50,000 ವರ್ಷಗಳಲ್ಲಿ ಮೊದಲ ಬಾರಿಗೆ ಭೂಮಿ ಸಮೀಪ ಈ ಧೂಮಕೇತು
ಹೊಸದಾಗಿ ಪತ್ತೆ ಮಾಡಲಾದ ಧೂಮಕೇತು ಫೆ.1ರಂದು ಭೂಮಿ ಸಮೀಪ
Team Udayavani, Jan 12, 2023, 7:30 AM IST
ಸೌರ ವ್ಯೂಹ ಸಮೀಪದ ಹೂರ್ಟ್ ಕ್ಲೌಡ್ ಕಡೆಯಿಂದ ಬಂದಿದೆ ಎನ್ನಲಾದ ಈ ಧೂಮಕೇತು 50,000 ವರ್ಷಗಳ ಹಿಂದೆ ಭೂಮಿ ಸಮೀಪ ಹಾದುಹೋಗಿತ್ತು. ಇದಾದ ನಂತರ ಸೌರ ವ್ಯೂಹ ಸಮೀಪ ಈ ಧೂಮಕೇತು ಕಾಣಿಸಿಕೊಂಡಿರಲಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಸಿ/2022 ಇ3 ಧೂಮಕೇತು
ಈ ಧೂಮಕೇತುವಿಗೆ ಸಿ/2022 ಇ3(ಜೆಟಿಎಫ್) ಎಂದು ನಾಮಕರಣ ಮಾಡಲಾಗಿದೆ. 2022ರ ಮಾರ್ಚ್‌ನಲ್ಲಿ ಗುರು ಗ್ರಹದ ಸಮೀಪ ಈ ಧೂಮಕೇತುವನ್ನು ಝಿಕಿ ಟ್ರಾನ್ಸಿಯಂಟ್ ಫೆಸಿಲಿಟಿ ವಿಜ್ಞಾನಿಗಳು ಪತ್ತೆ ಮಾಡಿದ್ದರು. ಈ ಧೂಮುಕೇತುವಿನ ಸುತ್ತಳತೆ ಸುಮಾರು 1 ಕಿ.ಮೀ. ಇದೆ ಎಂದು ಅಂದಾಜಿಸಲಾಗಿದೆ. ಇದು ನಿಯೋವೈಸ್ ಧೂಮಕೇತುಗೆ ಹೋಲಿಸಿದರೆ ಗಾತ್ರದಲ್ಲಿ ಚಿಕ್ಕದು.
ಹೇಗೆ ನೋಡಬಹುದು
ಭೂಮಿ ಸಮೀಪ ಹಾದುಹೋಗುವ ಈ ಧೂಮಕೇತು ಅನ್ನು ಬರಿಗಣ್ಣಿನಿಂದ ನೋಡಬಹುದು. ಆದರೆ ವಾತಾವರಣ ಸೂಕ್ತವಲ್ಲದಿದ್ದರೆ ಮಂದವಾಗಿ ಕಾಣಬಹುದು. ಹಾಗಾಗಿ ಟೆಲಿಸ್ಕೋಪ್ ಅಥವಾ ಬೈನಾಕ್ಯುಲರ್ ಸಹಾಯದಿಂದ ಸ್ಪಷ್ಟವಾಗಿ ಧೂಮಕೇತು ಕಾಣಲಿದೆ. ಮಂಜು ಮತ್ತು ಧೂಳಿನಿಂದ ಕೂಡಿರುವ ಈ ಧೂಮಕೇತು ಅನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ.
ಇಂದು ಸೂರ್ಯನ ಸಮೀಪ
ಜ.12ರಂದು ಈ ಧೂಮಕೇತು ಸೂರ್ಯನ ಸಮೀಪ ಕಾಣಿಸಿಕೊಳ್ಳಲಿದೆ. ಜ.21-22ರಂದು ಉತ್ತರಾರ್ಧ ಗೋಳದಲ್ಲಿ ಇರುವುವವರಿಗೆ ಈ ಧೂಮಕೇತು ಕಾಣಲಿದೆ.
ಫೆ.1ರಂದು ಭೂಮಿ ಸಮೀಪ
ಫೆ.1ರಂದು ಈ ಧೂಮಕೇತು ಭೂಮಿ ಸಮೀಪ ಕಾಣಿಸಿಕೊಳ್ಳಲಿದೆ. ವಾತಾವರಣ ತಿಳಿಯಾದ ಪ್ರದೇಶದಲ್ಲಿ, ಯಾವುದೇ ಮಾಲಿನ್ಯ ಇಲ್ಲದ ಪ್ರದೇಶದಲ್ಲಿ ಧೂಮಕೇತು ಸ್ಪಷ್ಟವಾಗಿ ಬರಿಗಣ್ಣಿಗೆ ಕಾಣಿಸಲಿದೆ.
ಭೂಮಿ ಸಮೀಪ ಬಂದಾಗ ಈ ಧೂಮಕೇತು ಮತ್ತಷ್ಟು ಪ್ರಕರವಾಗಿ ಕಾಣಲಿದೆ. ಫೆ.10ರಂದು ಈ ಧೂಮಕೇತು ಮಂಗಳನ ಸಮೀಪ ಕಾಣಿಸಿಕೊಳ್ಳಲಿದೆ ಎಂದು ಝಿಕಿ ಟ್ರಾನ್ಸಿಯಂಟ್ ಫೆಸಿಲಿಟಿ ವಿಜ್ಞಾನಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.