ಗಣತಂತ್ರ: ಆಕಾಶದಲ್ಲಿ ಆತ್ಮನಿರ್ಭರತೆ


Team Udayavani, Jan 25, 2021, 7:10 AM IST

ಗಣತಂತ್ರ: ಆಕಾಶದಲ್ಲಿ ಆತ್ಮನಿರ್ಭರತೆ

ಕೋವಿಡ್  ಸಾಂಕ್ರಮಿಕದ ಹಿನ್ನೆಲೆಯಲ್ಲಿ ಈ ವರ್ಷದ ಜನವರಿ 26 ರಂದು ಹೊಸದಿಲ್ಲಿಯಲ್ಲಿ ನಡೆಯುವ ಗಣತಂತ್ರ ದಿವಸದ ಪರೇಡಿನಲ್ಲಿ ಸಾಂದರ್ಭಿಕ ವಾಗಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಲಾಕ್‌ಡೌನ್‌ನ ಪ್ರಾರಂಭ ದಲ್ಲಿ ಅನಂತರ ಹಂತ ಹಂತವಾಗಿ ಸಡಿಲಿಸಿದ ಸಮಯದಲ್ಲಿ ಎಲ್ಲಾರದ್ದೂ ಒಂದೇ ಪ್ರಶ್ನೆ, ಏನಿರುತ್ತೆ..ಏನಿರಲ್ಲ ಅಂತ. ಈ ಸಲದ ಗಣತಂತ್ರ ದಿವಸದಲ್ಲಿ ಏನು ಇರುತ್ತದೆ, ಏನಿರುವುದಿಲ್ಲ ಅಂತ ನೋಡೋಣ.

ಕೋವಿಡ್ ಕರಾಳಮುಖದ ಹಿನ್ನೆಲೆಯಲ್ಲೂ ನಮ್ಮ ದೇಶದಲ್ಲಿ ಹಲವಾರು ಸಕಾರಾತ್ಮಕ ಘಟನೆಗಳು ನಡೆದವು. 16 ಡಿಸೆಂಬರ್‌ 2020ರಿಂದ ಬರುವ 16 ಡಿಸೆಂಬರ್‌ 2021ರ ವರೆಗೆ, ಸಂಪೂರ್ಣ ಒಂದು ವರ್ಷದವರೆಗೆ “ಸ್ವರ್ಣಿಮ್‌ ವಿಜಯ ಜಯಂತಿ ‘ ಆಚರಿಸಲಾಗುತ್ತಿದೆ.

ಇದು 1971ರ ಪಾಕಿಸ್ಥಾನದೊಂದಿಗೆ ನಡೆದ ಯುದ್ಧದಲ್ಲಿ ಅಭೂತಪೂರ್ವ ಜಯ ಗಳಿಸಿ, ಪಾಕಿಸ್ಥಾನವನ್ನು ತುಂಡರಿಸಿ ಬಾಂಗ್ಲಾದೇಶವನ್ನು ವಿಮೋಚನೆ ಗೊಳಿಸಿದ ವಿಜಯೋತ್ಸವದ 50ನೇ ವರ್ಷದ ಸಂಭ್ರಮದ ಆಚರಣೆ. ಇದರ ಸ್ಮರಣಾರ್ಥ ಪ್ರಪ್ರಥಮ ಬಾರಿಗೆ ಬಾಂಗ್ಲಾದೇಶದ 122 ಸೈನಿಕರ ತುಕಡಿ ರಾಜಪಥದ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದೆ. ಬಾಂಗ್ಲಾದೇಶದ ವಾಯು ಸೇನೆ ಪ್ರಾರಂಭವಾದದ್ದು “ಕಿಲೋ ಫ್ಲೆ   çಟ್‌’ ಎನ್ನುವ ಸಣ್ಣದೊಂದು ಸ್ಕಾಡ್ರನ್ನಿ ನಿಂದ. ಇದರಲ್ಲಿ ಭಾರತದ ವಾಯುಸೇನೆ ಮತ್ತು ಜೋಧಪುರದ ಮಹಾ ರಾಜರು ದೇಣಿಗೆ ರೂಪದಲ್ಲಿ ಕೊಟ್ಟ ಡಕೋಟಾ ವಿಮಾನ ಮತ್ತು ಕೆಲವು ಹೆಲಿಕಾಪ್ಟರ್‌ಗಳು ಇದ್ದವು. ಈ ಡಕೋಟಾ ವಿಮಾನಗಳ ಸಹಾಯದಿಂದ ಪ್ಯಾರಾ ಚ ‌ೂಟಿನ ಮುಖಾಂತರ ಯುದ್ಧಭೂಮಿಗೆ ಸೈನಿಕರನ್ನು ಇಳಿಸಲಾ ಗುತ್ತಿತ್ತು. ಇದರ ಸ್ಮರಣಾರ್ಥ ಈ ವರ್ಷದ ಗಣತಂತ್ರ ದಿವಸದ ಪರೇಡಿ ನಲ್ಲಿ ಒಂದು ಡಕೋಟಾ ವಿಮಾನ ಮತ್ತು ಹೆಲಿಕಾಪ್ಟರ್‌ನ “ರುದ್ರ’ಎಂಬ ಹೆಸರಿನ ಫಾರ್ಮೇಶನ್‌ ಪ್ರದರ್ಶನ ನಡೆಯಲಿದೆ. ದಿಲ್ಲಿ ಸಮೀಪದ ಹಿಂಡನ್‌ ವಾಯುಸೇನೆಯ ವಿಮಾನ ಸಂಗ್ರಹಾಲಯದಲ್ಲಿದ್ದ ಈ ಹಳೆಯ ವಿಮಾ ನಕ್ಕೆ ಮತ್ತೂಮ್ಮೆ ಆಗಸದಲ್ಲಿ ಹಾರುವ ಪುನರ್ಜೀವ ಕೊಟ್ಟಿದ್ದರಲ್ಲಿ ನಮ್ಮ

