ಅಧಿಕಾರ ವಿಕೇಂದ್ರೀಕರಣದ ಹರಿಕಾರ


Team Udayavani, Aug 29, 2018, 12:30 AM IST

s-12.jpg

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಎಂದೂ ಸಹ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದ ಉದಾಹರಣೆಗಳು ಇಲ್ಲವೇ ಇಲ್ಲ. ಎಲ್ಲಾ ಸಚಿವರಿಗೂ ಅವರು ಅಷ್ಟರ ಮಟ್ಟಿಗೆ ಸ್ವಾತಂತ್ರ್ಯ ನೀಡಿದ್ದರು. ಹಾಗಾಗಿಯೇ, ಎಲ್ಲರೂ ಸೈ ಎನ್ನುವಂತಹ ಆಡಳಿತ ಅಂದಿನ ಜನತಾ ಸರ್ಕಾರದಿಂದ ಸಾಧ್ಯವಾಯಿತು. ಹೆಗಡೆ ನಂತರ ಬಂದ ಜನತಾ ಪರಿವಾರದ ಮುಖ್ಯಮಂತ್ರಿಗಳ ಅಡಳಿತದಲ್ಲೂ ಹೆಗಡೆ ಅವರ ಅಂದಿನ ಜನತಾ ಸರ್ಕಾರದ ಪ್ರಭಾವ ಇತ್ತು.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ 1980ರಿಂದ 2000ದ ವರೆಗಿನ ಎರಡು ದಶಕಗಳ ಅವಧಿ ಸುವರ್ಣಾಕ್ಷರಗಳಿಂದ ಬರೆದಿಡಬಹುದಾದ ಪರ್ವ ಕಾಲ ಎಂದು ಭಾವಿಸಿದರೆ, ಅಲ್ಲಿ ನಮ್ಮೆದುರು ಪ್ರತ್ಯಕ್ಷರಾಗುವುದು ಒಬ್ಬ ಪ್ರಮುಖ ಜನನಾಯಕನ ಚಿತ್ರ. ಅವರೇ, ತಮ್ಮ ವೈಚಾರಿಕ ನೆಲೆಗಟ್ಟಿನಡಿ ಇಡೀ ದೇಶವೇ ಬೆರಗಾಗುವಂತೆ ರಾಜ್ಯಭಾರ ಮಾಡಿದ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ.  ರಾಮಕೃಷ್ಣ ಹೆಗಡೆ ಅವರು ನಮ್ಮನ್ನಗಲಿ ಸರಿಸುಮಾರು 2 ದಶಕಗಳಾಗುತ್ತಿದ್ದರೂ ಅವರ ವ್ಯಕ್ತಿತ್ವ ಹಾಗೂ ನಾಡಿನ ಜನತೆಯೊಂದಿಗೆ ಅವರು ನಡೆದುಕೊಂಡ ರೀತಿ ಮಾತ್ರ ಜನಮಾನಸದಿಂದ ಎಂದೂ ದೂರವಾಗದು.  

