Governance: ಪ್ರಾದೇಶಿಕ ಸಮಾನತೆಗಿರಲಿ ಆಡಳಿತದ ಆದ್ಯತೆ
Team Udayavani, Aug 17, 2023, 5:54 AM IST
ಅಭಿವೃದ್ಧಿ ಪ್ರಕ್ರಿಯೆ ಎಂಬುದು ಉತ್ತಮ ಬದುಕಿಗೆ ಮತ್ತು ಜನರ ಕಾರ್ಯನಿರ್ವಹಣೆಗೆ ಇರುವ ಭೌತಿಕ ಸೌಕರ್ಯಗಳನ್ನು ಹಾಗೂ ಉತ್ಪಾದಕತೆ ಯನ್ನು ಹೆಚ್ಚಿಸಿಕೊಳ್ಳಲು ಹೊಸ ಕೌಶಲಗಳನ್ನು ಪಡೆದುಕೊಂಡು ಆದಾಯದ ಹೆಚ್ಚಳ ಸಾಧಿ ಸುವುದಾಗಿದೆ. ಈ ಪ್ರಕ್ರಿಯೆಯಲ್ಲಿ ಸಮಾಜದ ಎಲ್ಲ ಸ್ತರದ ಹಾಗೂ ಪ್ರದೇಶದ ಜನರು ಭಾಗಿಗಳಾಗಿ ಲಾಭ ಪಡೆಯುವಂತಾದಾಗ ಮಾತ್ರ ಅಭಿವೃದ್ಧಿ ಒಂದು ಅರ್ಥಪೂರ್ಣ ಪ್ರಕ್ರಿಯೆಯಾಗುತ್ತದೆ. ಬಡತನ ನಿರ್ಮೂಲನೆ ಮಾಡಿ, ತಲಾ ಆದಾಯ ಹೆಚ್ಚಿಸುವುದರೊಂದಿಗೆ ಪ್ರಾದೇಶಿಕ ಸಮಾನತೆ ಯನ್ನು ಸಾಧಿಸುವತ್ತ ಗಮನ ಹರಿಸಬೇಕಾಗಿದೆ.
ಕಳೆದ 15 ವರ್ಷಗಳ ಅವಧಿಯಲ್ಲಿ (2005- 2019) ಭಾರತದಲ್ಲಿ ಒಟ್ಟು 41.5ಕೋಟಿ ಜನರು ಕಡು ಬಡತನದಿಂದ ಹೊರ ಬಂದಿದ್ದಾರೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ಶ್ಲಾ ಸಿದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಇತ್ತೀಚೆಗೆ ಬಿಡುಗಡೆ ಮಾಡಿರುವ ಜಾಗತಿಕ ಬಹುಆಯಾಮ ಬಡತನ ಸೂಚ್ಯಂಕ ದಲ್ಲಿ ಬಹು ಆಯಾಮಗಳ ಬಡತನದಿಂದ (ಮನೆ, ವಿದ್ಯುತ್, ಶಿಕ್ಷಣ, ನೈರ್ಮಲ್ಯ, ಪೌಷ್ಟಿಕ ಆಹಾರ ಇತ್ಯಾದಿಗಳಿಂದ ವಂಚಿತ) ಹೊರಬಂದವರ ಮಾಹಿತಿ ಪ್ರಕಟಗೊಂಡಿದೆ.
ವಿಶ್ವದ ಅತ್ಯಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಭಾರತದ ಸಾಧನೆ ಗಮನಾರ್ಹ. ಭಾರತ ಸಹಿತ 25 ದೇಶಗಳು ಬಡತನ ಸೂಚ್ಯಂಕ ಮೌಲ್ಯಗಳನ್ನು ಯಶಸ್ವಿಯಾಗಿ ಅರ್ಧಕ್ಕೆ ಇಳಿಸಿವೆ.
