Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ


Team Udayavani, Apr 17, 2024, 9:09 AM IST

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

ಶ್ರೀ ರಾಮಚಂದ್ರ ಅವತರಿಸಿದ ದಿನವನ್ನು “ರಾಮನವಮಿ’ಯಾಗಿ ಆಚರಿಸಲಾಗುತ್ತಿದೆ. ವಾಲ್ಮೀಕಿ ಮಹರ್ಷಿಗಳು ರಾಮಾಯಣವನ್ನು ವಿಶೇಷವಾಗಿ ಕಟ್ಟಿಕೊಟ್ಟಿದ್ದು ಮಾತ್ರವಲ್ಲದೇ ಶ್ರೀ ರಾಮಚಂದ್ರನ ಆದರ್ಶವನ್ನು ಅದರಲ್ಲಿ ತೋರಿಸಿದ್ದಾರೆ. ರಾಮಾಯಣದಲ್ಲಿ ಇಬ್ಬರು ಆದರ್ಶ ಪುರುಷರನ್ನು ತೋರಿಸಿದ್ದಾರೆ. ಒರ್ವ “ರಾಮ’, ಇನ್ನೋರ್ವ “ರಾವಣ’. ರಾಮನೂ ಆದರ್ಶ ಪುರುಷ. ರಾವಣನೂ ಆದರ್ಶ ಪುರುಷ. ಆದರೆ ಎಚ್ಚರ ಇರಬೇಕು. ಬದುಕಿನಲ್ಲಿ ನಾವು ಹೇಗೆ ಇರಬೇಕು, ಸಮಾಜದಲ್ಲಿ ಹೇಗೆ ಬದುಕಬೇಕು ಮತ್ತು ನಮ್ಮ ಬದುಕು ಯಾವ ರೀತಿ ಇರಬೇಕು ಎನ್ನುವುದಕ್ಕೆ “ಶ್ರೀ ರಾಮ’ ಆದರ್ಶ. ನಮ್ಮ ಬದುಕು ಹೇಗೆ ಇರಬಾರದು ಎನ್ನುವುದಕ್ಕೆ “ರಾವಣ’ ಆದರ್ಶ. ರಾಮನ ಬದುಕಿನ ಪ್ರತಿಯೊಂದು ಹೆಜ್ಜೆಯನ್ನು ನಾವು ಗಮನಿಸಿ, ನಾವೂ ಹೀಗೆ ಇರಬೇಕು ಎಂದುಕೊಂಡರೆ, ರಾವಣನ ಪ್ರತೀ ನಡೆಯನ್ನು ಕಂಡು ನಾವು ಹೀಗಿರಬಾರದು ಎನ್ನುವುದನ್ನು ಅರ್ಥಮಾಡಿಕೊಂಡು ನಮ್ಮ ಬದುಕನ್ನು ತಿದ್ದಿಕೊಳ್ಳಬೇಕು. ಹೀಗಾಗಿ “ರಾಮ’ನೂ ಆದರ್ಶ, “ರಾವಣ’ನೂ ಆದರ್ಶ.

“ರಾಮ’ ಎನ್ನುವ ಶಬ್ಧದ ಅರ್ಥವೇ ಎಲ್ಲರನ್ನು ಆರಾಮದಲ್ಲಿ ಇರುವಂತೆ ನೋಡಿಕೊಳ್ಳುವವನು. ಸುಖ ಸಂತೋಷದಿಂದ ಬಾಳುವಂತೆ ಮಾಡುವವನು “ರಾಮ’. ಅದೇ ರೀತಿ ರಾವಣ ಎನ್ನುವ ಶಬ್ಧದ ಅರ್ಥವೇ ಎಲ್ಲರನ್ನು ಅಳುವಂತೆ ಮಾಡುವವನು. ಹೀಗಾಗಿ ರಾಮ ಮತ್ತು ರಾವಣನ ಹೆಸರು ಪ್ರಸ್ತುತ ಸಮಾಜದಲ್ಲಿ ನಾವು ಹೇಗಿರಬೇಕು ಎನ್ನುವುದಕ್ಕೆ ಅನ್ವರ್ಥಕವಾಗಿದೆ. ರಾಮನಂತೆ ಇರಬೇಕು. ರಾವಣನಂತೆ ಇರಬಾರದು.

