ಮರುನಾಮಕರಣ ರಾಜಕಾರಣ! ಪ್ರಮುಖ ಸ್ಥಳಗಳು, ನಗರಗಳ ಹೆಸರು ಬದಲಾವಣೆ ಈಚೆಗಿನ ಟ್ರೆಂಡ್‌

ಮರುನಾಮಕರಣ ಹಿಂದೆ ಕಾರಣಗಳು ಹಲವು..

Team Udayavani, Sep 16, 2024, 7:45 AM IST

ಮರುನಾಮಕರಣ ರಾಜಕಾರಣ! ಪ್ರಮುಖ ಸ್ಥಳಗಳು, ನಗರಗಳ ಹೆಸರು ಬದಲಾವಣೆ ಈಚೆಗಿನ ಟ್ರೆಂಡ್‌

ಭಾರತದಲ್ಲಿ ಹೆಸರು ಬದಲಾವಣೆ ಎಂಬುದು ರಾಜಕೀಕರಣಗೊಂಡಿದೆ. ಸರಕಾರ‌ಗಳು ಬದಲಾದ ಕೂಡಲೇ ನಗರಗಳ, ಕಾನೂನುಗಳ, ಯೋಜನೆಗಳ ಹೆಸರನ್ನು ಬದಲು ಮಾಡುತ್ತಲೇ ಇವೆ. ಇತ್ತೀಚೆಗಷ್ಟೇ ಅಂಡಮಾನ್‌ನ ರಾಜಧಾನಿ ಫೋರ್ಟ್‌ ಬ್ಲೇರ್‌ ಹೆಸರನ್ನು ಶ್ರೀವಿಜಯಪುರಂ ಎಂದು ಕೇಂದ್ರ ಸರಕಾರ‌ ಬದಲಿಸಿದೆ. ಇದಕ್ಕೂ ಮೊದಲು ಕರ್ನಾಟಕದ ಜಿಲ್ಲೆಯಾದ ರಾಮನಗರದ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲು ಮಾಡಲು ಸರಕಾರ‌ ಮುಂದಾಗಿತ್ತು. ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿರುವ ಅಶೋಕ ಹಾಲ್‌ ಮತ್ತು ದರ್ಬಾರ್‌ ಹಾಲ್‌ಗ‌ಳ ಹೆಸರನ್ನು ಬದಲಾವಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಭಾರತದಲ್ಲಿನ ಹೆಸರು ಬದಲಾವಣೆ ಪರ್ವದ ಒಂದಷ್ಟು ವಿವರಣೆ ಇಲ್ಲಿದೆ.

ಸ್ವಾತಂತ್ರ್ಯ ಸಿಕ್ಕಿದಾಗಿನಿಂದಲೇ ಬದಲಾವಣೆ ಶುರು!
ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿ ಹೊರಟಾಗಿನಿಂದಲೇ ಭಾರತದಲ್ಲಿ ಹೆಸರು ಬದಲಾವಣೆಯ ಪರ್ವ ಆರಂಭವಾ­ಯಿತು. ಮೊದಲೆಲ್ಲ ಇದಕ್ಕೆ ನಿರ್ದಿಷ್ಟ ಕಾರಣಗಳಿದ್ದರೆ, ಈಗ ಇದು ರಾಜಕೀಕರಣ­ಗೊಂಡಿದೆ. ಒಂದಷ್ಟು ಬದಲಾವಣೆಗಳು ವಿವಾದಕ್ಕೆ ಕಾರಣ ವಾದರೆ, ಒಂದಷ್ಟು ಬದಲಾವ­ಣೆಗಳು ಸ್ವಾಗತ ಪಡೆದು­ಕೊಂಡವು. ಸ್ವಾತಂತ್ರ್ಯ ಸಿಕ್ಕಿದ ಕೂಡಲೇ, ಟ್ರಾವಂಕೂರನ್ನು ಕೇರಳ (1956), ಮಧ್ಯಭಾರತ­ವನ್ನು ಮಧ್ಯಪ್ರದೇಶ (1959), ಮದ್ರಾಸ್‌ ಸ್ಟೇಟ್‌ ಅನ್ನು ತಮಿಳುನಾಡು (1969), ಮೈಸೂರು ರಾಜ್ಯವನ್ನು ಕರ್ನಾಟಕ (1973) ಎಂದು ಬದಲಾಯಿಸಲಾಯಿತು. ಇದಾದ ಬಳಿಕವೂ 2024ರ ವರೆಗೂ ನೂರಾರು ಹೆಸರನ್ನು ಬದಲಾವಣೆ ಮಾಡಲಾಗಿದೆ.

