ಕೋವಿಡ್‌ ಮುಕ್ತ ವಿಶ್ವಕ್ಕಾಗಿ ಪ್ರಾರ್ಥನೆ


Team Udayavani, May 17, 2021, 6:20 PM IST

Prayer for the covid Free World

ವಿಶ್ವಾದ್ಯಂತ ಅದರಲ್ಲೂ ವಿಶೇಷ ವಾಗಿ ಭಾರತದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಬಹಳ ತೀವ್ರ ವೇಗದಲ್ಲಿ ಹರಡುತ್ತಿದ್ದು, ದಿನದಿಂದ ದಿನಕ್ಕೆ ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ದುಬೈಯಲ್ಲಿರುವ ಹೆಮ್ಮೆಯ ಯುಎಇ ಕನ್ನಡಿಗರು ಸಂಘ ಪವಿತ್ರ ರಂಜಾನ್‌ ತಿಂಗಳ ಪ್ರಯುಕ್ತ ಏ. 30ರಂದು ನಡೆಸಿದ ಸರ್ವ ಧರ್ಮ ಸಭೆಯಲ್ಲಿ ಎಲ್ಲ ಧರ್ಮದ ಧರ್ಮಗುರುಗಳ ಮೂಲಕ ಕೋವಿಡ್‌ ಮುಕ್ತ ವಿಶ್ವಕ್ಕಾಗಿ ವಿಶೇಷ ಪ್ರಾರ್ಥನ ಸಭೆಯನ್ನು ಆಯೋಜಿಸಿದ್ದರು.
ಸರ್ವಧರ್ಮ ಕಾರ್ಯಕ್ರಮವು ಸಂಯುಕ್ತ ಅರಬ್‌ ಸಂಸ್ಥಾನದ ರಾಷ್ಟ್ರ ಗೀತೆಯೊಂದಿಗೆ ಮತ್ತು ಕರ್ನಾಟಕ ನಾಡಗೀತೆಯೊಂದಿಗೆ ಪ್ರಾರಂಭಿಸಲಾಯಿತು.
ಪದ್ಮಶ್ರೀ ಇಬ್ರಾಹಿಂ ಸುತಾರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ತಂಡದ ಗೌರವಾಧ್ಯಕ್ಷರು ಮತ್ತು ಉದ್ಯಮಿ ಎಂ ಸ್ಕ್ವೇರ್‌ ಮುಸ್ತಫಾ ಅವರು ಉದ್ಘಾಟಿಸಿದರು.