ಬದುಕಿನಲ್ಲಿ ನಾವೆಲ್ಲರೂ ಸುಖ, ಸಂತೋಷ ನೆಮ್ಮದಿಯಿಂದ ಬದುಕಬೇಕು ಎಂದು ಸಹಜವಾಗಿಯೇ ಬಯಸುತ್ತೇವೆ. ಕೇವಲ ಬಯಸಿದರೆ ಸಾಲದು ಅದಕ್ಕೆ ಸರಿಯಾದ ಪ್ರಯತ್ನ ಮಾಡಬೇಕಾಗುತ್ತದೆ. ಈ ಪ್ರಯತ್ನ ಹೇಗಿರಬೇಕು ಎಂಬುದು ಅತೀಮುಖ್ಯ. ನಮ್ಮ ಸುಖಕ್ಕಾಗಿ ನಾವು ಮಾಡುವ ಪ್ರಯತ್ನ ಇನ್ನೊಬ್ಬರ
ದುಃಖಕ್ಕೆ ಕಾರಣವಾಗಬಾರದು. ಅದು ಪಕ್ಕದ ಮನೆಯವರ ದುಃಖಕ್ಕೂ ಎಡೆಮಾಡಿಕೊಡಬಾರದು. ನನ್ನ ಸುಖಕ್ಕಾಗಿ ನಾನು ಪಡುವ ಪ್ರಯತ್ನವು ಅಕ್ಕಪಕ್ಕದ ಮನೆಯ ಇಬ್ಬರಿಗೆ ದುಃಖ ತರಿಸಿದರೆ, ಅವರು ತಮ್ಮ ಸುಖಕ್ಕಾಗಿ ನಮ್ಮಂತೆ ನಡೆದುಕೊಳ್ಳಲು ಆರಂಭಿಸಿದರೆ, ಅದರಿಂದ ಅವರ ಅಕ್ಕಪಕ್ಕದ ಮನೆಯವರಿಗೆ ದುಃಖ ಆಗುತ್ತದೆ. ಹೀಗಾದರೆ ಸುಖಕ್ಕಾಗಿ ಅವರೊಬ್ಬರಿಂದಲೇ ಪ್ರಯತ್ನ. ದುಃಖಕ್ಕೆ ಅಕ್ಕಪಕ್ಕದ ಮನೆಯ ಇಬ್ಬರ ಪ್ರಯತ್ನ. ಆಗ ಸುಖಕ್ಕೆ ಪ್ರಯತ್ನ ಪಡುವವರು ಕಡಿಮೆಯಾಗಿ, ದುಃಖಕ್ಕೆ ಪ್ರಯತ್ನ ಪಡುವವರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗುತ್ತದೆ. ಹಾಗಾಗಬಾರದು. ಹೀಗಾದರೆ ಅದು “ರಾವಣ’ ಪ್ರಯತ್ನವಾಗುತ್ತದೆ.

