Yakshagana ವಿಮರ್ಶೆ; ಗಡಿನಾಡಲ್ಲಿ “ಸಿರಿಬಾಗಿಲು ಯಕ್ಷವೈಭವ”
Team Udayavani, Jul 28, 2024, 6:00 AM IST
ಗಡಿನಾಡು ಕಾಸರಗೋಡು ಸನಿಹದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ಇತ್ತೀಚೆಗೆ ಇನ್ನೊಂದು ಚಾರಿತ್ರಿಕ ಸಾಂಸ್ಕೃತಿಕ ಕಲೋತ್ಸವಕ್ಕೆ ಸಾಕ್ಷಿಯಾಯಿತು. ಅದುವೇ “ಸಿರಿಬಾಗಿಲು ಯಕ್ಷವೈಭವ.
ಜುಲೈ 17ರಿಂದ ಜುಲೈ 20ರ ವರೆಗೆ ನಿರಂತರ ನಾಲ್ಕು ದಿನಗಳ ಕಾಲ ಬೆಳಗ್ಗೆ ಗಂಟೆ 9ರಿಂದ ರಾತ್ರಿ ಗಂಟೆ 10ರ ವರೆಗೆ ತೆಂಕು-ಬಡಗುತಿಟ್ಟಿನ 25 ಹವ್ಯಾಸಿ ಯಕ್ಷಗಾನ ಕಲಾ ತಂಡಗಳ ಯಕ್ಷಗಾನ ಪ್ರದರ್ಶನ ನಡೆಯಿತು. ಪ್ರತೀ ತಂಡಕ್ಕೆ ನೀಡಿದ ಸಮಯ ಒಂದೂವರೆ ಗಂಟೆ. ಸುಮಾರು 600 ಕಲಾವಿದರು ಯಕ್ಷ ವೈಭವದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಯಕ್ಷವೈಭವದ ರೂವಾರಿ ಸಿರಿಬಾಗಿಲು ರಾಮಕೃಷ್ಣ ಮಯ್ಯರ ನೇತೃತ್ವದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು. ತೆಂಕು- ಬಡಗು ತಂಡಗಳು ತಿಟ್ಟು ಭೇದವಿಲ್ಲದೆ ಹವ್ಯಾಸಿ ತಂಡಗಳು ಭಾಗವಹಿಸಿ ಆಯೋಜಕರ ಸಂಕಲ್ಪಕ್ಕೆ ಸ್ಪಂದಿಸಿ ದರು. ನಾಲ್ಕು ವರ್ಷದ ಮಗುವಿನಿಂದ ತೊಡಗಿ ಎಪ್ಪತ್ತು ವರ್ಷದ ಹಿರಿಯರ ವರೆಗೆ ಗೆಜ್ಜೆಕಟ್ಟಿ ಕುಣಿದು ಸಂಭ್ರಮಿಸಿದರು.
ಯುಟ್ಯೂಬ್ ಮೂಲಕ ನೇರಪ್ರಸಾರ ಇದ್ದುದರಿಂದ ದೇಶ- ವಿದೇಶಗಳ ಯಕ್ಷಾಭಿಮಾನಿಗಳು ಪ್ರದರ್ಶನಗಳನ್ನು ಕಣ್ಣು ತುಂಬಿಕೊಂಡರು. ಸಿರಿಬಾಗಿಲಿನ ಗೆಜ್ಜೆಯ ಸ್ವರ ಅನುರಣಿಸಿತು.
