ನ್ಯೂಮೋಕಾಕಲ್‌ ನ್ಯುಮೋನಿಯಾ ತಡೆಗೆ ಪಿಸಿವಿ ಲಸಿಕೆ


Team Udayavani, Nov 4, 2021, 6:40 AM IST

ನ್ಯೂಮೋಕಾಕಲ್‌ ನ್ಯುಮೋನಿಯಾ ತಡೆಗೆ ಪಿಸಿವಿ ಲಸಿಕೆ

ಸಾಂದರ್ಭಿಕ ಚಿತ್ರ.

ಭಾರತ ಸರಕಾರದ ಆರೋಗ್ಯ ಇಲಾಖೆಯ ಸಾರ್ವಜನಿಕ ಲಸಿಕಾ (UIP )ಕಾರ್ಯಕ್ರಮ ಜಗತ್ತಿನಲ್ಲಿಯೇ ಬೃಹತ್ತಾದ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮವಾಗಿದೆ. ಪ್ರತೀ ವರ್ಷ ಸುಮಾರು 2.7 ಕೋಟಿ ನವಜಾತ ಶಿಶುಗಳಿಗೆ ಎಲ್ಲ ಪ್ರಾಥಮಿಕ ಲಸಿಕೆ ಡೋಸ್‌ಗಳನ್ನು, ಒಂದರಿಂದ ಐದು ವರ್ಷದ ಸುಮಾರು 10 ಕೋಟಿ ಮಕ್ಕಳಿಗೆ ಬೂಸ್ಟರ್‌ ಡೋಸ್‌ ಲಸಿಕೆಗಳು, ಸರಿಸುಮಾರು 3 ಕೋಟಿ ಗರ್ಭಿಣಿ ಮಹಿಳೆಯರಿಗೆ ಧನುರ್ವಾತ ಪ್ರತಿಬಂಧಕ ಟಿಡಿ ಲಸಿಕೆ ನೀಡಲಾಗುತ್ತದೆ.

ಕೋವಿಡ್‌ 19 ಲಸಿಕಾ ಅಭಿಯಾನ ಮುಂದುವರಿಯುವಂತೆಯೇ ಆರೋಗ್ಯ ಇಲಾಖೆ ನ್ಯೂಮೋಕಾಕಲ್‌ ಕಾಜುಗೇಟ್‌ ಲಸಿಕಾ (PCV) ಅಭಿಯಾನಕ್ಕೆ ಸಜ್ಜಾಗಿದೆ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ಎಲ್ಲ ಮಕ್ಕಳಿಗೆ ಈ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಸ್ಟ್ರೆಪ್ಟೊಕಾಕಸ್‌ ನ್ಯೂಮೋನಿಯೆ ಎಂಬ ಬ್ಯಾಕ್ಟೀರಿಯಾದಿಂದ ನ್ಯೂಮೋಕಾಕಲ್‌ ಸೋಂಕು ಮಕ್ಕಳಿಗೆ ತಗಲಿ ದೇಹದ ಬೇರೆ ಭಾಗಗಳಿಗೆ ಹರಡಿ ಲಕ್ಷಣಗಳು ತೀವ್ರಗೊಂಡು ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಬಹುದು.