ಭಾವ್ಯಕ್ಯತಾ ಸಮಾರಂಭದಲ್ಲಿ ಪಾಲ್ಗೊಂಡ ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕರು ಮತ್ತು ವಿದ್ವಾಂಸರು ಆದ ಮೊಹಮ್ಮದ್‌ ಕುಂಜ್‌ ಅವರು ಮಾತನಾಡಿ, ಉಪವಾಸ ವ್ರತದ ಕಲ್ಪನೆ ಎಲ್ಲ ಧರ್ಮಗಳಲ್ಲೂ ಇದೆ. ಉಪವಾಸದ ಉದ್ದೇಶ ಮನುಷ್ಯ ತನ್ನನ್ನು ತಾನು ಆಂತರಿಕವಾಗಿ ಮತ್ತು ಮಾನಸಿಕವಾಗಿ ಸಂಸ್ಕರಿಸುವುದು, ಊಟ ಮಾಡದೆ ಇರುವುದರ ಜತೆಗೆ ಮನುಷ್ಯ ತನ್ನ ಎಲ್ಲ ಇಚ್ಛೆಗೆ ಕಡಿವಾಣ ಹಾಕಿ ಆತ್ಮ ನಿಯಂತ್ರಣ ಮಾಡವುದು ಎಂದು ಹೇಳಿದರು.
ಇಂದಿನ ತಾಂತ್ರಿಕ ಸಂಪರ್ಕ ನಿಜವಾಗಲೂ ಮನುಷ್ಯತ್ವದ ಕೊಂಡಿ ಆಗಬೇಕಾಗಿತ್ತು. ಆದರೆ, ದುರಾದೃಷ್ಟವಾಗಿ ಅದು ದ್ವೇಷದ ಕೊಂಡಿಯಾಗಿದೆ. ತಾಂತ್ರಿಕ ಸಂಪರ್ಕ ಹೆಚ್ಚಿದ್ದು, ಕೌಟುಂಬಿಕ ಸಂಪರ್ಕ ಕಡಿತಗೊಂಡು ವೃದ್ಧಾಶ್ರಮಗಳು ಹೆಚ್ಚಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಎಲ್ಲವೂ ಇದೆ ಮಂಗಳೂರಿನ ಧರ್ಮ ಗುರುಗಳಾದ ಕರ್ನಾಟಕ ಎಸ್‌ಎಸ್‌ಎಫ್ಎಫ್ ಸಂಘಟನೆಯ ಮಾಜಿ ಅಧ್ಯಕ್ಷರಾದ ಮೌಲಾನಾ ಸುಫಿಯಾನ್‌ ಸಖಾಫಿ ಅವರು ಮಾತನಾಡಿ, ಭಾರತ ಒಂದು ಪುಟ್ಟ ಬ್ರಹ್ಮಾಂಡವಾದರೆ ಕರ್ನಾಟಕ ಒಂದು ಪುಟ್ಟ ಭಾರತ ನೋಡ, ಇಲ್ಲಿ ಇಲ್ಲದವು ಇನ್ನೆಲ್ಲಿದೆ ನೋಡ ತೋರ ಎಂಬ ಕವಿ ಸಿದ್ದಯ್ಯ ಪುರಾಣಿಕ್‌ ಅವರ ಕವಿತೆಯನ್ನು ಉÇÉೇಖೀಸಿ, ಕರ್ನಾಟಕದ ವಿಶಿಷ್ಟ ಆಚಾರ ವಿಚಾರ, ಪ್ರಕೃತಿ ಭೌಗೋಳಿಕ ವೈಶಿಷ್ಟéದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಎಲ್ಲವೂ ಕರ್ನಾಟಕದಲ್ಲಿ ಮಾತ್ರ ಕಾಣಸಿಗುತ್ತೆ ಎಂದರು.

ಶತ್ರುವನ್ನೂ ಪ್ರೀತಿಸು ವೈವಿಧ್ಯತೆಯಲ್ಲಿ ಏಕತೆಯನ್ನು ಕರ್ನಾಟಕದಲ್ಲಿ ಕಾಣಬಹುದು. ಪವಿತ್ರ ಕುರಾನ್‌ ಸೂಕ್ತ ಉÇÉೇಖೀಸಿ ಒಬ್ಬ ಮನುಷ್ಯನ ಜೀವವನ್ನು ತೆಗೆದರೆ ಅವನು ಇಡೀ ವಿಶ್ವದ ಜೀವ ತೆಗೆದ ಹಾಗೆ ಹಾಗು ಸರ್ವೇಜನ ಸುಖೀನೋ ಭವಂತು ಎಂದು ಉÇÉೇಖೀಸಿ ಹಿಂದೂ ಧರ್ಮದಲ್ಲಿನ ಹಾಗೆ ನೀನು ನಿನ್ನ ಶತ್ರುವನ್ನು ಸಹ ಪ್ರೀತಿಸು ಎಂಬ ಏಸು ಕ್ರಿಸ್ತರ ಮಾನವೀಯತೆ ಸಂದೇಶ ಸಾರಿದರು.