ಮತ್ತೂಬ್ಬರಿಗೆ ಏನೇ ತೊಂದರೆಯಾದರೂ ಚಿಂತೆಯಿಲ್ಲ. ತಾನು ಸುಖವಾಗಿರಬೇಕು ಎಂಬುದು “ರಾವಣ’ನ ಸ್ವಭಾವ. ರಾಮನ ಮಡದಿಯೂ ತನಗೆ ಬೇಕು ಎಂದು ರಾವಣ ಬಯಸಿದ್ದ. ಆದರೆ ರಾಮನ ಪ್ರಯತ್ನ ಹಾಗಲ್ಲ. ತಾನೂ ಕಷ್ಟಪಟ್ಟರೂ ಚಿಂತೆಯಿಲ್ಲ ಊರಿಗೆ ಒಳಿತಾಲಿ, ಮತ್ತೂಬ್ಬರಿಗೆ ಒಳಿತಾಗಲಿ ಎಂಬಂತೆ ಬದುಕಿ ನಮಗೆ ಆದರ್ಶವಾಗಿದ್ದಾರೆ. ನಾವು ಕೂಡ ಸುಖಕ್ಕಾಗಿ ಪ್ರಯತ್ನ ಪಡುವುದು ಇದ್ದೇ ಇರುತ್ತದೆ. ಅದೇ ಪ್ರಯತ್ನವನ್ನು ನನಗೆ ಮಾತ್ರವಲ್ಲದೇ ಅಕ್ಕಪಕ್ಕದ ಮನೆ ಯವರಿಗೂ ಸುಖವಾಗಲಿ ಎಂಬ ನಿಲುವಿನೊಂದಿಗೆ ನಡೆದು ಕೊಂಡರೆ ಮತ್ತು ಸಮಾಜದಲ್ಲಿ ಎಲ್ಲರೂ ಇದೇ ಚಿಂತನೆಯಲ್ಲಿ ಮುಂದುವರಿದರೆ ಸುಖಕ್ಕಾಗಿ ಪ್ರಯತ್ನಿಸುವವರ ಸಂಖ್ಯೆಯೇ ಹೆಚ್ಚಾಗಲಿದೆ. ನನ್ನ ಪ್ರಯತ್ನದ ಜತೆಗೆ ಅಕ್ಕಪಕ್ಕದ ಮನೆಯವರ ಪ್ರಯತ್ನವೂ ಸೇರಲಿದೆ. ಇದು “ರಾಮ’ನ ಆದರ್ಶ. ಎಲ್ಲರೂ ಹೀಗೆ ನಡೆದರೆ ಆ ರಾಜ್ಯ ರಾಮ ರಾಜ್ಯವಾಗಲಿದೆ. ನಮ್ಮ ಸುಖಕ್ಕಾಗಿ ನಾವು ಪ್ರಯತ್ನಿಸುವುದು ದೊಡ್ಡ ವಿಚಾರವಲ್ಲ. ಮತ್ತೂಬ್ಬರ ಸುಖಕ್ಕಾಗಿ ನಾವು ಪ್ರಯತ್ನಿಸಿದರೆ ರಾಮ ರಾಜ್ಯದ ಪರಿಕಲ್ಪನೆ ಸನ್ನಿಹಿತವಾಗಲಿದೆ. ನಾವೆಲ್ಲರೂ ಅದೇ ರೀತಿಯಲ್ಲಿ ನಡೆದುಕೊಳ್ಳಲು ಪ್ರಯತ್ನಿಸೋಣ, ಹಾಗೆಯೇ ಬದುಕುವ ಸಂಕಲ್ಪ ಮಾಡೋಣ. ಎಲ್ಲರಿಗೂ ಒಳಿತಾಗಲಿ.