ಕರ್ನಾ ಟಕದ ಸಂಸದ ರಾಜೀವ್‌ ಚಂದ್ರಶೇಖರ್‌ ಪ್ರಮುಖ ಪಾತ್ರ ವಹಿಸಿ¨ªಾರೆ. ಅಂದ ಹಾಗೆ ಇವರ ತಂದೆ ಏರ್‌ ಕಮೋಡೋರ್‌ ಚಂದ್ರ ಶೇಖರ್‌ ವಾಯುಸೇನೆ ಯಲ್ಲಿ ಡಕೋಟಾ ವಿಮಾನದ ವೈಮಾನಿಕರಾಗಿದ್ದರು.

ಇನ್ನೊಂದು ಮಹತ್ತರ ಘಟನೆ ಎಂದರೆ ಫ್ರಾನ್ಸ್‌ನಿಂದ ಹಾರಿ ನಮ್ಮ ವಾಯು ಸೇನೆಯ ಬತ್ತಳಿಕೆಗೆ ಸೇರಿರುವ ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನಗಳು ಈ ವರ್ಷದ ಗಣತಂತ್ರ ದಿವಸದ ಪರೇಡಿನಲ್ಲಿ ಮೈನವಿರೇಳಿಸುವ ಪ್ರದರ್ಶನ ನೀಡಲಿವೆ. ಕೊರೊನಾದಿಂದಾಗಿ ಹಲವಾರು ಪ್ರದರ್ಶನಗಳನ್ನು ರದ್ದುಗೊಂಡಿ ದೆ ಯಾದರೂ ಈ ಸಲದ ವಾಯುಪ್ರದರ್ಶನವನ್ನು ಮಾತ್ರ ಇನ್ನೂ ಹೆಚ್ಚು ವಿಮಾನಗಳನ್ನು ಸೇರಿಸಿ ಆಕರ್ಷಕವಾಗಿರಿಸುವ ಪ್ರಯತ್ನ ನಡೆದಿದೆ. ಈ ಸಲದ ವಾಯುಪ್ರದರ್ಶನದಲ್ಲಿ ಹದಿನೈದು ಯುದ್ಧ ವಿಮಾನಗಳು, ಐದು ಸರಕು ಸಾಗಾಣಿಕೆ ವಿಮಾನಗಳು, ಹದಿನೇಳು ಹೆಲಿಕಾಪ್ಟರ್‌ಗಳು,  ಒಂದು ಡಕೋಟಾ ವಿಮಾನ ಮತ್ತು ನಾಲ್ಕು ಭೂಸೇನೆಯ ಹೆಲಿಕಾಪ್ಟರ್‌ಗಳು ಸೇರಿದಂತೆ ಒಟ್ಟು 42 ವಿಮಾನಗಳು ಪಾಲ್ಗೊಳ್ಳಲಿವೆ.