ಹೆಸರು ಬದಲಾವಣೆ ಏಕೆ?
ಸುಮಾರು 400 ವರ್ಷಗಳ ಭಾರತವನ್ನು ಆಳಿದ ಬ್ರಿಟಿಷರು ಹಾಗೂ ಅದಕ್ಕೂ ಮೊದಲು ಈ ದೇಶವನ್ನಾಳಿದ ಮೊಘಲ್‌ ದೊರೆ ಗಳು ಭಾರತದ ಹೆಸರುಗಳನ್ನು ಉಚ್ಚಾರಣೆ ಮಾಡಲಾಗದೇ ಅವು ಗಳನ್ನು ಅಪಭ್ರಂಶಗೊಳಿ­ಸಿದ್ದರು. ಅಲ್ಲದೇ ತಮಗೆ ಅನುಕೂಲವಾಗು­ವಂತಹ ಹೆಸರುಗಳನ್ನು ಇಟ್ಟಿದ್ದರು. ಭಾರತ ಸ್ವತಂತ್ರಗೊಂಡ ಬಳಿಕ ರಾಷ್ಟ್ರೀ­ಯ­ತೆಯ ಭಾವ ಹೆಚ್ಚಾಗತೊ­ಡ­ಗಿದಂತೆ ಭಾರತದ ಪ್ರಾಚೀನ ಭವ್ಯತೆಯನ್ನು ಮತ್ತೆ ಎತ್ತಿ ಹಿಡಿಯಬೇಕು ಎಂಬ ಕೂಗು ಹೆಚ್ಚಾಯಿತು. ಈ ಹಿನ್ನೆಲೆಯಲ್ಲಿ ಮೊಘಲರು ನೀಡಿದ ಹೆಸರುಗಳು ಮತ್ತು ವಸಾಹತುಶಾಹಿತ್ವವನ್ನು ಬಿಂಬಿಸುವ ಹೆಸರುಗಳನ್ನು ಬದಲಾವಣೆ ಮಾಡುವ ಕೆಲಸಗಳು ಆರಂಭವಾದವು.

ಭಾರತ ಇಂಡಿಯಾ: ವಿವಾದ
ಇಂಡಿಯಾ ಎನ್ನುವ ಹೆಸರನ್ನು ಬದಲಾವಣೆ ಮಾಡಿ ಭಾರತ ಎಂದಷ್ಟೇ ಹೆಸರಿಡಬೇಕು ಎಂದು ಹಲವು ಬಾರಿ ಕೂಗುಗಳು ಕೇಳಿಬಂದಿದ್ದವು. ಅಲ್ಲದೇ ಹಲವರು ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಸಹ ಸಲ್ಲಿಕೆ ಮಾಡಿದ್ದರು. 2004ರಲ್ಲಿ ಅರ್ಜಿಯನ್ನು ವಜಾಗೊಳಿಸಿದ್ದ ಸುಪ್ರೀಂ­ಕೋರ್ಟ್‌ ಭಾರತ ಮತ್ತು ಇಂಡಿಯಾ ಎಂಬುದು ಎರಡನ್ನೂ ಸಂವಿಧಾನದಲ್ಲಿ ನಮೂದಿಸಲಾಗಿದೆ. ಹೀಗಾಗಿ ಬದಲಾವಣೆ ಮಾಡಬೇಕು ಎಂಬುದು ಸರಿಯಲ್ಲ ಎಂದು ಹೇಳಿತ್ತು. ಸಂವಿಧಾನದಲ್ಲೇ ಹೆಸರಿಗೆ ಬದಲಾವಣೆ ತರಬೇಕು ಎಂದು ಉತ್ತರ ಪ್ರದೇಶ ಸರಕಾರ‌ ತನ್ನ ವಿಧಾನಸಭೆಯಲ್ಲಿ ಗೊತ್ತುವಳಿಯನ್ನೂ ಅಂಗೀಕರಿಸಿತ್ತು. ಭಾರತ ಅಥವಾ ಇಂಡಿಯಾ ಹೆಸರನ್ನು ನಮ್ಮದೇ ಎಂದು ಒಪ್ಪಿಕೊಂಡಿದ್ದರೂ ಸಹ ಇದರ ಬದಲಾವಣೆಗೆ ಸಾಕಷ್ಟು ರಾಜಕೀಯ ನಡೆಯುತ್ತಲೇ ಇದೆ.

