ದೇಶದಲ್ಲಿ  ವರ್ಚುವಲ್‌ ಐಟಿ ಪಾರ್ಕ್‌ಗೂ ಆದ್ಯತೆ


Team Udayavani, Aug 19, 2021, 6:20 AM IST

ದೇಶದಲ್ಲಿ  ವರ್ಚುವಲ್‌ ಐಟಿ ಪಾರ್ಕ್‌ಗೂ ಆದ್ಯತೆ

ಮಂಗಳೂರು: ಕೊರೊನೋತ್ತರ ಕಾಲಘಟ್ಟದಲ್ಲಿ ವರ್ಚುವಲ್‌ ಐಟಿ ಪಾರ್ಕ್‌ ಪರಿಕಲ್ಪನೆ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದ್ದು, ದೇಶದ ಒಟ್ಟು ಐಟಿ ಕ್ಷೇತ್ರದ ಶೇ.40ರಷ್ಟು ಭಾಗ ಪ್ರಸ್ತುತ ಈ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಹಿನ್ನಲೆಯಲ್ಲಿ ಐಟಿ ಪಾರ್ಕ್‌ ಗಳ ಜತೆ-ಜತೆಗೆ  ವರ್ಚುವಲ್‌ ಐಟಿ ಪಾರ್ಕ್‌ಗೂ ಪೂರಕ ವಾಗಿ ಅವಶ್ಯ ಸೌಲಭ್ಯಗಳನ್ನು ಬಲಪಡಿಸುವತ್ತ ಗಮನ ಹರಿಸಲಾಗುವುದು ಎಂದು  ಕೇಂದ್ರ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಇಲಾಖೆಗೆ ಸಂಬಂಧಿಸಿದಂತೆ ತಮ್ಮ ದೂರದೃಷ್ಟಿ ಹಾಗೂ ಚಿಂತನೆಗಳನ್ನು ಹಂಚಿಕೊಂಡರು.

ಕರಾವಳಿಯಲ್ಲಿ ಐಟಿ ಪಾರ್ಕ್‌ಗಳಿಗೆ ಸರಕಾರದ ಸ್ಪಂದನೆ ಹೇಗಿರುತ್ತದೆ?

ಕರಾವಳಿಯೂ ಸೇರಿದಂತೆ ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಐಟಿ ಕ್ಷೇತ್ರಕ್ಕೆ ಹೆಚ್ಚಿನ ಅವಕಾಶಗಳಿವೆ. ಕೊರೊನೋತ್ತರ ಪರಿಸ್ಥಿತಿಯಲ್ಲಿ ಆರ್ಥಿಕ ಮಾದರಿ ಹಾಗೂ ವ್ಯವಸ್ಥೆಗಳ  ಕಾರ್ಯನಿರ್ವಹಣೆಯಲ್ಲಿ ಆಳವಾದ ಪರಿವರ್ತನೆಗಳಾಗಿವೆ. ಡಿಜಿಟಲೈಸೇಶನ್‌ ಅತ್ಯಂತ ತೀವ್ರ ಗತಿಯಲ್ಲಿ ನಡೆಯುತ್ತಿದೆ. ತಂತ್ರಜ್ಞಾನಗಳಿಗೆ  ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ತಂತ್ರಜ್ಞಾನ ವ್ಯವಹಾರ ಜಾಗತಿಕ ವಾಗಿ ದಿನದಿಂದ ದಿನಕ್ಕೆ  ಏರುಗತಿಯಲ್ಲಿ ಸಾಗುತ್ತಿದೆ. ಇದಕ್ಕೆ ಅನುಗುಣವಾಗಿ ಪ್ರಸ್ತುತ  ಐಟಿ ಕ್ಷೇತ್ರದಲ್ಲಿ ವರ್ಕ್‌ ಫ್ರಂ ಹೋಮ್‌ ವ್ಯವಸ್ಥೆ ವ್ಯಾಪಕಗೊಳ್ಳುತ್ತಿದೆ. ದೇಶ ವಿದೇಶಗಳ ಐಟಿ ಕಂಪೆನಿಗಳು ಈ ವ್ಯವಸ್ಥೆಗೆ ಹೆಚ್ಚು  ಒತ್ತು ನೀಡಲಾರಂಭಿಸಿವೆ. ಇದಕ್ಕೆ ಪೂರಕವಾಗಿ  ಇಂಟರ್‌ನೆಟ್‌ ಸೌಲಭ್ಯ, ಇಂಟರ್‌ನೆಟ್‌ ವೇಗ ಹೆಚ್ಚಿಸುವಿಕೆ, ಬ್ರಾಡ್‌ಬ್ಯಾಂಡ್‌ ಮುಂತಾದ ಪೂರಕ ವ್ಯವಸ್ಥೆಗಳನ್ನು  ಅಭಿವೃದ್ಧಿ ಗೊಳಿಸಿದಾಗ  ಉದ್ಯೋಗಿಗಳು ಮನೆಯಲ್ಲೇ ಕುಳಿತು ದೇಶದ ವಿವಿಧ ನಗರಗಳು ಹಾಗೂ ವಿಶ್ವದ ಇತರ ರಾಷ್ಟ್ರಗಳ ಲ್ಲಿರುವ ಐಟಿ ಕಂಪೆನಿಗಳ ಉದ್ಯೋಗಗಳನ್ನು ನಿರ್ವಹಿಸ ಬಹುದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಗಮನ ಹರಿಸಲಿದೆ.

