ನ್ಯಾಯಾಧೀಶರ ವೇತನದಲ್ಲಿ ರಾಜಕೀಯ


Team Udayavani, Apr 18, 2017, 5:37 AM IST

18-ANKANA-2.jpg

ಕೇಂದ್ರ ಸರಕಾರ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ವೇತನದಲ್ಲಿ ಭಾರೀ ಹೆಚ್ಚಳ ಮಾಡಲಿಚ್ಛಿಸಿದೆ. ಇದು ಸರಕಾರದ ಉದ್ದೇಶದ ಬಗ್ಗೆ ಅನುಮಾನ ಹುಟ್ಟಿಸುವಂತಿದೆ. ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಇತ್ತೀಚೆಗೆ ಉಂಟಾದ ಸಾಮರಸ್ಯದ ಕೊರತೆಯ ಗಾಯಕ್ಕೆ ಮುಲಾಮು ಹಚ್ಚಿ ರಾಜಕಾರಣಿಗಳ ಹಿತಾಸಕ್ತಿ ಕಾಯ್ದುಕೊಳ್ಳಲು ಸರಕಾರ ಈ ಹೆಜ್ಜೆ ಇರಿಸಿದೆಯೇ?

ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ಮೊನ್ನೆ ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ವೇತನವನ್ನು ಶೇ.200ರಷ್ಟು ಹೆಚ್ಚಿಸುವ ಸರಕಾರದ ಇರಾದೆಯನ್ನು ವ್ಯಕ್ತಪಡಿಸಿದರು. ಇದೊಂದು ದಿಢೀರ್‌ ಆಶ್ಚರ್ಯಕರ ಸುದ್ದಿ. ಯಾಕೆಂದರೆ ಅದರ ಹಿಂದಿರುವ ಸನ್ನಿವೇಶದ ಮಹತ್ವ ಹಾಗಿದೆ. ಬಿಜೆಪಿ ನೇತೃತ್ವದ ಸರಕಾರ ಆಡಳಿತಕ್ಕೆ ಬಂದು ಈಗ ಸುಮಾರು ಎರಡು ವರ್ಷ ಆಗುತ್ತಿದೆ. ಸರಕಾರ ಅಸ್ತಿತ್ವಕ್ಕೆ ಬಂದ ಲಾಗಾಯ್ತಿನಿಂದ ನ್ಯಾಯಾಂಗದ ಬಗ್ಗೆ ಯಾವ ಸಹಾನುಭೂತಿಯನ್ನೂ ತೋರಿಸಿದಂತಿಲ್ಲ. ಪ್ರಸಕ್ತ ಸರಕಾರ ಸುಧಾರಣೆಯ ಹೆಸರಲ್ಲಿ ಮೊದಲು ಮಾಡಿದ ಕೆಲಸವೆಂದರೆ ನ್ಯಾಯಾಧೀಶರುಗಳ ನೇಮಕಕ್ಕೆ ಹಿಂದೆ ಇದ್ದ ಕೊಲೀಜಿಯಂ ಪದ್ಧತಿಯನ್ನು ರದ್ದುಗೊಳಿಸಿರುವುದು. ಅದರ ಸ್ಥಾನದಲ್ಲಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಕಾಯಿದೆ 2014ನ್ನು ರೂಪಿಸಿ ನ್ಯಾಯಾಂಗದ ಕ್ಷೇತ್ರದಲ್ಲಿ ಒಂದು ರೀತಿಯ ಸಂಚಲನ ಮೂಡಿಸಿರುವುದು ವಿಶೇಷ.

