ಕವಿಗಳ ಸಾಹಿತ್ಯವೂ, ಗಾಯಕನ ಸಂಗೀತವೂ…


Team Udayavani, Jun 18, 2023, 8:05 AM IST

INDIAN MUSIC

ಕನ್ನಡ ಸಾಹಿತ್ಯ ಲೋಕದಲ್ಲಿ ಕಾವ್ಯಕ್ಕೆ ತಲೆದೂಗದವರು ವಿರಳ. ಕವಿಯ ಭಾವನೆಗಳ ಆಕರ ಕಾವ್ಯ. ಅದನ್ನು ಸಹೃದಯರಿಗೆ ತಲುಪಿಸುವವನು ಗಾಯಕ. ಹಳ ಗನ್ನಡ ಕಾವ್ಯ ಘಟ್ಟದಲ್ಲಿ ಗಮಕಿ ಈ ಪಾತ್ರವನ್ನು ನಿರ್ವಹಿಸುತ್ತಿದ್ದನು. ಹೊಸಗನ್ನಡ ಕಾಲದಲ್ಲಿ ಸುಗಮ ಸಂಗೀತಗಾರರು ಭಾವ ಪೂರ್ಣವಾಗಿ ಕಾವ್ಯಾಸಕ್ತರಿಗೆ ಕವಿಗಳನ್ನು ತಲುಪಿ ಸಿದರು. ಭಾವಗೀತೆ, ದಾಸರ ಹಾಡುಗಳು, ವಚನಗಳು ಗಾಯಕರ ಮೂಲಕ ಅದ್ಭುತ ವಾತಾವರಣವನ್ನು ಸೃಷ್ಟಿಸಿದವು. ಖ್ಯಾತ ಗಾಯಕಿ ಎಚ್‌.ಆರ್‌. ಲೀಲಾವತಿಯವರು ಸಾಹಿತ್ಯ ಹಾಗೂ ಸಂಗೀತ ಸಂಬಂಧದ ಕುರಿತು ಕೆಲವು ಘಟನೆಗಳನ್ನು ತಮ್ಮ ಆತ್ಮಕಥನದಲ್ಲಿ ಹಂಚಿಕೊಡಿದ್ಧಾರೆ.

ಎಂ. ಗೋಪಾಲಕೃಷ್ಣ ಅಡಿಗ

ಕನ್ನಡದ ನವ್ಯ ಕವಿಗಳು. ವೃತ್ತಿಯಲ್ಲಿ ಆಂಗ್ಲ ಪ್ರಾಧ್ಯಾ ಪಕರು. ಮೈಸೂರು ಅರಸರಾದ ಜಯ ಚಾಮ ರಾಜೇಂದ್ರ ಒಡೆಯರ ಕಾಲ. ಹೆಚ್ಚಿನ ಕಾರ್ಯ ಕ್ರಮಗಳಲ್ಲಿ ಒಡೆಯರೇ ಅಧ್ಯಕ್ಷತೆ ವಹಿಸುತ್ತಿದ್ದರು. ಆಗ ಪ್ರಾರ್ಥನೆಗೆ ಆಹ್ವಾನ ಬರುತ್ತಿದ್ದುದು ಲೀಲಾ ವತಿಯವರಿಗೆ. ಅಡಿಗರ “ಆರದಿರು ಆರದಿರು ಓ ನನ್ನ ಬೆಳಕೇ’ ಕವನ. ಅದನ್ನು ಲೀಲಾವತಿಯವರು ಭಾವಪೂರ್ಣವಾಗಿ ಹಾಡುತ್ತಿದ್ದರು. ಅಡಿಗರ ಪ್ರಸಿದ್ಧ ಭಾವಗೀತೆ “ಯಾವ ಮೋಹನ ಮುರಳಿ ಕರೆಯಿತೋ…’ ಲೀಲಾವತಿಯವರಿಗೆ ಈ ಕವನ ಹಾಡಿದಂತೆ ಪ್ರಶ್ನೆಯೊಂದು ಉದ್ಭವವಾಗುತ್ತಿತ್ತು.

