ಯೋಗವಿದ್ಯೆಗೆ ವಿಶ್ವಮಾನ್ಯತೆ ತಂದುಕೊಟ್ಟ ಸ್ವಾಮಿ ಶಿವಾನಂದ


Team Udayavani, Apr 27, 2022, 8:35 AM IST

ಯೋಗವಿದ್ಯೆಗೆ ವಿಶ್ವಮಾನ್ಯತೆ ತಂದುಕೊಟ್ಟ ಸ್ವಾಮಿ ಶಿವಾನಂದ

ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ ಕೃತಿಯನ್ನು ಓದಿದಾಗ ನೂರಾರು ವರ್ಷಗಳ ಕಾಲ ಬದುಕಿದ್ದ ಸಂತರ ಪರಿಚಯ ನಮಗಾಗುತ್ತದೆ. ಇದು ಸಾಧ್ಯವೇ? ಎಂಬ ಆಶ್ಚರ್ಯದೊಂದಿಗೆ ಅಭಿಮಾನವೂ ಮೂಡುತ್ತದೆ. ಇತ್ತೀಚೆಗೆ ಜಗತ್ತಿನಾದ್ಯಂತ ಸುದ್ದಿ ಮಾಡಿ ಆಶ್ಚರ್ಯ ಮೂಡಿಸಿದವರು ಶಿವಾನಂದ ಸ್ವಾಮಿಗಳು. ಇವರಿಗೆ ಈಗ 125 ವರ್ಷ.

ಯೋಗ ಇವರ ಸಾಧನಾ ಕ್ಷೇತ್ರ. ಇವರ ಸಾಧನೆಯನ್ನು ಗುರುತಿಸಿ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದೆ.

ಶಿವಾನಂದ ಸ್ವಾಮಿಗಳು ಹುಟ್ಟಿದ್ದು 8-8-1896ರಂದು. ಅವಿಭಜಿತ ಭಾರತದ ಬಾಂಗ್ಲಾದೇಶದ ಒಂದು ಹಳ್ಳಿಯಲ್ಲಿ. ಅತ್ಯಂತ ಬಡತನದ ಕುಟುಂಬ. ಬಾಲ್ಯದಲ್ಲಿ ಎಷ್ಟೋ ದಿವಸ ಆಹಾರವಿಲ್ಲದೆ ಖಾಲಿ ಹೊಟ್ಟೆಯಲ್ಲಿ ಕಳೆದ ದಿನಗಳೂ ಇವೆ. ಆಹಾರ ಸಿಕ್ಕಿದರೂ ವೈಭವದ ಆಹಾರ ಪದಾರ್ಥವಲ್ಲ. ಬಡವರಿಗೆ ಪ್ರಿಯವಾದ ಗಂಜಿ. ಇದರೊಂದಿಗೆ ಪ್ರಕೃತಿಯಿಂದ ಉಚಿತವಾಗಿ ಪಡೆಯಬಹುದಾದ ನೀರು. ಈ ಕಷ್ಟಗಳ ನಡುವೆಯೇ ಶಿವಾನಂದರಿಗೆ ಆರು ವರ್ಷ ತುಂಬಿತು. ತಂದೆ ಹಾಗೂ ತಾಯಿ ಇಹಲೋಕ ಯಾತ್ರೆಯನ್ನು ಮುಗಿಸಿದರು.

ಶಿವಾನಂದ ಸ್ವಾಮಿಗಳಿಗೆ ಈಗ ಬಂಧುಗಳೇ ಆಧಾರ. ಅಧ್ಯಾತ್ಮದಲ್ಲಿ ಆಸಕ್ತರಾದ ಇವರನ್ನು ಬಂಧುಗಳು ಆಶ್ರಮವೊಂದಕ್ಕೆ ಸೇರಿಸಿದರು. ಅಲ್ಲಿನ ಗುರು ಓಂಕಾರಾನಂದ ಗೋಸ್ವಾಮಿ. ಗುರುಕುಲ ಮಾದರಿಯ ಶಿಕ್ಷಣ. ಆಸಕ್ತಿಯೇ ಇಲ್ಲಿನ ಪ್ರಮುಖ ವಿಷಯ. ಗುರುಗಳ ಮೂಲಕ ಯೋಗವನ್ನು ಅಧ್ಯಯನ ಮಾಡಿದ ಶಿವಾನಂದರು ಈ ಕ್ಷೇತ್ರದಲ್ಲಿ ಬೆಳೆಯುತ್ತಾ ಸಾಗಿದರು. ಕಾಶಿಯಲ್ಲಿ ಬಂದು ನೆಲೆಸಿ ನೂರಾರು ಆಸಕ್ತರಿಗೆ ಯೋಗವನ್ನು ಉಚಿತವಾಗಿ ಕಲಿಸಿಕೊಡಲು ಮುಂದಾದರು.