ಭಾಗವಹಿಸಿದ ತಂಡಗಳು ಹಾಗೂ ಪ್ರಸಂಗ: ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ ಕೂಡ್ಲು ಪ್ರಸಂಗ ಸುದರ್ಶನ ವಿಜಯ, ಶುಭವರ್ಣ ಯಕ್ಷ ಸಂಪದ (ರಿ) ಮರಕಡ ಶ್ರೀ ಕೃಷ್ಣ ಲೀಲಾಮೃತಂ, ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರ ಮಕ್ಕಳ ಮೇಳ ತಲೆಕಳ ಶಿವಲೀಲಾ, ಯಕ್ಷ ಭಾರತ ಸೇವಾ ಪ್ರತಿಷ್ಠಾನ (ರಿ) ವಿಟ್ಲ-ಶಾಂಭವಿ ವಿಲಾಸ, ಸಾಯಿ ಕಲಾ ಯಕ್ಷಬಳಗ ಬಾಲವನ ಪುತ್ತೂರು-ದಕ್ಷಯಜ್ಞ, ಚಿರಂಜೀವಿ ಯಕ್ಷಗಾನ ಕಲಾಸಂಘ ಕುಂಟಾಲು ಮೂಲೆ ನರಕಾಸುರ ಮೋಕ್ಷ, ಸುಬ್ರಹ್ಮಣ್ಯೇಶ್ವರ ಪ್ರೌಢ ಶಾಲೆ ಕಾಟುಕುಕ್ಕೆ ಬಬ್ರುವಾಹನ ಕಾಳಗ, ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸಂಘ ಮಧೂರು- ಕಂಸ ವಧೆ, ಯಕ್ಷಕದಂಬ ಹವ್ಯಾಸಿ ಯಕ್ಷ ಗಾನ ಕಲಾ ಸಂಘ ಅಲೆತ್ತೂರು ಬಿ.ಸಿ.ರೋಡು- ಇಂದ್ರಜಿತು ಕಾಳಗ, ಕಲಾ ಗಂಗೋತ್ರಿ ಯಕ್ಷಗಾನ ಕೇಂದ್ರ ಸೋಮೇಶ್ವರ ಉಚ್ಚಿಲ-ಕರ್ಣ ಪರ್ವ, ಸರಯೂ ಯಕ್ಷಬಳಗ ಕೋಡಿಕಲ್ ಮಂಗಳೂರು-ವೀರ ಶತಕಂಠ, ಶ್ರೀ ದುರ್ಗಾ ಪರಮೇಶ್ವರೀ ಯಕ್ಷಮಿತ್ರಬಳಗ ವಾಮದಪದವು-ರುಕಾ¾ಂಗದ ಚರಿತ್ರೆ, ಶ್ರೀ ಯಕ್ಷನಿಧಿ (ರಿ) ಮೂಡಬಿದಿರೆ-ಸತ್ವಪರೀಕ್ಷೆ, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಕೈರಂಗಳ- ಕೈರವಾಸ್ಯಕಾಳಗ, ಯಕ್ಷಾರಾಧನಾ ಕಲಾ ಕೇಂದ್ರ ಉರ್ವ ಮಂಗಳೂರು,- ಸುದಕ್ಷಿಣ ವಧೆ, ಶ್ರೀ ಕೃಷ್ಣ ಮುಖ್ಯಪ್ರಾಣ ಯುವ ಹವ್ಯಾಸಿ ಯಕ್ಷಗಾನ ಬಳಗ ಉಡುಪಿ-ನರಕಾಸುರ ವಧೆ, ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ (ರಿ) ಪೆರ್ಲ-ಸುದರ್ಶನ ವಿಜಯ, ಶ್ರೀ ಸೋಮನಾಥೇಶ್ವರ ಯಕ್ಷಗಾನ ಕಲಾ ಸಂಘ ಬೋಳಂತೂರು-ಶ್ರೀಕೃಷ್ಣ ಜನ್ಮ-ಲೀಲೆ-ಗುರುದಕ್ಷಿಣೆ, ಸನಾತನ ಯಕ್ಷಾಲಯ (ರಿ) ಮಂಗಳೂರು-ಕರ್ಣಪರ್ವ, ಹವ್ಯಾಸಿ ಯಕ್ಷಬಳಗ ಕೋಳ್ಯೂರು-ಮೈಂದದ್ವಿವಿದ, ಯಕ್ಷಾಂಗಿನಿ ಬಳಗ ಸಾಗರ ಜಾಂಬವತಿ ಕಲ್ಯಾಣ, ಮತ್ಸéಗಂಧ ಬಗ್ವಾಡಿ ಕುಂದಾಪುರ-ವೀರಮಣಿ ಕಾಳಗ, ಶ್ರೀಭಗವತೀ ಯಕ್ಷಕಲಾ ಬಳಗ(ರಿ)ಪುತ್ತೂರು ಉಡುಪಿ-ಚಕ್ರವ್ಯೂಹ, ಸಾತ್ವಿಕತೇಜ ಕಲಾ ಕೇಂದ್ರ (ರಿ) ಒಡಿಯೂರು- ಸುದರ್ಶನ ವಿಜಯ, ಪ್ರಣವ ಕಲಾ ವೃಂದ ಕಾಸರಗೋಡು-ರತಿಕಲ್ಯಾಣ, ಹರಿದಾಸ ಜಯಾನಂದ ಕುಮಾರ್ ಅವರಿಂದ ಹರಿಕಥೆ, ಭರತನಾಟ್ಯ ನಡೆದವು.
ಸಿರಿಬಾಗಿಲು ಪ್ರತಿಷ್ಠಾನ ಇತ್ತೀಚೆಗೆ ಪ್ರಕಟಿಸಿದ ಕೃತಿಗಳ ಬಗ್ಗೆ ಗೋಷ್ಠಿ ನಡೆಸಲಾಯಿತು. ಸಂಗೀತ ವಿದ್ವಾಂಸರಾದ ಶಕುಂತಲಾ ಭಟ್ ಕುಂಚಿನಡ್ಕ ಅವರಿಗೆ ಸಿರಿಬಾಗಿಲು ವೆಂಕಪ್ಪಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯೋಗೀಶ ರಾವ್,ಚಿಗುರುಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.