ಐಟಿ ಕ್ಷೇತ್ರದ ಪ್ರಗತಿಗೆ ನಿಮ್ಮ ಚಿಂತನೆಗಳೇನು?

ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ “ಡಿಜಿಟಲ್‌ ಪವರ್‌ ಟು ಎಂಪವರ್‌ವೆುಂಟ್‌’ ಎಂಬ ಘೋಷಣೆ ಮಾಡಿದ್ದರು. ತಂತ್ರಜ್ಞಾನ ಜನರ ಜೀವನ ಮಟ್ಟವನ್ನು ಅಭಿವೃದ್ದಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವಾರು  ಮಹತ್ತರವಾದ ಯೋಜನೆಗಳನ್ನು ಪ್ರಧಾನಿ ಮೋದಿ ಜಾರಿ ಗೊಳಿಸಿದ್ದಾರೆ. ಈ ಯೋಜನೆಗಳನ್ನು ಇನ್ನಷ್ಟು ವಿಸ್ತರಿಸ ಲಾಗುವುದು. ಇಂದು ಸರಕಾರದ ಆನೇಕ ಸೌಲಭ್ಯಗಳು ಜನರ ಬಳಿಗೆ ತ್ವರಿತವಾಗಿ ಹಾಗೂ ಯಾವುದೇ ಅಡೆತಡೆ ಇಲ್ಲದೆ ತಲುಪಲು ಸಾಧ್ಯವಾಗಿದೆ. ಸರಕಾರ ಜನ

ಕಲ್ಯಾಣಕ್ಕೆ ವೆಚ್ಚ ಮಾಡುವ ಒಂದು ರೂಪಾಯಿ

ಯಲ್ಲಿ ಕೇವಲ 15 ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂಬ ಅಂಶವನ್ನು  ಈ ಹಿಂದೆ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹೇಳಿದ್ದರು. ಆದರೆ ಪ್ರಸ್ತುತ ನರೇಂದ್ರ ಮೋದಿ ಅವರ ದಕ್ಷ ಆಡಳಿತ ಹಾಗೂ ಡಿಜಿಟಲೈಸೇಶನ್‌ ಪ್ರಕ್ರಿಯೆಯಿಂದಾಗಿ ಸರಕಾರ ಜನಪರ ಯೋಜನೆಗಳಿಗೆ  ವೆಚ್ಚ ಮಾಡುವ ಪ್ರತಿಯೊಂದೂ ರೂಪಾಯಿ ಕೂಡ ಜನರಿಗೆ ತಲುಪಲು ಸಾಧ್ಯವಾಗಿದೆ.

ಕೌಶಲ ಅಭಿವೃದ್ಧಿ ನಿಟ್ಟಿನಲ್ಲಿ  ಇಲಾಖೆಯ ಮುಂದಿನ ಕಾರ್ಯ-ಯೋಜನೆಗಳೇನು?