 ಹೆಗಡೆ ತಮ್ಮ ಆಡಳಿತಾವಧಿಯಲ್ಲಿ ನೂರಾರು ಜನಪರ ಯೋಜನೆಗಳನ್ನು ನೀಡಿದ್ದಾರೆ. ರಾಜ್ಯದ ಪ್ರತಿ ಗ್ರಾಮಕ್ಕೂ ಸುಸಜ್ಜಿತ ರಸ್ತೆಗಳ ನಿರ್ಮಾಣ, ಹಳ್ಳಿಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿದ್ದು, ವಿಧವಾ ಮಾಸಾಶನ, ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ಮುಂತಾದ ಸ್ಮರಣೀಯ ಯೋಜನೆಗಳು ಅವರ ಕಾಲದಲ್ಲಿಯೇ ಜಾರಿಯಾಗಿದ್ದವು. ಸಮಗ್ರ ಕರ್ನಾಟಕದ ಅಭಿವೃದ್ಧಿಯೇ ಅವರ ಕನಸಾಗಿತ್ತು. ಹಾಗಾಗಿ, ರಾಜ್ಯದ ಯಾವುದೇ ಮೂಲೆಗೆ ಹೆಗಡೆ ಹೋದರೂ ಅವರನ್ನು ನೋಡಲು, ಅವರ ಭಾಷಣ ಕೇಳಲು ಜನಸಾಗರವೇ ಸೇರುತ್ತಿತ್ತು. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಜನತೆಗಂತೂ ರಾಮಕೃಷ್ಣ ಹೆಗಡೆ ಅಂದರೆ ಪಂಚಪ್ರಾಣ. ಆ ಜನ ಅವರನ್ನು ಅಷ್ಟೊಂದು ಪ್ರೀತಿಸುತ್ತಿದ್ದರು. ಹೆಗಡೆ ಅವರ ಹೆಸರು ಪ್ರಸ್ತಾಪವಾದಾಗಲೆಲ್ಲಾ ಇಂದಿಗೂ ಭಾವುಕರಾಗುವವರಿದ್ದಾರೆ.

ಹೆಗಡೆ ಸಾಕಷ್ಟು ಮಂದಿ ರಾಜಕಾರಣಿಗಳನ್ನು ನಾಯಕತ್ವದ ಮುಂಚೂಣಿಗೆ ತಂದು ನಿಲ್ಲಿಸಿದ ಕೀರ್ತಿಗೂ ಪಾತ್ರರು. ಹಿರಿಯ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ದಿ.ಎಸ್‌.ನಿಜಲಿಂಗಪ್ಪನವರ ರಾಜಕೀಯ ಗರಡಿಯಲ್ಲಿ ಬೆಳೆದ ರಾಮಕೃಷ್ಣ ಹೆಗಡೆ ಅವರು, ಮೌಲ್ಯಾಧಾರಿತ ರಾಜಕಾರಣವನ್ನು ಉಸಿರಾಗಿಸಿಕೊಂಡಿದ್ದರು. 

1983ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಅಧಿಕಾರ ಕಿತ್ತುಕೊಂಡ ಹೆಗಡೆ ಅವರು, ಕರ್ನಾಟಕದ ಕಾಂಗ್ರೆಸ್ಸೇತರ ಸರ್ಕಾರದ ಪ್ರಪ್ರಥಮ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ, 1984ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಅಕಾಲಿಕ ಸಾವಿನ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅಂದಿನ ಜನತಾ ಪಕ್ಷ ಹೀನಾಯ ಸೋಲು ಅನುಭವಿಸಿತು. ಆಗ ಜನತಾ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಬಹುತೇಕ ಘಟಾನುಘಟಿ ನಾಯಕರೇ ಪರಾಭವಗೊಂಡು, ಕಾಂಗ್ರೆಸ್‌ ಅಭ್ಯರ್ಥಿಗಳು ಜಯಶಾಲಿಗಳಾಗಿದ್ದರು. ಈ ಸಂದರ್ಭದಲ್ಲೂ ರಾಮಕೃಷ್ಣ ಹೆಗಡೆ ಅವರು ತಾವು ನಂಬಿದ್ದ ಮೌಲ್ಯಗಳಿಗಾಗಿ ನೈತಿಕ ಹೊಣೆ ಹೊತ್ತು ಹಿಂದೆ ಮುಂದೆ ನೋಡದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿ ರಾಜಭವನದಿಂದ ತಮ್ಮ ಸ್ವಂತ ಕಾರಿನಲ್ಲಿ ಮನೆಗೆ ತೆರಳುವ ಮೂಲಕ ನಾಡಿನ ಜನಮಾನಸಕ್ಕೆ ಮತ್ತಷ್ಟು ಹತ್ತಿರವಾದರು. ಮುಂದೆ, ಅಂದಿನ ರಾಜ್ಯಪಾಲರ ಸೂಚನೆ ಮೇರೆಗೆ ಪರ್ಯಾಯ ವ್ಯವಸ್ಥೆಯಾಗುವವರಿಗೂ ಕೆಲದಿನಗಳ ಕಾಲ ಜೋಪಾಸನಾ ಸರ್ಕಾರದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ತದನಂತರ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಹೆಗಡೆ ಅವರ ಜನತಾ ಪಕ್ಷ(ನೇಗಿಲು ಹೊತ್ತ ರೈತನ ಚಿಹ್ನೆ)ಸ್ಪಷ್ಟ  ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿತು. 

