Contest Election; 18ಕ್ಕೆ ಇಳಿಕೆ; ಯುವಶಕ್ತಿಗೆ ಬಾಗಿಲು ತೆರೆಯಿರಿ


Team Udayavani, Aug 8, 2023, 6:05 AM IST

Contest Election; 18ಕ್ಕೆ ಇಳಿಕೆ; ಯುವಶಕ್ತಿಗೆ ಬಾಗಿಲು ತೆರೆಯಿರಿ

ದೇಶದಲ್ಲಿ ಚುನಾವಣೆಗೆ ಸ್ಪರ್ಧಿಸುವವರ ವಯೋಮಿತಿಯನ್ನು 25ರಿಂದ 18ಕ್ಕೆ ಇಳಿಸ ಬೇಕೆಂದು ಈಚೆಗೆ ಸಂಸದೀಯ ಸಮಿತಿಯೊಂದು ಶಿಫಾರಸು ಮಾಡಿದೆ. ಇದರ ಸಾಧಕ-ಬಾಧಕಗಳೇನು? ಈ ಬಗ್ಗೆ ಚಾವಡಿಯಲ್ಲೊಂದು ಚರ್ಚೆ.

ಭಾರತ ಯುವ ಸಮೂಹದ ದೇಶ. ನಮ್ಮಲ್ಲಿ ಜನಸಂಖ್ಯೆಯ ಸರಾ ಸರಿ ವಯಸ್ಸು 30ಕ್ಕಿಂತ ಕಡಿಮೆ. ಭಾರತವನ್ನು ಇಂದು ಆರ್ಥಿಕ ದೈತ್ಯ ಶಕ್ತಿಯಾಗುವತ್ತ ಮುನ್ನಡೆಸುತ್ತಿರು ವುದರಲ್ಲಿ ಯುವ ಸಮೂಹದ ಪಾತ್ರ ಬಹು ದೊಡ್ಡದು. ಆದರೆ ನಮ್ಮ ಲೋಕಸಭೆ/ವಿಧಾನಸಭೆ ಪ್ರತಿನಿಧಿಗಳ ಸರಾಸರಿ ವಯಸ್ಸು 55 ಮೀರಿದೆ. 40ಕ್ಕೂ ಕಡಿಮೆ ವಯೋಮಾನದ ಸಂಸದರು/ಶಾಸಕರು ಶೇ. 12 ಮಾತ್ರ.

ಇಂತಹ ಪರಿಸ್ಥಿತಿಯಲ್ಲಿ ಚುನಾ ವಣೆಗೆ ಸ್ಪರ್ಧಿಸುವ ವಯಸ್ಸಿನ ಮಿತಿ ಯನ್ನು 25ರಿಂದ 18ಕ್ಕೆ ಇಳಿಸುವಂತೆ ಸಂಸದೀಯ ಮಂಡಳಿ ಚುನಾವಣ ಆಯೋಗಕ್ಕೆ ಶಿಫಾರಸು ಮಾಡಿರುವುದು ಸ್ವಾಗತಾರ್ಹ. ಕೆನಡಾ, ಯುಕೆ, ಆಸ್ಟ್ರೇಲಿಯಾದಲ್ಲಿನ ಚುನಾವಣೆಯಲ್ಲಿ ಸ್ಪರ್ಧಿಸುವ ಕನಿಷ್ಠ ಮಿತಿಯನ್ನು ಗಮನಿಸಿ ಈ ಶಿಫಾರಸನ್ನು ಸಮಿತಿ ಮಾಡಿದೆ. ಆದರೆ 18ರ ವಯೋಮಾನದಲ್ಲಿ ಅಗತ್ಯ ಪ್ರಬುದ್ಧತೆ ಇರುತ್ತದೆ ಎಂದು ಹೇಳಲಾಗುವುದಿಲ್ಲ ಎನ್ನುವ ಮೂಲಕ ಚುನಾವಣ ಆಯೋಗ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಆಯೋಗದ ಆತಂಕ ಮೇಲ್ನೋಟಕ್ಕೆ ತರ್ಕಬದ್ಧ. ಆದರೆ ವಯೋಮಾನ ಇಳಿಕೆಯಾದ ಮಾತ್ರಕ್ಕೆ ನಾಳೆ ದೇಶವೇ ಅಪ್ರ ಬುದ್ಧರ ಕೈಗೆ ಸಿಕ್ಕಿಬಿಡುವುದಿಲ್ಲ. ಏಕೆಂದರೆ ನಾಯಕನ ಆಯ್ಕೆ 2 ಹಂತಗಳಲ್ಲಿ ಜರಗುತ್ತದೆ.

