ಸೇವಾ ಮಾಣಿಕ್ಯನಿಗೆ ಕತಾರ್ ನಿಂದ ಬೀಳ್ಕೊಡುಗೆ
Team Udayavani, Mar 9, 2021, 7:24 PM IST
ಮೂರೂವರೆ ದಶಕಗಳಿಂದ ಕತಾರ್‌ನಲ್ಲಿ ಸೇವೆ ಸಲ್ಲಿಸಿದ ಸೇವಾ ಮಾಣಿಕ್ಯ, ಉಡುಪಿ ಸಮೀಪದ ಅಂಬಲ್ಪಾಡಿ ಗ್ರಾಮದ ದಿವಾಕರ ಪೂಜಾರಿ ಅವರು ತಮ್ಮ ಜನ್ಮ ಭೂಮಿ ಭಾರತಕ್ಕೆ ಮರಳಲು ನಿರ್ಧರಿಸಿದ್ದು, ಅವರಿಗೆ ಭಾರತೀಯ ಸಾಂಸ್ಕೃತಿಕ ಕೇಂದ್ರವು ಅಶೋಕ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಯಿತು.
ಜಾತಿ, ಮತ, ಬೇಧವಿಲ್ಲದೆ ಆಪದ್ಭಾಂಧವ. ಪ್ರಚಾರಪ್ರಿಯರಾಗದೆ, ವಿಚಾರ ಪ್ರಿಯರಾಗಿ ಬದುಕಿ, ಪರರಿಗೆ ದಾರಿದೀಪ ತೋರಿದ ಸರಳ ಸ್ವಭಾವದ ಸಜ್ಜನ. ಆರ್ಯಭಟದಂತಹ ಪ್ರಶಸ್ತಿ ಮುಡಿಗೇರಿಸಿಕೊಂಡ ಸೇವಾಭಟ, ರಂಗಭೂಮಿಯ ಶ್ರೇಷ್ಠ ನಟರೆಂದೇ ಚಿರಪರಿಚಿತರಾಗಿರುವ ದಿವಾಕರ ಪೂಜಾರಿ ಅವರು ಐಸಿಸಿ, ಐಸಿಬಿಎಫ್, ಐಬಿಪಿಸಿ, ಐಎಸ್‌ಸಿ ಉಪ ಸಮಿತಿ ಸದಸ್ಯರಾಗಿ, ತುಳು ಕೂಟದ ಅಧ್ಯಕ್ಷರಾಗಿ, ಬಿಲ್ಲಾವಾಸ್ ಕತಾರ್‌ನ ಸ್ಥಾಪಕ ಅಧ್ಯಕ್ಷರಾಗಿದ್ದರು. ಭಾರತೀಯ ಸಮುದಾಯಕ್ಕೆ ದಿವಾಕರ ಅವರು ನೀಡಿದ ಅವಿರತ ಕೊಡುಗೆಗಾಗಿ ಐಸಿಸಿ ವ್ಯವಸ್ಥಾಪನ ಸಮಿತಿಯು ಸ್ಮರಣಿಕೆಯನ್ನು ನೀಡಿ ಗೌರವಿಸಿತು.
ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ನಡೆಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಜಿಯಾಡ್ ಉಸ್ಮಾನ್, ಅಜೀಮ್ ಅಬ್ಟಾಸ್, ಮಣಿಕಾಂತನ್, ನೀಲಂಗು ಡೇ, ಗಿರೀಶ್ ಕುಮಾರ್, ಮಿಲನ್ ಅರುಣ್, ವಿನೋದ್ ನಾಯರ್, ಸೀನು ಪಿಳೈ ಭಾಗವಹಿಸಿದ್ದರು. ಐಸಿಸಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಟಾಗಿಲು ಅಧ್ಯಕ್ಷತೆ ವಹಿಸಿ ಐಸಿಸಿ ಅಧ್ಯಕ್ಷ ಪಿ.ಎನ್. ಬಾಬು ರಾಜನ್ ಅವರ ಸಂದೇಶ ರವಾನಿಸಿದರು. ಕಾರ್ಯಕ್ರಮವನ್ನು ಐಸಿಸಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ ಮುಕ್ತಾಯಗೊಳಿಸಿದರು.