ಸೋಂಕಿನ ಹರಡುವಿಕೆ: ನ್ಯೂಮೋಕಾಕಲ್‌ ನ್ಯುಮೋನಿಯಾವು ಶ್ವಾಸಕೋಶದ ಸೋಂಕು. ಸೋಂಕು ಹೊಂದಿರುವ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಸಿಡಿಯುವ ಹನಿಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಅನಂತರ ದೇಹದ ಇತರ ಭಾಗಗಳಿಗೆ ಹರಡಿ ತೀವ್ರತರನಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಸೋಂಕು ತಗಲಿದ ಮಗುವಿಗೆ ಉಸಿರಾಟದ ಸಮಸ್ಯೆ, ಜ್ವರ, ಕೆಮ್ಮು ಅನಂತರ ತೀವ್ರ ಲಕ್ಷಣಗಳು- ಶ್ವಾಸನಾಳಗಳ ಉರಿ ಊತ, ಕೀವು ತುಂಬಿಕೊಳ್ಳವುದು, ಮಿದುಳು ಬಳ್ಳಿಯ ಉರಿಊತ (Menengits)ದಂತಹ ಗಂಭೀರ ಲಕ್ಷಣಗಳು ಎರಡರಿಂದ ಐದು ವರ್ಷದ ಮಕ್ಕಳಲ್ಲಿ ಅದರಲ್ಲೂ ಮುಖ್ಯವಾಗಿ ಪೌಷ್ಟಿಕಾಂಶ ಕೊರತೆ ಇರುವ, ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಅಧ್ಯಯನಗಳ ಪ್ರಕಾರ ದೇಶದಲ್ಲಿ ಸುಮಾರು 12 ಲಕ್ಷ ಮಕ್ಕಳು ಐದು ವರ್ಷ ಪೂರ್ಣಗೊಳ್ಳುವ ಮೊದಲೇ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಶೇ. 15ರಷ್ಟು ಮಕ್ಕಳು ನ್ಯುಮೋನಿಯಾ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ. 2015ರಲ್ಲಿ ನ್ಯೂಮೋಕಾಕಲ್‌ ನ್ಯುಮೋನಿಯಾದಿಂದ ಸುಮಾರು 16 ಲಕ್ಷ ಮಕ್ಕಳು ಬಳಲಿದ್ದು 68,700 ಮಕ್ಕಳು ಸಾವನ್ನಪ್ಪಿದ ವರದಿ ಇದೆ. ಈ ಬ್ಯಾಕ್ಟೀರಿಯಾಗಳು ನ್ಯುಮೋನಿಯಾ ಸೋಂಕಿಗೆ ಸಾಮಾನ್ಯವಾಗಿ ಬಳಸುವ ಆ್ಯಂಟಿಬಯಾಟಿಕ್ಸ್‌ಗಳಿಗೆ ಪ್ರತಿರೋಧ ಸೃಷ್ಟಿಸಿ ಕೊಂಡಿರುವುದು ಹೆಚ್ಚಿನ ಸಂದರ್ಭಗಳಲ್ಲಿ ಕಂಡು ಬಂದಿದೆ.

ಪ್ರಪಂಚದ 146 ದೇಶಗಳಲ್ಲಿ ಆ ಲಸಿಕೆಯನ್ನು ಪ್ರಸ್ತುತ ನೀಡಲಾಗುತ್ತಿದ್ದು ಆ ದೇಶಗಳಲ್ಲಿ ಮಕ್ಕಳು ನ್ಯೂಮೋನಿಯಾದಿಂದ ಸಾವನ್ನಪ್ಪುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ದೇಶದಲ್ಲಿ 5 ರಾಜ್ಯಗಳಲ್ಲಿ ಈಗಾಗಲೇ ಈ ಲಸಿಕೆ ಸಾವ್ರರ್ತಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ಲಭ್ಯವಿದ್ದು ಪ್ರಸ್ತುತ ವರ್ಷ ದೇಶದ ಎಲ್ಲ ರಾಜ್ಯಗಳಲ್ಲಿ ಲಭ್ಯವಾಗಲಿದೆ ಹಾಗೂ ಪ್ರತೀ ವರ್ಷ ಜನಿಸುವ ಸುಮಾರು 2.7 ಕೋಟಿ ಮಕ್ಕಳಿಗೆ ನಿಗದಿತ ಮೂರು ಡೋಸ್‌ ನೀಡುವ ಉದ್ದೇಶದ ಕಾರ್ಯಕ್ರಮವಾಗಿದೆ. ಇದಕ್ಕಾಗಿ ದೇಶಾದ್ಯಂತ ಆರೋಗ್ಯ ಕಾರ್ಯಕರ್ತರ, ಶೀತಲ ವ್ಯವಸ್ಥೆ ತಂತ್ರಜ್ಞರ ತರಬೇತಿ ಕಾರ್ಯಕ್ರಮಗಳು ನಡೆದಿವೆ.