ಪ್ರಸ್ತಾವಿತ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಕಾಯಿದೆ 2014ರನ್ವಯ ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾಧೀಶರುಗಳ ನೇಮಕಕ್ಕೆ ಒಂದು ಸಮಿತಿ ಇರುತ್ತದೆ. ಈ ಸಮಿತಿಯಲ್ಲಿ ಆರು ಮಂದಿ ಸದಸ್ಯರಿದ್ದು, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರೇ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ಉಳಿದ ಐವರು ಸದಸ್ಯರೆಂದರೆ ಸರ್ವೋಚ್ಚ ನ್ಯಾಯಾಲಯದ ಓರ್ವ ನ್ಯಾಯಾಧೀಶರು, ಪ್ರಧಾನಮಂತ್ರಿ, ಕೇಂದ್ರ ಸರಕಾರದ ಕಾನೂನು ಮಂತ್ರಿ ಹಾಗೂ ಇಬ್ಬರು ಸಮಾಜದ ಗಣ್ಯ ವ್ಯಕ್ತಿಗಳು. ಸಮಾಜದ ಈ ಗಣ್ಯವ್ಯಕ್ತಿಗಳ ಆಯ್ಕೆಗೆ ಒಂದು ಉಪ ಸಮಿತಿ ಇದೆ. ಈ ಸಮಿತಿಯಲ್ಲಿ ಮೂವರು ಸದಸ್ಯರಿದ್ದು, ಅದರ ಮುಖ್ಯಸ್ಥರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರೇ ಆಗಿರುತ್ತಾರೆ. ಪ್ರಧಾನ ಮಂತ್ರಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ಈ ಉಪ ಸಮಿತಿಯ ಉಳಿದಿಬ್ಬರು ಸದಸ್ಯರಾಗಿರುತ್ತಾರೆ. ಇಲ್ಲಿ ಎದ್ದು ಕಾಣುವ ವಿಶೇಷವೆಂದರೆ ಸಮಿತಿಯ ಸದಸ್ಯರಾಗಿರುವವರಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಹಾಗೂ ಸರ್ವೋಚ್ಚ ನ್ಯಾಯಾಲಯದ ಇನ್ನೋರ್ವ ಸದಸ್ಯ ನ್ಯಾಯಾಧೀಶರನ್ನು ಹೊರತುಪಡಿಸಿ ಉಳಿದವರೆಲ್ಲರೂ ರಾಜಕಾರಣಿಗಳು.

ರದ್ದಾದ ನ್ಯಾಯಾಂಗ ನೇಮಕಾತಿ ಕಾಯಿದೆ
ಈ ಕಾಯಿದೆಯ ವಿರುದ್ಧ ದೇಶದಲ್ಲಿ ತೀವ್ರ ಅಭಿಪ್ರಾಯ ಮೂಡಿಬಂತು. ನೂರಾರು ಸಾರ್ವಜನಿಕ ಹಿತಾಸಕ್ತಿಯ ದೂರುಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾದವು. ಪ್ರಕರಣವನ್ನು ವಿಸ್ತೃತವಾಗಿ ಚರ್ಚಿಸಿದ ಸರ್ವೋಚ್ಚ ನ್ಯಾಯಾಲಯ ಪ್ರಸ್ತಾಪಿತ ಕಾಯಿದೆಯನ್ನು ರದ್ದುಗೊಳಿಸಿತಲ್ಲದೆ ಹಿಂದಿನ ಕೋಲಿಜಿಯಂ ಪದ್ಧತಿಯನ್ನೇ ಎತ್ತಿ ಹಿಡಿಯಿತು. ಮುಂದುವರಿದು, ಕೋಲಿಜಿಯಂ ಪದ್ಧತಿಯನ್ನು ಪರಿಷ್ಕರಿಸುವ ಅನೇಕ ನಿರ್ದೇಶನಗಳನ್ನು ಸರಕಾರಕ್ಕೆ ನೀಡಿತು. ಆ ಹಂತದಲ್ಲಿ ನ್ಯಾಯಾಂಗ ಹಾಗೂ ಸರಕಾರದ ನಡುವೆ ಕೆಲವು ಅಭಿಪ್ರಾಯ ಭೇದಗಳು ತಲೆದೋರಿರಬಹುದು. ನ್ಯಾಯಾಂಗ ಸಂಪೂರ್ಣ ಸ್ವಾಯತ್ತೆ ಹಾಗೂ ಮುಕ್ತ ಅವಕಾಶವನ್ನು ಬಯಸಿದುದು ಸರಕಾರದ ಅತೃಪ್ತಿಗೆ ಕಾರಣವಾಗಿರಬಹುದು. ನ್ಯಾಯಾಂಗದ ಈ ಹಕ್ಕು ಸ್ಥಾಪನೆ ಪ್ರಜಾಸತ್ತಾತ್ಮಕ ಆಡಳಿತದ ತತ್ವಕ್ಕೆ ವಿರೋಧವಾದುದು ಎಂದು ಸರಕಾರ ಭಾವಿಸಿದರೆ ತಪ್ಪಿಲ್ಲ. ವಿಶ್ವದ ಕೆಲವು ಪ್ರಜಾಸತ್ತೆಗಳಲ್ಲಿ ನ್ಯಾಯಾಧೀಶರ ನೇಮಕಾತಿಯಲ್ಲಿ ಸರಕಾರದ ಸಹಭಾಗಿತ್ವ ಇದೆ. ಈ ವಿಚಾರದಲ್ಲಿ ಉಭಯ ಅಂಗಗಳ ಪಾರಮ್ಯಕ್ಕೆ ಧಕ್ಕೆಯಾಗದ ಹಾಗೆ ಪ್ರಕರಣವನ್ನು ಇತ್ಯರ್ಥಪಡಿಸುವ ಮುತುವರ್ಜಿಯನ್ನು ವಹಿಸಬೇಕಾದುದು ಸರಕಾರದ ಕರ್ತವ್ಯ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ಬಗ್ಗೆ ಸರಕಾರ ಆಸಕ್ತಿ ತೋರಿಸುತ್ತಿರುವುದು ಕಂಡುಬರುವುದಿಲ್ಲ.

