ಪ್ರಧಾನಿ ಹುದ್ದೆ ರೇಸ್: ಭಾರತೀಯ ಮೂಲದ ರಿಷಿ ಸುನಕ್‌ಗೆ ಒಲಿಯುತ್ತಾ ಪಟ್ಟ?
Team Udayavani, Oct 22, 2022, 6:50 AM IST
ಬ್ರಿಟನ್ ರಾಜಕೀಯ ತಳಮಳಕ್ಕೀಡಾಗಿದ್ದು, ಅಧಿಕಾರಕ್ಕೇರಿದ 45 ದಿನಗಳಲ್ಲೇ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದಾರೆ. ಇವರ ಸ್ಥಾನಕ್ಕೆ ಭಾರತೀಯ ಮೂಲದ ರಿಷಿ ಸುನಕ್ ಅವರ ಹೆಸರು ಕೇಳಿಬರುತ್ತಿದೆ. ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರೂ ರೇಸ್‌ನಲ್ಲಿದ್ದಾರೆ.
ರಿಷಿ ಸುನಕ್
ಇತ್ತೀಚೆಗಷ್ಟೇ ನಡೆದಿದ್ದ ಪ್ರಧಾನಿ ಹುದ್ದೆ ರೇಸಿನಲ್ಲಿ ಲಿಜ್ ಟ್ರಸ್ ಅವರಿಗೆ ಭಾರೀ ಸ್ಪರ್ಧೆ ನೀಡಿದ್ದ ಮಾಜಿ ವಿತ್ತ ಸಚಿವ ರಿಷಿ ಸುನಕ್, ಸದ್ಯದ ಮಟ್ಟಿಗೆ ಮೊದಲ ಸ್ಥಾನದಲ್ಲಿದ್ದಾರೆ. ಅಲ್ಲದೆ, ಕನ್ಸರ್ವೇಟಿವ್ ಪಕ್ಷದ ಬಹಳಷ್ಟು ಸಂಸದರು ರಿಷಿ ಸುನಕ್ ಅವರ ಬಗ್ಗೆಯೇ ಒಲವು ತೋರಿದ್ದಾರೆ. ಲಿಜ್ ಟ್ರಸ್ ಅವರು ಆರ್ಥಿಕ ಸುಧಾರಣೆಗಳನ್ನು ಘೋಷಣೆ ಮಾಡಿದಾಗ, ರಿಷಿ ಸುನಕ್ ಈ ಬಗ್ಗೆ ಟೀಕೆ ವ್ಯಕ್ತಪಡಿಸಿ, ಆರ್ಥಿಕತೆ ಹಾಳಾಗಲಿದೆ, ಹಣದುಬ್ಬರ ಹೆಚ್ಚಾಗಲಿದೆ ಎಂದಿದ್ದರು. ಇದು ನಿಜವಾದ ಕಾರಣದಿಂದಲೇ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದಾರೆ. ಸದ್ಯಕ್ಕೆ ಸುನಕ್‌ಗೆ ಇರುವ ಅಡ್ಡಿ, ಬೋರಿಸ್ ಜಾನ್ಸನ್ ಅವರ ಬೆಂಬಲಿಗರು.
ಮಾಜಿ ರಕ್ಷಣ ಸಚಿವೆ ಪೆನ್ನಿ
ಮಾಜಿ ರಕ್ಷಣ ಸಚಿವೆಯಾಗಿರುವ ಪೆನ್ನಿ , ಪ್ರಧಾನಿ ಹುದ್ದೆ ರೇಸಿನಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ. ಪಕ್ಷದ ಒಳಗೇ ನಡೆದಿದ್ದ ಆಂತರಿಕ ಚುನಾವಣೆಯಲ್ಲಿ ಪೆನ್ನಿ, ಮೂರನೇ ಸ್ಥಾನಿಯಾಗಿದ್ದರು. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಮಟ್ಟದಲ್ಲೂ ಇವರಿಗೆ ಉತ್ತಮ ಹೆಸರಿದೆ.
ಬೋರಿಸ್ ಜಾನ್ಸನ್
ಲಿಜ್ ಟ್ರಸ್ ರಾಜೀನಾಮೆ ನೀಡಿದ ಮೇಲೆ ಮತ್ತೆ ಇವರ ಹೆಸರು ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣವೂ ಇದೆ. ಜಾನ್ಸನ್ ಅವರನ್ನು ರಿಷಿ ಸುನಕ್ ಮತ್ತಿತರರು ಸೇರಿ ಕೆಳಗಿಳಿಸಿದರು ಎಂಬ ಸಿಟ್ಟು ಅವರ ಬೆಂಬಲಿಗರಲ್ಲಿ ಇದೆ. ಅಷ್ಟೇ ಅಲ್ಲ, ಕಾರ್ಯಕರ್ತರ ಮಟ್ಟದಲ್ಲೂ ಜಾನ್ಸನ್‌ಗೆ ಒಳ್ಳೆಯ ಹೆಸರಿದೆ. ಇವರೇ ಮತ್ತೂಮ್ಮೆ ಪ್ರಧಾನಿಯಾದರೆ, ರಾಜಕೀಯ ಅಸ್ಥಿರತೆಯನ್ನು ವಾಪಸ್ ಸ್ಥಿರ ಮಟ್ಟಕ್ಕೆ ತರಬಲ್ಲರು ಎಂಬ ಆಶಾಭಾವವೂ ಇದೆ.
ಜೆರೆಮಿ ಹಂಟ್
ಮಾಜಿ ಆರೋಗ್ಯ ಮತ್ತು ವಿದೇಶಾಂಗ ಸಚಿವರಾಗಿರುವ ಜೆರೆಮಿ ಹಂಟ್ ಕೂಡ ಕನ್ಸರ್ವೇಟಿವ್ ಪಕ್ಷದೊಳಗೆ ಉತ್ತಮ ಹೆಸರು ಹೊಂದಿದ್ದಾರೆ. ಆದರೂ ಜೆರೆಮಿ ಹಂಟ್ ಮಾತ್ರ ತಾವು ಪ್ರಧಾನಿ ಹುದ್ದೆ ರೇಸ್‌ನಲ್ಲಿ ಇಲ್ಲ ಎಂದೇ ಹೇಳಿದ್ದಾರೆ. ಆದರೂ ಇದೇ 31ಕ್ಕೆ ಮಂಡನೆಯಾಗಲಿರುವ ಮಿನಿ ಬಜೆಟ್‌ಗೆ ಇವರ ಸಲಹೆ ಬೇಕೇ ಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ಹೊಸ ಸೇರ್ಪಡೆ
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.