ಲಸಿಕೆ ನೀಡುವ ವಿಧಾನ: ಒಂದೂವರೆ, ಮೂರೂವರೆ ಹಾಗೂ 9 ತಿಂಗಳ ಮಗುವಿಗೆ ಈ ಲಸಿಕೆಯನ್ನು ಸಾರ್ವತ್ರಿಕ ಲಸಿಕಾ ಕೇಂದ್ರಗಳಲ್ಲಿ ಅದೇ ಸಮಯದಲ್ಲಿ ನೀಡುವ ಇತರ ಲಸಿಕೆಗಳೊಂದಿಗೆ ನೀಡಲಾಗುವುದು. ಪ್ರಸ್ತುತ ಒಂದೂವರೆ ತಿಂಗಳು ಆಗಿರುವ ಮಗು ಮೂರು ಡೋಸ್‌ ಲಸಿಕೆ ಪಡೆದುಕೊಳ್ಳವುದು ಕಾಯಿಲೆಯಿಂದ ರಕ್ಷಿಸಿಕೊಳ್ಳಲು ಸಹಕಾರಿಯಾಗುತ್ತದೆ. ಪ್ರಸ್ತುತ ಪಿಸಿವಿ -10 ಹಾಗೂ ಪಿಸಿವಿ-13 ಎಂಬ ಎರಡು ತರಹದ ಲಸಿಕೆಗಳು ಲಭ್ಯವಿವೆ. ಈ ಲಸಿಕೆಗಳು ಬಹು ಡೋಸ್‌ನ ವಯಲ್‌ಗ‌ಳಲ್ಲಿ ಲಭ್ಯವಿದ್ದು ಲಸಿಕೆ ಸತ್ವ ಸೂಚಿಸುವ VVM ಸ್ಟಿಕ್ಕರ್‌ಗಳನ್ನು ಹೊಂದಿವೆ. ಲಸಿಕೆಯನ್ನು ಮಗುವಿನ ಬಲ ತೊಡೆಯ ಮಧ್ಯಭಾಗದ ಸ್ನಾಯುಗಳಿಗೆ 0.5 ml ನೀಡಲಾಗುತ್ತದೆ (IM) ಈ ಲಸಿಕೆಯನ್ನು ಮಕ್ಕಳಿಗೆ ಕೊಡುವ ಇತರ ಲಸಿಕೆಗಳೊಂದಿಗೆ ತೆಗೆದುಕೊಳ್ಳುವುದು ಸುರಕ್ಷಿತವಾಗಿದೆ. ಲಸಿಕೆಯು ದುಬಾರಿಯಾದ್ದರಿಂದ ಇದುವರೆಗೆ ಆಸ್ಪತ್ರೆಗಳಲ್ಲಿ ಖರೀದಿಗೆ ಮಾತ್ರ ಲಭ್ಯವಾಗಿತ್ತು.

