ಹೊರಳು ನೋಟ 2022; ಪ್ರಮುಖ ಘಟನೆಗಳು-ವಾರಾಂತ್ಯ ಕರ್ಫ್ಯೂ, ಕರ್ನಾಟಕದ ಐವರಿಗೆ ಪದ್ಮ ಪುರಸ್ಕಾರ
ಶಿವಮೊಗ್ಗ ನಗರದಾದ್ಯಂತ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು
Team Udayavani, Dec 14, 2022, 12:37 PM IST
ಮಕ್ಕಳಿಗೆ ಕೋವಿಡ್ ಲಸಿಕೆ
ಜ.3ರಂದು ರಾಜ್ಯದ 15-18 ವರ್ಷ ಮಕ್ಕಳಿಗೆ ಕೋವಿಡ್ ಲಸಿಕೆ ವಿತರಿಸುವ ಕಾರ್ಯವನ್ನು ಆರಂಭಿಸಲಾಯಿತು. ರಾಜ್ಯದ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ರಾಜ್ಯದ ಎಲ್ಲ ಪ್ರೌಢ ಹಾಗೂ ಪಿಯು ಕಾಲೇಜುಗಳಲ್ಲಿ ಲಸಿಕೆ ನೀಡುವ ಸೌಲಭ್ಯ ಒದಗಿಸಿತ್ತು. ಮೊದಲ ದಿನದಂದು ರಾಜ್ಯದ 4.14ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿತ್ತು.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಆರಂಭ
ಮೇಕೆದಾಟು ಯೋಜನೆಯ ತ್ವರಿತ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಜ.9ರಂದು ಕನಕಪುರದಿಂದ ಪಾದಯಾತ್ರೆ ಆರಂಭಿಸಿತು. ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳುವುದಾಗಿ ಸರಕಾರ ಎಚ್ಚರಿಕೆ ನೀಡಿತ್ತು. ಜ.10ರಂದು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ 30 ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅನಂತರ ಜ.12ರಂದು ಕೋವಿಡ್ ಕೇಸು ಹೆಚ್ಚುತ್ತಿರುವ ಸಮಯದಲ್ಲಿ ಪಾದಯಾತ್ರೆಗೆ ಅವಕಾಶ ನೀಡಿದ್ದಕ್ಕೆ ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ ರಾಜ್ಯ ಸರಕಾರ ಯಾತ್ರೆಗೆ ನಿರ್ಬಂಧ ವಿಧಿಸಿತು. ಆ ಬಳಿಕ ಕಾಂಗ್ರೆಸ್ ನಾಯಕರು ಅನಿವಾರ್ಯವಾಗಿ ಪಾದಯಾತ್ರೆಯನ್ನು ಸ್ಥಗಿತಗೊಳಿಸಿದರು.
ವಾರಾಂತ್ಯ ಕರ್ಫ್ಯೂ
ನಿರಂತರವಾಗಿ ಹೆಚ್ಚುತ್ತಿದ್ದ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜ.7ರಿಂದ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿತ್ತು. ವಾರಾಂತ್ಯ ಕರ್ಫ್ಯೂ ವೇಳೆ ಆವಶ್ಯಕ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿತ್ತು. ತುರ್ತು ಸೇವೆ ಹಾಗೂ ಸರಕಾರಿ ಸೇವೆಗಳಿಗೆ ಹೋಗುವವರು ಗುರುತಿನ ಚೀಟಿ ತೋರಿಸಿ ಸಂಚರಿಸಲು ಅನುಮತಿ ನೀಡಲಾಗಿತ್ತು. ಸರಕಾರದ ಈ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ ಮತ್ತು ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದರಿಂದ ಜ.21 ರಂದು ವಾರಾಂತ್ಯ ಕರ್ಫ್ಯೂ ಅನ್ನು ರದ್ದುಗೊಳಿಸಲಾಗಿತ್ತು.
ಕ್ಯಾಚ್ ದ ರೈನ್ ರಾಜ್ಯಕ್ಕೆ ಮೊದಲ ಸ್ಥಾನ
ಪ್ರಧಾನಿ ನರೇಂದ್ರ ಮೋದಿ ಅವರ “ಕ್ಯಾಚ್ ದ ರೈನ್’ ಕರೆಯ ಮೇರೆಗೆ ಆರಂಭಿಸಲಾದ ಅಭಿಯಾನದಡಿ 4.87 ಲಕ್ಷ ರೂ. ಮೌಲ್ಯದ ಕಾಮಗಾರಿ ಪೂರ್ಣಗೊಳಿಸುವ ಮೂಲಕ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನ ಪಡೆದಿದೆ ಎಂದು ಫೆ.2ರಂದು ಘೋಷಿಸಲಾಯಿತು.