ಭಾರತದಲ್ಲಿ 2015-16 ಮತ್ತು 2019-21ರ ನಡುವೆ ಗಣನೀಯ ಸಂಖ್ಯೆಯ ಜನರು ಬಹು ಆಯಾಮದ ಬಡತನದಿಂದ ಹೊರಬಂದಿ¨ªಾರೆ ಎಂದು ಇತ್ತೀಚೆಗೆ ನೀತಿ (Nಐಖಐ) ಆಯೋಗವು ಬಿಡುಗಡೆ ಮಾಡಿದ ರಾಷ್ಟ್ರೀಯ ಬಹು ಆಯಾಮದ ಬಡತನ ಸೂಚ್ಯಂಕ: ಪ್ರಗತಿ ಪರಿಶೀಲನೆ 2023 ವರದಿಯು ತಿಳಿಸುತ್ತದೆ. ಈ ಅವಧಿಯಲ್ಲಿ ಭಾರತದ Mಕಐ ಮೌಲ್ಯವು ಸುಮಾರು 0.117ರಿಂದ 0.066ಕ್ಕೆ ಅರ್ಧದಷ್ಟು ಕಡಿಮೆಯಾಗಿದೆ ಹಾಗೂ ಸುಮಾರು 13.5 ಕೋಟಿ ಜನರು ಬಹು ಆಯಾಮದ ಬಡತನದಿಂದ ಪಾರಾಗಿ¨ªಾರೆ. ಬಹು ಆಯಾಮದ ಬಡತನದಲ್ಲಿ ವಾಸಿಸುವ ಭಾರತದ ಜನಸಂಖ್ಯೆಯು 2015-16 ರಲ್ಲಿ ಶೇ.24.85 ರಿಂದ 2019-21ರಲ್ಲಿ ಶೇ.14.96 ಕ್ಕೆ ಕಡಿಮೆಯಾಗಿದೆ, ಇದು ಶೇ.9.89 ಅಂಕಗಳ ಕುಸಿತವನ್ನು ಪ್ರತಿಬಿಂಬಿಸುತ್ತದೆ. ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ ಬಡತನದ ಪ್ರಮಾಣವು ಶೇ.12.77ರಿಂದ ಶೇ.7.58ಕ್ಕೆ ಕಡಿಮೆಯಾಗಿರು ವುದು ಸ್ವಾಗತಾರ್ಹ.
ಗ್ರಾಮೀಣ ಬಡತನ ಪ್ರಮಾಣ ಇಳಿಕೆ
2015-16 ಮತ್ತು 2019-21ರ ನಡುವೆ ಬಡತನದ ದರವು ಶೇ. 32.59 ರಿಂದ ಶೇ.19.28ಕ್ಕೆ (ಶೇ. 41) ಇಳಿಯುವುದರೊಂದಿಗೆ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಬಡತನದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ನಗರ ಪ್ರದೇಶ ಗಳಲ್ಲಿ, ಅದೇ ಅವಧಿಯಲ್ಲಿ ಬಡತನದ ಪ್ರಮಾಣವು ಶೇ.8.65ರಿಂದ ಶೇ. 5.27 ಕ್ಕೆ (ಶೇ.39) ಕಡಿಮೆಯಾಗಿದೆ. ಇದೇ ಪ್ರವೃತ್ತಿಯನ್ನು ಕರ್ನಾ ಟಕದಲ್ಲೂ ಗಮನಿಸಬಹುದು. ಗ್ರಾಮೀಣ ಭಾಗದಲ್ಲಿ ಬಡತನವು ಶೇ. 18.45 ರಿಂದ ಶೇ. 10.33 ಕ್ಕೆ (ಶೇ.44) ಕುಸಿದರೆ, ನಗರ ಪ್ರದೇಶದಲ್ಲಿ ಶೇ. 4.92ರಿಂದ ಶೇ. 3.22 ಕ್ಕೆ (ಶೇ.34)ಇಳಿದಿದೆ. ರಾಜ್ಯದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶದಲ್ಲೇ ಬಡವರ ಸಂಖ್ಯೆ ಹೆಚ್ಚಿದೆ.