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಎಂದೂ ಸಹ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದ ಉದಾಹರಣೆಗಳು ಇಲ್ಲವೇ ಇಲ್ಲ. ಎಲ್ಲಾ ಸಚಿವರಿಗೂ ಅವರು ಅಷ್ಟರ ಮಟ್ಟಿಗೆ ಸ್ವಾತಂತ್ರ್ಯ ನೀಡಿದ್ದರು. ಹಾಗಾಗಿಯೇ, ಎಲ್ಲರೂ ಸೈ ಎನ್ನುವಂತಹ ಆಡಳಿತ ಅಂದಿನ ಜನತಾ ಸರ್ಕಾರದಿಂದ ಸಾಧ್ಯವಾಯಿತು. ಹೆಗಡೆ ನಂತರ ಬಂದ ಜನತಾ ಪರಿವಾರದ ಮುಖ್ಯಮಂತ್ರಿಗಳ ಅಡಳಿತದಲ್ಲೂ ಹೆಗಡೆ ಅವರ ಅಂದಿನ ಜನತಾ ಸರ್ಕಾರದ ಪ್ರಭಾವ ಇತ್ತು.

ಅಪ್ಪಟ ಜನಪರ ನಾಯಕರ ಪಡೆಯನ್ನೇ ಹೊಂದಿದ್ದ ಹೆಗಡೆ ಅವರ ಸಚಿವ ಸಂಪುಟ ನಾಡಿನ ಸರ್ವಾಂಗೀಣ ಅಭ್ಯುದಯಕ್ಕಾಗಿ ಸಾಕಷ್ಟು ಶ್ರಮಿಸಿತ್ತು. ಹಿರಿಯ ಮುತ್ಸದ್ದಿ ಎಸ್‌.ಆರ್‌.ಬೊಮ್ಮಾಯಿ, ಎಚ್‌.ಡಿ.ದೇವೇಗೌಡ, ಜೆ.ಎಚ್‌.ಪಟೇಲ್‌, ಎಂ.ಪಿ.ಪ್ರಕಾಶ್‌, ಅಬ್ದುಲ್‌ ನಜೀರ್‌ ಸಾಬ್‌(ನೀರುಸಾಬ್‌), ಆರ್‌.ವಿ.ದೇಶಪಾಂಡೆ, ಸಿದ್ದರಾಮಯ್ಯ, ಪಿ.ಜಿ.ಆರ್‌.ಸಿಂಧ್ಯಾ, ಬಿ ರಾಚಯ್ಯ, ಡಾ. ಜೀವರಾಜ್‌ ಆಳ್ವಾ, ಎಂ ರಘುಪತಿ ಸೇರಿದಂತೆ ಸಾಕಷ್ಟು ಮಂದಿ ಪ್ರತಿಭಾವಂತ ಹಾಗೂ ಜನರ ಕಷ್ಟ ಕಾರ್ಪಣ್ಯಗಳೊಂದಿಗೆ ಸ್ಪಂದಿಸಬಲ್ಲ ನಾಯಕರ ಹಿಂಡೇ ಅವರ ಬೆನ್ನಿಗಿತ್ತು. ಕನ್ನಡ ಸಂಸ್ಕೃತಿ ಇಲಾಖೆಗೆ ಹಿರಿಯ ನಾಯಕ ದಿ.ಎಂ.ಪಿ.ಪ್ರಕಾಶ್‌ ಅವರ ಮೂಲಕ ಕಾಯಕಲ್ಪ ಕಲ್ಪಿಸಿದ ಶ್ರೇಯಸ್ಸು ಅಂದಿನ ಜನತಾ ಪಕ್ಷದ ಸರ್ಕಾರಕ್ಕೆ ಸಲ್ಲುತ್ತದೆ. ಈ ಬಗ್ಗೆ ಗದುಗಿನ ತೋಂಟದಾರ್ಯ ಮಠದ ಜಗದ್ಗುರುಗಳು ತಮ್ಮ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದೂ ಉಂಟು.