ಕಾಶ್ಮೀರಕ್ಕೆ ಶೃಂಗೇರಿ ಮಠದಿಂದ ವಿಗ್ರಹ
ಶಾರದೆಯ ಮೂಲ ನೆಲೆಯಾಗಿರುವ ಕಾಶ್ಮೀರದಲ್ಲಿ ನಿರ್ಮಾಣವಾಗಲಿರುವ ದೇಗುಲಕ್ಕೆ ಪ್ರಸ್ತುತ ಶೃಂಗೇರಿಯ ದೇವಸ್ಥಾನದಲ್ಲಿರುವ ಮೂಲ ವಿಗ್ರಹವನ್ನೇ ಹೋಲುವ ವಿಗ್ರಹವನ್ನು ನಿರ್ಮಾಣ ಮಾಡಿಕೊಡಲಾಗುವುದು ಎಂದು ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥರು ಫೆ.3 ತಿಳಿಸಿದ್ದರು.
ಬಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆ: ಭುಗಿಲೆದ್ದ ಹಿಂಸಾಚಾರ
ಶಿವಮೊಗ್ಗದಲ್ಲಿ ಫೆ.20ರ ರವಿವಾರ ರಾತ್ರಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬಜರಂಗ ದಳ ಕಾರ್ಯಕರ್ತ ನಾಗಿದ್ದ ಹರ್ಷನನ್ನು ಹತ್ಯೆ ಮಾಡಿದ ಘಟನೆ ಇಡೀ ನಗರವನ್ನು ತಲ್ಲಣಗೊಳಿಸಿತ್ತು. ಈ ಘಟನೆಯ ವಿರುದ್ಧ ಹಲವಾರು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು. ಉದ್ರಿಕ್ತ ಗುಂಪುಗಳು ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದರ ಪರಿಣಾಮ ಪೂರ್ಣ ಶಿವಮೊಗ್ಗ ಹಿಂಸಾಚಾರದ ನೆಲೆಯಾಗಿ ಮಾರ್ಪಾಡಾಗಿತ್ತು. ಒಂದು ವಾರ ಕಾಲ ಶಿವಮೊಗ್ಗ ನಗರದಾದ್ಯಂತ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ನೆರೆಯ ದಾವಣಗೆರೆ, ಚಿಕ್ಕಮಗಳೂರು, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮೂವರನ್ನು ಆ ಕೂಡಲೇ ಪೊಲೀಸರು ಬಂಧಿಸಿದ್ದು, ಫೆ.22 ರಂದು ಪ್ರಮುಖ ಆರೋಪಿಗಳನ್ನು ಸೆರೆ ಹಿಡಿಯಲಾಯಿತು. ಹಿಂದೂ ಸಂಘಟನೆಗಳ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಿತ್ತು.
