Rakshabandhan: ರಕ್ಷೆಯೆಂಬ ರಕ್ಷಕ!


Team Udayavani, Aug 30, 2023, 9:58 AM IST

Rakshabandhan: ರಕ್ಷೆಯೆಂಬ ರಕ್ಷಕ!

ಹಿಂದೂ ಕ್ಯಾಲೆಂಡರ್’ನನುಸಾರವಾಗಿ ಶ್ರಾವಣ ಮಾಸದ ಹುಣ್ಣೆಮೆಯ ದಿನ ಅಂದರೆ ನೂಲು ಹುಣ್ಣಿಮೆಯ ದಿನ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಸಹೋದರ- ಸಹೋದರಿಯ ನಡುವಿನ ಸಂಬಂಧವನ್ನು ಧೃಡವಾಗಿಸುವುದು  ಮೇಲ್ನೋಟಕ್ಕೆ ಕಂಡುಬರುವ ಉದ್ದೇಶ‌‌ವಾಗಿದೆ. ರಕ್ಷಾ ಬಂಧನದ ಮುಖೇನವಾಗಿ ಮನೆ ಮನೆಗಳಲ್ಲಿ, ಗ್ರಾಮ ಗ್ರಾಮಗಳಲ್ಲಿ ಒಗ್ಗಟ್ಟನ್ನು ಒಡಮೂಡಿಸಿ ರಾಷ್ಟ್ರ ರಕ್ಷಣೆಗಾಗಿ ಎಲ್ಲರೂ ಕೈಜೋಡಿಸಬೇಕೆನ್ನುವ ಸಂದೇಶ ರಕ್ಷೆಯೊಳಗೆ ಜಾಗೃತವಾಗಿದೆ.‌

ರಕ್ಷಾ ಬಂಧನ ಎಂಬುದರಲ್ಲಿ ರಕ್ಷೆ ಅಂದರೆ ರಕ್ಷಣೆ ಹಾಗೂ ಬಂಧನ ಅಂದರೆ ಸಂಬಂಧ ಎಂಬರ್ಥವನ್ನು ನೀಡುತ್ತದೆ. ಪ್ರಸ್ತುತ, ಈ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ಬಂಧದ ಸಮಾನಾರ್ಥಕವಾಗಿದೆ!  ಈ ಹಬ್ಬವು ಒಂದೊಳ್ಳೆಯ ಬಾಂಧವ್ಯ ಬೆಳೆಯಲು ಸಹಕಾರಿ.‌ ರಕ್ಷೆಯನ್ನು ಕಟ್ಟಿಸಿಕೊಳ್ಳುವುದರ ಮೂಲಕ ಸಹೋದರನು ತನ್ನ ಸಹೋದರಿಯನ್ನು ಚಂದದಿಂದ ನೋಡಿಕೊಳ್ಳುವುದಾಗಿ ಮತ್ತು ತನ್ನ ಜೀವನಪರ್ಯಂತ ಅವಳನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ. ಸಹೋದರಿ ತಾನು ರಕ್ಷೆ ಕಟ್ಟಿದ ತನ್ನ ಸಹೋದರನ ದೀರ್ಘಾಯುಷ್ಯಕ್ಕಾಗಿ, ಉನ್ನತಿಗಾಗಿ  ಪ್ರಾರ್ಥಿಸುತ್ತಾಳೆ. ಸಹೋದರ- ಸಹೋದರಿಯ ಬಂಧದ ತೀವ್ರತೆಯನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿಸುವಲ್ಲಿ ರಕ್ಷಾಬಂಧನ ಮಹತ್ವವನ್ನು ಪಡೆದಿದೆ.

ರಕ್ಷಾ ಬಂಧನದ ದಿನದಂದು ಸಹೋದರಿ ಸಹೋದರನಿಗೆ ಆರತಿ ಮಾಡಿ, ಹಣೆಗೆ ಕುಂಕುಮ ಮತ್ತು ಗಂಧ ಇಟ್ಟು ರಕ್ಷೆಯನ್ನು ಕಟ್ಟುತ್ತಾಳೆ. ಸಹೋದರಿಯ ಬಾಳು ಸಿಹಿಯಾಗಿರಲಿ ಎಂಬ ಅಭಿಲಾಷೆಯಿಂದ ಸಹೋದರನು  ಸಿಹಿಯನ್ನು ತಿನ್ನಿಸಬೇಕು ಎನ್ನುವುದು ರಕ್ಷಾ ಬಂಧನ ಹಬ್ಬದಾಚರಣೆಯ ಸಂಪ್ರದಾಯವಾಗಿದೆ.

