ಸಮಾಜಮುಖಿ ಸ್ವಾಮೀಜಿಯ ನೆನಪಲ್ಲಿ..
Team Udayavani, Mar 1, 2018, 2:45 AM IST
ಇವರ ಕಾಲದಲ್ಲೇ ಆರಂಭವಾಗಿವೆ. ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳ ಜೊತೆಗೆ ಪ್ರಾಥಮಿಕ, ಪ್ರೌಢ, ಪದವಿ ಕಾಲೇಜುಗಳನ್ನೂ ಆರಂಭಿಸಿದವರು. ಆಸ್ಪತ್ರೆಯನ್ನೂ ಆರಂಭಿಸಿ ಜನರ ನೋವಿಗೆ ಸ್ಪಂದಿಸಿದರು. ವೇದ ಪಾಠ ಶಾಲೆಗಳು, ಗುರುಕುಲಗಳು, ವೃದ್ಧಾಶ್ರಮಗಳು, ದೇವಸ್ಥಾನಗಳು ಆರಂಭವಾದವು. ಇವರ ಸಮಾಜಮುಖಿ ಕೊಡುಗೆ ಅನನ್ಯ.
ಕಂಚಿ ಮಠದ ಶ್ರೀಜಯೇಂದ್ರ ಸರಸ್ವತಿ ಸ್ವಾಮೀಜಿ ಅವರ ಸರಳತೆ ನಮಗೆ ಅತ್ಯಂತ ಇಷ್ಟವಾದ ಸಂಗತಿ. ಬರೀ ನೆಲದ ಮೇಲೆ ಚಾಪೆ ಹಾಕಿಕೊಂಡೂ ಕುಳಿತುಕೊಳ್ಳುವ, ಎಲ್ಲರನ್ನೂ ಪ್ರೀತಿ- ವಿಶ್ವಾಸದಿಂದ ಯಾವುದೇ ಬೇಧಭಾವ ಇಲ್ಲದೇ ಮಾತನಾಡಿಸುತ್ತಿ ದ್ದವರು. ಶ್ರೀ ಶಂಕರಾಚಾರ್ಯರ ಪೀಠ ಉಳಿಯಬೇಕು, ಇದು ಕೊನೆಯಾಗಬಾರದು ಎಂಬ ಕಾಳಜಿ, ಕಳಕಳಿ ಹೊಂದಿದ್ದವರು.
ಶ್ರೀ ಶಂಕರರ ಪರಂಪರೆಯ ಮಠ ಯಾವುದೇ ಕಷ್ಟದಲ್ಲಿ ಇರಲಿ, ಸ್ವತಃ ಶ್ರೀ ಜಯೇಂದ್ರ ಸರಸ್ವತಿ ಶ್ರೀಗಳೇ ತೆರಳಿ ಸ್ಪಂದಿಸುತ್ತಿದ್ದರು. ಆರ್ಥಿಕ, ಧಾರ್ಮಿಕ, ಪೀಠಕ್ಕೆ ಗುರುವಿನ ಅಗತ್ಯ ಇದ್ದಾಗಲೂ ಅವರು ಮುಂದೆ ನಿಂತು ನೆರವಾಗುತ್ತಿದ್ದರು. ಅವರ ಸರಳತೆ, ಬದ್ಧತೆ ಯಾವತ್ತೂ ನಮ್ಮನ್ನು ಎಚ್ಚರಿಸುವ ಗುಣಗಳು. ಶ್ರೀಜಯೇಂದ್ರ ಸರಸ್ವತಿ ಸ್ವಾಮೀಜಿಗಳು ಎಂದರೆ ಅವರ ಇಂತಹ ಕಾರ್ಯಕ್ಕೇ ನಮಗೆ ಅತ್ಯಂತ ಪ್ರೀತಿ. ಪರಮಾಚಾರ್ಯರ ಆಪ್ತ ಬಳಕೆ ಇರದ ನಮಗೆ ಅವರಲ್ಲಿ ಪರಮಾಚಾರ್ಯರರನ್ನು ಕಾಣುತ್ತಿದ್ದೆವು. ಇಂದು ಅವರಿಲ್ಲ ಎಂಬುದೇ ನಮಗೆ ನೋವಿನ ಸಂಗತಿ.