ಈ ಸಲದ ವಿಶೇಷತೆ ಏನು ಎಂದರೆ ಈ ವಿಮಾನಗಳ ಈ ಪ್ರತಿ ಯೊಂದು ಗುಂಪಿಗೂ ಬಹಳ ಅರ್ಥಪೂರ್ಣವಾದ ಅಚ್ಚ ಭಾರತೀಯ ಹೆಸರು ಗಳನ್ನು ಕೊಡಲಾಗಿದೆ. ರಾಜಪಥದ ಪರೇಡ್‌ ಕರಾರುವಾಕ್ಕಾಗಿ 10:00 ಗಂಟೆಗೆ ಪ್ರಾರಂಭವಾಗು ತ್ತದೆ. ಪರೇಡ್‌ ಕಮಾಂಡರ್‌ ಅವರ ಜೀಪ್‌ ರಾಷ್ಟ್ರಪತಿಗಳು ನಿಂತಿರುವ ಗೌರವ ಸಲಾಮಿ ಮಂಟಪದ ಮುಂದೆ ಹಾದು ಹೋಗುವಾಗ ಸಮಯ 10:04 ಆಗಿರುತ್ತದೆ. ಅದೇ ಸಮಯಕ್ಕೆ ಸುಮಾರು ಹತ್ತು ಸೆಕೆಂಡುಗಳ ಅಂತರ ದಲ್ಲಿ “ನಿಶಾನ್‌’ ಎನ್ನುವ ನಾಲ್ಕು ಹೆಲಿಕಾಪ್ಟರ್‌ಗಳ (Mi17 1V5) ಗುಂಪು ಭಾರತೀಯ ರಾಷ್ಟ್ರೀಯ ಧ್ವಜ ಮತ್ತು ಸೇನೆಯ ಮೂರು ಅಂಗಗಳ ಧ್ವಜಗಳನ್ನು ಹಾರಿಸುತ್ತಾ ರಾಷ್ಟ್ರಪತಿಗಳಿಗೆ ವಂದಿಸುತ್ತಾ ಮುಂದೆ ಸಾಗುತ್ತವೆ. ಈ ಹೆಲಿಕಾಪ್ಟರ್‌ಗಳ ಹಿಂದೆಯೇ ಭೂಸೇನೆಯ ನಾಲ್ಕು “ಧ್ರುವ’ ಹೆಲಿಕಾಪ್ಟರ್‌ಗಳು ಸಾಗುತ್ತವೆ. ಮೂರನೇ ವಿಮಾನಗಳ ಗುಂಪೇ ಈ ವರ್ಷದ “ಸ್ವರ್ಣಿಮ್‌ ವಿಜಯ ಜಯಂತಿ’ ಸಮಾರಂಭದ ಸಂಕೇತ. ಇದರಲ್ಲಿ ಮುಂದೆ ಒಂದು ಡಕೋಟಾ(dc 3) ವಿಮಾನ ಮತ್ತು ಎಡ ಬಲಕ್ಕೆ ಎರಡು ಹೆಲಿಕಾಪ್ಟರ್‌ಗಳು(Mi 17 lV) ಹಾರುತ್ತಾ ಹೋಗುತ್ತಿರುವಾಗಲೇ ಕೆಳಗೆ ಬಂಗ್ಲಾದೇಶದ 122 ಸೈನಿಕರ ತುಕಡಿ ರಾಷ್ಟ್ರಪತಿಯವರಿಗೆ ವಂದಿಸುತ್ತಾ ಸಾಗುತ್ತಿರುತ್ತದೆ, ಆಗ ಸಮಯ 10:20 ಆಗಿರುತ್ತದೆ.

ಇನ್ನು ಎರಡನೇ ಕಂತಿನ ವಾಯುಪ್ರದರ್ಶನ 11:20ಕ್ಕೆ ಅಂದರೆ ಇನ್ನು ಒಂದು ಗಂಟೆಯ ತನಕ ಸೈನ್ಯದ, ಅರೆಸೈನ್ಯದ, ಪೊಲೀಸರ, Ncc ಕೆಡೆಟ್‌ಗಳ ಪಥಸಂಚಲನ ಮತ್ತು ವಿವಿಧ ರಾಜ್ಯಗಳ ಸ್ತಬ್ದಚಿತ್ರಗಳು ಸಾಗಲಿವೆ. ಈ ಸಲ 60ರ ವಯಸ್ಸಿನ ಮೇಲಿನ ಸೈನಿಕರು ಭಾಗವಹಿಸುವಂತಿಲ್ಲ. ಹಾಗಾಗಿ ಪರಮವೀರ ಚಕ್ರ ವಿಜೇತ ಕ್ಯಾಪ್ಟನ್‌ ಬಾಣಾಸಿಂಗ್‌ ಭಾಗವಹಿಸುತ್ತಿಲ್ಲ.

