ಕೇರಳ ತಾಯ್ತ, ತಮಿಳ್ನಾಡ್ ಪಂಚಾಂಗ, ರೇವಣ್ಣೋರ್ ನಿಂಬೆ ಹಣ್ಣು ರಯ್ನಾ
Team Udayavani, Feb 3, 2019, 1:42 AM IST
ಅಮಾಸೆ: ನಮ್‌ಸ್ಕಾರ ಸಾ….
ಚೇರ್ಮನ್ರು: ಏನ್ಲಾ ಆಮಾಸೆ ಆಳೆ ಕಾಣೆ
ಅಮಾಸೆ: ಮುಂಬೈಗೊಂಟೋಗಿದ್ದೆ ಸಾ..
ಚೇರ್ಮನ್ರು: ಅಲ್ಲೇನ್ಲಾ ಕೇಮು ನಿಂಗೆ
ಅಮಾಸೆ: ರಮೇಸ್ ಜಾರ್ಕಹೊಳಿ ಸಾವ್‌ಕಾರ್ರು, ನಾಗೇಂದ್ರ ಅನ್ನಗಾರು ನೋಡ್ಕಂಡ್ ಬರೂಮಾ ಅಂತ ಹೋಗಿದ್ನಿ ಸಾ..
ಚೇರ್ಮನ್ರು: ಸಿಕ್ಕಿದ್ರೇನ್ಲಾ ಅವ್ರು, ಏನ್ಲಾ ಅವ್ರು ಪ್ರಾಬ್ಲಿಮ್ಮು
ಅಮಾಸೆ:ಅಯ್ಯೋ ಕಮ್ಲ ಪಕ್ಸದೋರು ಹಿಡ್ದಾಕ್ಕಂಡವ್ರೆ, ಸರ್ಕಾರ ಇವಾಗ್ ಚೇಂಜ್ ಆಯ್ತದೆ, ನಾಳೆ ಚೇಂಜ್ ಆಯ್ತದೆ ಅಂತ ಕಾಯ್ಕಂಡ್ ಕುಂತವ್ರೆ
ಚೇರ್ಮನ್ರು:ಕುಮಾರಣ್ಣೋರ್ ಮ್ಯಾಗೆ ಯಾಕ್ಲಾ ಅವ್ರ್ಗ್ ಕ್ವಾಪಾ
ಅಮಾಸೆ:ಅಯ್ಯೋ ಕುಮಾರಣ್ಣೋರ್ ಮ್ಯಾಗೆ ಎಂತ ಕ್ವಾಪ್ವೂ ಇಲ್ಲ, ಸಿವ್‌ಕುಮಾರಣ್ಣೋರ್ ಮ್ಯಾಗೆ ಗುರ್ ಗುರ್ ಅಂತಾವ್ರೆ
ಚೇರ್ಮನ್ರು: ಅದ್ಯಾಕ್ಲಾ ಅವ್ರ್ ಮ್ಯಾಗೆ ಗುರ್ ಗುರ್
ಅಮಾಸೆ: ಬೆಳ್ಗಾವಿ, ಬಳ್ಳಾರಿ ಮ್ಯಾಟ್ರಾ. ಇಡೀ ಸ್ಟೇಟ್ ಒಂದ್ ಕಡೆ ಆದ್ರೆ ಬೆಳ್ಗಾವಿ, ಬಳ್ಳಾರಿ ಮ್ಯಾಟ್ರಾ ಒಂದ್ ಸೈಡು. ಅದ್ರ ಸಾವಾಸ್ಕೆ ಯಾರಾದ್ರೂ ಹೋದ್ರೆ ಖತಂ
ಚೇರ್ಮನ್ರು: ಅಷ್ಟೊಂದ್ ಪವರ್‌ಪುಲ್ಲೇನ್ಲಾ ಅವ್ರು
ಅಮಾಸೆ: ಒಂದ್ ಕಡೆ ಬಳ್ಳಾರಿ ಅಂದ್ರಗಿನಾ, ಮತ್ತೂಂದ್‌ಕಡೆ ಸಾವ್ಕಾರ್ ಜಾರ್ಕಿಹೊಳಿ ಆವಾಜ್ ಎಲ್ಡೂ ಸೇರಿ ಒಂದ್ ತಿಂಗ್ಲು ಕುಮಾರಣ್ಣೋರ್ ಸರ್ಕಾರ್ವ ಹಣ್‌ಗಾಯ್ ನೀರ್‌ಗಾಯ್ ಮಾಡ್ಲಿಲ್ವೆ
ಚೇರ್ಮನ್ರು: ಅದೂ ದಿಟ್ವೇ ಹೇಳು. ಅದೇನ್ಲಾ ರೇವಣ್ಣೋರು ತಮಿಳ್‌ನಾಡ್ ಪಂಚಾಂಗ ನೋಡಿವ್ನಿ ಅಂದವ್ರೆ