ಇಂದು ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಪಾರಾಯಣ: ರಾಮನವಮಿಯಂದು ಅಯೋಧ್ಯೆಯ ಭವ್ಯ ರಾಮ ಮಂದಿ ರದಲ್ಲಿ ರಾಮಲಲ್ಲಾನಿಗೆ ನಿತ್ಯದ ಪೂಜೆಗಳು ವಿಶೇಷ ರೀತಿ ಯಲ್ಲಿ ನೆರವೇರಲಿವೆ. ಮಂದಿರ ಪರಿಪೂರ್ಣವಾಗಿ ಕಾರ್ಯ ಚಟುವಟಿಕೆಗೆ ಇನ್ನೂ ಮುಕ್ತವಾಗಿಲ್ಲ. ಇನ್ನೊಂದೆಡೆ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆಯೂ ಕಡಿಮೆಯಾಗಿಲ್ಲ. ನಿತ್ಯದ ದರ್ಶನಕ್ಕೆ 4 ಸಾಲುಗಳಲ್ಲಿ ಭಕ್ತರನ್ನು ಬಿಡಲಾಗುತ್ತಿತ್ತು. ರಾಮ ನವಮಿ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು 7 ಸಾಲುಗಳಲ್ಲಿ ಒಳಗೆ ಬಿಡಲಾಗುತ್ತಿದೆ ಮತ್ತು ದರ್ಶನಕ್ಕೆ ಮೀಸಲಿಟ್ಟ ಅವಧಿಯನ್ನು ಹೆಚ್ಚಿಸಲಾಗಿದೆ. ಆದರೂ ಸಾಕಾಗುತ್ತಿಲ್ಲ. ಮಂದಿರದ ಹೊರಭಾಗದಲ್ಲಿ ಅಪಾರ ಭಕ್ತಸಂದಣಿ. ಈ ಕಾರಣಕ್ಕಾಗಿ ರಾಮನವಮಿಯಂದು ಉತ್ಸವ ನಡೆಸಲು ಸಾಧ್ಯವಾಗುತ್ತಿಲ್ಲ. ದೇವರ ದರ್ಶನ, ಪೂಜೆ, ಧಾರ್ಮಿಕ ವಿಧಿ ವಿಧಾನ, ಪಾರಾಯಣ ಇತ್ಯಾದಿ ವಿಶೇಷವಾಗಿ ನಡೆಯಲಿದೆ. ಭಕ್ತರು ತಮ್ಮ ಊರಿನ ಶ್ರೀರಾಮನ ದೇವಸ್ಥಾನ, ಮಂದಿರಗಳಲ್ಲಿ ವೈಭವದಿಂದ ರಾಮನ ಉತ್ಸವ ಆಚರಿಸಬೇಕು.
(ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥರು)

– ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರು, ಉಡುಪಿ

ಬಾಲಕರಾಮನಿಗೆ 56 ಬಗೆಯ ವಿಶೇಷ ಭಕ್ಷ್ಯಗಳ ನೈವೇದ್ಯ ಇಂದು
ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನೂತನ ರಾಮಮಂದಿರ ನಿರ್ಮಾಣವಾಗಿ ಬಾಲಕ  ರಾಮನ ಪ್ರತಿಷ್ಠಾಪನೆ ಅನಂತರ ನಡೆಯುತ್ತಿರುವ ಮೊದಲ ರಾಮನವಮಿಯನ್ನು ವೈಭವದಿಂದ ಆಚರಿ ಸಲು ಸಕಲ ಸಿದ್ಧತೆಗಳು ನಡೆದಿವೆ. ಮಂಗಳವಾರ ಮುಂಜಾನೆ 3.30ರಿಂದ ವಿಶೇಷ ಪೂಜೆಗಳು ಆರಂಭ ವಾಗಲಿದೆ. ಬಾಲಕರಾಮನಿಗೆ 56 ಬಗೆಯ ವಿಶೇಷ ಭಕ್ಷ್ಯ ಗಳನ್ನು ನೈವೇದ್ಯವಾಗಿ ಅರ್ಪಿಸ ಲಾಗುತ್ತದೆ. ಇವುಗಳನ್ನು ಮಧ್ಯಾಹ್ನ ಪ್ರಸಾದದ ರೂಪದಲ್ಲಿ ಭಕ್ತರಿಗೆ ವಿತರಿಸಲಾ ಗುತ್ತದೆ. ಅಂದು ಮುಂಜಾನೆ 3.30ರಿಂದ ರಾತ್ರಿ 11 ಗಂಟೆ ವರೆಗೆ ಒಟ್ಟು 19 ಗಂಟೆಗಳು ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ನಡುವೆ ಕೆಲವು ಕಾಲ ನೈವೇದ್ಯ ಸಮರ್ಪಣೆಗೆ ಮಾತ್ರ ದರ್ಶನ ಸ್ಥಗಿತಗೊಳಿಸಲಾಗುತ್ತದೆ ಎಂದು ಮುಖ್ಯ ಅರ್ಚಕ ಸತ್ಯೇಂದ್ರ ದಾಸ್‌ ತಿಳಿಸಿದ್ದಾರೆ.
ಸೂರ್ಯರಶ್ಮಿ ಸ್ಪರ್ಶ: ಬಾಲಕರಾಮನ ಹಣೆಗೆ ಇಂದು ಸೂರ್ಯರಶ್ಮಿ ಸ್ಪರ್ಶಿಸಲಿದೆ. ಮಧ್ಯಾಹ್ನ 11.58ರಿಂದ ಮಧ್ಯಾಹ್ನ 12.03ವರೆಗೆ 5 ನಿಮಿಷಗಳ ಕಾಲ ಬಾಲಕರಾಮನ ಹಣೆಗೆ ಸೂರ್ಯರಶ್ಮಿ ಮುತ್ತಿಕ್ಕಲಿದೆ. ರಾಮನವಮಿ ಅಂಗವಾಗಿ ಅಯೋಧ್ಯೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ. ವಿಶೇಷ ಪೂಜೆ, ಹೋಮ, ಹವನ ನಡೆಯಲಿದೆ. ಭಕ್ತರ ಸುಗಮ ದರ್ಶನಕ್ಕೆ ಎಲ್ಲÉ ವ್ಯವಸ್ಥೆ ಮಾಡಲಾಗಿದೆ. ಲೈವ್‌ ದರ್ಶನಕ್ಕಾಗಿ ಅಯೋಧ್ಯೆ ನಗರದ 100 ಕಡೆಗಳಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ.

