ಹಳ್ಳಿ – ಪೇಟೆ ವಾಸದ ಮಂಥನ ಡಾ| ಕಾರಂತರ “ಚಿಗುರಿದ ಕನಸು’


Team Udayavani, Nov 21, 2020, 5:30 AM IST

ಹಳ್ಳಿ – ಪೇಟೆ ವಾಸದ ಮಂಥನ ಡಾ| ಕಾರಂತರ “ಚಿಗುರಿದ ಕನಸು’

ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.

ಹುಟ್ಟಿ ಬೆಳೆದ ನೆಲವನ್ನು ಬಿಟ್ಟು ಪೇಟೆಯ ಮೋಹಕ ಬಲೆಯೊಳಗೆ ಸಿಲುಕಿ ತಮ್ಮ ಮೂಲ ನೆಲೆ, ಅಲ್ಲಿನ ಪರಿಸರ, ಬಂಧು ಬಾಂಧವ್ಯದ ಬಗ್ಗೆ ಕಿಂಚಿತ್ತೂ ಚಿಂತಿಸದೆ ಆಧುನಿಕ ಬದುಕಿನ ದಾಸರಾಗಿರುವವರು ಡಾ| ಶಿವರಾಮ ಕಾರಂತರ “ಚಿಗುರಿದ ಕನಸು’ ಕಾದಂಬರಿಯನ್ನು ಓದಿದರೆ ಅದ್ಭುತ ಬದಲಾವಣೆ ಸಾಧ್ಯ.

ಕಾದಂಬರಿಯ ನಾಯಕ ಶಂಕರ ಹುಟ್ಟಿ ಬೆಳೆದದ್ದು ಮುಂಬಯಿಯಲ್ಲಿ. ಆದರೂ ತನ್ನ ಮೂಲ ಸ್ಥಳ ಮುಂಬಯಿ ಅಲ್ಲ ಎಂದು ಅವನ ಮನಸ್ಸು ಹೇಳುತ್ತಿ ರುತ್ತದೆ. ತಂದೆ ಯೊಂದಿಗಿನ ಒಂದು ಸಣ್ಣ ಮಾತುಕತೆ ಸಂದರ್ಭದಲ್ಲಿ, “ನಿಮ್ಮ ತಾತ, ಅಂದರೆ ನನ್ನ ತಂದೆ ಮೂಲತಃ ಇಲ್ಲಿಯವರಲ್ಲ. ಅದ್ಯಾವುದೋ ಬೆಳ್ತಂಗಡಿಯ ಪಕ್ಕದ ಬಂಗಾಡಿ ಎಂಬ ಹಳ್ಳಿಯವರು’ ಎಂದು ಹೇಳಿದ ಬಳಿಕ ಶಂಕರನಲ್ಲಿ ದೊಡ್ಡ ಬದಲಾವಣೆ ಕಂಡು ಬರುತ್ತದೆ.

ಶಂಕರನು ಮುಂಬಯಿಯಲ್ಲಿ ಪ್ರೀತಿಸಿದ್ದ ಹುಡುಗಿಯನ್ನೂ ಅಗಲಿ ಸೀದಾ ಬಂಗಾಡಿ ಯೆಂಬ ಊರನ್ನು ಹುಡುಕುತ್ತಾ ಹೋಗಿ ಅಲ್ಲಿಯೇ ನೆಲೆ ನಿಲ್ಲುತ್ತಾನೆ. ಅಲ್ಲಿ ಎದು ರಾಗುವ ಶಾನುಭೋಗರ ಉಪದ್ರದ ಮಧ್ಯೆಯೂ ಪಾಳು ಬಿದ್ದ ಮನೆಯನ್ನು ಸರಿಪಡಿಸಿ, ಗದ್ದೆ ಉಳುಮೆ ಮಾಡಿ ಬೆಳೆ ಬೆಳೆದು, ಅಬ್ಬಿ ಫಾಲ್ಸ್‌ಗೆ ಮೋಟಾರ್‌ ಇರಿಸಿ ವಿದ್ಯುತ್‌ ಉತ್ಪಾದಿಸುತ್ತಿದ್ದ. ತಾತನ ಸಹೋದರಿಯ (ಅಜ್ಜಿಯ) ಕೊನೆಯ ಕ್ಷಣಗಳಲ್ಲಿ ಅವಳ ಆಸೆಯನ್ನು ಪೂರೈಸಿ ಅವಳನ್ನು ಆರೈಕೆ ಮಾಡುತ್ತಾನೆ. ಬಂಗಾಡಿಯು ಮತ್ತೆ ಹಸುರಿನಿಂದ ಕಂಗೊಳಿಸುವಂತೆ ಮಾಡುತ್ತಾನೆ.

ಶಂಕರನಿಗೆ ಗದ್ದೆಯ ಮಣ್ಣು, ನೀರಾವರಿ, ಮಲೆನಾಡಿನ ಬಿರುಸಾದ ಮಳೆ… ಮುಂತಾ ದವುಗಳ ಬಗ್ಗೆ ಯಾವುದೇ ಮಾಹಿತಿ ಇರದಿದ್ದರೂ ತಾತನ ಜಾಗದಲ್ಲಿ ನೆಲೆನಿಂತು ಅಜ್ಜನನ್ನು ಮರು ಸೃಷ್ಟಿಸುವ ರೋಚಕತೆ ಯನ್ನು ಕಾರಂತರು ವರ್ಣಿಸಿದ್ದಾರೆ.