ಬದಲಾವಣೆಗೆ ಕಾನೂನು ಏನು ಹೇಳುತ್ತದೆ?
ರಾಜ್ಯಗಳು ಮತ್ತು ನಗರಗಳ ಹೆಸರು ಬದಲಾವಣೆಯಾಗಬೇಕಿದ್ದರೆ ಅದನ್ನು ಕೇಂದ್ರ ಸರಕಾರ‌ ಅನುಮೋದಿಸಬೇಕು. ರಾಜ್ಯಗಳು ತಮ್ಮಲ್ಲಿರುವ ನಗರಗಳ ಅಥವಾ ಸ್ಥಳಗಳ ಹೆಸರು ಬದಲಾವಣೆಗೆ ನಿರ್ಧರಿಸಿದರೆ ಅದರ ಪ್ರಸ್ತಾಪವನ್ನು ಕೇಂದ್ರ ಸರಕಾರ‌ಕ್ಕೆ ಕಳುಹಿಸಿಕೊಡಬೇಕು. ಇದಕ್ಕೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದರೆ ಹೆಸರು ಬದಲಾವಣೆ ಮಾಡಲಾಗುತ್ತದೆ. ಬಳಿಕ ಇಂಗ್ಲಿಷ್‌ ಹಾಗೂ ಸ್ಥಳೀಯ ಭಾಷೆಗಳಲ್ಲಿ ಹೊಸ ಹೆಸರನ್ನು ಮುದ್ರಿಸಲಾಗುತ್ತದೆ. ಸರಕಾರಿ ದಾಖಲೆಗಳು, ಕಡತಗಳಲ್ಲಿ ಹೊಸ ಹೆಸರನ್ನು ಸೇರಿಸಲಾಗುತ್ತದೆ. ಆಯಾ ಸ್ಥಳಗಳಲ್ಲಿ ಹೆಸರು ಬದಲಾವಣೆಯ ಫ‌ಲಕಗಳನ್ನು ಅಳವಡಿಸಲಾಗುತ್ತದೆ.

ಅಧಿಕಾರ ಸಿಕ್ಕಿದ ಕೂಡಲೇ ಹೆಸರು ಬದಲು ರಾಜಕಾರಣ!
ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದಲ್ಲಿಅಧಿಕಾರಕ್ಕೇರು­ತ್ತಲೇ ಹೆಸರು ಬದಲಾವಣೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಹೆಸರು ಬದಲಾವಣೆ ಮಾಡುವ ಭರವಸೆಯನ್ನೇ ನೀಡಿ ಅವರು ಅಧಿಕಾರಕ್ಕೇರಿದ್ದರು. ಇದೇ ಮಾದರಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಹ ಅನುಸರಿಸಿದ್ದು, ಮೊಘಲ್‌ ಹೆಸರುಗಳನ್ನು ಹೊಂದಿರುವ ನಗರಗಳ ಹೆಸರನ್ನು ಸಂಪೂರ್ಣವಾಗಿ ಬದಲಾವಣೆ ಮಾಡುವ ಭರವಸೆಯನ್ನು ನೀಡಿದ್ದಾರೆ.