ಇದನ್ನು ಯಾವ ಅರ್ಥದಲ್ಲಿ ಅಡಿಗರು ಬರೆದಿರ ಬಹುದು? ಒಮ್ಮೆ ಅಡಿಗರನ್ನು ನೇರವಾಗಿ ಪ್ರಶ್ನಿಸಿದರು. ಅದನ್ನು ಬರೆದಾಗ ಒಂದು ಭಾವ ಸು#ರಿಸಿತ್ತು. ಈಗ ನಾನು ಓದುವಾಗ ಮತ್ತೂಂದು ಭಾವ ಸುರಿಸುತ್ತಿದೆ. ಇದು ಯಶಸ್ವೀ ಕಾವ್ಯದ ಗುಟ್ಟು. ಒಮ್ಮೆ ಸು#ರಿಸಿದ ಭಾವ ಮತ್ತೂಮ್ಮೆ ಬೇರೆಯೇ ಆಗಬ ಹುದು ಎಂದರು ಅಡಿಗರು. ಅಡಿಗರು ಬೆಂಗಳೂರಿ ನಲ್ಲಿದ್ದ ದಿನಗಳು. ಮೈಸೂರಿನಲ್ಲಿ ಅವರ ಮನೆಯೊಂ ದಿತ್ತು.

ಅದನ್ನು ಮಾರಲು ಸಿದ್ಧರಾಗಿದ್ದರು. ಲೀಲಾವತಿ ಯವರ ಪತಿ ರಘುರಾಮ್‌ ಈ ವಿಚಾರದಲ್ಲಿ ಅಡಿಗರಿಗೆ ನೆರವಾದರು. ಅಂತೂ ಮನೆ ಮಾರಾ ಟವಾಯಿತು. ಮೈಸೂರಿನಲ್ಲಿ ಆಸ್ತಿಯ ನೋಂದಣಿ. ಅಡಿಗರನ್ನು ಕಾರಿನಲ್ಲಿ ಮೈಸೂರಿಗೆ ಕರೆತರಲಾಯಿತು. ಅವರು ಪಾರ್ಶ್ವವಾಯುವಿನಿಂದ ನರಳುತ್ತಿದ್ದರು. ಮಧ್ಯಾಹ್ನ ಸುಮಾರು ಒಂದೂವರೆ ಗಂಟೆಯ ಸಮಯ. ಸಬ್‌ರಿಜಿಸ್ಟ್ರಾರ್‌ ಆಗ ಊಟಕ್ಕೆ ತೆರಳಿದ್ದರು. ರಘುರಾಮ್‌ ಅಡಿಗರ ಬಳಿ ಬಂದು ಸ್ವಲ್ಪ ಕಾಯ ಬೇಕಾಗಬಹುದು ಎಂದರು. ಕೂಡಲೇ ಅಡಿಗರು ಏಕೆ? ಎಂದರು. ಅವರು ಊಟ ಮುಗಿಸಿ ಬರಬೇಕು. ಅದಕ್ಕೆ ಅಡಿಗರ ಪ್ರತಿಕ್ರಿಯೆ. ಬೆಳಗ್ಗಿನಿಂದ ಇಲ್ಲಿ ಕೂತು ತಿಂದದ್ದು ಸಾಲದೆಂದು ಊಟಕ್ಕೆ ಬೇರೆ ಮನೆಗೆ ಹೋಗಿ¨ªಾನೆಯೇ? ಅಡಿಗರ ಭ್ರಷ್ಟಾಚಾರ ವಿರೋಧಿ ಮನೋಭಾವಕ್ಕೆ ಈ ಘಟನೆ ಸಾಕ್ಷಿ.