ಜಗತ್ತಿನ ಐದನೇ ಅತೀ ದೊಡ್ಡ ಆರ್ಥಿಕತೆಯಾಗಿ ಭಾರತ
ಒಟ್ಟಾರೆ ಉತ್ಪಾದನೆಯ ಮಟ್ಟದಲ್ಲಿ ಭಾರತವು ಈಗ ವಿಶ್ವದ ಐದನೇ ಅತೀದೊಡ್ಡ ಆರ್ಥಿಕತೆ ಯಾಗಿದೆ. 2029ರ ಒಳಗೆ ಭಾರತವು ಜಗತ್ತಿನ ಮೂರನೇ ಅತೀ ದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಲಿದೆ. ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಭಾರತದ ಆರ್ಥಿಕತೆಗೆ ಇದೊಂದು ಮಹತ್ವದ ಮೈಲುಗಲ್ಲು.
ತಲಾ ಆದಾಯದಲ್ಲಿ 142 ನೇ ಸ್ಥಾನ!
ತಲಾ ಆದಾಯದ ವಿಷಯದಲ್ಲಿ ಅಂತಾ ರಾಷ್ಟ್ರೀಯ ಹಣಕಾಸು ನಿಧಿಯ ಪ್ರಕಾರ ಭಾರತದ ಶ್ರೇಣಿಯು 197 ದೇಶಗಳ ಪಟ್ಟಿಯಲ್ಲಿ 142 ಆಗಿದೆ. ಇನ್ನು ಭಾರತ ಜಿಡಿಪಿಯಲ್ಲಿ ಐದನೇ ಸ್ಥಾನ ಪಡೆದಿರುವುದು ಮಹತ್ಸಾಧನೆಯೆ. ಆದರೆ ತಲಾ ಆದಾಯದಲ್ಲಿ ಹಾಗೂ ಪ್ರಾದೇಶಿಕ ಸಮಾನತೆ ಸಾಧಿಸುವಲ್ಲಿ ಇನ್ನೂ ಹೆಚ್ಚಿನ ಪ್ರಯತ್ನಗ ಳಾಗಬೇಕು.
ಕರ್ನಾಟಕದ ಸಾಧನೆ
ನೀತಿ ಆಯೋಗದ ವರದಿ ಪ್ರಕಾರ 2020-21 ರಲ್ಲಿ ಕರ್ನಾಟಕ ಸುಸ್ಥಿರ ಅಭಿವೃದ್ಧಿ ಮಾನ ದಂಡದಲ್ಲಿ 72 ಅಂಕಗಳಿಸಿ, ದೇಶದಲ್ಲಿ ಮೂರನೇ ಸ್ಥಾನ ದಲ್ಲಿದೆ. ಕೇರಳ 75 ಅಂಕಗಳಿಸಿ ಮೊದಲ ಸ್ಥಾನದಲ್ಲಿ ದ್ದರೆ, ಹಿಮಾಚಲ ಪ್ರದೇಶ ಹಾಗೂ ತಮಿಳುನಾಡು 74 ಅಂಕಗಳಿಸಿ ದ್ವಿತೀಯ ಸ್ಥಾನದಲ್ಲಿದೆ. ನಮ್ಮ ರಾಜ್ಯವು ಉನ್ನತ ಶ್ರೇಣಿಯನ್ನು ಪಡೆಯಲು ಬಡತನ ನಿರ್ಮೂಲನೆ, ಹಸಿವುಮುಕ್ತ, ಉತ್ತಮ ಆರೋಗ್ಯ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ ಗುರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.