ಇತ್ತೀಚಿನ ಪ್ರಮುಖ ಮರುನಾಮಕರಣಗಳು

ಶ್ರೀವಿಜಯ ಪುರಂ: ಅಂಡ ಮಾನ್‌ ಮತ್ತು ನಿಕೋಬಾರ್‌ ದ್ವೀಪದ ರಾಜಧಾನಿ ಪೋರ್ಟ್‌ಬ್ಲೇರ್‌ ಹೆಸರನ್ನು ಶ್ರೀವಿಜಯಪುರಂ ಎಂದು ಕೇಂದ್ರ ಸರಕಾರ‌ ಬದಲಿಸಿದೆ.
ಅಮೃತ ಉದ್ಯಾನ: ರಾಷ್ಟ್ರಪತಿ ಭವನದ ಮೊಘಲ್‌ ಗಾರ್ಡನ್‌ ಅನ್ನು ಅಮೃತ ಉದ್ಯಾನ ಎಂದು ಬದಲಿಸಲಾಗಿದೆ.
ಛತ್ರಪತಿ ಸಂಭಾಜಿ ನಗರ: ಮಹಾರಾಷ್ಟ್ರ­ದ ಔರಂಗಾಬಾದ್‌, ಒಸ್ಮನಾಬಾದ್‌ಗಳ ಹೆಸರನ್ನು ಛತ್ರಪತಿ ಸಂಭಾಜಿ ನಗರ, ಧಾರಾಶಿವ ಎಂದು ಬದಲಿಸಲಾಗಿದೆ.
ಜೇಟ್ಲಿ ಮೈದಾನ: ಫಿರೋಜ್‌ ಕೋಟ್ಲಾ ಮೈದಾನ ಹೆಸರನ್ನು ಅರುಣ್‌ ಜೇಟ್ಲಿ ಮೈದಾನ ಎಂದು ಬದಲಿಸಲಾಯಿತು.
ಕರ್ತವ್ಯಪಥ: ರಾಜಪಥ ರಸ್ತೆಯನ್ನು “ಕರ್ತವ್ಯಪಥ’ ಎಂದು ಬದಲಿಸಲಾಗಿದೆ. ಪ್ರಯಾಗರಾಜ್‌: ಉತ್ತರಪ್ರದೇಶದ ಅಲಹಾಬಾದ್‌ ಹೆಸರನ್ನು ಪ್ರಯಾಗ ರಾಜ್‌ ಎಂದು ಬದಲಿಸಲಾಗಿದೆ. 2019ರಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ಗಣತಂತ್ರ ಮಂಟಪ: ರಾಷ್ಟ್ರಪತಿ ಭವನದ ದರ್ಬಾಲ್‌ ಹಾಲ್‌ ಮತ್ತು ಅಶೋಕ್‌ ಹಾಲ್‌ಗ‌ಳನ್ನು ಗಣತಂತ್ರ ಮಂಟಪ ಮತ್ತು ಅಶೋಕ್‌ ಮಂಟಪಗಳೆಂದು ಕೇಂದ್ರ ಸರಕಾರ‌ವು ಮರು ನಾಮಕರಣ ಮಾಡಿದೆ.

ಸರಕಾರ‌ಗಳ ಮುಂದಿರುವ ಹೆಸರು ಬದಲಾವಣೆ ಪ್ರಸ್ತಾವನೆಗಳು!

1.ಕೇರಳಂ: ಕೇರಳದ ಹೆಸರನ್ನು ಕೇರಳಂ ಎಂದು ಬದಲಿಸುವ ಕುರಿತು ರಾಜ್ಯ ವಿಧಾನಸಭೆಯಲ್ಲಿ ಗೊತ್ತುವಳಿ ಅಂಗೀಕರಿಸಿದ್ದರೂ ಕೇಂದ್ರ ಸರಕಾರ‌ ಈ ಮನವಿಗೆ ಇನ್ನೂ ಒಪ್ಪಿಗೆ ನೀಡಿಲ್ಲ.

2.ಗಾಜಿಯಾಬಾದ್‌: ಗಾಜಿಯಾಬಾದ್‌ ಹೆಸರನ್ನು ಬದಲಾವಣೆ ಮಾಡಲು ಉತ್ತರ ಪ್ರದೇಶ ಸಿಎಂ ಯೋಗಿ ಪಣತೊಟ್ಟಿದ್ದಾರೆ. ಈಗಾಗಲೇ 3 ಹೆಸರು ಸ್ಥಳೀಯ ಆಡಳಿತ ಫೈನಲ್‌ ಮಾಡಿದ್ದು, ಕೇಂದ್ರ ಸರಕಾರ‌ದ ಒಪ್ಪಿಗೆಯಷ್ಟೇ ಬಾಕಿ ಇದೆ.

