ಸಿಂಗಾಪುರ ಕನ್ನಡ ಸಂಘದಿಂದ ಪುರಂದರ ನಮನ- 2021
Team Udayavani, Apr 6, 2021, 6:51 PM IST
ಸಿಂಗಾಪುರ: ಕನ್ನಡ ಸಂಘ ಸಿಂಗಾಪುರದ ವತಿಯಿಂದ ಪುರಂದರ ನಮನ- 2021 “ಮಾಹೀಪತಿ ಪುರಂದರ’ ಸಂಗೀತ ಆರಾಧನೆ ಕಾರ್ಯಕ್ರಮ ಮಾ. 21ರಂದು ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಕನ್ನಡ ಸಂಘದ ಅಧ್ಯಕ್ಷೆ ರಶ್ಮೀ ಉದಯಕುಮಾರ್, ಪುರಂದರ ದಾಸರ ಆರಾಧನೆ ಹಲವಾರು ವರ್ಷಗಳಿಂದ ಸಿಂಗಾಪುರ ಕನ್ನಡ ಸಂಘದಿಂದ ಆಯೋಜಿಸುವ ಮಹತ್ವದ ಹಾಗೂ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಕೊರೊನಾ ಕಾರಣದಿಂದ ಕಳೆದ ವರ್ಷ ವರ್ಚುವಲ್ ಮೂಲಕ ನಡೆದಿದ್ದು, ಈ ಬಾರಿ ಕೋವಿಡ್ ನಿರ್ಬಂಧಗಳನ್ನು ಪಾಲಿಸಿ ಸೀಮಿತ ಸಂಗೀತಗಾರರನ್ನು ಹೊಂದಿಸಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅನೇಕ ಸ್ವಯಂ ಸೇವಕರು ಇದಕ್ಕಾಗಿ ಶ್ರಮಿಸಿದ್ದಾರೆ. ಇತ್ತೀಚೆಗೆ ನಡೆಸಲಾದ ಸಂಗೀತ ಸ್ಪರ್ಧೆಯ ವಿಜೇತರಿಂದ ಸಂಗೀತ ಕಛೇರಿಯನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ. ಈ ಬಾರಿಯ ವಿಶೇಷವೆಂದರೆ ಮಹಿಪತಿ ದಾಸರ ಸ್ಮರಣೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಮಹೀಪತಿ- ಪುರಂದರ ಎಂದು ಹೆಸರು ಕೊಡಲಾಗಿದೆ ಎಂದು ತಿಳಿಸಿದರು.
ಗಾನ ಕೋಗಿಲೆ ಡಾ| ಭಾಗ್ಯ ಮೂರ್ತಿ ಅವರ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇವರೊಂದಿಗೆ ಹಾಡುಗಾರರಾಗಿ ಶುಭಾ ರಾಘು, ಶ್ರುತಿ ಆನಂದ್, ಶ್ರುತಿ ರಾಜ್, ಪದ್ಮಿನಿ ಶ್ರೀನಿಧಿ, ವಯೋಲಿನ್‌ನಲ್ಲಿ ಪವನ್ ಸುಘೋಶ್, ಮೃದಂಗದಲ್ಲಿ ಮಹೇಶ್ ಪರಮೇಶ್ವರನ್ ಸಹಕರಿಸಿದರು. ಇವರು ಮಹಿಪತಿ ದಾಸರು ಹಾಗೂ ಪುರಂದರ ದಾಸರ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಪುರಂದರ ನಮನ ಸಂಗೀತ ಸ್ಪರ್ಧೆಯ ವಿಜೇತರಿಂದ ಸಂಗೀತ ಕಛೇರಿ ನಡೆಯಿತು.
ಕರ್ನಾಟಕ ಶಾಸ್ತ್ರೀಯ ಸಂಗೀತದ ಮುಕ್ತ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸ್ನೇಹ ಮೋಹನ್ ರಾವ್ ಅವರೊಂದಿಗೆ ವಯೋಲಿನ್ ವಾದನ ಮುಕ್ತ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವೇದಗಣ್ಯ ನರಸಿಂಹ ವಯೋಲಿನ್‌ನಲ್ಲಿ ಸಹಕರಿಸಿದರು. ಸಬ್ ಸೀನಿಯರ್ ಕರ್ನಾಟಕ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ ವಿನಯ ಸೆಂಥಿಲ್‌ಕುಮಾರ್, ಅವರೊಂದಿಗೆ ಸಬ್ ಸೀನಿಯರ್ ವಯೋಲಿನ್ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ವಿಜೇತರಾದ ಶ್ರೀಶ ಮೂರ್ತಿ ನಿಪ್ಪನ್ ಸಹಕರಿಸಿದರು. ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸ್ನೇಹಾ ಗೋಪಾಲ್, ಅವರೊಂದಿಗೆ ವಯೋಲಿನ್ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ ಪ್ರೀತಿಕಾ ಗಣೇಶ್ ಕುಮಾರ್ ಅವರು ಸಹಕರಿಸಿದರು. ಸಬ್ ಸೀನಿಯರ್ ವಿಭಾಗದ ವೀಣಾ ವಾದನದಲ್ಲಿ ಪ್ರಥಮ ಸ್ಥಾನ ಪಡೆದ ಸಂಜನಾ ರಘುರಾಮನ್ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಕರ್ನಾಟಕ ಶಾಸ್ತ್ರೀಯ ಜೂನಿಯರ್ ವಿಭಾಗದ ಪ್ರಥಮ ಸ್ಥಾನಗಳಿಸಿದ ಭರತ್ ಸುನಿಲ್ ರಾಜ್, ಮಾನ್ಯ ಗದ್ದೆಮನೆ, ಕರ್ನಾಟಕ ಶಾಸ್ತ್ರೀಯ ಸಬ್ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ ಸಾಯಿರಾಮಶರಣ್ ಆನಂದ್ ಅವರಿಂದ ಹಾಡುಗಾರಿಕೆ ಪ್ರಸ್ತುತಪಡಿಸಲಾಯಿತು.
ಪುರಂದರ ನಮನ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡ ಉಷಾ ತ್ಯಾಗರಾಜನ್, ಉಷಾ ಹರಿಹರನ್, ಸರ್ವೇಶ್ವರನ್, ಶ್ರೀನಾಥ್ ಐಯ್ಯರ್, ರಮೇಶ್ ಎಂ.ಜಿ., ಗಿರೀಶ್ ಜಮದಗ್ನಿ, ರವೀಂದ್ರ ಪಚೋರೆ ಪಾಲ್ಗೊಂಡಿದ್ದರು.
ಶುಭಾ ಎಚ್.ಎನ್. ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.