ಅಧಿಕಾರ ವಿಕೇಂದ್ರೀಕರಣದ ಪ್ರಯೋಗ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಕೈಗೇ ಅಧಿಕಾರ ನೀಡಬೇಕೆಂಬ ಬಹುದೊಡ್ಡ ಕನಸನ್ನು ರಾಮಕೃಷ್ಣ ಹೆಗಡೆ ಹೊಂದಿದ್ದರು. ಅದಕ್ಕಾಗಿ ರಾಜ್ಯದಲ್ಲಿ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಅಧಿಕಾರ ವಿಕೇಂದ್ರೀಕರಣಕ್ಕೆ ಇಂಬು ನೀಡಿದರು. ಅಲ್ಲದೇ, ರಾಜ್ಯದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಜಾರಿಗೆ ತರುವಲ್ಲೂ ಯಶಸ್ವಿಯಾದರು. 

ಪ್ರಪ್ರಥಮವಾಗಿ ರಾಜ್ಯದಲ್ಲಿ ನಡೆದ ಎಲ್ಲಾ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಆಯ್ಕೆಯಾದ ಸದಸ್ಯರನ್ನು ಬೆಂಗಳೂರಿಗೆ ಕರೆಸಿ ಬಹುದೊಡ್ಡ ಸಮಾವೇಶವನ್ನೇ ಮಾಡಿದ್ದರು. ಈ ಸಮಾವೇಶಕ್ಕೆ ಅಂದಿನ ಕೇಂದ್ರ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಸಚಿವರಾಗಿದ್ದ ದಿ.ಪಿ.ವಿ.ನರಸಿಂಹರಾವ್‌ರನ್ನು ಆಹ್ವಾನಿಸಿ, ಅವರಿಂದ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ನೂತನ ಸದಸ್ಯರಿಗೆ ಅವರ ಜವಾಬ್ದಾರಿಗಳ ಕುರಿತು ಮನವರಿಕೆ ಮಾಡಿಸಿದ್ದರು. ಈ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರ ಅಧಿಕಾರ ವಿಕೇಂದ್ರೀಕರಣದ ಪರಿಕಲ್ಪನೆಯನ್ನು ಪಿ.ವಿ.ನರಸಿಂಹರಾವ್‌ ಮುಕ್ತಕಂಠದಿಂದ ಪ್ರಶಂಸಿದ್ದರು. ಅಂದಿನ ಪ್ರಧಾನಿ ದಿ.ರಾಜೀವ್‌ ಗಾಂಧಿ ಅವರು ಸಹ ಹೆಗಡೆ ಕಾರ್ಯಕ್ಕೆ ಹುಬ್ಬೇರಿಸಿದ್ದೂ ಉಂಟು.