ಅಮಾಸೆ: ತಮಿಳ್‌ನಾಡ್ ಪಂಚಾಂಗ ಪ್ರಕಾರ ಸರ್ಕಾರ ಸೇಫ್ ಅಂತೆ
ಚೇರ್ಮನ್ರು: ಅಂಗಾರೆ ಇನ್ಮೇಲೆ ನೋ ಆಪ್ಲೇಸನ್ನಾ
ಅಮಾಸೆ: ಅಯ್ಯೋ ಒಳ್ಳೇ ಮಾತೇಳಿದ್ರಿ, ಯಡ್ಯೂರಪ್ನೋರು ಸುಮ್ಕೆ ಇರೋ ಜೀವಾನೇ. ಬಜೆಟ್ ಅದಿವೇಸ್ನದಾಗೆ ಏನಾರಾ ಮಾಡ್‌ಬೋದಾ ಅಂತಾ ಕಾಯ್ತಾವ್ರೆ. ಅದ್ಕೆ ಮುಂಬೈನಾಗೆ ಇರೋ ಜಾರ್ಕಿಹೊಳಿ, ನಾಗೇಂದ್ರ ಅವ್ರಿಗೆ ಇನ್ನೂ ವಸಿ ದಿನಾ ಅಲ್ಲೇ ಇದ್‌ಕಲಿ ಅಂತ ಹೇಳವ್ರಂತೆ. ಬಾಕ್ಸಿಂಗ್ ಚಾಂಪಿಯನ್ ಕಂಪ್ಲಿ ಗಣೇಶು ಅಲ್ಗೇ ಹೋಗಿ ಟೆಂಟ್ ಹಾಕವ್ರಂತೆ. ಒಟ್ಗೆ ಎಂಟ್ ಜನ ಆಗವ್ರೆ. ಅವ್ರ್ ಕೈನಾಗೆ ರಾಜೀನಾಮೆ ಕೊಡ್ಸಿ ಸರ್ಕಾರ್ಕೆ ಹೊಗೆ ಹಾಕ್ಸೋ ಪ್ರೋಗ್ರಾಂ ಯಡ್ಯೂರಪ್ನೋರ್ಧು.
ಚೇರ್ಮನ್ರು: ಸಿದ್ರಾಮಣ್ಣೋರ್ನ ಯಾಕ್ಲಾ ರಾಹುಲ್‌ಗಾಂಧಿ ಸಾಹೇಬ್ರು ಕರ್‌ದಿದ್ರಂತೆ
ಅಮಾಸೆ:ಎಂಟಿಬಿ ನಾಗರಾಜಣ್ಣೋರು, ಪುಟ್ಟರಂಗ್‌ಸೆಟ್ಟಿ ಅಣ್ಣೋರು, ಸುಧಾಕರಣ್ಣೋರು ನಮ್ಕೆಲ್ಲಾ ಸಿದ್ರಾಮಣ್ಣೋರು ಸಿಎಂ, ನಮ್ ಎದೆ ಬಗಿದ್ರೆ ಅವ್ರೇ ಇರ್ತಾರೆ ಅಂತ ಡಚಕ್ ಕೊಟ್ರಲ್ವಾ, ಜತ್ಗೆ ಎಸ್.ಟಿ. ಸೋಮ್‌ಶೇಖರಣ್ಣೋರು ಬಬ್ರುವಾಹ್ನ ಸ್ಟೈಲ್‌ನ್ಯಾಗೆ ಈ ಸರ್ಕಾರ್‌ದಾಗೆ ಯಾವ್ದು ಕೆಲ್ಸವೇ ಆಗ್ತಿಲ್ಲ, ನಮ್ ಸಿದ್ರಾಮಣ್ಣೋರು ಗೌರ್ನಮೆಂಟೇ ಚೆನ್ನಾಗಿತ್ತು. ಅಂದ್ರು, ಅದ್ಕೆ ಕುಮಾರಣ್ಣೋರು, ದೊಡ್‌ಗೌಡ್ರು ಫುಲ್ ರಾಂಗ್ ಆದ್ರು. ಮಾರ್ನೆ ದಿನ್ವೇ, ನನ್ ಕೆಲ್ಸ ಚಂದಾಗಿಲ್ಲಾ ಅಂದ್ರೆ ರಾಜೀನಾಮೆ ಕೊಟ್ಟೋಯ್ತೀನಿ, ನಾನೇನ್ ಗೂಟಾ ಹೊಡ್ಕಂಡಿಲ್ಲ ಹೋಗ್ರಿ ಅಂತ ಕುಮಾರಣ್ಣೋರು ಆವಾಜ್ ಬಿಟ್ರಾ. ದೊಡ್‌ಗೌಡ್ರು, ನಾವ್ ಎಷ್ಟ್ ದಿನಾ ಅಂತಾ ನೋವ್ ಸಯ್ಸಿಕೊಳ್ಳೋದು ಅಂತ ಗುಟ್ರಾ ಹಾಕಿದ್ರು ಅದ್ಕೆ ರಾಹುಲ್ ಸಾಹೇಬ್ರು ಗಡ ಗಡ ಆಗಿ, ಏನೋ ಗಡ್‌ಬಡ್ ಆಗ್ತಿದೆ ಅಂತ ಟೆನ್ಸನ್ ಆಗಿ ಸಿದ್ರಾಮಯ್ನಾಜಿ ಕಮ್ ಹಿಯರ್ ಅಂದ್ರಂತೆ