ಈ ಕೃತಿಯ ಬರವಣಿಗೆ ಶೈಲಿ ಓದುಗನನ್ನು ಹಿಡಿದಿಡುತ್ತದೆ. ಕಾದಂಬರಿಯನ್ನು ಓದುತ್ತಾ ಸಾಗುವಾಗ ಧಾರಾಕಾರ ಮಳೆಯ ಮಧ್ಯೆ ನಿಂತಿದ್ದೇವೆ, ಗದ್ದೆಯನ್ನು ಉಳುತ್ತಿದ್ದೇವೆ, ಘಟ್ಟದ ತುದಿಯಲ್ಲಿ ನಿಂತು ಮಾತನಾಡು ತ್ತಿದ್ದೇವೆ ಇತ್ಯಾದಿ ಭಾವನೆ ಓದುಗನಲ್ಲಿ ಮೂಡುತ್ತದೆ.

ಕಾರಂತರು ಬಳಸಿದ ಭಾಷಾ ಶೈಲಿ, ಕಾದಂಬರಿಯಲ್ಲಿ ಬರುವ ತಿರುವುಗಳು, ಪ್ರೇಮ ವಿರಹದ ಕ್ಷಣ, ತಂದೆ ಮಗನ ಸಂಬಂಧ ಎಲ್ಲವೂ ಅದ್ಭುತ ವಾಗಿವೆ. 2003ರಲ್ಲಿ ಈ ಕಾದಂಬರಿಯು ಶಿವರಾಜ ಕುಮಾರ್‌ ನಟನೆ ಯಲ್ಲಿ ಟಿ.ಎಸ್‌. ನಾಗಾ ಭರಣ ನಿರ್ದೇಶನದಲ್ಲಿ ಸಿನೆಮಾ ಆಗಿ ರಾಜ್ಯ ಮಟ್ಟದ ಪ್ರಶಸ್ತಿ ಗಳನ್ನು ಕೂಡ ಗೆದ್ದಿತ್ತು.

ಕೊರೊನಾ ಸಂದರ್ಭದಲ್ಲಿ ಒಂದು ದೊಡ್ಡ ವರ್ಗ ಕೃಷಿಯತ್ತ ವಾಲಿದ್ದು, ಅಂಥವರು ಈ ಕೃತಿಯನ್ನು ಓದಿದರೆ ಒಳಿತು. ಪೇಟೆಯ ಖುಷಿ ಕ್ಷಣಿಕವಾದುದು ಮತ್ತು ಹಳ್ಳಿಯ ಬಹುಶ್ರೀಮಂತಿಕೆಯು ನಮಗೆ ಎಲ್ಲ ರೀತಿಯಲ್ಲೂ ಸಂತೋಷವನ್ನು ಕೊಡುತ್ತದೆೆ. ಜತೆಗೆ ಕೃಷಿಯ ಮಹತ್ವದ ಬಗ್ಗೆಯೂ, ಪರಿಸರದ ಬಗ್ಗೆಯೂ ಈ ಕೃತಿಯು ನಮಗೆ ಸಾಕಷ್ಟು ಮಾಹಿತಿ ನೀಡುತ್ತದೆ.

ಆಧುನಿಕತೆಯ ಭರಾಟೆಯಲ್ಲಿ ನಮ್ಮ ಪೂರ್ವಜರ ನೆಲೆಯನ್ನು ದೂರ ಮಾಡಿ, ಕೃಷಿಯನ್ನು ಮರೆತರೆ ಏನೇನು ಸಂಕಷ್ಟಗಳು ಎದುರಾಗಲಿವೆ ಎಂಬ ಬಗ್ಗೆಯೂ ಕೃತಿ ನಮ್ಮ ಕಣ್ಣು ತೆರೆಸುತ್ತದೆ. ಕೃತಿಯು ಹಳ್ಳಿ ಮತ್ತು ಪೇಟೆವಾಸದ ನಡುವಿನ ವ್ಯತ್ಯಾಸ, ಪ್ರಕೃತಿಯ ಮಡಿಲಿನ ಖುಷಿಯನ್ನು ಸುಂದರ ಶಬ್ದಗಳಲ್ಲಿ ನಮಗೆ ಕಟ್ಟಿ ಕೊಡುವಲ್ಲಿ ಸಫ‌ಲವಾಗಿದೆ. ಮಳೆಯ ಜತೆ ನಮ್ಮನ್ನು ಓದಿಸುತ್ತಾ ಹೋಗುವ ಈ ಕಾದಂಬರಿ ಚೆನ್ನಾಗಿದೆ.

ಬಸನಗೌಡ ಪಾಟೀಲ್‌, ಯರಗುಪ್ಪಿ

ಟಾಪ್ ನ್ಯೂಸ್

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.