ಮೊದಲನೆಯದಾಗಿ ಆ ವ್ಯಕ್ತಿಯ ಸಾಮರ್ಥ್ಯವನ್ನು ಅಳೆದು- ತೂಗಿ ಒಂದು ರಾಜಕೀಯ ಪಕ್ಷ ತನ್ನ ಅಭ್ಯರ್ಥಿ ಆಯ್ಕೆ ಮಾಡುತ್ತದೆ. ಇಷ್ಟಾದ ಮೇಲೆಯೂ ಆತ ಅಥವಾ ಆಕೆ ಪ್ರಬುದ್ಧ ಮತದಾರರಿಂದಲೇ ಆಯ್ಕೆ ಯಾಗುತ್ತಾನೆ. ಹಾಗಾಗಿ ವಯೋಮಾನ ಇಳಿಕೆ ಮಾತ್ರದಿಂದ ಅಪ್ರಬುದ್ಧರ ಆಯ್ಕೆ ಕಷ್ಟಸಾಧ್ಯವಾದ ಕಾರಣ ಆಯೋಗ ಆತಂಕ ಪಡುವ ಅಗತ್ಯವಿಲ್ಲ. ವಾಸ್ತವದಲ್ಲಿ ಇದರಿಂದ ಸಾಕಷ್ಟು ಯುವಕ-ಯುವತಿಯರಿಗೆ ಸಾಮಾಜಿಕ ಕಾರ್ಯ ಗಳು ಹಾಗೂ ರಾಜಕಾರಣ, ಆಡಳಿತ ವ್ಯವಸ್ಥೆಯ ಭಾಗ ವಾಗಲು ಸಾಧ್ಯವಾಗುತ್ತದೆ. ನಮ್ಮಲ್ಲಿ 90ರ ದಶಕದ ಮೊದಲು ವಿದ್ಯಾರ್ಥಿ ಚಳವಳಿಗಳು ಸಕ್ರಿಯವಾಗಿದ್ದು, ಹಲವು ನಾಯಕರನ್ನು ಹುಟ್ಟಿ ಹಾಕಿತ್ತು. ಆದರೆ ಭಾರತದಲ್ಲಿ ಉದ್ಯೋಗಾವಕಾಶ ಹೆಚ್ಚಾದಂತೆಲ್ಲ ವಿದ್ಯಾರ್ಥಿ ಸಮೂಹಕ್ಕೆ ಚಳವಳಿಗಳ ಅಗತ್ಯ ಕಡಿಮೆಯಾಯಿತು. ಹಾಗೆಂದು ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿಯಿಲ್ಲ ಎಂದಲ್ಲ.

ರಾಜಕೀಯ ಪಕ್ಷಗಳಿಗೂ ಯುವ ಕಾರ್ಯಕರ್ತರೇ ಶಕ್ತಿ. ಯುವಕ-ಯುವತಿಯರು ರಾಜ ಕಾರಣಕ್ಕೆ ಬರಬೇಕು, ಆಡಳಿತ ಚುಕ್ಕಾಣಿ ಹಿಡಿಯಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಇರುವಾಗ ಅದಕ್ಕೆ ಪೂರಕವಾಗಿ ಸ್ಪಂದಿಸುವ ಅವಕಾಶವೂ ರಾಜಕೀಯ ಪಕ್ಷಗಳಿಗೆ ಸಿಗುತ್ತದೆ. ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡುವ ಸದಾವಕಾಶ ಪಕ್ಷಗಳಿಗೆ ಒದಗಲಿದೆ. ಅಲ್ಲದೆ ಯುವಕ-ಯುವತಿಯರು ಸಣ್ಣ ವಯಸ್ಸಿನಲ್ಲೇ ರಾಜಕಾರಣ ಅಖಾಡಕ್ಕೆ ಇಳಿದಾಗ ಪ್ರಬುದ್ಧರ ಜತೆ ಒಡನಾಡಲು ಅವಕಾಶ ಸಿಗುತ್ತದೆ. ಅಮೆರಿಕ ದಲ್ಲಿ ಬರಾಕ್‌ ಒಬಾಮಾ ಅಧ್ಯಕ್ಷರಾದಾಗ ಅವರಿಗಿನ್ನೂ 47. ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡ್ನೂ ಆ ಹುದ್ದೆಗೇರಿದಾಗ ಅವರಿಗೆ 44. ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್‌ ಅವರಿಗೆ 43. ಆಡಳಿತಕ್ಕೆ ಬೇಕಾದ ಅನುಭವವನ್ನು ಆ ವಯಸ್ಸಿಗೇ ಗಳಿ ಸಲು ಆ ನೆಲದ ಕಾನೂನು ಅವರಿಗೆ ಅವಕಾಶ ಒದಗಿಸಿತು.

ರಾಜಕಾರಣದ ಬಾಗಿಲು 18ಕ್ಕೆ ತೆರೆದರೆ ಆತ ಅಥವಾ ಆಕೆಗೆ 36 ಆಗುವಷ್ಟರಲ್ಲೇ 18 ವರ್ಷಗಳಷ್ಟು ಅನುಭವವೇ ಇರುತ್ತದೆ. ಹಾಗಾಗಿ ಚುನಾವಣೆಗಳಲ್ಲಿ ಸ್ಪರ್ಧೆಗೆ ಇರುವ ಕನಿಷ್ಠ ವಯಸ್ಸಿನ ಮಿತಿಯನ್ನು ಇಳಿಸುವುದು ಅರ್ಥಪೂರ್ಣ ಮತ್ತು ಲಾಭದಾಯಕ.

-ವಿಕಾಸ್‌ ಕುಮಾರ್‌ ಪುತ್ತೂರು , ಬೆಂಗಳೂರು

ಟಾಪ್ ನ್ಯೂಸ್

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.