ಕುವೆಂಪು: ಜ್ಞಾನಪೀಠ ಪುರಸ್ಕೃತ ಕವಿ. ಕುವೆಂಪುರವರು ಮೈಸೂರಿನಲ್ಲಿದ್ದ ದಿನಗಳು. ಗಾಯಕಿ ಲೀಲಾವತಿ ಯವರು ಕವಿ ಕುವೆಂಪುರವರನ್ನು ಅವರ ನಿವಾಸ ಉದಯರವಿಗೆ ತೆರಳಿ ಭೇಟಿಯಾದರು. ಸಾಹಿತ್ಯ ಹಾಗೂ ಸಂಗೀತದ ಬಗ್ಗೆ ನಡೆದ ಮಾತುಕತೆಗಳ ನಡುವೆ ಕುವೆಂಪು ಹೇಳಿದರು. ನೀವು ನನ್ನ ಕವನಗಳನ್ನು ಹಾಡದಿದ್ದರೆ ನನ್ನ ಪುಸ್ತಕಗಳೆಲ್ಲ ಬೀರುವಿನಲ್ಲಿಯೇ ಇರುತ್ತಿತ್ತು. ಕುವೆಂಪುರವರು ಬೆಂಗಳೂರು ಆಕಾಶವಾಣಿಗೆ ಹೀಗೆ ಬರೆದಿದ್ದರಂತೆ. ನನ್ನ ಕವನಗಳನ್ನು ಪಿ. ಕಾಳಿಂಗ ರಾವ್‌ ಮತ್ತು ಲೀಲಾವತಿ ಹೊರತು ಬೇರೆ ಯಾರೂ ಹಾಡಬಾರದು. ಮಾನಸಗಂಗೋತ್ರಿಯ ಆರಂಭೋತ್ಸವದಲ್ಲಿಯೂ ಲೀಲಾವತಿಯವರಿಂದಲೇ ಹಾಡಿಸಿದರಂತೆ.

ದ.ರಾ. ಬೇಂದ್ರೆ

ವರಕವಿ ಬೇಂದ್ರೆಯವರ ಮಾತು, ಕವನಗಳೆಂದರೆ ಅನೇಕರಿಗೆ ಆಸಕ್ತಿ. ಸ್ವತಃ ಅವರೇ ಕೆಲವೊಮ್ಮೆ ವಾಚಿ ಸುತ್ತಿದ್ದರು. ಒಮ್ಮೆ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಂಪರೆ ಎಂಬ ರೂಪಕದ ಪ್ರದರ್ಶನ. ಬೇಂದ್ರೆ ಯವರೇ ಅದನ್ನು ರಚಿಸಿದ್ದರು. ಅದರಲ್ಲಿ ಲೀಲಾವತಿ ಯವರು ಬೇಂದ್ರೆಯವರ ಎರಡು ಕವನಗಳನ್ನು ಹಾಡಿದ್ದರು. ಕಾರ್ಯಕ್ರಮ ಮುಗಿಯಿತು. ಲೀಲಾವತಿ ಯವರು ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಬೇಂದ್ರೆಯವರು ಎದುರಾದರು. ಗಾಯನಕ್ಕೆ ಮಾರು ಹೋದ ಬೇಂದ್ರೆಯವರು ಹೇಳಿದ ಮಾತನ್ನು ಲೀಲಾವತಿಯವರು ಹೀಗೆ ನೆನಪಿಸಿಕೊಂಡಿ¨ªಾರೆ. “ಏನ್‌ ಛಲೋ ಹಾಡ್ತೀಯವ್ವಾ. ಆಶಾ ಭೋಂಸ್ಲೆ ಹಾಗೆ. ಈಗ ಮನೀಗೆ ಹೋಗಿ ಮತ್ತೆ ನಿನ್ನ ಗಾಯನ ರೇಡಿಯೋದಾಗ ಕೇಳ್ತೀನಿ’.

ಕೆ.ಎಸ್‌. ನರಸಿಂಹಸ್ವಾಮಿ
ಕನ್ನಡದ ಪ್ರೇಮ ಕವಿ ಕೆ.ಎಸ್‌.ಎನ್‌. ಒಮ್ಮೆ ಆಕಾಶವಾಣಿಯಲ್ಲಿ ಸಂಗೀತ ರೂಪಕ. ಅದಕ್ಕೊಂದು ಹಾಡು ಬೇಕಾಗಿತ್ತು. ಲೀಲಾವತಿಯವರು ಕೆ.ಎಸ್‌.ಎನ್‌. ಬಳಿ ಕವನಕ್ಕಾಗಿ ಕೋರಿಕೆ ಸಲ್ಲಿಸಿದರು. ಅಷ್ಟರಲ್ಲಿ ಅನಾರೋಗ್ಯದಿಂದ ಲೀಲಾವತಿಯವರು ಆಸ್ಪತ್ರೆಗೆ ದಾಖಲಾಗಬೇಕಾಯಿತು. ನರಸಿಂಹಸ್ವಾಮಿಯವರು ಲೀಲಾವತಿಯವರನ್ನು ಹುಡುಕಿಕೊಂಡು ಆಸ್ಪತ್ರೆಗೆ ಬಂದರು. ತಾನು ಬರೆದು ತಂದ ಕವನವನ್ನು ನೀಡಿ ಶೀಘ್ರ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು. ಕೆ.ಎಸ್‌.ಎನ್‌. ಅವರ ಸಹೃದಯತೆಗೊಂದು ನಿದರ್ಶನ.