ಜಿಲ್ಲೆಗಳ ನಡುವಿನ ಆದಾಯದ ಅಂತರ ಹೆಚ್ಚಳ
ಇತ್ತೀಚೆಗೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಬಿಡುಗಡೆ ಮಾಡಿರುವ ವರದಿ ಪ್ರಕಾರ 2021-22ನೇ ಸಾಲಿನಲ್ಲಿ ರಾಜ್ಯದ ನಿವ್ವಳ ತಲಾ ಆದಾಯವು ರೂ. 2,65,623 ಆಗಿದ್ದು ಇದು 2023-24 ನೇ ಸಾಲಿನಲ್ಲಿ ಶೇ. 13.6 ರಷ್ಟು ಹೆಚ್ಚಳ ದೊಂದಿಗೆ ರೂ.3,01,673 ಗಳಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದ ತಲಾ ಆದಾಯವು ರಾಷ್ಟ್ರೀಯ ತಲಾ ಆದಾಯಕ್ಕಿಂತ ಹೆಚ್ಚಿದೆ. ತಲಾ ಆದಾಯದಲ್ಲಿ ಕರ್ನಾಟಕವು ದಿಲ್ಲಿ, ತೆಲಂಗಾಣ ಮತ್ತು ಹರಿಯಾಣದ ಅನಂತರ ನಾಲ್ಕನೇ ಸ್ಥಾನದಲ್ಲಿದೆ.
ಬೆಂಗಳೂರು ನಗರ ರೂ. 6,21,131 ತಲಾ ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ (ರೂ. 4,43,057) ಹಾಗೂ ಉಡುಪಿ (ರೂ.3,70,834)ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿದೆ. ಕೊನೆಯ ಐದು ಸ್ಥಾನಗಳಲ್ಲಿ ಯಾದಗಿರಿ (ರೂ.1,39.838), ಕೊಪ್ಪಳ (ರೂ.1,39,838), ಬೆಳಗಾವಿ(ರೂ.1,37,644) ಬೀದರ್(ರೂ.1,33,935) ಹಾಗೂ ಕಲಬುರಗಿ (ರೂ.1,24,998) ಜಿಲ್ಲೆಗಳಿವೆ. ನಮ್ಮ ರಾಜ್ಯದ ಅರ್ಧದಷ್ಟು ಜಿಲ್ಲೆಗಳಲ್ಲಿ ಬೆಂಗಳೂರಿನ ತಲಾ ಆದಾಯದ ಶೇ.25 ರಷ್ಟನ್ನೂ ಹೊಂದಿಲ್ಲದಿರು ವುದು ಆಘಾತಕಾರಿ ಅಂಶ.
ಬೆಳೆಯುತ್ತಿರುವ ಅಂತರ್‌ಜಿಲ್ಲೆ ಅಸಮಾನ ತೆಯು ರಾಜ್ಯದ ಆರ್ಥಿಕ ಅಭಿವೃದ್ದಿಯ ಪ್ರಕ್ರಿ ಯೆಯಲ್ಲಿ ವಿಶಾಲ ಅಂತರ-ಪ್ರಾದೇಶಿಕ ಅಸಮಾ ನತೆಯ ಮೂಲವಾಗಿದೆ. ಉತ್ತರ ಕರ್ನಾಟಕ ಪ್ರದೇಶದ ಬೆಳಗಾವಿ ಮತ್ತು ಬೀದರ್ ವಿಭಾಗದ ತಲಾ ಆದಾಯವು ಬೆಂಗಳೂರು ವಿಭಾಗದ ಅರ್ಧಕ್ಕಿಂತ ಕಡಿಮ ಇರುವುದು ಆಘಾತಕಾರಿ ಅಂಶ. ಕಲಬುರಗಿ ವಿಭಾಗದಲ್ಲಿ ಬರುವ ಜಿಲ್ಲೆಗಳ ತಲಾ ಆದಾಯವು ಕೊನೆಯ ಸ್ಥಾನದಲ್ಲಿದೆ ಮತ್ತು ಇಲ್ಲಿ ಬಡವರ ಪ್ರಮಾಣವೂ ಜಾಸ್ತಿ ಇದೆ. ಅನಂತರದ ಸ್ಥಾನದಲ್ಲಿ ಕ್ರಮವಾಗಿ ಬೆಳಗಾವಿ ಮತ್ತು ಮೈಸೂರು ವಿಭಾಗಗಳಿವೆ. ತಲಾ ಆದಾಯದಲ್ಲಿ ಕೆಳಮಟ್ಟದಲ್ಲಿರುವ ವಿಭಾಗಗಳಲ್ಲಿ ಕೈಗಾರಿಕೆ ಮತ್ತು ಸೇವಾ ವಲಯದ ಉದ್ಯಮಗಳು ಕಡಿಮೆ ಇರುವುದು ಮುಖ್ಯ ಕಾರಣವಾಗಿದೆ.