ರಾಷ್ಟ್ರ ರಾಜಕಾರಣದ ಗೀಳು
ತಮ್ಮ ಆಡಳಿತಕ್ಕೆ ದೇಶಾದ್ಯಂತ ವ್ಯಕ್ತವಾಗುತ್ತಿದ್ದ ಪ್ರಶಂಸೆಯಿಂದಾಗಿ ಪ್ರಭಾವಿತರಾಗಿದ್ದ ರಾಮಕೃಷ್ಣ ಹೆಗಡೆ ಅವರ ಚಿತ್ತ ಬರಬರುತ್ತಾ ರಾಷ್ಟ್ರರಾಜಕಾರಣದತ್ತ ವಾಲಿತು. ಈ ಹಿನ್ನೆಲೆಯಲ್ಲಿ ಅಂದು ಬೋಫೋರ್ಸ್‌ ಫಿರಂಗಿ ಹಗರಣದ ಆರೋಪದಡಿ ಕಾಂಗ್ರೆಸ್‌ನಿಂದ ಉಚ್ಛಾಟಿಸಲ್ಪಟ್ಟಿದ್ದ ಅಂದಿನ ಕೇಂದ್ರ ಸಚಿವ ವಿಶ್ವನಾಥ್‌ ಪ್ರತಾಪ್‌ಸಿಂಗ್‌ರ ಮನವೊಲಿಸಿಕೊಂಡು ಜನತಾ ಪಕ್ಷಕ್ಕೆ ಕರೆತಂದರು. ನಂತರ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ನಡೆಸಿ ಜನತಾ ಪಕ್ಷ ಸೇರಿದಂತೆ ದೇಶದ ಹಲವಾರು ರಾಜಕೀಯ ಪಕ್ಷಗಳನ್ನು ಸೇರಿಸಿ ಜನತಾ ದಳ(ಚಕ್ರದ ಚಿಹ್ನೆ)ಪಕ್ಷವನ್ನು ಹುಟ್ಟುಹಾಕಿದರು. ಆ ಮೂಲಕ ಪಕ್ಷದ ಜವಾಬ್ದಾರಿಯನ್ನು ವಿ.ಪಿ.ಸಿಂಗ್‌ ಅವರ ಹೆಗಲಿಗೇರಿಸಿದರು. ತನ್ಮೂಲಕ ದೇಶದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಪರ್ಯಾಯವಾಗಿ ತೃತೀಯ ರಾಜಕೀಯ ಶಕ್ತಿಯ ಉದಯಕ್ಕೆ ಕಾರಣರಾದರು. 

ತದನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಅಧಿಕಾರದಿಂದ ದೂರವಿಡಬೇಕೆಂಬ ಕಾರಣದಿಂದ ಎಲ್ಲಾ ಸಮಾನ ಮನಸ್ಕ ಪಕ್ಷಗಳ ಸಹಕಾರದೊಂದಿಗೆ 1989ರಲ್ಲಿ ವಿ.ಪಿ.ಸಿಂಗ್‌ ನೇತೃತ್ವದಲ್ಲಿ ಕೇಂದ್ರದಲ್ಲಿ ಸರ್ಕಾರ ರಚನೆಯನ್ನೂ ಮಾಡಿದರು. ಆಗ, ಪ್ರಧಾನಿ ವಿ.ಪಿ.ಸಿಂಗ್‌ರಿಗೆ ಬಿಜೆಪಿ ಬಾಹ್ಯ ಬೆಂಬಲ ನೀಡಿದ್ದನ್ನು ಸ್ಮರಿಸಬಹುದಾಗಿದೆ. ಈ ಸಂದರ್ಭದಲ್ಲಿ ವಿ.ಪಿ.ಸಿಂಗ್‌ ಪ್ರಧಾನಿಯಾದರೆ, ಹೆಗಡೆ ಅವರಿಗೆ ರಾಷ್ಟ್ರೀಯ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ದೊರೆಯಿತು. ಆದರೆ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಇನ್ನೂ ಆರೆಂಟು ತಿಂಗಳು ಕಳೆದಿರಲಿಲ್ಲ. ಅಷ್ಟರಲ್ಲೇ ಅವರು ಮುಖ್ಯಮಂತ್ರಿಯಾಗಿದ್ದಾಗ ದೂರವಾಣಿ ಕದ್ದಾಲಿಸಿದ ಆರೋಪ ಕೇಳಿ ಬಂದಿತ್ತು. ಇದರಿಂದ ಕಿಂಚಿತ್ತೂ ವಿಚಲಿತರಾಗದ ಹೆಗಡೆ ತಾವು ನಂಬಿದ್ದ ಮೌಲ್ಯಗಳ ರಕ್ಷಣೆಗಾಗಿ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಯೇ ಬಿಟ್ಟರು.