ಚೇರ್ಮನ್ರು: ಸಿದ್ರಾಮಣ್ಣೋರು ತೆನೆ ಪಕ್ಸದ್ ಮ್ಯಾಗೆ ದೂರ್ ಹೇಳಿದ್ರಂತೆ ಹೌದೇನ್ಲಾ
ಅಮಾಸೆ:ಅಂಗಂತಾರೆ ಸಾ.. ತೆನೆ ಪಕ್ಸ್‌ದೋರ್ ಹತ್ರ ಹುಸಾರಾಗಿರ್‌ಬೇಕು ರಾಹುಲ್‌ಜೀ. ನಾನ್ ಅಲ್ಲೇ ಇಧ್ದೋನು. ಗೌಡ್ರ ವರ್ಸೆ ನಂಗೊತ್ತು. ನಮ್ ಮ್ಯಾಗೆ ಫ್ರೆಸರ್ ಹಾಕ್ತಾವ್ರೆ. ಎಂಪಿ ಎಲೆಕ್ಸನ್‌ಗೆ ಇಬ್ರೂ ಕೂಡಿ ಹೋದ್ರೆ ನಮ್ಗೆ ಅಷ್ಟೇನೂ ಲಾಭಾ ಆಗಾಕಿಲ್ಲಾ, ಅವ್ರಿಗೆ ಜಾಸ್ತಿ ಆಯ್ತದೆ. ಎಲೆಕ್ಸನ್ ಆದ್‌ಮ್ಯಾಗೆ ಅವ್ರು ಎನ್‌ಡಿಎ ಕಡೆ ಹೋದ್ರೂ ಹೋಗ್‌ಬೋದು ಅಂತ ಹೇಳಿದ್ರಂತೆ. ಪಕ್‌ದಾಗೆ ಇದ್ದ ದಿನೇಸಣ್ಣೋರ್ಗು ಹೌದಲ್ವಾ ದಿನೇಸ್ ಅಂದ್ರಂತೆ, ಏನ್ ಹೇಳ್‌ಬೇಕು ಅಂತ ಗೊತ್ತಾಗ್ದೆ ದಿನೇಸಣ್ಣೋರು ತಲೆ ಅಲ್ಲಾಡ್ಸಿದ್ರಂತೆ
ಚೇರ್ಮನ್ರು:ಅದ್ಕೆ ರಾಹುಲ್ ಅಣ್ಣೋರು ಏನ್ ಹೇಳಿದ್ರಂತೆ
ಅಮಾಸೆ:ಆಯ್ತು, ವಸಿ ಎಲೆಕ್ಸನ್‌ಗಂಟಾ ಚುಪ್ ರಹೋ. ಯಾರ್ ಯಾರ್ಯಾರ್ ಜತೆ ಅಡ್‌ಜಸ್ಟ್ ಆಗವ್ರೆ ನಂಗೂ ಗೊತ್ತೈತೆ, ಯಾರೂ ಬಾಯ್ ಬಿಡ್ದಂಗೆ ನೀವೂ ನೋಡ್ಕಳಿ, ಇಲ್ಲಾಂದ್ರೆ ನ್ಯಾಷನಲ್ ಲೆವೆಲ್‌ನ್ಯಾಗೆ ನಮ್ಕೆ ಟೆನ್ಸನ್ ಆಯ್ತದೆ ಅಂದ್ರಂತೆ
ಚೇರ್ಮನ್ರು: ಅದ್ಕೆ ಸಿದ್ರಾಮಣ್ಣಾರು ಏನ್ ಹೇಳಿದ್ರಂತೆ
ಅಮಾಸೆ: ಆಯ್ತು, ನೀವ್ ಹೇಳಿದ್ರಿ ಅಂತ ಸೈಲಂಟ್ ಆಗ್ತೀವಿ. ಎಂಪಿ ಎಲೆಕ್ಸನ್‌ಗಂಟಾ ಸುಮ್‌ಕಿರ್ತೀವಿ. ಆಮ್ಯಾಗೆ ನೀವೇ ನಮ್ ಕಾಪಾಡ್‌ಬೇಕು ಅಂತೇಳಿ ಬಂದ್ರಂತೆ.