ಈ ಸಲದ ವಾಯುಸೇನೆಯ ಸ್ತಬ್ದಚಿತ್ರವೂ ವಿಶೇಷ ಆಕರ್ಷಣೆ. ಇದರಲ್ಲಿ ಆತ್ಮನಿರ್ಭರತೆಯ ಪ್ರದರ್ಶನ ಎದ್ದು ಕಾಣುತ್ತದೆ. ನಮ್ಮ ದೇಶದಲ್ಲಿ ನಿರ್ಮಿತವಾದ ಲಘು ಯುದ್ಧ ವಿಮಾನ “ತೇಜಸ್‌’ನ ಪ್ರಮಾಣಿತ ಮಾದರಿಯ ವಿಮಾನವಿರುತ್ತದೆ. ತೇಜಸ್ವಿನಿ ಅನಂತ್‌ ಕುಮಾರ್‌ ವ್ಯಕ್ತಿತ್ವಕ್ಕೆ ಮೆಚ್ಚಿದ ವಾಜಪೇಯಿಯವರು ತೇಜಸ್‌ ಎನ್ನುವ ಹೆಸರನ್ನು ಸೂಚಿಸಿದ್ದರಂತೆ! ಇನ್ನು ರೋಹಿಣಿ ರಡಾರ್‌, ರುದ್ರ ಹೆಲಿಕಾಪ್ಟರ್‌, ಆಕಾಶ್‌ ಮತ್ತು ಬ್ರಹೋಸ್‌ ಕ್ಷಿಪಣಿಗಳ ಪ್ರದರ್ಶನವೂ ಇರುತ್ತದೆ. ಇವುಗಳ ನಡುವೆ ಹೆಮ್ಮೆಯಿಂದ ನಿಂತು ರಾಷ್ಟ್ರಪತಿಯವರಿಗೆ ಖಡಕ್‌ ಸಲ್ಯೂಟ್‌ ಹೊಡೆಯುತ್ತಿರುವವರೇ ರಫೇಲ್‌ ಯುದ್ಧ ವಿಮಾನದ ಪೈಲಟ್‌ ಫ್ಲೈಟ್‌ ಲೆಫ್ಟಿನೆಂಟ್‌ ಭಾವನಾ ಖಾಂತ್‌…ಇದೂ ಸಹಾ ಮೊಟ್ಟಮೊದಲ ಬಾರಿಗೆ ಯುದ್ಧವಿಮಾನದ  ಮಹಿಳಾ ಪೈಲಟ್‌ ಗಣತಂತ್ರ ಪರೇಡಿನಲ್ಲಿ ಭಾಗವಹಿಸುತ್ತಿರುವುದು. ಶಿವಾಂಗಿ ಸಿಂಗ್‌ ರಫೇಲ್‌ ಯುದ್ಧ ವಿಮಾನದ ಇನ್ನೊಬ್ಬ ಮಹಿಳಾ ಪೈಲಟ್‌. ಇವರಿಬ್ಬರೂ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರಿಂದ ತರಬೇತಿ ಪಡೆದವರು.

11:20 ಕ್ಕೆ ವಾಯುಪ್ರದರ್ಶನದ ಎರಡನೇ ಕಂತು ಪ್ರಾರಂಭ…ಎಲ್ಲರೂ ಆಕಾಶದತ್ತ ದೃಷ್ಟಿ ನೆಟ್ಟುಕೊಂಡಿರುವಾಗಲೇ ಮೊದಲಿಗೆ ಬರುತ್ತದೆ “ಸುದರ್ಶನ’ ಮತ್ತು “ರಕ್ಷಕ’ ಫಾರ್ಮೇಶನ್‌. ಒಂದು ಚಿನೂಕ್‌ ಮತ್ತು ಇಬ್ಬದಿಗೆ ಒಂದೊಂದು Mi17 ಹೆಲಿಕಾಪ್ಟರ್‌ಗಳು ಸುದರ್ಶನದಲ್ಲಿದ್ದರೆ, ರಕ್ಷಕದಲ್ಲಿ ಒಂದು Mi17 ಮತ್ತು ನಾಲ್ಕು ಚಿನೂಕ್‌ ಆಕ್ರಮಣ ಹೆಲಿಕಾಪ್ಟರ್‌ಗಳು ಇರುತ್ತವೆ. ಇದರ ಹಿಂದೆ ಬರುತ್ತವೆ ಮೂರು ಇ-130 ಹರ್ಕುಲಿಸ್‌ ವಿಮಾನಗಳ “ಭೀಮ’ ಫಾರ್ಮೇಶನ್‌. ಇದರ ಹಿಂದೆ ಬರುವುದು ಗಜಗಾತ್ರದ “ಗರುಡ’ ಫಾರ್ಮೇಶನ್‌. ಗ್ಲೋಬ್‌ ಮಾಸ್ಟರ್‌ ಇ-17 ಎನ್ನುವ ದೊಡ್ಡ ವಿಮಾನಕ್ಕೆ ಅಂಟಿಕೊಂಡಂತೇ ಎರಡೆರಡು Mಜಿಜ 29 ಮತ್ತು ಖukಜಟಜಿ 30 ವಿಮಾನಗಳು.