ಇದರಿಂದಾಗಿ ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆ ಕುಸಿದು ಬಿದ್ದಿದೆ. ಪ್ರಧಾನ ಮಂತ್ರಿಯವರು ಉಪಸ್ಥಿತರಿದ್ದ ಸಭೆಯೊಂದರಲ್ಲಿ ಹಾಜರಿದ್ದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ನ್ಯಾಯಾಧೀಶರ ಕೊರತೆಯಿಂದ ಸಾರ್ವಜನಿಕರಿಗೆ ಕ್ಲಪ್ತ ಕಾಲದಲ್ಲಿ ನ್ಯಾಯ ಒದಗಿಸಲಾಗದ ಅಸಹಾಯಕತೆಯನ್ನು ಭಾವುಕತೆಯಿಂದ ವ್ಯಕ್ತಪಡಿಸಿದಾಗಲೂ ಪ್ರಧಾನ ಮಂತ್ರಿಗಳ ಸ್ಪಂದನ ನೀರಸ ಹಾಗೂ ನಿರುತ್ತೇಜಕವಾಗಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇತ್ತ ವಿತ್ತ ಸಚಿವ ಅರುಣ್‌ ಜೇಟ್ಲಿಯವರು ನ್ಯಾಯಾಂಗದ ಕಾರ್ಯನಿರ್ವಹಣಾ ದೋಷವೂ ನ್ಯಾಯ ನೀಡಿಕೆಯಲ್ಲಿ ಆಗುತ್ತಿರುವ ವಿಳಂಬಕ್ಕೆ ಕಾರಣ ಎಂಬರ್ಥದ ಹೇಳಿಕೆ ನೀಡಿದ್ದರು. ಒಟ್ಟಿನಲ್ಲಿ ಸರಕಾರ ಹಾಗೂ ನ್ಯಾಯಾಂಗದ ನಡುವೆ ಎದ್ದು ಕಾಣುವ ವಿರಸವಿಲ್ಲದಿದ್ದರೂ, ಸಾಮರಸ್ಯದ ಕೊರತೆ ಇದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. 

ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರುಗಳ ಹಠಾತ್‌ ವೇತನ ಹೆಚ್ಚಳದ ಹಿಂದೆ ಏನಾದರೂ ಗುಪ್ತ ಉದ್ದೇಶವಿದೆಯೇ ಎಂಬ ತರ್ಕಕ್ಕೆ ಪ್ರೇರಣೆ ದೊರೆಯುತ್ತದೆ.

ನ್ಯಾಯಾಂಗದ ಬಲವರ್ಧನೆ ಯಾಕಿಲ್ಲ?
ಇದೇ ಮಾರ್ಚ್‌ 2017ರಲ್ಲಿ ಮಾಜಿ ಸಂಸದರ ಪಿಂಚಣಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿಯ ದೂರನ್ನು ಸಾರ್ವಜನಿಕ ಸಂಸ್ಥೆ (ಲೋಕ್‌ ಪ್ರಹಾರಿ) ದಾಖಲಿಸಿದೆ. ದೂರು ಸ್ವೀಕರಿಸಿದ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ನೋಟೀಸ್‌ ನೀಡಿದೆ. ಕೆಲವೇ ದಿನಗಳಲ್ಲಿ ನ್ಯಾಯಾಧೀಶರ ವೇತನವನ್ನು ಹೆಚ್ಚಿಸಿದ ತೀರ್ಮಾನದ ಪ್ರಕಟನೆಯೂ ಆಗಿದೆ. ನ್ಯಾಯಾಧೀಶರ ವೇತನ ಹೆಚ್ಚಳದ ಬೇಡಿಕೆ ಸರಕಾರದ ತೀರ್ಮಾನಕ್ಕೆ ಬಾಕಿ ಇದ್ದು, ಈಗ ಅದು ತೀರ್ಮಾನ ತೆಗೆದುಕೊಂಡಿರಬಹುದು. ಆದರೆ ತೀರ್ಮಾನ ಕೈಗೊಂಡ ಸಮಯ ಸರಕಾರವನ್ನು ಅನುಮಾನದ ದೃಷ್ಟಿಯಿಂದ ನೋಡುವ ಅವಕಾಶ ನೀಡುತ್ತದೆ. ಮಾಜಿ ಸಂಸದರ ಪಿಂಚಣಿ ಏರಿಕೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ಕೆಲವೇ ದಿನಗಳಲ್ಲಿ ನ್ಯಾಯಾಧೀಶರ ವೇತನ ಹೆಚ್ಚಳದ ತೀರ್ಮಾನ ಕೈಗೊಳ್ಳುವುದು ನ್ಯಾಯಾಧೀಶರ ಓಲೈಕೆ ಎಂದೇ ಭಾವಿಸಬಹುದಾಗಿದೆ. ನ್ಯಾಯಾಧೀಶರ ವೇತನ ಪರಿಷ್ಕರಣೆಯೂ ನ್ಯಾಯಾಂಗದ ಬಲವರ್ಧನೆಗೆ ಕೈಗೊಳ್ಳುವ ಕ್ರಮಗಳಲ್ಲಿ ಒಂದಾಗಿರಬಹುದು. ಆದರೆ ಸರಕಾರಕ್ಕೆ ಅಂಥ ನೈಜ ಕಾಳಜಿ ಇರುವುದಾಗಿದ್ದರೆ, ಸರಕಾರವು ಸರ್ವೋಚ್ಚ ನ್ಯಾಯಾಲಯದ ನಿಕಟಪೂರ್ವ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಠಾಕೂರ್‌ ಅವರು ಅಪೇಕ್ಷಿಸಿದ “”ನ್ಯಾಯಾಧೀಶರುಗಳ ಖಾಲಿ ಹುದ್ದೆ ಭರ್ತಿ, ಹೆಚ್ಚುವರಿ ನ್ಯಾಯಾಲಯಗಳ ಸ್ಥಾಪನೆ ಹಾಗೂ ಇತರ ಮೂಲ ಸೌಕರ್ಯಗಳ ಪೂರೈಕೆ”ಯಂತಹ ಕ್ರಮಗಳನ್ನು ಹಂತಹಂತವಾಗಿ ತೆಗೆದುಕೊಳ್ಳಬಹುದಾಗಿತ್ತು.