ನಮಗೆ ನೆನಪಿದ್ದಂತೆ ಅವರು ಪೀಠಕ್ಕೆ ಬಂದಿದ್ದು 1954ರಲ್ಲಿ. ಅವರು ಈಗಾಗಲೇ 63 ಚಾತುರ್ಮಾಸ್ಯ ನಡೆಸಿದ್ದರು. ಪೀಠಾ ರೋಹಣ ಗೊಂಡ ಬಳಿಕ ನಾಲ್ಕು ದಶಕಗಳ ಕಾಲ ಇಡೀ ಭಾರತ ದಲ್ಲಿ ಶಂಕರಾಚಾರ್ಯರು ಎಂದರೆ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿಗಳೇ ಆಗಿದ್ದರು. ಶ್ರೀ ಶಂಕರರು ಎಂದರೆ ಕಂಚಿ ಶ್ರೀಗಳು ಎಂದಾದರು. ಅಷ್ಟು ವ್ಯಾಪಕವಾಗಿ ಬೆಳೆದಿದ್ದರು. ಅವರು ತಮ್ಮ ಮಠವನ್ನು ಹಿಂದುಸ್ಥಾನದ ನಂಬರ್ 1 ಮಠ ಮಾಡಿದರು.
ಅಷ್ಟು ಎತ್ತರಕ್ಕೆ ಬೆಳೆಯಲು ಹಿಂದಿನ ಪರಮಾಚಾರ್ಯರಾದ ಶ್ರೀ ಚಂದ್ರಶೇಖರೇಂದ್ರ ಸ್ವಾಮೀಜಿಗಳೂ ಕಾರಣರಾಗಿದ್ದರು. ಅವರು ಇಡೀ ಹಿಂದುಸ್ಥಾನವನ್ನು ಕಾಲ್ನಡಿಗೆಯಿಂದ ಸಂಚರಿಸಿದ್ದೂ ಇದಕ್ಕೆ ಕಾರಣವಾಗಿತ್ತು. ಅಂತಹ ಯತಿ ಶ್ರೇಷ್ಠರ ಸಂಕಲ್ಪವನ್ನು ನೆರೆವೇರಿಸುತ್ತ ಬಂದರು ಜಯೇಂದ್ರ ಶ್ರೀಗಳು. ಎಷ್ಟರ ಮಟ್ಟಿಗೆ ಅಂದರೆ ರಾಮಕೃಷ್ಣರ ಸಂದೇಶವನ್ನು ವಿವೇಕಾನಂದರು ಎತ್ತರಿಸಿ ದಂತೆ ಪರಮಾಚಾರ್ಯರರ ಕನಸನ್ನು ಶ್ರೀ ಜಯೇಂದ್ರರು ಈಡೇರಿಸಿದರು. ಅದು ಹೀಗೇ ಪ್ರಸಿದ್ಧಿಯೂ ಪಡೆದಿತ್ತು.
ಪರಮಾಚಾರ್ಯರ ಕ್ರಿಯಾ ಶಕ್ತಿಯಾದ ಜಯೇಂದ್ರ ಸರಸ್ವತೀ ಸ್ವಾಮೀಜಿಗಳು ಅನೇಕ ಸಮಾಜಮುಖೀ ಕಾರ್ಯವನ್ನೂ ಮಾಡಿ ದ್ದರು. ಜನ ಕಲ್ಯಾಣ ಎಂಬ ವಿಶಿಷ್ಟ ಯೋಜನೆಯನ್ನು ಇಡೀ ದೇಶಾದ್ಯಂತ ಅನುಷ್ಠಾನಕ್ಕೆ ತಂದಿದ್ದರು. ಈ ಯೋಜನೆ ಪ್ರಸಿದ್ಧವೂ ಆಗಿತ್ತು. ರಾಮಜನ್ಮ ಭೂಮಿ ಹೋರಾಟದಲ್ಲಿ ಶ್ರೀ ಜಯೇಂದ್ರರು ವಿವಾದಾತೀತ ನಾಯಕರಾಗಿದ್ದರು. ಅಂದಿನ ಕೇಂದ್ರ ಸರಕಾರದ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಹಾಗೂ ವಿಶ್ವ ಹಿಂದೂ ಪರಿಷತ್, ಆರ್‌ಎಸ್‌ಎಸ್, ರಾಮಜನ್ಮಭೂಮಿ ನ್ಯಾಸ ಅವರೂ ಜಯೇಂದ್ರ ಶ್ರೀಗಳನ್ನು ಬೆಂಬಲಿಸಿದ್ದರು. ಅನೇಕ ಚರ್ಚೆ, ವಿವಾ ದಗಳು ಇವರ ಅಧ್ಯಕ್ಷತೆಯಲ್ಲೇ ಇತ್ಯರ್ಥವಾಗಿದ್ದವು. ಇಂದಿಗೂ ರಾಮಜನ್ಮ ಭೂಮಿಯ ನ್ಯಾಸ ಇವರಿಗೆ ಗೌರವ ಕೊಡುತ್ತದೆ.