ಮಂಗಳೂರಿನ ಧರ್ಮಗುರುಗಳು ಕರ್ನಾಟಕ ಎಸ್‌ಕೆಎಸ್‌ಎಸ್‌ಎಫ್ ಸಂಘಟನೆಯ ರಾಜ್ಯಾಧ್ಯಕ್ಷರಾದ ಮೌಲಾನಾ ಅನೀಸ್‌ ಕೌಸರಿ ಮಾತನಾಡಿ, ಯಾವುದೇ ಧರ್ಮವನ್ನು ಅರಿಯಲು ರಾಜಕೀಯ ಮತ್ತು ಕೋಮುವಾದಿ ಶಾಖಾ ಕೇಂದ್ರಗಳಿಂದ ಕಲಿಯಬಾರದು. ಬದಲಾಗಿ ಶರಣರು ಸೂಫಿ ಸಂತರು, ಪಾದ್ರಿಗಳ ಮುಖಾಂತರ ಅರಿಯಬೇಕು ಎಂದು ನುಡಿದರು. ಇದಕ್ಕೆ ಉದಾಹರಣೆಯಾಗಿ ತುಳಸಿದಾಸರು ಮತ್ತು ಅಜ್ಮಿàರ್‌ ಖ್ವಾಜ ಅವರನ್ನು ಉÇÉೇಖೀಸಿ ತುಳಸಿದಾಸರು ಮಸೀದಿಯಲ್ಲಿ ಕುಳಿತು ರಾಮಚರಿತೆ ಬರೆದು ಹಿಂದೂ ಧರ್ಮದ ಮೂಲ ತಣ್ತೀವಾದ ಜಗತ್ತಿನ ಎಲ್ಲ ಜನರು ಒಂದೇ ಕುಟುಂಬಕ್ಕೆ ಸೇರಿದವರು ಹಾಗೂ ಇಡೀ ಜಗತ್ತಿನಲ್ಲಿರುವ ಸರ್ವ ಸೃಷ್ಟಿ ಅÇÉಾಹನದ್ದು ಎಂದು ಹೇಳುತ್ತಾ ಎಲ್ಲ ಜಾತಿ ಧರ್ಮಗಳು ಮಾನವೀಯತೆಯ ಆದರ್ಶದ ಮೇಲೆ ನೆಲೆಯೂರಿದೆ ಎಂದರು.

ಕೋವಿಡ್‌ನ‌ಂತಹ ಸಾಂಕ್ರಾಮಿಕ ರೋಗಗಳು, ಅತಿವೃಷ್ಟಿ ಇನ್ನಿತರ ಪ್ರಾಕೃತಿಕ ವಿಕೋಪ ಮುಂತಾದ ಸಂಕಷ್ಟ ಸಮಯ ಬಂದಾಗ ಹೇಗೆ ಎಲ್ಲರೂ ಪರಸ್ಪರ ಸಹೋದರತೆಯಿಂದ ಸಹಾಯ ಸಹಕಾರ ಮಾಡುತ್ತಾರೋ ಅದನ್ನು ಮುಂದುವರಿಸಿಕೊಂಡು ಹೋಗಲು ಕರೆ ನೀಡಿದರು.
ಪ್ರಪಂಚದ ಸರ್ವ ಜೀವರಾಶಿ ಜತೆ ಕರುಣೆ ತೋರಬೇಕೆಂದು ಇಸ್ಲಾಂ ಧರ್ಮ ಸಂದೇಶವಾಗಿದೆ ಎಂದು ಹೇಳಿದ ಅವರು, ಹಸಿದವನ ಹೊಟ್ಟೆ ತುಂಬಿಸುವ ಕಾರ್ಯ ಈ ರಂಜಾನ್‌ ತಿಂಗಳ ದೊಡ್ಡ ಸಂದೇಶವಾಗಿದೆ ಎಂದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕರ್ನಾಟಕ ಎನ್‌ಆರ್‌ಐ ಫೋರಮ್‌ ಮಾಜಿ ಉಪಾಧ್ಯಕ್ಷರಾದ ಡಾ| ಆರತಿ ಕೃಷ್ಣ, ದುಬೈಯಲ್ಲಿ ವಕೀಲ ವೃತ್ತಿಯಲ್ಲಿರುವ ಮತ್ತು ಕೇರಳದ ಪ್ರಸಿದ್ಧ ಅನಿವಾಸಿ ಸಂಘಟನೆಯಾದ ಕೆಎಂಸಿಸಿ ದುಬೈ ಘಟಕದ ಮುಖ್ಯ ಸಂಚಾಲಕರಾದ ಅಡ್ವೋಕೇಟ್‌ ಖಲೀಲ್‌ ಕಾಸರಗೋಡು ಅವರು ಪಾಲ್ಗೊಂಡು, ಮುಂದಿನ ದಿನಗಳಲ್ಲಿ ಅನಿವಾಸಿ ಕನ್ನಡಿಗರಿಗೆ ಕೈಲಾದ ಸಹಾಯವನ್ನು ಒದಗಿಸುವುದಾಗಿ ತಿಳಿಸಿದರು.
ದುಬೈ ವಿದ್ಯಾರ್ಥಿ ಮೊಹಮ್ಮದ್‌ ಆಫ‌lರ್‌ ಸೊಂಪಾಡಿ ಅವರು ಕುರಾನ್‌ ಪಠಿಸಿದರು. ಉದ್ಘಾಟನೆ ಪ್ರಾರ್ಥನೆಯನ್ನು ಮೌಲಾನಾ ಇಸಾಕ್‌ ಕೌಸರಿ ಮಂಗಳೂರು ಅವರು ನೆರವೇರಿಸಿದರು.