ಅಭಿವೃದ್ಧಿ ಮತ್ತು ಸಮಾನತೆ
ಜಿಡಿಪಿ ಹಾಗೂ ತಲಾ ಆದಾಯಗಳ ಲೆಕ್ಕಾಚಾರ ಗಳು ಅಭಿವೃದ್ಧಿಯ ಪ್ರಕ್ರಿಯೆಯ ಮಾರ್ಗದರ್ಶಿ ಯಂತೂ ಸತ್ಯ. ಈಗಿನ ಅರ್ಥವ್ಯವಸ್ಥೆಯಲ್ಲಿ ಈ ತನಕ ಬೆಳವಣಿಗೆ ಪ್ರಕ್ರಿಯೆಯ ಲಾಭದಿಂದ ವಂಚಿತರಾದ ಕುಟುಂಬಗಳಿಗೆ ಈ ಲಾಭವನ್ನು ತಲುಪಿಸುವುದನ್ನು ಒಳಗೊಳ್ಳುವ ಅಭಿವೃದ್ಧಿ ನೀತಿ ಯೆಂದು ಪರಿಗಣಿಸಬೇಕು. ಆರ್ಥಿಕ ಅಭಿವೃದ್ಧಿ ಯಲ್ಲಿ ಸಮಾನತೆಯನ್ನು ಸಾಧಿಸದ ಹೊರತು ಒಳಗೊಳ್ಳುವ ಸುಸ್ಥಿರ ಅಭಿವೃದ್ಧಿಯಂತೂ ಕಷ್ಟ ಸಾಧ್ಯ. ಅತೀ ದೊಡ್ಡ ಆರ್ಥಿಕತೆಯತ್ತ ಹೆಜ್ಜೆ ಯಿಡುವುದರೊಂದಿಗೆ ಪ್ರಾದೇಶಿಕ ಸಮಾನತೆ ಯನ್ನು ಸಾಧಿಸುವತ್ತ ನಮ್ಮ ಚಿತ್ತ ಇರಲಿ.
ವರ್ಷಗಳುರುಳಿದಂತೆಯೇ
ಭಾರತ ಅಭಿವೃದ್ಧಿ ಪ್ರಕ್ರಿ ಯೆಯಲ್ಲಿ ದಾಪುಗಾಲಿಡುತ್ತಿರುವುದು ಸಂತಸದ ಸಂಗತಿ. ಸದ್ಯ ಜಗತ್ತಿನ ಐದನೇ ಅತೀದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ದೇಶದಲ್ಲಿ ಬಡತನ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿರುವುದು ಕೂಡ ಆಶಾದಾಯಕ ಬೆಳವಣಿಗೆ. ಕರ್ನಾಟಕವೂ ಇದೇ ಹಾದಿಯಲ್ಲಿ ಸಾಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇನ್ನೂ ಬಡವರ ಸಂಖ್ಯೆ ಅಧಿಕವಾಗಿದ್ದು ಅಭಿವೃದ್ಧಿ ಮತ್ತು ತಲಾ ಆದಾಯದಲ್ಲಿ ಈ ಭಾಗಗಳು ನಗರ ಪ್ರದೇಶಗಳಿಗೆ ಹೋಲಿಸಿದರೆ ಭಾರೀ ಹಿಂದಿವೆ. ಪ್ರಾದೇಶಿಕ ಸಮಾನತೆ ಸಾಧಿಸದಿದ್ದಲ್ಲಿ ಅಭಿವೃದ್ಧಿ ಪರಿಪೂರ್ಣವಾಗಲಾರದು.
ಡಾ| ಎ. ಜಯ ಕುಮಾರ ಶೆಟ್ಟಿ, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.