ಜಯೇಂದ್ರ ಸರಸ್ವತಿ ಶ್ರೀಗಳು ಧಾರ್ಮಿಕ ಅನುಷ್ಠಾನದ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಕಾರ್ಯವನ್ನೂ ಮಾಡಿದವರು. ಇವರ ಕಾಲದಲ್ಲೇ ದೇಶದ ಎಲ್ಲ ರಾಜ್ಯದಲ್ಲೂ ಮಠದ ಶಾಖೆಗಳು ಪ್ರಾರಂಭ ವಾದವು. ಜಮ್ಮುವಿನಿಂದ ಕನ್ಯಾಕುಮಾರಿಯ ತನಕ ಅಸ್ಸಾಂನ ಗುವಾಹಟಿಯಿಂದ ಆಂಧ್ರ ಪ್ರದೇಶದ ತನಕ ಇವೆ. ಇನ್ನೂರಕ್ಕೂ ಅಧಿ ಕ ಶಿಕ್ಷಣ ಸಂಸ್ಥೆಗಳು ಇವರ ಕಾಲದಲ್ಲೇ ಆರಂಭವಾಗಿವೆ. ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳ ಜೊತೆಗೆ ಪ್ರಾಥಮಿಕ, ಪ್ರೌಢ, ಪದವಿ ಕಾಲೇಜುಗಳನ್ನೂ ಆರಂಭಿಸಿದವರು. ಆಸ್ಪತ್ರೆಯನ್ನೂ ಆರಂಭಿಸಿ ಜನರ ನೋವಿಗೆ ಸ್ಪಂದಿಸಿದರು. ವೇದ ಪಾಠ ಶಾಲೆಗಳು, ಗುರುಕುಲಗಳು, ವೃದ್ಧಾಶ್ರಮಗಳು, ದೇವಸ್ಥಾನಗಳು ಆರಂಭವಾದವು. ಇವರ ಸಮಾಜಮುಖೀ ಕೊಡುಗೆ ಅನನ್ಯ, ಅನುಪಮ.
ಜಯೇಂದ್ರ ಸ್ವಾಮೀಜಿಗಳು ನಮಗೆ ಯಾಕೆ ಇಷ್ಟ ಎಂಬುದಕ್ಕೆ ಪರಮಾಚಾರ್ಯರು ನೆನಪಾಗುತ್ತಾರೆ. ಪರಮಾಚಾರ್ಯರನ್ನು ಅಲ್ಲಿ ವಿದ್ಯಾರ್ಥಿಯಾಗಿದ್ದಾಗಿನಿಂದ ನೋಡಿದ್ದೆವು. ಅವರ ಬಗ್ಗೆ ಶ್ರದ್ಧೆ ಭಾವನೆ ಇತ್ತು. ಅವರೇ ನಮಗೆ ಕಾವಿ ನೀಡಿದ್ದರು. ಅವರಿಗೆ ಸನ್ಯಾಸ ದೀಕ್ಷೆ ನೀಡಲು ಬರಲಾಗಲಿಲ್ಲ ಎಂದು 1991ರಲ್ಲಿ ಜಯೇಂದ್ರ ಸರಸ್ವತಿ ಸ್ವಾಮೀಜಿಗಳನ್ನು ಕಳುಹಿಸಿಕೊಟ್ಟಿದ್ದರು. ಅವರು ದೀಕ್ಷೆ ನೀಡಲು ಮೂರು ದಿನಗಳ ಕಾಲ ಮಠದಲ್ಲಿ ವಾಸ್ತವ್ಯ ಮಾಡಿದ್ದರು. ನಮಗೆ ಅಂದು ಪೀಠದ ಪೂರ್ಣ ಮಾಹಿತಿ ಇರಲಿಲ್ಲ. ಕೊರಳಿನಲ್ಲಿ ರುದ್ರಾಕ್ಷಿ ಮಾಲೆಯೂ ಇರದ್ದನ್ನು ನೋಡಿ ತಮ್ಮ ಕೊರಳಿನಲ್ಲಿದ್ದ ಏಕಮೇವ ಸ್ಫಟಿಕದ ಹಾರ ಹಾಕಿದ್ದರು. ಶ್ರೀಜಯೇಂದ್ರರು ಅತ್ಯಂತ ಸರಳ ಶಕ್ತಿ. ಎಲ್ಲ ವರ್ಗದ ಜನರ ಜೊತೆ ಬೆರೆಯುತ್ತಿದ್ದರು. ಯಾರದೇ ಜೊತೆಗೆ ಎಷ್ಟೊತ್ತಿಗೂ ಮಾತಾಡು ತ್ತಿದ್ದರು. ಪ್ರೀತಿಯಿಂದ ಮಾತನಾಡಿಸುವುದು ಅವರ ವಿಶೇಷ ಗುಣವಾಗಿತ್ತು. ಇದೇ ಗುಣ ಪರಮಾಚಾರ್ಯರಲ್ಲೂ ಇತ್ತು.