3.ಅಕ್ಬರ್‌ಪುರ್‌: ಮೊಘಲ್‌ ದೊರೆ ಅಕ್ಬರ್‌ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ಅಕºರ್‌ಪುರದ ಹೆಸರನ್ನು ಬದಲಾವಣೆ ಮಾಡಲು ಯೋಗಿ ನಿರ್ಧರಿಸಿದ್ದಾರೆ. ಈ ಬಗ್ಗೆ ಈಗಾಗಲೇ ಅವರು ಸುಳಿವು ನೀಡಿದ್ದು, ಬದಲಾವಣೆಗೆ ಬೇಕಾದ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

4.ಭಾಗ್ಯನಗರ: ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್‌ನ ಹೆಸರನ್ನು ಭಾಗ್ಯನಗರ ಎಂದು ಬದಲು ಮಾಡುವ ಪ್ರಸ್ತಾವವನ್ನು ಸಲ್ಲಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಬದಲಾವಣೆ ಆರಂಭವಾಗುತ್ತಿದ್ದಂತೆ ದಕ್ಷಿಣದಲ್ಲೂ ಈ ಕೂಗು ಎದ್ದಿದ್ದು, ಸ್ಥಳೀಯ ನಾಯಕರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ.

5.ರಾಮನಗರ: ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಬಗ್ಗೆ ಕರ್ನಾಟಕ ಸರಕಾರ‌ದ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಆದರೆ ಜೆಡಿಎಸ್‌ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

6.ಬಾಗೇಪಲ್ಲಿ: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಬೇಕೆಂಬ ಕೂಗು ಮೊದಲಿನಿಂದಲೂ ಇದೆ. ಬಾಗೇಪಲ್ಲಿ ತೆಲುಗು ಹೆಸರಾಗಿದ್ದು, ಕನ್ನಡದ ಸೊಗಡು ಇಲ್ಲ ಎಂಬ ಕಾರಣಕ್ಕೆ ಮರುನಾಮಕರಣಕ್ಕೆ ಒತ್ತಡವಿದೆ.

7.ಮುಂಬಯಿ ಸೆಂಟ್ರಲ್‌ ಸ್ಟೇಷನ್‌: ಮುಂಬಯಿ ಸೆಂಟ್ರಲ್‌ ರೈಲು ನಿಲ್ದಾಣವನ್ನು ನಾನಾ ಜಗನ್ನಾಥ ಶಂಕರ್‌ ಸೇಠ್ ಎಂದು ಬದಲಿಸುವ ಪ್ರಸ್ತಾವವಿದೆ.

8.ಮರೀನ್‌ ಲೈನ್‌: ಮುಂಬಯಿಯ ಪ್ರಮುಖ ರೈಲು ನಿಲ್ದಾಣವಾಗಿರುವ ಮುಂಬಯಿ ಮರೀನ್‌ ಲೈವ್‌ ಅನ್ನು ಮುಂಬಾದೇವಿ ಎಂದು ಬದಲಿಸುವ ಪ್ರಸ್ತಾವವನ್ನು ಮಹಾರಾಷ್ಟ್ರ ಸರಕಾರ‌ ಹೊಂದಿದೆ.

9.ಡ್ರ್ಯಾಗನ್‌ ಫ್ರುಟ್‌: ಗುಜರಾತ್‌ ಮುಖ್ಯಮಂತ್ರಿ ಅವರು ಡ್ರ್ಯಾಗನ್‌ಫ್ರುಟ್‌ಗೆ “ಕಮಲಾಂ’ ಎಂದು ಮರುನಾಮಕರಣ ಮಾಡುವ ಬಗ್ಗೆ ಪ್ರಸ್ತಾವಿಸಿದ್ದರು. ಈ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿತ್ತು.

10.ಕರೀಮ್‌ನಗರ: ತೆಲಂಗಾಣದ ಕರೀಮ್‌ನಗರ ಹೆಸರನ್ನು ಯೆಲಗಂಡುಲಾ ಎಂದು ಮರು ನಾಮಕರಣ ಮಾಡುವ ಬಗ್ಗೆ ಸ್ಥಳೀಯ ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಸರಕಾರ‌ ಮಟ್ಟದಲ್ಲಿ ಪ್ರಸ್ತಾವ ಕೂಡ ಇದೆ.

ಮಾಹಿತಿ: ಗಣೇಶ್‌ ಪ್ರಸಾದ್‌

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.