ಪ್ರಮುಖ ಘಟನೆಗಳು;
ಜನವರಿ 2022
ಜ. 1: ಸ್ಥಿರಾಸ್ತಿ ನೋಂದಣಿ ಮಾರ್ಗಸೂಚಿ ದರದಲ್ಲಿ ಶೇ.10 ರಿಯಾಯಿತಿ ಘೋಷಣೆ
*ಬಿಎಸ್‌ವೈ, ಹಾಜಬ್ಬರಿಗೆ ಬೆಂಗಳೂರು ಪ್ರಸ್ ಕ್ಲಬ್‌ನ ವರ್ಷದ ವ್ಯಕ್ತಿ ಪ್ರಶಸ್ತಿ
ಜ.4: ಕಲಬುರಗಿಯಲ್ಲಿ ರಾಜ್ಯ ಪತ್ರಕರ್ತರ 36ನೇ ಸಮ್ಮೇಳನ
ಜ.5: ಬೆಂಗಳೂರಿನಲ್ಲಿ ಎನ್ ಐಎ ಕಚೇರಿ ಸ್ಥಾಪನೆಗೆ ಅನುಮೋದನೆ
ಜ.6:ಗಾಂಧಿ ಸಾಕ್ಷಿ ಕಾಯಕ, ಇ-ಬೆಳಕು ತಂತ್ರಾಶ ಅನುಷ್ಠಾನಕ್ಕೆ ಚಾಲನೆ
*ಚಿತ್ರದುರ್ಗದಲ್ಲಿ ಸಿದ್ದರಾಮಯ್ಯರಿಗೆ ಮಾಚಿದೇವಶ್ರೀ ಪ್ರಶಸ್ತಿ ಪ್ರದಾನ
ಜ.7: ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ
ಜ.10: ಕವಿ, ನಾಟಕಕಾರ, ಕನ್ನಡಪರ ಹೋರಾಟಗಾರ ಚಂದ್ರಶೇಖರ ಪಾಟೀಲ ನಿಧನ
ಜ.12: ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಡಾ| ಜಿ. ಎಲ್. ಹೆಗಡೆ ನೇಮಕ
ಜ.14: ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಳ ಆದೇಶ
ಜ.21:2021ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ
ಜ.24: ಪರೀಕ್ಷಾ ತಂತ್ರಾಂಶ ಹಾಗೂ ಡಿಜಿಟಲ್ ಶೈಕ್ಷಣಿಕ ಪ್ರಮಾಣಪತ್ರ ಒದಗಿಸುವ “ಇ-ಸಹಮತಿ’ಗೆ ಚಾಲನೆ
ಜ. 25: ರಾಜ್ಯದ 75 ಸರಕಾರಿ ಶಾಲೆಗಳನ್ನು “ನೇತಾಜಿ ಅಮೃತ ಶಾಲೆ’ ಎಂದು ಘೋಷಣೆ
ಜ.26: ರಾಯಣ್ಣ ಹೆಸರಿನಲ್ಲಿ ಮಿಲಿಟರಿ ಶಾಲೆ ಆರಂಭ; ಬೊಮ್ಮಾಯಿ ಘೋಷಣೆ
ಜ.29: ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ರದ್ದು ಫೆಬ್ರವರಿ 2022
ಫೆ.2: ಮಹಾಲಿಂಗಪುರ: ನೀಟ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯಲ್ಲಿ ಕರ್ನಾಟಕದ ಚಿದಾನಂದ್ ದೇಶಕ್ಕೆ ಪ್ರಥಮ
*ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ನಿಧನ ಫೆ. 4: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ ಪದ್ಮಶ್ರೀ ಪಂಡಿತ್ ಎಂ. ವೆಂಕಟೇಶ
*ಕುಮಾರ ಅವರಿಗೆ ಕಾಳಿದಾಸ ಸಮ್ಮಾನ
*ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ರಾಜ್ಯದ ಸ್ತಬ್ಧ ಚಿತ್ರಕ್ಕೆ ಎರಡನೇ ಬಹುಮಾನ
ಫೆ.6: ಇಂಧನ ಇಲಾಖೆ ನೇಮಕದಲ್ಲಿ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣ ಕಡ್ಡಾಯ ಆದೇಶ
ಫೆ. 7: ರಾಜ್ಯದಲ್ಲಿ ತಾರಕಕ್ಕೇರಿದ ಹಿಜಾಬ್ v/s ಕೇಸರಿ ಶಾಲು ವಿವಾದ
ಫೆ.12: ಕಲಘಟಗಿ: ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಫೆ.14: ನಟಿ ಭಾರ್ಗವಿ ನಾರಾಯಣ್ ನಿಧನ
ಫೆ.16: ಸಾಹಿತಿ, ಕವಿ ಚೆನ್ನವೀರ ಕಣವಿ ನಿಧನ
ಫೆ.21: ಹಿರಿಯ ನಟ, ಕಲಾ ತ ಪಸ್ವಿ ರಾಜೇಶ್ ನಿಧನ
ಫೆ.22: ಹರಿಹರದಲ್ಲಿ 108 ತುಂಗಾರತಿ
*ಯೋಗಮಂಟಪ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ
ಫೆ.24:ಕಲುಬುರಗಿ: ಜೇವರ್ಗಿಗೆ ಪ್ರಧಾನಿ ಮೋದಿ ಭೇಟಿ
ಫೆ.26: ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಗೆ ವಸ್ತ್ರಸಂಹಿತೆ ಕಡ್ಡಾಯ ಆದೇಶ
ಫೆ.27: ಕಾಂಗ್ರೆಸ್‌ನಿಂದ ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ಆರಂಭ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.