ಆದರೆ ಈಗಲೂ ನ್ಯಾಯಾಧೀಶರುಗಳ ನೇಮಕದ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸುತ್ತಿಲ್ಲ. “”ಸಂಸದರ ವೇತನ, ಪಿಂಚಣಿ ಇತ್ಯಾದಿ ಪ್ರಯೋಜನಗಳನ್ನು ನಿಗದಿಪಡಿಸುವ ಅಧಿಕಾರ ಸಂಸತ್ತಿಗಿದೆ” ಎಂದು ಹೇಳುವಷ್ಟಕ್ಕೆ ಅರುಣ್‌ ಜೇತ್ಲೀಯವರ ಹೇಳಿಕೆ ಸೀಮಿತವಾಗಿದೆ. ಹಾಗಾದರೆ ನ್ಯಾಯಾಂಗದ ಬಲವರ್ಧನೆ ಸರಕಾರದ ಜವಾಬ್ದಾರಿಯಲ್ಲಿಲ್ಲವೇ? ನ್ಯಾಯಾಂಗದ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಸರಕಾರಕ್ಕಿಲ್ಲದಿದ್ದರೂ ಸಂವಿಧಾನದಲ್ಲಿ ಅಡಕವಾದ ಸಾರ್ವಜನಿಕ ಹಿತಾಸಕ್ತಿಯನ್ನು ಈಡೇರಿಸಲು ಶಕ್ತವಾದ ನ್ಯಾಯಾಂಗವನ್ನು ಸಜ್ಜುಗೊಳಿಸುವ ಜವಾಬ್ದಾರಿ ಸರಕಾರಕ್ಕಿದೆಯಷ್ಟೇ! ಅದು ಚುನಾಯಿತ ಪ್ರತಿನಿಧಿಗಳ ಒಕ್ಕೂಟದ ಸದನ ಸಾರ್ವಜನಿಕರಿಗೆ ಯಾವತ್ತೂ ನೀಡುವ ಆಶ್ವಾಸನೆ. ನ್ಯಾಯಾಧೀಶರುಗಳ ಖಾಲಿ ಹುದ್ದೆಗಳ ಭರ್ತಿ, ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ನ್ಯಾಯಾಲಯಗಳ ರಚನೆ ಹಾಗೂ ಮೂಲ ಸೌಕರ್ಯ ಪೂರೈಕೆಯಂಥ ಕ್ರಮಗಳು ನೇರ ನ್ಯಾಯಾಂಗದ ಬಲವರ್ಧನೆಯನ್ನು ಸೂಚಿಸುತ್ತದೆ. ಕೇವಲ ನ್ಯಾಯಾಧೀಶರುಗಳ ಧಿಡೀರ್‌ ವೇತನ ಹೆಚ್ಚಳ ಸರಕಾರದ ಇಚ್ಛಾನುಸಾರಿ ಧೋರಣೆಯನ್ನು ಸೂಚಿಸುತ್ತದೆ.