ನಂತರ ರಾಜ್ಯದಲ್ಲಿ ನಡೆದ ರಾಜಕೀಯ ಬದಲಾವಣೆಗಳಿಂದಾಗಿ ಹೆಗಡೆ ಅವರು ರಾಷ್ಟ್ರೀಯ ನವನಿರ್ಮಾಣ ವೇದಿಕೆ ಎಂಬ ಸಂಘಟನೆ ಹಾಗೂ ಲೋಕಶಕ್ತಿ ಎಂಬ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದರು. ಆಗ, ಅನಿವಾರ್ಯವಾಗಿ ಹಿರಿಯ ನಾಯಕರಾದ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಎಲ್‌.ಕೆ.ಅಡ್ವಾಣಿ ಅವರ ನೇತೃತ್ವದ ಬಿಜೆಪಿ ಜತೆ ರಾಜ್ಯದಲ್ಲಿ ಕೈಜೋಡಿಸಿದರು. 1998ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಪ್ರಚಂಡ ಎನ್ನದಿದ್ದರೂ ಸಮಾಧಾನಪಡುವ ರೀತಿಯಲ್ಲಿ ಲೋಕಶಕ್ತಿಯಿಂದ ಮೂರು ಸ್ಥಾನಗಳಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದರು. ನಂತರ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ವಾಣಿಜ್ಯ ಸಚಿವರಾಗಿ ಸೊಗಸಾದ ಆಡಳಿತ ನಡೆಸಿದರು. ಇದಾದ ನಂತರ ಅನಿವಾರ್ಯ ಕಾರಣಗಳಿಂದಲೋ ಅಥವಾ ಯಾರದೋ ಪಿತೂರಿಯಿಂದಲೋ ವಾಜಪೇಯಿ  ಹೆಗಡೆ ಅವರನ್ನು ಸಂಪುಟದಿಂದ ಕೈಬಿಟ್ಟರು. 

2001ರಲ್ಲಿ ಅನಾರೋಗ್ಯಕ್ಕೆ ತುತ್ತಾದ ರಾಮಕೃಷ್ಣ ಹೆಗಡೆ ಅವರು ಲಂಡನ್‌ನಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದರು. ಆದರೆ, ಮುಂದೆ ಆರೋಗ್ಯ ಸಮಸ್ಯೆ ಉಲ್ಬಣವಾದ ಕಾರಣ 2003ರ ಜನವರಿ 12ರಂದು ನಮ್ಮನ್ನೆಲ್ಲ ಅಗಲಿದರು. 1926ರ ಆಗಸ್ಟ್‌ 29 ರಂದು ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಗ್ರಾಮ ದೊಡ್ಮನೆಯ ಸ್ವಾತಂತ್ರ್ಯ ಹೋರಾಟಗಾರರ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ರಾಮಕೃಷ್ಣ ಹೆಗಡೆ ಇಂದು ನಮ್ಮ ಜತೆಗಿದ್ದಿದ್ದರೆ ಅವರಿಗೆ 72ರ ಸಂಭ್ರಮ ಇರುತ್ತಿತ್ತು. ಹೆಗಡೆ ಅವರು ದೈಹಿಕವಾಗಿ ನಾಡಿನ ಜನತೆಯನ್ನು ಅಗಲಿರಬಹುದು. ಆದರೆ, ರಾಜಕೀಯ ಕ್ಷೇತ್ರದಲ್ಲಿ ಅವರು ಬಿಟ್ಟುಹೋಗಿರುವ ಅಮೂಲ್ಯ ಹೆಜ್ಜೆ ಗುರುತುಗಳು ಹಚ್ಚಹಸಿರಾಗಿವೆ.

ಬಿ.ಎಸ್‌ .ಅಶೋಕ್‌

ಟಾಪ್ ನ್ಯೂಸ್

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

Donald Trump Salry: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Kannada-Horata

Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.