ಕೌಶಲ ಅಭಿವೃದ್ಧಿಯ ನಿಟ್ಟಿನಲ್ಲಿ ಇನ್ನಷ್ಟು ಉಪಕ್ರಮ ಗಳನ್ನು ಕೈಗೆತ್ತಿಕೊಳ್ಳಲಾಗುವುದು. ಪ್ರಧಾನಿ ಮೋದಿ ಅವರು ಈಗಾಗಲೇ ಘೋಷಿಸಿರುವ ನೂತನ ಶಿಕ್ಷಣ ನೀತಿಯು ಕೌಶಲ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಲಿದೆ. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಶಿಕ್ಷಣದ ಗುರಿಯ ಬಗ್ಗೆ  ಸ್ಪಷ್ಟತೆಯನ್ನು ಮೂಡಿಸಲಾಗುತ್ತದೆ ಮತ್ತು ಅವರಿಗೆ ವೃತ್ತಿಯಾಧಾರಿತ ಅಥವಾ ಉನ್ನತ ಶಿಕ್ಷಣ ವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಸ್ಪಷ್ಟ ದಿಕ್ಕು ತೋರಿಸಲಿದೆ. ಉದ್ಯೋಗಾಧಾರಿತ ಕೌಶಲಗಳು ನೂತನ ಶಿಕ್ಷಣ ನೀತಿ ಯಲ್ಲಿ  ಸೇರಿವೆ. ಇದರಲ್ಲಿ ಕೇಂದ್ರ ಕೌಶಲ ಅಭಿವೃದ್ಧಿ ಇಲಾ ಖೆಯ ಕೂಡಾ ಮಹತ್ವರ ಪಾತ್ರವನ್ನು ನಿರ್ವಹಿಸಲಿದೆ.

ಜನಾಶೀರ್ವಾದ ಯಾತ್ರೆ ಅನುಭವ ಹೇಗಿದೆ?

ಇದೊಂದು ವಿಶಿಷ್ಟ ಅನುಭವ. ಜನತೆ ಅಶೀರ್ವಾದ ಮಾಡಿದ್ದಾರೆ. ಅವರನ್ನು ಸಂಪರ್ಕಿಸಿ, ಅವರಿಗೆ ಅಭಿನಂದನೆ ಸಲ್ಲಿಸಿ, ಸಂವಾದ ನಡೆಸಿ, ಅವರ ಅಭಿಪ್ರಾಯ ಪಡೆದುಕೊಳ್ಳುವ ಜತೆಯಲ್ಲಿ ಜನರ ನಿರೀಕ್ಷೆಗಳೇನು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಜನಾ ಶೀರ್ವಾದ ಯಾತ್ರೆಯಲ್ಲಿ ಮಾಡಲಾಗುತ್ತಿದೆ. ನಮ್ಮ ಪಕ್ಷದ ಕಾರ್ಯಕರ್ತರು ಯಾವುದೇ ಪ್ರಚಾರ, ಫಲಾಪೇಕ್ಷೆ ಯಿಲ್ಲದೆ ಜನರ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದು ಅವರ ಈ ಕಾರ್ಯ ನಮಗೆ ಇನ್ನಷ್ಟು ಜನಸೇವೆಗೆ ಸ್ಫೂರ್ತಿಯನ್ನು ನೀಡಿದೆ.

ಡಿಜಿಟಲೈಸೇಶನ್‌ವಿಸ್ತರಣೆ ಹೇಗೆ? :

ಪ್ರಧಾನಿ ನರೇಂದ್ರ ಮೋದಿ ಅವರ “ಸಬ್‌ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ಕಾ ವಿಶ್ವಾಸ್‌, ಸಬ್‌ಕಾ ಪ್ರಯಾಸ್‌’ ಧ್ಯೇಯದ ಸಾಕಾರದಲ್ಲಿ ಡಿಜಿಟ ಲೈಸೇಶನ್‌ನ ಪಾತ್ರವು ಮಹತ್ವದ್ದಾಗಿದೆ. ಇಂಟರ್‌ ನೆಟ್‌ ಸಂಪರ್ಕ, ದೂರಸಂಪರ್ಕ  ವ್ಯವಸ್ಥೆ ಹೆಚ್ಚಿಸು ವುದು, ಗುಣಮಟ್ಟದ ಸೇವೆ ಲಭ್ಯವಾಗುವಂತೆ ಮಾಡುವುದು ಹಾಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ಮೊಬೈಲ್‌ ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡುವ ಗುರಿಯನ್ನು  ಇರಿಸಿಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ಇಲಾಖೆಯು ಒತ್ತು ನೀಡಲಿದೆ.

 

 -ಕೇಶವ ಕುಂದರ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

23-mandya

Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.