ರಾಜಕಾರಣಿ ಹಿತ ಕಾಪಾಡುತ್ತಿದ್ದಾರೆಯೇ?
ಸಂಸದರ ಪಿಂಚಣಿಯ ವಿರುದ್ಧ ದಾಖಲಾದ ಸಾರ್ವಜನಿಕ ಹಿತಾಸಕ್ತಿಯ ದೂರು ಹಾಗೂ ಅದರ ಬೆನ್ನಿಗೆ ನ್ಯಾಯಾಧೀಶರ ವೇತನ ಹೆಚ್ಚಳ, ಸರಕಾರದ ನಡೆಯ ಬಗ್ಗೆ ಅನುಮಾನ ಉಂಟು ಮಾಡುತ್ತದೆ ಹಾಗೂ ಚುನಾಯಿತ ಪ್ರತಿನಿಧಿಗಳ ಭಾವಶುದ್ಧಿಯನ್ನು ಪ್ರಶ್ನಿಸುವಂತಾಗಿದೆ. ಎಷ್ಟಾದರೂ ರಾಜಕಾರಣಿಗಳೆಲ್ಲರೂ ಒಂದೇ ಅಲ್ಲವೇ! ಪಕ್ಷ ಮಾತ್ರ ಬೇರೆ. ಬಹುಮತ ಸಿಕ್ಕಿದರೆ ಆಡಳಿತ. ಇಲ್ಲವಾದರೆ ವಿರೋಧ ಪಕ್ಷದ ಬೆಂಚಲ್ಲಿ. ಅಂತೂ ಸದನದ ಒಳಗೆ ಇರುತ್ತಾರಲ್ಲವೇ! ಚುನಾಯಿತ ಪ್ರತಿನಿಧಿಗಳ ವೇತನ, ಪಿಂಚಣಿ ಇತ್ಯಾದಿ ವಿಚಾರಗಳಲ್ಲಿ ಪಕ್ಷಾತೀತವಾಗಿ ಎಲ್ಲ ಸದಸ್ಯರೂ ಒಂದಾಗುತ್ತಾರೆ. ರಾಜಕಾರಣಿಗಳ ಹಿತಾಸಕ್ತಿ ಕಾಪಾಡುವುದೇ ಮೊದಲ ಗುರಿ. ನೋಡಿ, ಎಲ್ಲಿಗೆ ಬಂತು ನಮ್ಮ ರಾಜಕಾರಣ! ಹೇಳಿ ಕೇಳಿ ರಾಜಕಾರಣ ಒಂದು ಸೇವಾಕ್ಷೇತ್ರ. ಜೀವಿತದ ಒಂದು ಅವಧಿಯಲ್ಲಾದರೂ ತನ್ನೂರಿಗೆ, ತನ್ನ ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಉದ್ದೇಶದಿಂದ ಆಯ್ಕೆ ಮಾಡಿಕೊಳ್ಳುವ ಕ್ಷೇತ್ರ. ಆದರೆ ಖೇದದ ವಿಚಾರವೆಂದರೆ ಈಗ ರಾಜಕೀಯಕ್ಕೆ ಸೇರುವುದು ಜೀವನೋಪಾಯಕ್ಕಾಗಿ ಅಥವಾ ಐಶಾರಾಮಿ ಜೀವನ ಸಾಗಿಸಲಿಕ್ಕಾಗಿ ಎಂದು ನಿರಕ್ಷರ ಕುಕ್ಷಿಯೂ ಹೇಳಬಲ್ಲ. 

ಇಲ್ಲಿ ವೇತನ ಹೆಚ್ಚಳ ಮುಖ್ಯವಲ್ಲ, ಇಡಿಯ ಸನ್ನಿವೇಶವನ್ನು ಅವಲೋಕಿಸುವಾಗ ಚುನಾಯಿತ ಪ್ರತಿನಿಧಿಗಳ ಅಥವಾ ರಾಜಕಾರಣಿಗಳ ಹಿತವನ್ನು ಕಾಪಾಡುವ ದೂರಾಲೋಚನೆಯಿಂದ ನ್ಯಾಯಾಧೀಶರುಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆದಿದೆ ಎಂಬ ಅನುಮಾನ. ನಮ್ಮ ಪ್ರಜಾಸತ್ತೆಗೆ ಈ ರಾಜಕಾರಣಿಗಳೇ ದೊಡ್ಡ ಬೆದರಿಕೆ ಎಂದು ಹೇಳಿದರೆ ಉದ್ದಟತನವಾದೀತು. ಸಾರ್ವಜನಿಕ ವಿವೇಚನೆಗೆ ಬಿಡುವುದೇ ಲೇಸು.

ಬೇಳೂರು ರಾಘವ ಶೆಟ್ಟಿ

ಟಾಪ್ ನ್ಯೂಸ್

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.