ್ರಾನಿಕ್ಸ್‌, ಯಂತ್ರಾಂಶ, ಆಹಾರ ಸಂಸ್ಕರಣೆ, ಪೀಠೊಪಕರಣಗಳು ಮತ್ತು ಫಿಟ್ಟಿಂಗ್‌ಗಳು, ಕರಕುಶಲ ವಸ್ತುಗಳು, ರತ್ನ-ಆಭರಣಗಳು ಮತ್ತು ಚರ್ಮದ ತಂತ್ರಜ್ಞಾನದಂತಹ ಸುಮಾರು 40 ತಾಂತ್ರಿಕ ಕ್ಷೇತ್ರಗಳನ್ನು ಹೊಂದಿದೆ. ಇದರಲ್ಲಿ ಆದ್ಯತೆಯ ತಾಂತ್ರಿಕ ಕ್ಷೇತ್ರದ ಜತೆಗೆ, ಇತರ ತಾಂತ್ರಿಕ ಕ್ಷೇತ್ರವನ್ನೂ ಆಯ್ಕೆ ಮಾಡಬೇಕಾಗುತ್ತದೆ. ಈ ಮಾಹಿತಿಯನ್ನು ಭರ್ತಿ ಮಾಡಿದ ಅನಂತರ ನಿಮ್ಮ ತರಬೇತಿ ಕೇಂದ್ರವನ್ನು ನೀವು ಆರಿಸಬೇಕಾಗುತ್ತದೆ. ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ttps://pmkvyofficial.org/Index. ಈ ಜಾಲತಾಣಕ್ಕೆ ಭೇಟಿ ಕೊಡಿ.

ಜಾಲತಾಣದಲ್ಲಿ ಕಾರ್ಯಕ್ರಮ :

ಸಾಮಾಜಿಕ ಮಾಧ್ಯಮಗಳಲ್ಲಿ ಮಧ್ಯಾಹ್ನ 12.30ರಿಂದ ಇದರ ಕಾರ್ಯಕ್ರಮಗಳು ಪ್ರಸಾರಗೊಳ್ಳುತ್ತವೆ. ಕೌಶಲ ಮತ್ತು ಉದ್ಯಮಶೀಲತೆ ಸಚಿವಾಲಯದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಬಹುದು.

PMKVY Facebook: www.facebook.com/PMKVYOfficial

Skill India Facebook: www.facebook.com/SkillIndiaOfficial

Skill India Twitter: www.twitter.com/@MSDESkillindia

Skill India YouTube: https://www.youtube.com/channel/UCzNfVNX5yLEUhIRNZJKniHg

ಟಾಪ್ ನ್ಯೂಸ್

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.