ಟಾಪ್ ನ್ಯೂಸ್

Dangerous Stunt: ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ಬಾಲಕನನ್ನು ಕೂರಿಸಿ ರೀಲ್ಸ್…

Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್

BBK11: ಕ್ಯಾಪ್ಟನ್‌ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ

BBK11: ಕ್ಯಾಪ್ಟನ್‌ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ

INDWvWIW: ದೀಪ್ತಿ ಶರ್ಮಾ ಆಲ್‌ ರೌಂಡ್‌ ಶೋ; ಏಕದಿನ ಕ್ಲೀನ್‌ಸ್ವೀಪ್‌ ಮಾಡಿದ ವನಿತೆಯರು

INDWvWIW: ದೀಪ್ತಿ ಶರ್ಮಾ ಆಲ್‌ ರೌಂಡ್‌ ಶೋ; ಸರಣಿ ಕ್ಲೀನ್‌ಸ್ವೀಪ್‌ ಮಾಡಿದ ವನಿತೆಯರು

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MM-Singh1

Tribute Dr.Singh: ಡಾ.ಮನಮೋಹನ್‌ ಸಿಂಗ್‌ ಆಡಳಿತದ ಜನಪರ ಯೋಜನೆಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Dangerous Stunt: ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ಬಾಲಕನನ್ನು ಕೂರಿಸಿ ರೀಲ್ಸ್…

Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್

BBK11: ಕ್ಯಾಪ್ಟನ್‌ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ

BBK11: ಕ್ಯಾಪ್ಟನ್‌ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ

INDWvWIW: ದೀಪ್ತಿ ಶರ್ಮಾ ಆಲ್‌ ರೌಂಡ್‌ ಶೋ; ಏಕದಿನ ಕ್ಲೀನ್‌ಸ್ವೀಪ್‌ ಮಾಡಿದ ವನಿತೆಯರು

INDWvWIW: ದೀಪ್ತಿ ಶರ್ಮಾ ಆಲ್‌ ರೌಂಡ್‌ ಶೋ; ಸರಣಿ ಕ್ಲೀನ್‌ಸ್ವೀಪ್‌ ಮಾಡಿದ ವನಿತೆಯರು

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

Vishwaprabha Award 2025 to Actor Naveen D. Padil

Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.