ಇದನ್ನೂ ಓದಿ: Raksha Bandhan: ತಂಗಿಗಿರಲಿ ಅಣ್ಣನ ಶ್ರೀರಕ್ಷೆ: ಅಣ್ಣ ತಂಗಿಯ ಬಾಂಧವ್ಯ ಗಟ್ಟಿಗೊಳಿಸುವ ಹಬ್ಬ

ಮಹಾಭಾರತದ ಕಾಲಘಟ್ಟದಿಂದಲೇ ರಕ್ಷಾ ಬಂಧನದ ಇತಿಹಾಸ ಆರಂಭವಾಗುತ್ತದೆ. ಆ ಸಮಯದಲ್ಲಿ ಶ್ರೀಕೃಷ್ಣನ ಆಯುಧ ಸುದರ್ಶನ ಚಕ್ರ  ಆತನ ಕಿರುಬೆರಳಿಗೆ ತಾಗಿ ಮತ್ತು ರಕ್ತ ಸೋರುತ್ತಿರುತ್ತದೆ. ಆಕಸ್ಮಿಕವಾಗಿ ಆದ ಈ ಗಾಯವನ್ನು ದ್ರೌಪದಿಯು ನೋಡುತ್ತಾಳೆ. ಗಾಯದಿಂದ ಹೊರಬರುತ್ತಿರುವ ರುಧಿರವನ್ನು ತಡೆಗಟ್ಟಲು, ತನ್ನ ಸೆರಗಿನ ತುದಿಯನ್ನು ಹರಿದು ತುಂಡರಿಸಿ ಕೃಷ್ಣನ ಮಣಿಕಟ್ಟಿನ ಮೇಲೆ ಕಟ್ಟುತ್ತಾಳೆ. ತನ್ಮೂಲಕ ಹೆಚ್ಚು ರಕ್ತ ಕೃಷ್ಣನ ಕೈಯಿಂದ ಹೊರಹೋಗದಂತೆ ತಡೆಯುವಲ್ಲಿ ಯಶಸ್ವಿಯಾಗುತ್ತಾಳೆ. ದ್ರೌಪದಿಯ ಸಮಯೋಚಿತ ಉಪಚಾರದಿಂದ ಕೃಷ್ಣ ತೃಪ್ತನಾಗಿ, ಈ ಕಾಳಜಿಯನ್ನು ಜಗತ್ತು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಶ್ರೀಕೃಷ್ಣನು ಇದನ್ನು ರಕ್ಷಾ ಸೂತ್ರವೆಂದು ಕರೆಯುತ್ತಾನೆ. ಮುಂದೆ ದುಶ್ಯಾಸನ ದ್ರೌಪದಿಯ ಸೀರೆಯನ್ನು ಎಳೆಯುವ ಸಂದರ್ಭದಲ್ಲಿ ಶ್ರೀಕೃಷ್ಣನು ದ್ರೌಪದಿಯ ಮಾನ ಕಾಪಾಡುತ್ತಾನೆ. ಈ ಮೂಲಕ ತನಗೆ ರಕ್ಷಾ ಸೂತ್ರ ಕಟ್ಟಿದ ಸಹೋದರಿಯ ರಕ್ಷಣೆ ಮಾಡುತ್ತಾನೆ.