ಚೇರ್ಮನ್ರು:ಸುಮಲತಾ ಮೇಡಮ್ಮು ಮಂಡ್ಯ ಎಲೆಕ್ಸನ್‌ಗೆ ನಿಲ್ತಾರಂತೆ ಔದೇನ್ಲಾ
ಅಮಾಸೆ:ಚೆಲುವಣ್ಣೋರು ಅಂಗಂತಾ ಹೇಳವ್ರೆ, ಕಾಂಗ್ರೆಸ್ ಹೈಕ್ಳ್ ಬೆಂಗ್ಳೂರ್‌ಗಂಟಾ ಬಂದೂ ಸುಮಲತಾ ಮೇಡಮ್ಮು ನೀವೇ ನಿಂತ್ಕೋಬೇಕು ಅಂತ ಹೇಳವ್ರೆ, ಮೇಡಮ್ಮು, ಆಯ್ತು, ಮಂಡ್ಯ ಮ್ಯಾಗೆ ನಮ್ಗೆ ಪ್ರೀತಿ, ನಾನು, ನನ್ ಮಗ ಮಂಡ್ಯ ಮೆರೆಯೋದುಂಟಾ ಅಂತಾ ಹೇಳಿ ಕಳ್ಸವ್ರಂತೆ. ಇದ್ರಾಗ್ ಯಾರೋ ಆಟ ಆಡ್ತಾವ್ರೆ ಅಂತ ಡೌಟು. ನೋಡೂಮಾ ಏನ್ ಆಯ್ತದೋ. ನನ್ ಹೆಂಡ್ರು ಕೈಮಾ ತತ್ತಾ ಅಂತ ಹೇಳವ್ಲೆ, ಬತ್ತೀನಿ ಸಾ…..
ಯಡ್ಯೂರಪ್ನೋರು ಸಿಎಂ ಆಯ್ತೀನಿ ಅಂತ ಕೇರಳ ಜ್ಯೋತಿಸಿ ಮಾತ್ ಕೇಳ್ಕಂಡು ತಾಯ್ತ ಕಟ್ಸ್ಕಂಡವ್ರೆ ಅಂತ ರೇವಣ್ಣೋರ್ಗೆ ಪಸರ್ ಸಿಕ್ತು. ಅದ್ಕೆ ಅವ್ರು ಯಡ್ಯೂರಪ್ನೋರ್ಗೆ ಜಾತ್ಕ ನೋಡಿ ಭವಿಸ್ಯ ಹೇಳಿದ್ನಲ್ಲಾ ಆ ಐನೋರ್ನೆ ಹುಡ್ಕಂಡ್ ಹೋಗಿ ಏನಾಯ್ತದೆ ಹೇಳಿ ವಸಿ ಅಂದ್ರಂತೆ. ಅದ್ಕೆ ಅವ್ರು ಕೇರಳ ಪಂಚಾಂಗ ಪ್ರಕಾರ ಯಡ್ಯೂರಪ್ನೋರ್ಗೆ ಲಕ್ ಐತೆ ತಾಯ್ತ ಕಟ್ಟೀವ್ನಿ ಆದ್ರೆ ತಮಿಳ್‌ನಾಡ್ ಪಂಚಾಂಗ ಪ್ರಕಾರ ಸ್ವಲ್ಪ ಡೇಂಜರ್ ಅಂದ್ರಂತೆ. ಅದ್ಕೆ ರೇವಣ್ಣೋರು ನಾನ್ ತಮಿಳ್‌ನಾಡ್ ಪಂಚಾಂಗ ನೋಡಿದ್ದೀನಿ, ನಿಂಬೆ ಹಣ್ಣೂ ಇಟ್ಟೀವ್ನಿ ಏನೂ ಆಗಾಕಿಲ್ಲಾ. ಇದು ಯಡ್ಯೂರಪ್ನೋರ್ಗು ಗೊತ್ತು ಅದ್ಕೆ ಸೈಲಂಟಾಗವ್ರೆ ಅಂತ ಕಣ್‌ಮಿಟಿಕ್ಸುದ್ರು
• ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.