ಅನಿವಾಸಿ ಭಾರತೀಯರ ಪಾಲಿನ ಸಹೃದಯಿ ಬಂಧು :
ದಿವಾಕರ ಪೂಜಾರಿ ಬಲ್ಲವರೆಲ್ಲರ ಪ್ರೀತಿಯ ಸಹೋದರ. ಕತಾರ್‌ನ ಅನಿವಾಸಿ ಭಾರತೀಯರಿಗೆ ಇವರು ಚಿರಪರಿಚಿತರು. ಕಷ್ಟವೆಂದು ಬಂದವರಿಗೆ ಕೈಲಾದ ಸಹಾಯ ನೀಡುವ, ಶ್ರಮದಾನದ ಆವಶ್ಯಕತೆ ಇರುವಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಇವರು ಮೂಲತಃ ಉಡುಪಿ ಜಿಲ್ಲೆಯ ಪಡುಬಿದ್ರೆಯ ಅನ್ನಯ್ಯ ಪೂಜಾರಿ, ಸರಸ್ವತಿ ಅನ್ನಯ್ಯ ಪೂಜಾರಿ ಅವರ ಪುತ್ರ. ಬಿಕಾಂ ಪದವಿ ಮುಗಿಸಿ ಸರಿ ಸುಮಾರು 36 ವರ್ಷಗಳ ಹಿಂದೆ ಉದ್ಯೋಗ ಅರಸಿಕೊಂಡು ಕತಾರ್‌ಗೆ
ಬಂದ ಮೊದಲ ಬಿಲ್ಲವ ನಾಯಕ. ಆರಂಭದಿಂದಲೇ ವೃತ್ತಿಯೊಂದಿಗೆ ಸಾಮಾಜಿಕ ಕಾರ್ಯದಲ್ಲೂ ಮುಂಚೂಣಿ ಯಲ್ಲಿದ್ದ ಇವರು, 2011ರ ಮಾರ್ಚ್‌ನಲ್ಲಿ 35- 40 ಮಂದಿ ಬಿಲ್ಲವರನ್ನು ಒಗ್ಗೂಡಿಸಿ “ಕತಾರ್ ಬಿಲ್ಲವಾಸ್’ ಸಂಘವನ್ನು ಕಟ್ಟಿ ಅದರ ಪ್ರಥಮ ಅಧ್ಯಕ್ಷರಾದರು.
ಭಾರತದ ಯಾವುದೇ ಮೂಲೆಯ ವ್ಯಕ್ತಿ ಕತಾರ್‌ನಲ್ಲಿ ಸಾವನ್ನಪ್ಪಿದರೆ ಶವ ಪರೀಕ್ಷೆಯಿಂದ ಹಿಡಿದು ಕತಾರ್ ಸರಕಾರದೊಂದಿಗೆ ವಿಚಾರ ವಿನಿಮಯ ನಡೆಸಿ ದೇಶಕ್ಕೆ ಕಳುಹಿಸಿಕೊಡುವ ಕೆಲಸವನ್ನು ಅದೆಷ್ಟೋ ಬಾರಿ ನಡೆಸಿಕೊಟ್ಟಿದ್ದಾರೆ. ಆಸ್ಪತ್ರೆಯಲ್ಲಿರುವ ಪರಿಚಯದವರನ್ನು ನೋಡಿಕೊಳ್ಳುವ ಕೊರತೆ ಇದ್ದರೆ ಅಲ್ಲಿ ಮೊತ್ತಮೊದಲು ಕಾಣಿಸಿಕೊಳ್ಳುತ್ತಾರೆ. ಅಗತ್ಯ ಸಾಮಗ್ರಿಗಳನ್ನು ತಲುಪಿಸಿ ವೈದ್ಯರೊಂದಿಗೆ ಮಾತುಕತೆ ನಡೆಸಿ ರೋಗಿ ಚೇತರಿಸಿಕೊಂಡು ಮನೆಗೆ ಹೋಗುವವರೆಗೆ ನೋಡಿಕೊಳ್ಳುತ್ತಿದ್ದರು. ತುಳುನಾಡಿನ ಯಾರೇ ಕೆಲಸ, ದಾಖಲೆಗಳನ್ನು ಕಳೆದುಕೊಂಡಲ್ಲಿ ಅವರಿಗೆ ಆಶ್ರಯ ನೀಡಿ ತಾಯ್ನಾಡಿಗೆ ಮರಳುವವರೆಗೆ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ.
ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಇತ್ತೀಚಿನವರೆಗೂ ಕತಾರ್‌ನ ಓಲಿಪಿಂಕ್ ಕಮಿಟಿಯೊಂದಿಗೆ ಕತಾರ್ ವಿರೋಧಿ ಡೋಪಿಂಗ್ ಸಮಿತಿಯಲ್ಲಿ ಸಂಯೋಜಕ ರಾಗಿದ್ದರು. ಅಲ್ಲದೇ 2014- 16ರ ವರೆಗೆ ಭಾರತೀಯ ಸಾಂಸ್ಕೃತಿಕ ಕೇಂದ್ರ, 2008- 10ರ ವರೆಗೆ, 10- 12ರವರೆಗೆ ಭಾರತೀಯ ಸಮುದಾಯ ಲಾಭದಾಯಕ ವೇದಿಕೆ ಭಾರತೀಯ ರಾಯಭಾರ ಕಚೇರಿ, 2004- 06ರವರೆಗೆ ಇಂಡಿಯನ್ ಬಿಸಿನೆಸ್ ಪ್ರೊಫೆಷನಲ್ ನೆಟ್‌ವರ್ಕ್‌ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ತುಳುಕೂಟದ ಅಧ್ಯಕ್ಷರಾಗಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿದ್ದು, ಸಲಹಾ ಮಂಡಳಿ ಸದಸ್ಯರಾಗಿದ್ದರು. 12ನೇ ವಿಭಾಗದ ಏರಿಯಾ ಗವರ್ನರ್, ಟಾಕಿಂಗ್ ಮ್ಯಾಟರ್ಸ್ ಟೋಸ್ಟ್ ಮಾಸ್ಟರ್ಸ್ ಮತ್ತು ಟೋಸ್ಟ್ ಮಾಸ್ಟರ್ ಕ್ಲಬ್ ಹಾಗೂ ಅಂತಾರಾಷ್ಟ್ರೀಯ ಟೋಸ್ಟ್ ಮಾಸ್ಟರ್ಸ್‌ಗಳಲ್ಲಿ ವಿವಿಧ ಸ್ಥಾನಗಳನ್ನು ಅಲಂಕರಿಸಿರುವ ಇವರು, ವಲಸಿಗ ಸಮುದಾಯಕ್ಕಾಗಿ ರೆಡ್ ಕ್ರೆಸೆಂಟ್ ವಿಪತ್ತು ನಿರ್ವಹಣೆ ತರಬೇತಿ ಸಂಯೋಜಕರು, ಕತಾರ್ ವಿರೋಧಿ ಡೋಪಿಂಗ್ ಆಯೋಗದ ಡೋಪಿಂಗ್ ನಿಯಂತ್ರಣಾಧಿಕಾರಿ, ದೋಹಾ ಏಷ್ಯನ್ ಗೇಮ್ಸ್ ಮತ್ತು ಪಶ್ಚಿಮ ಏಷ್ಯನ್ ಕ್ರೀಡಾಕೂಟಗಳಲ್ಲಿ ಸಕ್ರಿಯ ಸ್ವಯಂ ಸೇವಕ, ರಕ್ತದಾನ ಅಭಿಯಾನ, ಗ್ರೀನ್ ಮತ್ತು ಕ್ಲೀನ್ ಕತಾರ್ ಅಭಿಯಾನದ ಸಂಯೋಜಕ, ಐಸಿಸಿ, ಐಸಿಬಿಎಫ್, ಐಬಿಪಿಎನ್, ತುಳುಕೂಟ ಮತ್ತು ಕರ್ನಾಟಕ ಸಂಘದ ಸದಸ್ಯರೂ ಆಗಿದ್ದಾರೆ.
ಪ್ರಶಸ್ತಿಗಳು :
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಾಗಿ ಅತ್ಯುತ್ತಮ ಟೋಸ್ಟ್ ಮಾಸ್ಟರ್ ಗೌರವ, ತುಳುಕೂಟದಿಂದ 10 ವರ್ಷಗಳ ಕೊಡುಗೆಗಾಗಿ ಹಾಗೂ ಐಬಿಪಿಎನ್‌ನಿಂದ ಮೆಚ್ಚುಗೆ ಪ್ರಶಸ್ತಿ, ಬಂಟ್ಸ್ ಕತಾರ್‌ನಿಂದ ಮಾನವೀಯ ಸೇವಾ ಪ್ರಶಸ್ತಿ, 2014ರಲ್ಲಿ ಕೆಎಂಸಿಎಯ ಅತ್ಯುತ್ತಮ ಸಮುದಾಯ ಸೇವಾ ಪ್ರಶಸ್ತಿ ಲಭಿಸಿದೆ. ಇವರ ಪ್ರತಿಯೊಂದು ಕಾರ್ಯಗಳಿಗೂ ಪತ್ನಿ ಪ್ರಮೀಳಾ ಮತ್ತು ಮಗಳು ದೀಪಾ ಜತೆಯಾಗಿದ್ದಾರೆ.
-ಪುನೀತ್ ಸಾಗರ್, ಕತಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್
Fraud: ಡಿಕೆಸು ಹೆಸರಲ್ಲಿ 8 ಕೋಟಿ ಸಾಲ ಪಡೆದು ವಂಚನೆ
Bengaluru: ಸಾಲ ವಾಪಸ್ ಕೇಳಿದ್ದಕ್ಕೆ ಮಾಂಸ ಅಂಗಡಿಯಲ್ಲಿ ಭೀಕರ ಹತ್ಯೆ
Soldier: ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ; ಮಹಾಲಿಂಗಪುರದ ಯೋಧ ಹುತಾತ್ಮ
Fraud Case: ಸಾಫ್ಟ್ ವೇರ್ ಕಂಪನಿಗೆ 56 ಲಕ್ಷ ರೂಪಾಯಿ ವಂಚನೆ: 6 ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.