ಯಾವುದೇ ಸಂದರ್ಭ ಇದ್ದರೂ ಒಂದೇ ಒಂದು ಪೈಸೆ ಹಣವನ್ನೂ ಅವರು ಮುಟ್ಟುತ್ತಿರಲಿಲ್ಲ. ನಿಷ್ಠೆಯನ್ನು ಗಟ್ಟಿಯಾಗಿ ಇಟ್ಟುಕೊಂಡಿದ್ದರು. ದೊಡ್ಡ ಮಠದ ಯತಿಗಳಾದರೂ ಅವರು ಉಳಿದ ಮಠಾಧಿಧೀಶರನ್ನೂ ಆತ್ಮೀಯವಾಗಿ ನೋಡುತ್ತಿ ದ್ದರು. ಶಂಕರರ ಪರಂಪರೆ ನಿಲ್ಲಬಾರದು ಎಂಬ ತುಡಿತ ಇತ್ತು. ಎಲ್ಲ ಮಠಗಳಿಗೂ ಮುಕ್ತ ಸಹಾಯ ಪ್ರವೃತ್ತಿ ಇತ್ತು. ಸ್ವರ್ಣವಲ್ಲಿ ಜೊತೆಗೂ ಆತ್ಮೀಯವಾಗಿ ಇದ್ದರು. ಕಂಚಿ ಆವಾರದಲ್ಲೇ ವರ್ಷ ಕ್ಕೊಮ್ಮೆ ಹೋದಾಗಲೆಲ್ಲ ಒಳಗೇ ಎಲ್ಲ ಸೌಲಭ್ಯ ಮಾಡುತ್ತಿದ್ದರು. ಅವರದ್ದು ಮಗುವಿನಂಥ ಮನಸ್ಸು. ಅವರ ವಿರುದ್ಧ ಅನೇಕ ಷಡ್ಯಂತ್ರ ಕೂಡ ನಡೆದಿತ್ತು. ನಾವು ಪುಣೆಯಲ್ಲಿದ್ದ ವೇಳೆ. ಅಲ್ಲೇ ಈ ಷಡ್ಯಂತ್ರದ ವಿರುದ್ಧ ಪ್ರತಿಭಟನೆ ಕೂಡ ಮಾಡಿದ್ದೆವು. ಜಯೇಂದ್ರ ಸರಸ್ವತಿ ಶ್ರೀಗಳು ಇನ್ನಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿ. ಸ್ವರ್ಣವಲ್ಲೀ ಮಠಕ್ಕೆ, ಭಗವದ್ಗೀತಾ ಅಭಿಯಾನಕ್ಕೆ, ದೇಶಾದ್ಯಂತ ನಡೆದ ಒಂದೇ ಮಾದರಿ ಪಂಚಾಂಗ ಕುರಿತು ತಿರುಪತಿಯಲ್ಲಿ ನಡೆದ ಸಮಾವೇಶಕ್ಕೆ ಆಹ್ವಾನಿಸಿದಾಗಲೂ ಪ್ರೀತಿಯಿಂದ ಬಂದಿದ್ದರು. ನಾವು ಕರೆದಾಗ ಇಲ್ಲ ಎನ್ನಲಿಲ್ಲ. ಆರೋಗ್ಯ ಸರಿ ಇಲ್ಲ, ವೈದ್ಯರು ಬೇಡ ಎಂದರೂ ಕಳೆದ ವರ್ಷ ನಡೆದ ಅತಿರುದ್ರ ಮಹಾಯಾಗ, ಪೀಠಾರೋಹಣ ರಜತ ಮಹೋತ್ಸವಕ್ಕೆ ಆಗಮಿಸಿದ್ದರು. ಅವರು ಸಮಾಜಮುಖೀಯಾಗಿ, ಆಧ್ಯಾತ್ಮಿಕವಾಗಿ ಮಾಡಿದ ಸಾಧನೆ ಸಣ್ಣದಲ್ಲ. ಅವರ ಸರಳತೆ ಎಲ್ಲರೂ ಅಳವಡಿಸಿಕೊಳ್ಳಬೇಕಾದ ಸಂಗತಿ. ಬದ್ಧತೆ ಹಾಗೂ ನಿಷ್ಠೆ ಮೇಲ್ಪಂಕ್ತಿ. ಅವರ ನೆನಪು ಮರೆಯಲಾಗದ್ದು.
ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಸ್ವರ್ಣವಲ್ಲೀ ಮಹಾ ಸಂಸ್ಥಾನ, ಶಿರಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.