ದಂತಕತೆಗಳ ಪ್ರಕಾರ ಅಲೆಕ್ಸಾಂಡರನು ಭಾರತದ ಮೇಲೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯದಿಂದ ಎದುರಿಸಿದವನು ಪೋರಸ್. ಅವರಿಬ್ಬರ ನಡುವೆ ಯುದ್ಧ ಆರಂಭಗೊಂಡಿತು. ಇದೇ ಸಮಯದಲ್ಲಿ ಅಲೆಕ್ಸಾಂಡರನ ಪತ್ನಿ ರೊಕ್ಸಾನಳು ಪೋರಸ್‌ಗೆ ಒಂದು ಪವಿತ್ರ ದಾರವನ್ನು, ತನ್ನ ಪತಿಯನ್ನು ಕೊಲ್ಲಬಾರದು ಎಂಬ ಮನವಿಯ ಜೊತೆಗೆ ಅಲೆಕ್ಸಾಂಡರನಿಗೆ ಕಳುಹಿಸಿದಳು. ಯುದ್ಧದಲ್ಲಿ ಪೋರಸ್ ಗೆದ್ದನಾದರೂ, ಅಲೆಕ್ಸಾಂಡರನನ್ನು ಕೊಲ್ಲದೆ ಉಳಿಸಿದನು. ಅರ್ಥಾತ್ ಆತನ ಕೈಯಲ್ಲಿ ಆತ ಕಟ್ಟಿಕೊಂಡಿದ್ದ ರಾಖಿ ಅವನನ್ನು ತಡೆದು ನಿಲ್ಲಿಸಿತ್ತು!

ಹಾಗೆಯೇ, ಭಾರತದ ಪ್ರಮುಖ ಶಾಖೆಯಾದ ರಾಷ್ಟ್ರೀಯ ಸ್ವಯಂಸೇವಕಾ ಸಂಘದ ಸ್ವಯಂಸೇವಕರು ಪರಸ್ಪರರ ಮಣಿಕಟ್ಟಿಗೆ ರಾಖಿಗಳನ್ನು ಕಟ್ಟುವ ಮೂಲಕ ರಕ್ಷಾ ಬಂಧನವನ್ನು ಆಚರಿಸುತ್ತಾರೆ. ಅವರ ಪಾಲಿಗೆ ರಕ್ಷೆಯು ಯಾವುದೇ ಸಂದರ್ಭ ಬಂದರೂ ಒಬ್ಬರನ್ನೊಬ್ಬರು ರಕ್ಷಿಸಲು ಮತ್ತು ಪರಸ್ಪರ ಜೊತೆ ನಿಲ್ಲುವ ಬದ್ಧತೆಯ ಶಕ್ತಿ. ಇದು ಸ್ವಯಂಸೇವಕರಲ್ಲಿ ಸಹೋದರತ್ವದ ಭಾವನೆಯನ್ನು ಬಲಪಡಿಸಿ ರಾಷ್ಟ್ರರಕ್ಷಣೆಯ ಕಾರ್ಯದಲ್ಲಿ ಸಹಕರಿಸಲು ಸಹಾಯ ಮಾಡುತ್ತದೆ.

ರಕ್ಷಾ ಬಂಧನದ ಮುಖೇನವಾಗಿ ರಕ್ಷೆಯ ಸಂಕೇತವಾಗಿರುವ ಸ್ನೇಹ-ಸಹಕಾರ-ಸ್ವಾಭಿಮಾನ-ಏಕತೆಯನ್ನು ಅಂತರಂಗದೊಳಗಿನಿಂದಲೇ ಬೆಳೆಸಿ, ಅದನ್ನು ಸಹೋದರಿಯಂತಿರುವ ತಾಯಿ ಭಾರತಿಗಾಗಿ, ತಾಯ್ನಾಡು ಭಾರತಕ್ಕಾಗಿ ಮುಡಿಪಾಗಿವುದು ರಕ್ಷೆಯನ್ನು ಕಟ್ಟುವವರ, ಕಟ್ಟಿಸಿಕೊಳ್ಳುವವರ ಕರ್ತವ್ಯವಾಗಿದೆ!

ಪಂಚಮಿ ಬಾಕಿಲಪದವು

ತೃತೀಯ ಬಿ.ಎ, ಪತ್ರಿಕೋದ್ಯಮ ವಿಭಾಗ

ಅಂಬಿಕಾ ಮಹಾವಿದ್ಯಾಲಯ ಬಪ್ಪಳಿಗೆ, ಪುತ್ತೂರು

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.