ತಂಡದ ಮಹಿಳಾ ಘಟಕದ ಸಂಚಾಲಕಿ ಪಲ್ಲವಿ ದಾವಣಗೆರೆ ಅವರು ಆಗಮಿಸಿದ ಸರ್ವ ಅತಿಥಿಗಳಿಗೆ ಮತ್ತು ಧರ್ಮಗುರುಗಳನ್ನು ಸ್ವಾಗತಿಸಿದರು.
ರಂಜಾನ್‌ ಭಕ್ತಿ ಗೀತೆಯನ್ನು ನಿಜಾಮುದ್ದೀನ್‌ ದುಬೈ ಕನ್ನಡಿಗ ನೆರವೇರಿಸಿದರು. ಹೆಮ್ಮೆಯ ಕನ್ನಡಿಗರು ತಂಡದ ಬಗ್ಗೆ ಸಂಕ್ಷಿಪ್ತವಾಗಿ ಸಮಿತಿ ಸದಸ್ಯೆ ಹಾದಿಯ ಮಂಡ್ಯ ಅವರು ವಿವರಿಸಿದರು. ತಂಡದ ವಿವಿಧ ಕಾರ್ಯಗಳ ಬಗ್ಗೆ ತಂಡದ ಅಧ್ಯಕ್ಷರಾದ ಮಮತಾ ಮೈಸೂರು ಅವರು ತಿಳಿಸಿದರು.
ವಿಷ್ಣುಮೂರ್ತಿ ಮೈಸೂರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರದಲ್ಲಿ ಪಾಲ್ಗೊಂಡ ಎಲ್ಲ ಅತಿಥಿಗಳಿಗೆ, ಧರ್ಮಗುರುಗಳಿಗೆ, ಕುರಾನ್‌ ಪಠಣ ಮತ್ತು ಭಕ್ತಿ ಗೀತೆ ಹಾಡಿದವರಿಗೆ ಮತ್ತು ಯುಎಇಯಲ್ಲಿ ಕನ್ನಡ ಸೇವೆ, ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸತ್ತಿರುವ ಎÇÉಾ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕಾರ್ಯಕ್ರಮದ ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು, ಸುದೀಪ್‌ ದಾವಣಗೆರೆ, ತಾಂತ್ರಿಕ ಕಾರ್ಯ ನಿರ್ವಹಿಸದ ಸೆಂತಿಲ್‌ ಬೆಂಗಳೂರು, ಸಾದತ್‌ ಬೆಂಗಳೂರು ಮತ್ತು ಸರ್ವ ಸಮಿತಿ ಸದಸ್ಯರಿಗೆ ಅಶ್ರಫ್ ಪೆರುವಾಯಿ ಮಂಗಳೂರು ಅವರು ಧನ್ಯವಾದ ಸಲ್ಲಿಸಿದರು.

ಟಾಪ್ ನ್ಯೂಸ್

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.