ಅನಂತರ ಪ್ರಪ್ರಥಮವಾಗಿ ರಫೇಲ್‌ ವಿಮಾನದ ಆಗಮನವಾಗುತ್ತದೆ. “ಏಕಲವ್ಯ’ ಎನ್ನುವ ಈ ಫಾರ್ಮೇಶನ್ನಿನ ಮಂಚೂಣಿಯಲ್ಲಿ ರಫೇಲ್‌ ವಿಮಾನ ಮತ್ತು ಇಕ್ಕೆಲಗಳಲ್ಲಿ ಎರಡು Mig29 ವಿಮಾನಗಳಿರುತ್ತವೆ. ಹಿಂದೆ ಬಂದ ಮೂರು sukhoi 30 ವಿಮಾನಗಳು ಆಕಾಶದಲ್ಲಿ ತ್ರಿಶೂಲದ ಚಿತ್ರ ಬಿಡಿಸಿ ಹೋಗುತ್ತವೆ. ಆ ತ್ರಿಶೂಲದ ಕೆಳಗೇ ನೇತ್ರಾ ಮತ್ತು ಸಾರಂಗ್‌ ಹೆಲಿಕಾಪ್ಟರ್‌ಗಳು ಹಾರಿ ಕಣ್ಮರೆಯಾಗುವವಷ್ಟರಲ್ಲಿ ಸಮಯ 11:43 ಆಗಿರುತ್ತದೆ. ಇನ್ನುಳಿದಿ ರುವುದು ಭವ್ಯ ಮುಕ್ತಾಯದ ಪ್ರದರ್ಶನ. ಗೌರವ ಮಂಟಪದ ಮುಂದೆ ಬಂದು ಒಮ್ಮೆಲೇ ಮೇಲಕ್ಕೆ ಜಿಗಿದು ಸುರುಳಿ ಸುತ್ತುತ್ತಾ ಆಕಾಶವನ್ನು ಸೀಳಿ ಕೊಂಡು ಹೋಗುವ ಈ ಪ್ರದರ್ಶನಕ್ಕೆ vertical Charlie ಎನ್ನುತ್ತಾರೆ. ಈ ಸಲ ಮೊಟ್ಟ ಮೊದಲಿಗೆ ರಫೇಲ್‌ ವಿಮಾನ ಇದರ ಪ್ರದರ್ಶನ ನೀಡಲಿದೆ. ಇಲ್ಲಿವ ರೆಗೂ ಉಸಿರು ಬಿಗಿಹಿಡಿದು ನೋಡುತ್ತಿದ್ದ ಜನಗಣ, ಗಣತಂತ್ರ ಸಮಾರೋಹ ಸಮಾಪ್ತಿಯಾದ ಸಂತೃಪ್ತಿಯಿಂದ ತಮ್ಮ ಮನೆಗೆ ಮರಳುತ್ತಾರೆ.

 

 –ವಿಂಗ್‌ ಕಮಾಂಡರ್‌ ಸುದರ್ಶನ

ಟಾಪ್ ನ್ಯೂಸ್

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Jammu-Srinagar highway closed due to heavy snowfall; Vehicles stranded

Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ullala; Heap of waste in Nema’s field; Daiva got angry

Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ

4-ptr

Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Jammu-Srinagar highway closed due to heavy snowfall; Vehicles stranded

Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

6-national-emblem

National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ

Ullala; Heap of waste in Nema’s field; Daiva got angry

Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.