ವರ್ಷ 125 ಆದರೂ ಯಾವುದೇ ಆಂಗ್ಲ ಪದ್ಧತಿಯ ಔಷಧಗಳಿಂದ ದೂರವಿರುವ ಶಿವಾನಂದ ಸ್ವಾಮಿಗಳ ಆರೋಗ್ಯವು ಆರೋಗ್ಯ ಕ್ಷೇತ್ರಕ್ಕೇ ಒಂದು ಸವಾಲು. ದೇಶದ ಅನೇಕ ತಜ್ಞ ವೈದ್ಯರು ಕುತೂಹಲ ದಿಂದ ಇವರ ದೇಹದ ಅಂಗಾಂಗಗಳ ಆರೋಗ್ಯ ಗುಟ್ಟನ್ನು ಅಧ್ಯಯನ ಮಾಡಲು ಸಾಕಷ್ಟು ಬಾರಿ ಶ್ರಮಿಸಿದ್ದಾರೆ. ಅವರಿಗೂ ಇದೊಂದು ಸವಾಲಿನ ಸಂಗತಿಯಾಯಿತು. ಶಿವಾನಂದರೇ ತಿಳಿಸುವಂತೆ ಅವರ ಜೀವನಶೈಲಿಯಲ್ಲಿಯೇ ಆರೋಗ್ಯವು ಅಡಗಿದೆ. ಮಲಗುವುದು ನೆಲದ ಮೇಲೆ ಹಾಸಿದ ಒಂದು ಚಾಪೆಯ ಮೇಲೆ. ತಲೆಯ ಅಡಿಯಲ್ಲಿ ಹತ್ತಿ ಅಥವಾ ವಸ್ತ್ರದ ದಿಂಬುಗಳಿಲ್ಲ. ಮರದ ಒಂದು ಕೊರಡು. ಏಳುವುದು ಪ್ರತೀ ದಿನ ಬೆಳಗ್ಗೆ ಮೂರು ಗಂಟೆಗೆ. ಯೋಗ ಹಾಗೂ ಪ್ರಾಣಾಯಾಮಗಳನ್ನು ಒಂದು ದಿನವೂ ತಪ್ಪಿಸಿದ್ದಿಲ್ಲ. ಆಹಾರವೂ ಸರಳ. ಎಣ್ಣೆ ಮಿಶ್ರಿತ ಆಹಾರ ಪದಾರ್ಥಗಳಿಂದ ಸದಾ ದೂರ. ಇದರೊಂದಿಗೆ ಪ್ರತಿಫ‌ಲಾಪೇಕ್ಷೆಯಿಲ್ಲದ ನಿಸ್ವಾರ್ಥ ಸೇವೆ. ರಾಗ, ದ್ವೇಷಗಳಿಂದ ಮುಕ್ತರಾದ ಶಿವಾನಂದರ ಪಾಲಿಗೆ “ವಸುಧೈವ ಕುಟುಂಬಕಂ’ ಎಂಬಂತೆ ಜಗತ್ತೇ ಮನೆ. ಇಲ್ಲಿರುವವರೆಲ್ಲರ ಮೇಲೆ ಪ್ರೀತಿ ಮತ್ತು ಗೌರವ. ಜನರ ನಡುವೆ ಜನರನ್ನು ಪ್ರೀತಿಸುತ್ತಾ ಅವರ ಸೇವೆಯನ್ನು ಮಾಡುವುದರಲ್ಲಿಯೇ ಸಂತೃಪ್ತಿ.

ಶಿವಾನಂದರು ಮಾನವ ಸೇವೆಯಲ್ಲಿ ದೇವರನ್ನು ಕಂಡವರು. ಕಳೆದ 50 ವರ್ಷ ಗಳಿಂದ ಬಡ ಕುಷ್ಟರೋಗಿಗಳ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಅವರಿಗೆ ಅಗತ್ಯವಾದ ವಸ್ತುಗಳನ್ನೂ ಒದಗಿಸುತ್ತಾ ಬಂದಿದ್ದಾರೆ. ಚಳಿಗಾಲದ ಉಡುಪು, ಕಂಬಳಿ, ಸೊಳ್ಳೆಪರದೆ, ಆಹಾರ ವಸ್ತುಗಳು, ಹಣ್ಣು ಮೊದಲಾದವುಗಳನ್ನು ನೀಡುತ್ತಾ ಸುಮಾರು 600ಕ್ಕೂ ಅಧಿಕ ರೋಗಿಗಳ ಶುಶ್ರೂಷೆ ಮಾಡಿದ್ದಾರೆ. ಕೋವಿಡ್‌ ಲಸಿಕೆಯ ಮಹತ್ವವನ್ನು ತಾವೇ ಮುಂಚೂಣಿಯಲ್ಲಿ ನಿಂತು ಬಡಜನರಿಗೆ ತಿಳಿಸಲು ಪ್ರಯತ್ನಿಸಿದ್ದಾರೆ. ಭಾರತಕ್ಕೆ ಮಾತ್ರ ಇವರ ಯೋಗಸೇವೆ ಸೀಮಿತವಾಗಿಲ್ಲ. ಭಾರತದ ಶ್ರೀಮಂತ ಸಾಂಸ್ಕೃ ತಿಕ ವೈಭವವನ್ನು ವಿದೇಶಗಳಲ್ಲೂ ಹರಡಿದ ಕೀರ್ತಿ ಇವರಿಗೆಸಲ್ಲುತ್ತದೆ. ಸುಮಾರು 34 ದೇಶಗಳ ಪರ್ಯಟನ ನಡೆಸಿ ಭಾರತದ ಋಷಿ ಗಳು ನೀಡಿದ ಯೋಗವಿದ್ಯೆಗೆ ವಿಶ್ವಮಾನ್ಯತೆ ತಂದು ಕೊಡಲು ಶ್ರಮಿಸಿದ್ದಾರೆ.

