ಅಳಿವಿನ ಭೀತಿಯಲ್ಲಿ ರೈನೋಗಳು; ಘೇಂಡಾಮೃಗಗಳಿಗೆ ಪ್ರವಾಹ ತಂದೊಡ್ಡಿದೆ ಸಂಕಷ್ಟ
Team Udayavani, Jul 20, 2020, 10:45 AM IST
ಈಶಾನ್ಯ ರಾಜ್ಯ ಅಸ್ಸಾಂಗೆ ಮಳೆ, ಪ್ರವಾಹ ಹೊಸತಲ್ಲ. ಆದರೆ, ಈ ವರ್ಷ ಕೋವಿಡ್ ವೈರಸ್ ವಿರುದ್ಧದ ಹೋರಾಟದ ನಡುವೆಯೇ ಪ್ರವಾಹದ ವಿರುದ್ಧವೂ ಸೆಣಸಬೇಕಾದ ಅನಿವಾರ್ಯತೆಗೆ ರಾಜ್ಯ ಸಿಲುಕಿದೆ. ಇಲ್ಲಿನ 33 ಜಿಲ್ಲೆಗಳ ಪೈಕಿ 25 ಜಿಲ್ಲೆಗಳು ಮಳೆ, ಪ್ರವಾಹದಿಂದ ತತ್ತರಿಸಿಹೋಗಿದ್ದು, 40 ಲಕ್ಷಕ್ಕೂ ಅಧಿಕ ಮಂದಿ ಅತಂತ್ರರಾಗಿದ್ದಾರೆ. ಅದರಲ್ಲೂ ವಿಶ್ವವಿಖ್ಯಾತ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿನ ವನ್ಯಜೀವಿಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ. ಅಸ್ಸಾಂನ ಹೆಮ್ಮೆ ಎಂದೇ ಕರೆಯಲ್ಪಡುವ ಒಂದು ಕೊಂಬಿನ ಘೇಂಡಾಮೃಗಗಳು(ರೈನೋ) ವಿನಾಶದಂಚಿನಲ್ಲಿದ್ದು, ಅವುಗಳ ಉಳಿವಿಗೆ ಈ ಪ್ರವಾಹ ಮತ್ತಷ್ಟು ಅಡ್ಡಿ ಉಂಟುಮಾಡಿದೆ.
ಇಬ್ಬರು ಶತ್ರುಗಳು
ಅಸ್ಸಾಂನ ರೈನೋಗಳಿಗೆ ಇಬ್ಬರು ಶತ್ರುಗಳು. ಒಂದು ಪ್ರವಾಹ, ಮತ್ತೂಂದು ಬೇಟೆಗಾರರು. ಬೇಟೆಯ ವಿರುದ್ಧ ಅರಣ್ಯ ಅಧಿಕಾರಿಗಳು ದಶಕಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಇತ್ತೀಚೆಗಷ್ಟೇ ಗೆಲುವು ದೊರಕತೊಡಗಿದೆ. ಅಷ್ಟರಲ್ಲೇ, ಪ್ರಕೃತಿ ವಿಕೋಪವು ರೈನೋಗಳ ಜೀವಕ್ಕೆ ಅಪಾಯ ತಂದೊಡ್ಡಿದೆ. ಕಾಜಿರಂಗಾ ಉದ್ಯಾನದ ಶೇ.95 ಭಾಗ ಜಲಾವೃತವಾಗಿದ್ದು, ಉದ್ಯಾನದೊಳಗಿನ 223 ಅರಣ್ಯ ಶಿಬಿರಗಳ ಪೈಕಿ 153 ಮುಳುಗಡೆಯಾಗಿವೆ.
3,500 ಜಗತ್ತಿನಲ್ಲಿ ಉಳಿದಿರುವ ಒಂದು ಕೊಂಬುಳ್ಳ ಘೇಂಡಾಮೃಗಗಳ ಸಂಖ್ಯೆ
2,400 ಈ ಪೈಕಿ ಕಾಜಿರಂಗಾ ದಲ್ಲಿರುವ ಘೇಂಡಾಮೃಗಗಳು
430 ಚ.ಕಿ.ಮೀ. ಕಾಜಿರಂಗಾ ಉದ್ಯಾನದ ಒಟ್ಟು ವಿಸ್ತೀರ್ಣ
ಶೇ.95 ಪ್ರಸ್ತುತ ಪ್ರವಾಹ ದಿಂದಾಗಿ ಜಲಾವೃತಗೊಂಡ ಉದ್ಯಾನದ ಭಾಗ
76 ಈ ವರ್ಷ ಮಳೆ, ಪ್ರವಾಹಕ್ಕೆ ಬಲಿಯಾದ ವನ್ಯಜೀವಿಗಳು
45 ಗಾಯಗೊಂಡಿರುವ ಪ್ರಾಣಿಗಳು
121 ಅರಣ್ಯಾಧಿಕಾರಿಗಳು ರಕ್ಷಿಸಿರುವ ಪ್ರಾಣಿಗಳ ಸಂಖ್ಯೆ
02 ಈ ವರ್ಷ ಕೊಚ್ಚಿಹೋಗಿ ಸತ್ತ ಘೇಂಡಾಮೃಗಗಳು
30 2017ರ ಪ್ರವಾಹದಲ್ಲಿ ಮೃತ
17 2019ರಲ್ಲಿ ಕೊಚ್ಚಿಹೋದ ಖಡ್ಗಮೃಗಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.