ಕತಾರ್‌ ಕರ್ನಾಟಕ ಸಂಘ: ವಸಂತೋತ್ಸವ


Team Udayavani, Jun 30, 2021, 11:37 PM IST

Qatar Karnataka Association

ಕತಾರ್‌ :ಕರ್ನಾಟಕ ಸಂಘ ಕತಾರ್‌ ವತಿಯಿಂದ 2021ನೇ ಸಂವತ್ಸರದ “ವಸಂತೋತ್ಸವ’ ಜೂ. 4ರಂದು ವರ್ಚುವಲ್‌ನಲ್ಲಿ ಆಯೋಜಿ ಸಲಾಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕತಾರ್‌ ದೇಶದ ಭಾರತೀಯ ರಾಯಭಾರಿ ಡಾ| ದೀಪಕ್‌ ಮಿತ್ತಲ್‌ ಅವರು ಸಂಘದ ಚಟುವಟಿಕೆ, ಕತಾರಿನ ಭಾರತೀಯರ ಕೊಡುಗೆಗಳನ್ನು ನೆನಪಿಸಿಕೊಂಡು ಮೆಚ್ಚುಗೆ ಸೂಚಿಸಿದರು.

ಚಲನಚಿತ್ರ ನಿರ್ದೇಶಕ ಯೋಗರಾಜ್‌ ಭಟ್‌ ಮಾತನಾಡಿ, ತಮ್ಮ ಮುಂಬರುವ “ಗಾಳಿಪಟ- 2′ ಚಲನಚಿತ್ರದ ಸಲುವಾಗಿ ಮುಂದೊಂದು ದಿನ ಕತಾರಿಗೆ ಬರುವೆನೆಂದು ಆಶ್ವಾಸನೆ ಇತ್ತರು.

ಹಿರಿಯ ಪತ್ರಕರ್ತರಾದ ರವಿ ಹೆಗ್ಡೆ ಅವರು ಸಂಘದ ಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿ, ಕೊರೊನಾ ಮಹಾಮಾರಿಯ ಪ್ರಭಾವದ ನಡುವೆ ಈ ರೀತಿಯ ಕಾರ್ಯಕ್ರಮಗಳು ಅಗತ್ಯವಿದೆ ಎಂದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿ ದ್ದರು. ಕರ್ನಾಟಕ ಮೂಲದ ಇತರ ಸಹೋದರ ಸಂಘಗಳಾದ ತುಳು ಕೂಟ, ಬಂಟ್ಸ್‌ ಕತಾರ್‌, ಕೆ.ಎಂ.ಸಿ.ಎ., ಎಂ.ಸಿ.ಎ., ಎಂ.ಸಿ.ಸಿ. ಹಾಗೂ ಎಸ್‌.ಕೆ.ಎಂ.ಡಬ್ಲೂé.ಎ. ಇವುಗಳ ಅಧ್ಯಕ್ಷರು ಪಾಲ್ಗೊಂಡಿದ್ದರು.

ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಅಕ್ಷಯಾ ಶೆಟ್ಟಿ ಅವರು “ವಸಂತೋತ್ಸವ’ದ ಆಚರಣೆ ಬಗ್ಗೆ ವಿವರಿಸಿ, ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಬಳಿಕ ಸಂಘದ ಮಕ್ಕಳ ಕಾರ್ಯದರ್ಶಿ ರಶ್ಮಿ ಜಯರಾಂ ಅವರು ತಮ್ಮ ಮಧುರ ಕಂಠದಿಂದ ಸಭಿಕರನ್ನು ಮನೋರಂಜನೆಯ ಯಾತ್ರೆಗೆ ಕೊಂಡೊಯ್ದರು.

ಭರತನಾಟ್ಯ ಶೈಲಿಯಲ್ಲಿ ಸ್ವಾಗತ ನೃತ್ಯದೊಂದಿಗೆ ಅಧಿಕೃತವಾಗಿ ವಸಂತೋತ್ಸವಕ್ಕೆ ಚಾಲನೆ ನೀಡಲಾಯಿತು. ಮಕ್ಕಳು ವರ್ಣಮಯ ಹಾಗೂ ಮನಮೋಹಕ ಪ್ರದಶನ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. 20 ನಿಮಿಷಗಳ ಇವರ ನಾಟ್ಯ ಅಮೋಘವಾಗಿತ್ತು.

ಅನಂತರ ಸಂಘದ ಅಧ್ಯಕ್ಷರಾದ ನಾಗೇಶ್‌ ರಾವ್‌ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.  ನೀತಿ ರಮೇಶ್‌ ಅವರು ಯೋಗರಾಜ್‌ ಭಟ್‌ ಹಾಗೂ ರವಿ ಹೆಗ್ಡೆ ಅವರನ್ನು ಪರಿಚಯಿಸಿದರು. ಅಕ್ಷಯ ಶೆಟ್ಟಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಸ್ಥಳೀಯ ಗಾಯಕರು ಹಾಗೂ ಸಂಗೀತ ವಾದ್ಯದವರ ಒಂದು ತಂಡ 30 ನಿಮಿಷಗಳ ಕಾಲ ಸುಮಧುರ ಗಾಯನವನ್ನು ಪ್ರದರ್ಶಿಸಿತು. 5 ಜನ ಗಾಯಕರು ಜಾನಪದ ಗೀತೆ, ಸಮೂಹ ಗೀತೆ ಹಾಗೂ ಭಾವಗೀತೆಗಳ ಮಿಶ್ರಣವನ್ನು ಅದ್ಭುತವಾಗಿ ಹಾಡಿ ತಮ್ಮ ಸುಮಧುರ ಕಂಠದಿಂದ ಕೇಳುಗರ ಮನ ತಣಿಸಿದರು.

“ಆಯನ’ ಎಂಬ ಬೆಂಗಳೂರು ಮೂಲದ ತಂಡದಿಂದ 40 ನಿಮಿಷಗಳ ಕಾಲ ಉತ್ಸಾಹಭರಿತ, ಉÇÉಾಸ ತುಂಬಿದ ನೃತ್ಯ ಪ್ರದರ್ಶನ ಕಾರ್ಯಕ್ರಮದ ಸೊಬಗನ್ನು ಮುಗಿÇÉೆತ್ತರಕ್ಕೆ ಏರಿಸಿತು.

ಬೆಂಗಳೂರಿನಲ್ಲಿ “ಲಾಕ್‌ಡೌನ್‌’ ಮಧ್ಯೆ ಈ ಕಲಾವಿದರು ಸೇರಿ ಈ ಅಮೋಘ ಪ್ರಸ್ತುತಿಯನ್ನು ಕತಾರಿನ ಕನ್ನಡಿಗರಿಗಾಗಿ ಸಮರ್ಪಿಸಿದರು. ಬಳಿಕ ನಡೆದ ನೃತ್ಯ ಪ್ರದರ್ಶನದೊಂದಿಗೆ 2021 ನೇ ಸಾಲಿನ ವಸಂತೋತ್ಸವ ಕಾರ್ಯಕ್ರಮ ಸಮಾಪ್ತವಾಯಿತು.

 

ಟಾಪ್ ನ್ಯೂಸ್

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.