2019ರಲ್ಲಿ ಯೋಗರತ್ನ ಪ್ರಶಸ್ತಿಯನ್ನು ಪಡೆದ ಇವರು 2019 ನವಂಬರ್‌ 30ರಂದು ಬಸುಂಧರಾ ರತನ್‌ ಪ್ರಶಸ್ತಿಗೂ ಭಾಜನರಾದರು. 2019ರ ಜೂನ್‌ 21ರಂದು ಆಚರಿಸಲಾದ ವಿಶ್ವ ಯೋಗ ದಿನದಲ್ಲಿ ಭಾಗವಹಿಸುವುದರ ಮೂಲಕ ಹೀಗೆ ಭಾಗವಹಿಸಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಕೀರ್ತಿಗೂ ಪಾತ್ರರಾದರು. ಯಾವುದೇ ಪ್ರಚಾರಗಳಿಲ್ಲದೆ ಯೋಗ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಭಾರತ ಸರಕಾರವು ತಿಂಗಳ ಹಿಂದೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದೆ. ಪ್ರಶಸ್ತಿ ಸ್ವೀಕರಿಸುವ ವೇಳೆ ಅವರು ತೋರಿದ ಸರಳತನ ಎಲ್ಲರಿಗೂ ಆದರ್ಶಪ್ರಾಯವಾದುದು. ಭಾರತದ ಸನಾತನ ವಿದ್ಯೆಯಾದ ಯೋಗದಿಂದ ಆರೋಗ್ಯವಂತರಾಗಿ ದೀರ್ಘ‌ ಕಾಲ ಬದುಕಬಹುದು ಎಂಬುದನ್ನು ಜಗತ್ತಿಗೇ ತೋರಿಸಿದ ಈ ಸಂತನಿಗೆ ಸಂದ ಗೌರವ ಭಾರತದ ಸನಾತನ ವಿದ್ಯೆಯಾದ ಯೋಗಕ್ಕೆ ಸಂದ ಅತ್ಯುನ್ನತ ಗೌರವ ಎನ್ನಬಹುದು.

– ಡಾ| ಶ್ರೀಕಾಂತ್‌, ಸಿದ್ದಾಪುರ

ಟಾಪ್ ನ್ಯೂಸ್

Test Team; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

8-

Panaji: ಕಲಂಗುಟ್ ಬೀಚ್ ನಲ್ಲಿ ಪ್ರವಾಸಿ ಕೊಲೆ

Glass Bridge: India’s first glass bridge inaugurated at Kanyakumari

Glass Bridge: ಕನ್ಯಾಕುಮಾರಿಯಲ್ಲಿ ಭಾರತದ ಮೊದಲ ಗಾಜಿನ ಸೇತುವೆ ಉದ್ಘಾಟನೆ

Rane-Kerala-Cm

Rane’s Remark: ಕೇರಳ ʼಮಿನಿ ಪಾಕಿಸ್ಥಾನʼವೆಂದ ಸಚಿವ ನಿತೇಶ್ ರಾಣೆ; ಸಿಎಂ ಪಿಣರಾಯಿ ಖಂಡನೆ

Team India;  key players to miss England series; young batsman takes on leadership role

Team India: ಇಂಗ್ಲೆಂಡ್‌ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್‌ ಗೆ ನಾಯಕತ್ವದ ಹೊಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amber-1

ಬೆಲೆ ಬಾಳುವ ಅಪರೂಪದ ಅಂಬರ್‌ ಗ್ರೀಸ್‌ನ ಚಿದಂಬರ ರಹಸ್ಯವೇನು ಗೊತ್ತಾ?

China

ಚೀನ ಸರಕಾರದ ವಿರುದ್ಧ ಸೊಲ್ಲೆತ್ತಿದರೆ ಮಾಯಾ

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11-

Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು

Test Team; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ

ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.