ಲಸಿಕೆ ಶೇಖರಣೆ: ಸಾಮಾನ್ಯವಾಗಿ ಸಾರ್ವತಿಕ ಲಸಿಕಾಕರಣಗಳಲ್ಲಿ ಬಳಸುವ ಎಲ್ಲ ಲಸಿಕೆಗಳು ಹಾಗೂ ಕೋವಿಡ್‌ ಮತ್ತು ಪಿಸಿವಿ ಲಸಿಕೆಗಳನ್ನು 2 ರಿಂದ 8 ಡಿಗ್ರಿ ಉಷ್ಣತೆಯಲ್ಲಿ ಲಸಿಕೆ ತಯಾರಾದ ಸಮಯದಿಂದ ಫ‌ಲಾನುಭವಿಗಳಿಗೆ ನೀಡುವವರೆಗೆ ಸಂರಕ್ಷಿಸಿಡಬೇಕಾಗುತ್ತದೆ. ಈ ಎಲ್ಲ ಲಸಿಕೆಗಳನ್ನು ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಶೇಖರಿಸಿಡುವಂತೆ Ice Lined Refrigerator ( ILR) ನಲ್ಲಿ ಸಂಗ್ರಹಿಸಿಡುವುದು ಸೂಕ್ತ. ಯಾವುದೇ ಕ್ಲಿನಿಕ್‌, ನರ್ಸಿಂಗ್‌ ಹೋಮ್ ಆಸ್ಪತ್ರೆಗಳಲ್ಲಿ ILR ಲಭ್ಯವಿಲ್ಲದಿದ್ದರೆ ನಿರಂತರ ವಿದ್ಯುತ್‌ ಸರಬರಾಜು ವ್ಯವಸ್ಥೆ ಇರುವ ಗೃಹ ಬಳಕೆಯ ರೆಫ್ರಿಜರೇಟರ್‌ಗಳಲ್ಲಿ ಕೇವಲ ಲಸಿಕೆ ಹಾಗೂ ಲಸಿಕೆಗೆ ಸಂಬಂಧಿಸಿದ ಪರಿಕರಗಳನ್ನು ಮಾತ್ರ ಶೇಖರಿಸಿಡಬೇಕಾಗುತ್ತದೆ. ಇತರ ಔಷಧಗಳು, ಚುಚ್ಚುಮದ್ದುಗಳನ್ನು ಸಹ ಅದೇ ರೆಫ್ರಿಜರೇಟರ್‌ನಲ್ಲಿ ಶೇಖರಿಸಿಟ್ಟರೆ ಪ್ರತೀ ದಿನ ಪದೇಪದೆ ಅವುಗಳಿಗಾಗಿ ಅದರ ಬಾಗಿಲು ತೆರೆಯಬೇಕಾಗುವುದರಿಂದ ರೆಫ್ರಿಜರೇಟರ್‌ನೊಳಗಿನ ಉಷ್ಣಾಂಶವನ್ನು 2 ರಿಂದ 8 ಡಿಗ್ರಿವರೆಗಿನ ಉಷ್ಣತೆಯಲ್ಲಿ ಸಂಗ್ರಹಿಸಿಡಲು ಸಾಧ್ಯವಾಗದಿದ್ದಲ್ಲಿ ಲಸಿಕೆಗಳು ಸತ್ವಹೀನವಾಗಬಹುದು. ಲಸಿಕೀಕರಣದಲ್ಲಿ ಲಸಿಕೆಯ ಸತ್ವ ಕಾಪಾಡಲು ಶೀತಲ ವ್ಯವಸ್ಥೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ನಿಗದಿತ ಸಮಯದಲ್ಲಿ ನಿಗದಿತ ವಿಧಾನದಲ್ಲಿ ಸರಿಯಾದ ತಾಂತ್ರಿಕತೆ ಬಳಸಿ, ಸರಿಯಾದ ಡೋಸ್‌ ಬಳಸಿ ಲಸಿಕೆ ನೀಡಿದರೆ ಅವು ಪರಿಣಾಮಕಾರಿಯಾಗುತ್ತದೆ ಹಾಗೂ ಅದನ್ನು ಸಂಬಂಧಪಟ್ಟ ವೈದ್ಯರು ಆಗಿಂದಾಗ್ಗೆ ಪರಾಮರ್ಶೆ ಮಾಡುತ್ತಿದ್ದರೆ ಆ ಲಸಿಕಾಕರಣವು ಯಶಸ್ವಿಯಾಗುತ್ತದೆ.

– ಡಾ| ಅಶ್ವಿ‌ನಿ ಕುಮಾರ್‌ ಗೋಪಾಡಿ

ಟಾಪ್ ನ್ಯೂಸ್

1-busss

ನಾಡಿದ್ದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜತೆ ರಾಜಿ ಸಭೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MM-Singh1

Tribute Dr.Singh: ಡಾ.ಮನಮೋಹನ್‌ ಸಿಂಗ್‌ ಆಡಳಿತದ ಜನಪರ ಯೋಜನೆಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-busss

ನಾಡಿದ್ದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜತೆ ರಾಜಿ ಸಭೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.