ಶಿವರುದ್ರಪ್ಪ
ಇವರ ಪ್ರಸಿದ್ಧ ಕವನ “ಉಡುಗಣವೇಷ್ಟಿತ’. ಲೀಲಾವತಿಯವರಿಗೆ ಕೀರ್ತಿ ತಂದ ಕವನ. ಇದರೊಂದಿಗೆ ಎಂಥ ಅವಿನಾಭಾವ ಸಂಬಂಧ ಅವರಲ್ಲಿ ಬೆಳೆದಿತ್ತೆಂದರೆ ಲೀಲಾವತಿ ಎಂದರೆ ಉಡು ಗಣವೇಷ್ಟಿತ, ಉಡುಗಣವೇಷ್ಟಿತ ಎಂದರೆ ಲೀಲಾವತಿ ಎಂದು ಜನಜನಿತವಾಗಿತ್ತು. ಶಿವರುದ್ರಪ್ಪನವರೇ ಹೇಳಿದಂತೆ ಈ ಕವನವನ್ನು ಲೀಲಾವತಿಯವರು ಸೊಗ ಸಾಗಿ ಹಾಡುವುದರ ಮೂಲಕ ಶೋತೃಗಳ ನಡುವೆ ನನಗೊಂದು ಸ್ಥಾನ ಕಲ್ಪಿಸಿದರು.

ಸಿದ್ದಲಿಂಗಯ್ಯ
ಒಮ್ಮೆ ಕವಿಗೋಷ್ಠಿ. ಸಿದ್ದಲಿಂಗಯ್ಯನವರನ್ನು ಆಹ್ವಾನಿಸಲಾಗಿತ್ತು. ಆಗ ಅವರು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು. ಕವಿಗೋಷ್ಠಿ ಮುಗಿಸಿ ಹೋಗುವಾಗ ಪ್ರಯಾಣದ ವೆಚ್ಚ ನೀಡಲು ಲೀಲಾವತಿ ಮುಂದಾ ದರು. ಆಗ ಸಿದ್ದಲಿಂಗಯ್ಯನವರು ಸ್ವೀಕರಿಸಲಿಲ್ಲ. ಅದಕ್ಕೆ ಅವರು ಕೊಟ್ಟ ಕಾರಣ ಅವರ ಪ್ರಾಮಾಣಿಕತೆಗೆ ಸಾಕ್ಷಿ. ನಾನು ಪುಸ್ತಕ ಪ್ರಾಧಿಕಾರದ ಕಾರಿನಲ್ಲಿ ಬಂದಿದ್ದೇನೆ. ಹಾಗಾಗಿ ಈ ಪ್ರಯಾಣದ ವೆಚ್ಚ ಬೇಡ. ಈ ಘಟನೆಯಿಂದ ಅವರ ಬಗ್ಗೆ ನನಗಿದ್ದ ಗೌರವ ಮತ್ತಷ್ಟು ಹೆಚ್ಚಾಯಿತೆಂದು ಲೀಲಾವತಿಯವರು ನೆನಪಿಸಿಕೊಳ್ಳುತ್ತಾರೆ. ಸಂಗೀತ ಹಾಗೂ ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಗಾಯಕ ಕಾವ್ಯಕ್ಕೆ ಕಳೆ ಕೊಟ್ಟರೆ, ಕವಿಯು ಗಾಯಕನ ಕಲೆಗೆ ಕಳೆ ಕೊಡುತ್ತಾನೆ.

ಟಾಪ್ ನ್ಯೂಸ್

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.